ಕನ್ನಡ ಸುದ್ದಿ  /  Karnataka  /  Mangaluru News Kerala Lottery Chandrayya Mestri Of Uppinangadi Won Bumper Prize Of Rs 50 Lakhs News In Kannada Arc

Mangaluru News: ಉಪ್ಪಿನಂಗಡಿಯ ಚಂದ್ರಯ್ಯ ಮೇಸ್ತ್ರಿ ಅವರಿಗೆ ಒಲಿದ ಅದೃಷ್ಟ: ಕೇರಳ ಲಾಟರಿಯ 50 ಲಕ್ಷ ರೂ ಬಂಪರ್ ಪ್ರೈಜ್

ಕಾನತ್ತೂರು ದೇವಸ್ಥಾನಕ್ಕೆ ತೆರಳಿದ್ದ ವೇಳೆ ಚಂದ್ರಯ್ಯ ಮೇಸ್ತಿ ಲಾಟರಿ ಟಿಕೆಟ್ ಖರೀದಿಸಿದ್ದರು. ಸೆ.20ರಂದು ಓಣಂ ಲಾಟರಿ ಡ್ರಾ ಬಂಪರ್ ಬಹುಮಾನ ಬಂದಿತ್ತು.

ಉಪ್ಪಿನಂಗಡಿಯ ಚಂದ್ರಯ್ಯ ಮೇಸ್ತ್ರಿ ಅವರಿಗೆ ಒಲಿದ ಅದೃಷ್ಟ: ಕೇರಳ ಲಾಟರಿಯ 50 ಲಕ್ಷ ರೂ ಬಂಪರ್ ಪ್ರೈಜ್
ಉಪ್ಪಿನಂಗಡಿಯ ಚಂದ್ರಯ್ಯ ಮೇಸ್ತ್ರಿ ಅವರಿಗೆ ಒಲಿದ ಅದೃಷ್ಟ: ಕೇರಳ ಲಾಟರಿಯ 50 ಲಕ್ಷ ರೂ ಬಂಪರ್ ಪ್ರೈಜ್

ಮಂಗಳೂರು: ಉಪ್ಪಿನಂಗಡಿಯ ಮೇಸ್ತ್ರಿ (ಕಟ್ಟಡ ನಿರ್ಮಾಣ ಕುಶಲಕರ್ಮಿ)ಗೆ ಕೇರಳದ ಲಾಟರಿ ಒಲಿದಿದೆ. ಓಣಂ ಬಂಪರ್ ಲಾಟರಿಯನ್ನು ಇಳಂತಿಲ ನಿವಾಸಿ ಚಂದ್ರಯ್ಯ ಅವರು ಗೆದ್ದಿದ್ದಾರೆ. ಸ್ಥಳೀಯವಾಗಿ ಚಂದ್ರಯ್ಯ ಮೇಸ್ತ್ರಿ ಎಂದೇ ಜನಜನಿತರಾಗಿರುವ ಅವರು ಕೇರಳ ಅದೃಷ್ಟ ಲಾಟರಿಯ 50 ಲಕ್ಷ ರೂ ಬಹುಮಾನವನ್ನು ಗೆದ್ದಿದ್ದಾರೆ.

ಟ್ರೆಂಡಿಂಗ್​ ಸುದ್ದಿ

ಕಾನತ್ತೂರು ದೇವಸ್ಥಾನಕ್ಕೆ ತೆರಳಿದ್ದ ವೇಳೆ ಅವರು ಲಾಟರಿ ಟಿಕೆಟ್ ಖರೀದಿಸಿದ್ದರು. ಸೆ.20ರಂದು ಓಣಂ ಲಾಟರಿ ಡ್ರಾ ಬಂಪರ್ ಬಹುಮಾನ ಬಂದಿತ್ತು. ಅದು ಚಂದ್ರಯ್ಯ ಅವರಿಗೆ ಒಲಿದಿದೆ. ಕಾಸರಗೋಡಿನ ಬೊಲ್ಪು ಲಕ್ಕಿ ಲಾಟರಿ ಏಜೆನ್ಸಿಯhtಲ್ಲಿ ಟಿಕೆಟ್ ಖರೀದಿಸಿದ್ದ ಚಂದ್ರಯ್ಯ ಇದೀಗ ಅರ್ಧ ಕೋಟಿಯ ಒಡೆಯರಾಗಿದ್ದಾರೆ. 500 ರೂಪಾಯಿ ಟಿಕೆಟ್ ಖರೀದಿಸಿದ್ದ ಚಂದ್ರಯ್ಯಗೆ ಬಂಪರ್ 50 ಲಕ್ಷ ಬಹುಮಾನ ಲಭಿಸಿದೆ. ಈ ಹಿಂದೆ ಬೊಲ್ಪು ಲಕ್ಕಿ ಲಾಟರಿ ಏಜೆನ್ಸಿಯಲ್ಲಿ ಉಪ್ಪಿನಂಗಡಿಯ ಕೆಂಪಿಮಜಲು ನಿವಾಸಿಗೆ 80 ಲಕ್ಷ ಬಹುಮಾನ ಬಂದಿತ್ತು ಆನಂದ ಟೈಲರ್ ಎಂಬವರು ಲಕ್ಕಿ ಲಾಟರಿ ಏಜೆನ್ಸಿಯಲ್ಲಿ ಈ ಹಿಂದೆ ಬಹುಮಾನ ಗೆದ್ದಿದ್ದರು ಇದೀಗ ಇದೀಗ ಎರಡನೇ ಬಾರಿಗೆ ಉಪ್ಪಿನಂಗಡಿಯ ಚಂದ್ರಯ್ಯ ಅವರಿಗೆ ಒಲಿದ ಅದೃಷ್ಟ ಎಂದು ಜನರು ಚಂದ್ರಯ್ಯ ಅವರನ್ನು ಅಭಿನಂದಿಸುತ್ತಿದ್ದಾರೆ.