ಮಂಗಳೂರು ಅಭಿವೃದ್ಧಿ ಪ್ರಾಧಿಕಾರದ ಆಯುಕ್ತ ಲೋಕಾಯುಕ್ತ ಬಲೆಗೆ; ದಲ್ಲಾಳಿ ಬಳಿ 25 ಲಕ್ಷ ರೂ ಸ್ವೀಕರಿಸುವಾಗ ಬಂಧನ
ಉದ್ಯಮಿಯೊಬ್ಬರ ಜಮೀನು ವ್ಯವಹಾರಕ್ಕೆ ಟಿಡಿಆರ್ ಒದಗಿಸಲು 25 ಲಕ್ಷ ರೂಪಾಯಿ ಲಂಚ ಸ್ವೀಕರಿಸುತ್ತಿದ್ದಾಗ ಮುಡಾ ಕಮೀಷನರ್ ಲೋಕಾಯುಕ್ತ ಬಲೆಗೆ ಬಿದಿದ್ದಾರೆ. ಲೋಕಾಯುಕ್ತ ಪೊಲೀಸರು ಕಮಿಷನರ್ ಜೊತೆಗೆ ಬ್ರೋಕರ್ ಅನ್ನು ಕೂಡ ಬಂಧಿಸಿದ್ದಾರೆ. ವಿವರ ವರದಿ ಇಲ್ಲಿದೆ. (ವರದಿ- ಹರೀಶ್ ಮಾಂಬಾಡಿ, ಮಂಗಳೂರು)
ಮಂಗಳೂರು: ಮಂಗಳೂರು ಅಭಿವೃದ್ಧಿ ಪ್ರಾಧಿಕಾರದ ಆಯುಕ್ತ ಮನ್ಸೂರ್ ಅಲಿ ಲಂಚ ಸ್ವೀಕಾರ ಮಾಡುತ್ತಿದ್ದ ವೇಳೆ ಲೋಕಾಯುಕ್ತ ಪೊಲೀಸರ ಬಲೆಗೆ ಬಿದ್ದಿದ್ದಾರೆ
ಉದ್ಯಮಿಯೊಬ್ಬರ ಜಮೀನು ಟಿಡಿಆರ್ ನೀಡಲು ದಲ್ಲಾಳಿ ಮೂಲಕ 25 ಲಕ್ಷ ರೂಪಾಯಿ ಲಂಚವನ್ನು ಮಂಗಳೂರು ನಗರಾಭಿವೃದ್ಧಿ ಪ್ರಾಧಿಕಾರ (ಮುಡಾ) ದ ಕಮಿಷನರ್ ಸ್ವೀಕರಿಸುತ್ತಿದ್ದ ವೇಳೆ ಲೋಕಾಯುಕ್ತ ಪೊಲೀಸರು ದಾಳಿ ನಡೆಸಿದ್ದರು. ಈ ದಾಳಿ ಶನಿವಾರ (ಮಾರ್ಚ್ 23) ನಡೆದಿತ್ತು. ಈ ಲಂಚ ಪ್ರಕರಣದಲ್ಲಿ ಲೋಕಾಯುಕ್ತ ಪೊಲೀಸರು ಇಬ್ಬರನ್ನೂ ಬಂಧಿಸಿದ್ದಾರೆ.
ಮುಡಾ ಆಯುಕ್ತ ಮನ್ಸೂರ್ ಅಲಿ ಅವರು ದಲ್ಲಾಳಿ ಮುಹಮ್ಮದ್ ಸಲೀಂ ಎಂಬಾತನ ಮುಖಾಂತರ 25 ಲಕ್ಷ ರೂ. ಲಂಚ ಸ್ವೀಕರಿಸುತ್ತಿದ್ದರು. ಹಣ ಸ್ವೀಕರಿಸುತ್ತಿದ್ದ ವೇಳೆ, ಲೋಕಾಯುಕ್ತ ಅಧಿಕಾರಿಗಳು ದಾಳಿ ನಡೆಸಿ ಬಂಧಿಸಿದರು.
ಏನಿದು ಟಿಡಿಆರ್ ನೀಡಿಕೆ ಪ್ರಕರಣ
ಜಮೀನು ಖರೀದಿಸಿದ ಉದ್ಯಮಿಯೊಬ್ಬರು ಈ ಪ್ರಕರಣದ ದೂರುದಾರರು. ಅವರು ನೀಡಿದ ಮಾಹಿತಿ ಆಧರಿಸಿ ಲೋಕಾಯುಕ್ತ ಪೊಲೀಸರು ಮುಡಾ ಆಯುಕ್ತರು ಲಂಚ ಸ್ವೀಕರಿಸುವಾಗ ದಾಳಿ ನಡೆಸಿದ್ದರು.
ದೂರುದಾರರು ತಾಲೂಕಿನ ಕುಡುಪು ಗ್ರಾಮದ ಸರ್ವೇ ನಂ. 57/ಪಿ ರಲ್ಲಿನ ಒಟ್ಟು 10.8 ಎಕರೆ ಜಮೀನು ಖರೀದಿಸಿದ್ದರು. ಈ ಜಮೀನನ್ನು ಟಿಡಿಆರ್ ನಿಯಮದಡಿ ಖರೀದಿ ಮಾಡುವ ಬಗ್ಗೆ ಜಮೀನಿನ ಈ ಹಿಂದಿನ ಮಾಲೀಕರೊಂದಿಗೆ ಪತ್ರ ವ್ಯವಹಾರ ಮಾಡಿದ್ದರು. ಅದರಂತೆ ಈ ಜಮೀನು 2024 ಜನವರಿಯಲ್ಲಿ ಪಾಲಿಕೆಯ ಹೆಸರಿಗೆ ನೋಂದಣಿ ಸಹ ಆಗಿತ್ತು. ಬಳಿಕ ಪಾಲಿಕೆಯ ಆಯುಕ್ತರು ಟಿಡಿಆರ್ ನೀಡಲು ಮುಡಾ ಆಯುಕ್ತರಿಗೆ ಫೆಬ್ರವರಿ ತಿಂಗಳಲ್ಲಿ ಕಳುಹಿಸಿದ್ದರು. ಆದರೆ, ಮುಡಾ ಆಯುಕ್ತ ಮನ್ಸೂರ್ ಅಲಿ ಈ ಫೈಲ್ ಅನ್ನು ಪೆಂಡಿಂಗ್ ಇಟ್ಟಿದ್ದರು.
ಈ ಬಗ್ಗೆ ದೂರುದಾರರು ಮುಡಾ ಆಯುಕ್ತ ಮನ್ಸೂರ್ ಅಲಿ ಅವರ ಬಳಿ ಹೋಗಿ ಮಾತನಾಡಿದಾಗ 25 ಲಕ್ಷ ರೂ. ಲಂಚದ ಹಣಕ್ಕೆ ಬೇಡಿಕೆ ಇಟ್ಟಿದ್ದರು. ಅಲಿ ಅವರ ನಿರ್ದೇಶನದಂತೆ ಬ್ರೋಕರ್ ಮುಹಮ್ಮದ್ ಸಲಿಂ ಅವರನ್ನು ಸಂಪರ್ಕಿಸಿ ಮಾತುಕತೆ ನಡೆಸಿದರು. ಬಳಿಕ ಲೋಕಾಯುಕ್ತ ಪೊಲೀಸರಿಗೆ ದೂರು ಸಲ್ಲಿಸಿದರು.
ಇದರಂತೆ, ದೂರುದಾರರ ಬಳಿ ಬ್ರೋಕರ್ ಸಲೀಂ 25 ಲಕ್ಷ ರೂಪಾಯಿ ಸ್ವೀಕರಿಸಿ, ಅದನ್ನು ಮುಡಾ ಆಯುಕ್ತ ಮನ್ಸೂರ್ ಅಲಿಗೆ ಕೊಡುವ ಸಂದರ್ಭದಲ್ಲಿ ಲೋಕಾಯುಕ್ತ ಪೊಲೀಸರು ದಾಳಿ ನಡೆಸಿ ಲಂಚದ ಹಣ ವಶಪಡಿಸಿಕೊಂಡಿದ್ದಾರೆ. ಅಲ್ಲದೆ, ಮನ್ಸೂರ್ ಅಲಿ, ಬ್ರೋಕರ್ ಸಲೀಂ ಅವರನ್ನು ಬಂಧಿಸಿದ್ದಾಗಿ ಲೋಕಾಯುಕ್ತ ಕಚೇರಿ ತಿಳಿಸಿದೆ.
(ವರದಿ - ಹರೀಶ್ ಮಾಂಬಾಡಿ, ಮಂಗಳೂರು)
ಕರ್ನಾಟಕದ ಮತ್ತಷ್ಟು ತಾಜಾ ಸುದ್ದಿ, ಕ್ರೈಮ್ ಸುದ್ದಿ ಓದಿ.
ಓದಬಹುದಾದ ಆಯ್ದ ಸ್ಟೋರಿಗಳು
1) ಹುಬ್ಬಳ್ಳಿ ಶಿರಸಿ ತಾಳಗುಪ್ಪ ರೈಲು ಮಾರ್ಗ ಎಲ್ಲಿ ತನಕ ಬಂತು, ಸ್ಥಿತಿಗತಿ ವಿವರ ಹೀಗಿದೆ
2) ಅಲಿಜೆ ಅಗ್ನಿಹೋತ್ರಿ ನಟನೆಯ ಫಾರಿ ಶೀಘ್ರದಲ್ಲಿ ಒಟಿಟಿಗೆ; ಮನೆಯಲ್ಲೇ ನೋಡಿ ಸಲ್ಮಾನ್ ಖಾನ್ ಸೋದರ ಸೊಸೆಯ ಸಿನಿಮಾ
3) 2 ವರ್ಷದಲ್ಲಿ ಕರ್ನಾಟಕ ಶಾಲೆಗಳ ಶುಲ್ಕ ಶೇ 30 ಕ್ಕಿಂತಲೂ ಹೆಚ್ಚಳ; ವರದಿ
4) ಚುನಾವಣಾ ನೀತಿ ಸಂಹಿತೆ ಜಾರಿಯಾದ ಒಂದೇ ವಾರಕ್ಕೆ ಕರ್ನಾಟಕದಲ್ಲಿ 9.64 ಕೋಟಿ ರೂಪಾಯಿ ಹಣ ವಶ
5) ಸೋಲಿನ ನಡುವೆ ಡೆಲ್ಲಿ ಕ್ಯಾಪಿಟಲ್ಸ್‌ಗೆ ಮತ್ತೊಂದು ಆಘಾತ, ಗಂಭೀರ ಗಾಯಗೊಂಡು ಮೈದಾನದಿಂದ ಹೊರನಡೆದ ಇಶಾಂತ್ ಶರ್ಮಾ