ಬಹರೈನ್‌ನಲ್ಲಿ ಕುಡ್ಲೋತ್ಸವ ಕಾರ್ಯಕ್ರಮ; ಫ್ಯಾಶನ್ ಶೋಗೆ ಆಯ್ಕೆಯಾಗಿದ್ದಾರೆ ಮಂಗಳೂರಿನ ಸಪ್ತ ಚೆಲುವೆಯರು
ಕನ್ನಡ ಸುದ್ದಿ  /  ಕರ್ನಾಟಕ  /  ಬಹರೈನ್‌ನಲ್ಲಿ ಕುಡ್ಲೋತ್ಸವ ಕಾರ್ಯಕ್ರಮ; ಫ್ಯಾಶನ್ ಶೋಗೆ ಆಯ್ಕೆಯಾಗಿದ್ದಾರೆ ಮಂಗಳೂರಿನ ಸಪ್ತ ಚೆಲುವೆಯರು

ಬಹರೈನ್‌ನಲ್ಲಿ ಕುಡ್ಲೋತ್ಸವ ಕಾರ್ಯಕ್ರಮ; ಫ್ಯಾಶನ್ ಶೋಗೆ ಆಯ್ಕೆಯಾಗಿದ್ದಾರೆ ಮಂಗಳೂರಿನ ಸಪ್ತ ಚೆಲುವೆಯರು

Bahrain Kudlotsava: ಬಹರೈನ್‌ನಲ್ಲಿ ನೆಲೆಸಿರುವ ಮಂಗಳೂರಿಗರು ಪ್ರತಿ ವರ್ಷ ಕುಡ್ಲೋತ್ಸವ ಕಾರ್ಯಕ್ರಮ ಆಯೋಜಿಸುತ್ತಾರೆ. ಈ ಬಾರಿ ಕುಡ್ಲೋತ್ಸವ ಕಾರ್ಯಕ್ರಮ ಅಂಗವಾಗಿ ನಡೆಯಲಿರುವ ಫ್ಯಾಷನ್‌ ಶೋ ಸ್ಪರ್ಧೆಗೆ ಮಂಗಳೂರಿನ 7 ಮಂದಿ ಆಯ್ಕೆಯಾಗಿದ್ದಾರೆ. (ವರದಿ: ಹರೀಶ್ ಮಾಂಬಾಡಿ, ಮಂಗಳೂರು)

ಬಹರೈನ್‌ ಕುಡ್ಲೋತ್ಸವ: ಫ್ಯಾಶನ್ ಶೋಗೆ ಆಯ್ಕೆಯಾಗಿದ್ದಾರೆ ಮಂಗಳೂರಿನ ಸಪ್ತ ಚೆಲುವೆಯರು
ಬಹರೈನ್‌ ಕುಡ್ಲೋತ್ಸವ: ಫ್ಯಾಶನ್ ಶೋಗೆ ಆಯ್ಕೆಯಾಗಿದ್ದಾರೆ ಮಂಗಳೂರಿನ ಸಪ್ತ ಚೆಲುವೆಯರು

ಮಂಗಳೂರು: ಬಹರೈನ್‌ನಲ್ಲಿ ನಡೆಯುವ ಫ್ಯಾಶನ್ ಶೋಗೆ ಮಂಗಳೂರಿನ ಏಳು ಯುವತಿಯರು ಆಯ್ಕೆಯಾಗಿದ್ದು, ಕಿರೀಟ ಗೆಲ್ಲುವ ನಿರೀಕ್ಷೆ ಹೊಂದಿದ್ದಾರೆ. ಬಹರೈನ್‌ನಲ್ಲಿ ಪ್ರತಿ ವರ್ಷ ಕುಡ್ಲೋತ್ಸವ (Bahrain Kudlotsava) ಎಂಬ ಅದ್ದೂರಿ ಕಾರ್ಯಕ್ರಮ ನಡೆಯುತ್ತದೆ. ಮಂಗಳೂರು ಮೂಲದವರು ನಡೆಸುವ ಈ ಕಾರ್ಯಕ್ರಮದಲ್ಲಿ ಫ್ಯಾಶನ್ ಶೋ ಕೂಡ ಒಂದು. ಈ ಬಾರಿ ಎಪ್ರಿಲ್ 4 ರಂದು ಬಹರೈನ್‌ನಲ್ಲಿ ಫ್ಯಾಶನ್ ಶೋ ನಡೆಯಲಿದೆ. ಈ ಫ್ಯಾಶನ್ ಶೋ ನಲ್ಲಿ ವಿದೇಶಗಳಲ್ಲಿ ನೆಲೆಸಿರುವ ಮಂಗಳೂರು ಮೂಲದ ಯುವತಿಯರು ಪಾಲ್ಗೊಳ್ಳಲಿದ್ದಾರೆ. ಇದರಲ್ಲಿ ಮಂಗಳೂರಿನ ವೆನ್ಜ್ ಮಾಡೆಲ್‌ನಲ್ಲಿ ತರಬೇತಿ ಪಡೆದ ಏಳು ಯುವತಿಯರು ಪಾಲ್ಗೊಳ್ಳಲು ಆಯ್ಕೆಯಾಗಿದ್ದಾರೆ.

ವೆನ್ಜ್ ಮಾಡೆಲ್ ಅಕಾಡೆಮಿ

ಮಂಗಳೂರಿನ ಬಲ್ಲಾಲ್ ಭಾಗ್‌ನಲ್ಲಿ ಎಂಟು ತಿಂಗಳ ಹಿಂದೆ ವೆನ್ಜ್ ಮಾಡೆಲ್ ಅಕಾಡೆಮಿಯನ್ನು ವೆನ್ಸಿಟಾ ಡಯಾಸ್ ಎಂಬವರು ಆರಂಭಿಸಿದ್ದರು. ವೆನ್ಸಿಟಾ ಅವರು ಥಾಯ್ಲೆಂಡ್‌ನಲ್ಲಿ ನಡೆದ ಅಂತರರಾಷ್ಟ್ರೀಯ ಫ್ಯಾಶನ್ ಶೋ ಸ್ಪರ್ಧೆಯಲ್ಲಿ ಕಿರೀಟ ಮುಡಿಗೇರಿಸಿಕೊಂಡಿದ್ದರು. ಅವರು ಸಿನಿಮಾ ನಟಿಯೂ ಆಗಿದ್ದಾರೆ. ಇವರು ಆರಂಭಿಸಿದ ವೆನ್ಜ್ ಮಾಡೆಲ್ ಅಕಾಡೆಮಿಯಲ್ಲಿ ತರಬೇತಿ ಪಡೆದ ಏಳು ಚೆಲುವೆಯರು ಕುಡ್ಲೋತ್ಸವಕ್ಕೆ ಆಯ್ಕೆಯಾಗಿದ್ದಾರೆ. ಮಿಸ್ ಕುಡ್ಲ 2025 ರಲ್ಲಿ ಭಾಗವಹಿಸಲು ಏಂಜೆಲ್, ಸೋನಲ್, ಜೆನಿಕಾ, ದಿವ್ಯ ಶ್ರೀನಿವಾಸ್, ನಿಶ್ಮಿತಾ, ಜಾಯ್ ಲಿನ್, ಅಯೋನ ಆಯ್ಕೆಯಾಗಿದ್ದಾರೆ.

ಮಂಗಳೂರಿನಿಂದ ಆಯ್ಕೆಯಾದ ಏಳು ಮಂದಿ ಕೂಡ ಮೊದಲ ಬಾರಿಗೆ ಅಂತಾರಾಷ್ಟ್ರೀಯ ಮಾಡೆಲಿಂಗ್ ಸ್ಪರ್ಧೆಗೆ ಹೋಗುತ್ತಿದ್ದಾರೆ. ಇವರಲ್ಲಿ ಕೆಲವರು ಮಂಗಳೂರಿನಲ್ಲಿ ನಡೆದ ಹಲವು ಫ್ಯಾಶನ್ ಶೋ ಸ್ಪರ್ಧೆಗಳಲ್ಲಿ ಕಿರೀಟ ಮುಡಿಗೇರಿಸಿಕೊಂಡಿದ್ದರು. ಇದೀಗ ಬಹರೈನ್‌ನಲ್ಲಿ ನಡೆಯುವ ಫ್ಯಾಶನ್ ಶೋ ನಲ್ಲಿ ಕಿರೀಟ ಗೆಲ್ಲುವ ನಿರೀಕ್ಷೆಯಲ್ಲಿ ಪಯಣ ಬೆಳೆಸಿದ್ದಾರೆ.

ಈ ಬಗ್ಗೆ ಮಾತನಾಡಿದ ವೆನ್ಸಿಟಾ ಡಯಾಸ್ ‘ನಾನು ಎಂಟು ತಿಂಗಳ ಹಿಂದೆ ಆರಂಭಿಸಿದ ವೆನ್ಸ್ ಮಾಡೆಲ್ ಅಕಾಡೆಮಿಯಲ್ಲಿ ತರಬೇತಿಗೊಂಡ ಏಳು ಮಂದಿ ಬಹರೈನ್‌ನಲ್ಲಿ ನಡೆಯುವ ಕುಡ್ಲೋತ್ಸವ ಕಾರ್ಯಕ್ರಮದಲ್ಲಿ ಮಿಸ್ ಕುಡ್ಲ ಫ್ಯಾಶನ್ ಶೋ ನಲ್ಲಿ ಪಾಲ್ಗೊಳ್ಳಲಿದ್ದಾರೆ. ನಾನು ಕೂಡ ಇದರಲ್ಲಿ ಭಾಗಿಯಾಗಲು ಹೋಗುತ್ತಿದ್ದೇನೆ ಎಂದರು.

ಸ್ಪರ್ಧಿ ದಿವ್ಯಾ ಶ್ರೀನಿವಾಸ್ ಮಾತನಾಡಿ ಬಹರೈನ್‌ನಲ್ಲಿ ನಡೆಯುವ ಫ್ಯಾಶನ್ ಶೋ ಗೆ ಸ್ಪರ್ಧಿಸಲು ನಾನು ಆಯ್ಕೆಯಾಗಿರುವುದು ತುಂಬಾ ಖುಷಿಯಾಗಿದೆ. ನಾನು ಹಲವು ಫ್ಯಾಶನ್ ಶೋ ನಲ್ಲಿ ಭಾಗವಹಿಸಿದ್ದೇನೆ. ಅಂತರರಾಷ್ಟ್ರೀಯ ಸ್ಪರ್ಧೆಗೆ ಭಾಗಿಯಾಗಿರುವುದು ಇದೇ ಮೊದಲು ಎನ್ನುತ್ತಾರೆ.

ಸ್ಪರ್ಧಿ ನಿಶ್ಮಿತಾ ಮಾತನಾಡಿ ನಾನು ಇದರಲ್ಲಿ ಭಾಗಿಯಾಗಲು ವೆನ್ಜ್ ಮಾಡೆಲ್ ಅಕಾಡೆಮಿ ಅವಕಾಶ ಕೊಟ್ಟಿದೆ. ಇದು ನನ್ನ ಮೊದಲು ಅಂತರಾಷ್ಟ್ರೀಯ ಸ್ಪರ್ಧೆಯಾಗಿದೆ ಎಂದಿದ್ದಾರೆ.

ಸ್ಪರ್ಧಿ ಏಂಜೆಲ್ ಮಾತನಾಡಿ ಮಿಸ್ ಕುಡ್ಲ ಸ್ಪರ್ಧೆಯಲ್ಲಿ ಭಾಗಿಯಾಗಲು ಅವಕಾಶ ಸಿಕ್ಕಿದೆ. ವೆನ್ಸಿಟಾ, ಆನಂದ್ ಅವರು ಈ ಆಯ್ಕೆಗಾಗಿ ತುಂಬಾ ಶ್ರಮಪಟ್ಟಿದ್ದಾರೆ. ನಾನು ತುಂಬಾ ಫ್ಯಾಶನ್ ಶೋ ಸ್ಪರ್ಧೆಯಲ್ಲಿ ಭಾಗವಹಿಸಿದ್ದೆ. ಕೋಸ್ಟಲ್‌ವುಡ್‌ನಲ್ಲಿ ರನ್ನರ್ ಅಪ್ ಆಗಿದ್ದೆ ಎನ್ನುತ್ತಾರೆ.

ಬಾಲಿವುಡ್ ನಟಿ ಐಶ್ವರ್ಯಾ ರೈ ಸೇರಿದಂತೆ ಹಲವು ಮಂದಿ ಮಂಗಳೂರು ಮೂಲದ ಯುವತಿಯರು ಫ್ಯಾಶನ್ ಲೋಕದಲ್ಲಿ ಸಾಧನೆ ಮಾಡಿದ್ದಾರೆ. ಮಂಗಳೂರಿನಲ್ಲಿ ಯುವತಿಯರಲ್ಲಿ ಫ್ಯಾಶನ್ ಲೋಕದ ಬಗ್ಗೆ ಆಸಕ್ತಿ ಹೆಚ್ಚು. ಈ ಕಾರಣದಿಂದ ಮಾಡೆಲಿಂಗ್ ಕ್ಷೇತ್ರದಲ್ಲಿ ಹೆಚ್ಚಾಗಿ ಮಂಗಳೂರು ಹುಡುಗಿಯರು ಕಾಣಿಸಿಕೊಳ್ಳುತ್ತಾರೆ. ಇದೀಗ ಅಂತರರಾಷ್ಟ್ರೀಯ ಮಟ್ಟದಲ್ಲಿ ನಡೆಯುವ ಫ್ಯಾಶನ್ ಶೋ ಸ್ಪರ್ಧೆಗೆ ಮಂಗಳೂರಿನ ಏಳು ಹುಡುಗಿಯರು ಆಯ್ಕೆಯಾಗಿರುವುದು ಸಿನಿಮಾ ಕ್ಷೇತ್ರಕ್ಕೂ ಪಾದಾರ್ಪಣೆ ಮಾಡುತ್ತಾರೆಯೇ ಕಾದು ನೋಡಬೇಕು.

Reshma

TwittereMail
ರೇಷ್ಮಾ ಶೆಟ್ಟಿ: 'ಹಿಂದೂಸ್ತಾನ್ ಟೈಮ್ಸ್​​ ಕನ್ನಡ'ದಲ್ಲಿ ಸೀನಿಯರ್​ ಕಂಟೆಂಟ್ ಪ್ರೊಡ್ಯೂಸರ್. ಜೀವನಶೈಲಿ (ಲೈಫ್‌ಸ್ಟೈಲ್) ವಿಭಾಗದಲ್ಲಿ ಕಾರ್ಯನಿರ್ವಹಣೆ. ಪ್ರಜಾವಾಣಿ ದಿನಪತ್ರಿಕೆಯ ವಿವಿಧ ವಿಭಾಗಗಳಲ್ಲಿ 9 ವರ್ಷಗಳ ಅನುಭವ. ಆರೋಗ್ಯ, ಆಹಾರ, ಸಿನಿಮಾ, ಕಿರುತೆರೆ ಆಸಕ್ತಿಯ ಕ್ಷೇತ್ರಗಳು. ಕುಂದಾಪುರ ತಾಲ್ಲೂಕಿನ ವಕ್ವಾಡಿ ಇವರ ಊರು. ಸದ್ಯಕ್ಕೆ ಬೆಂಗಳೂರು ನಿವಾಸಿ.
Whats_app_banner