ಕನ್ನಡ ಸುದ್ದಿ  /  ಕರ್ನಾಟಕ  /  ಮಂಗಳೂರು ಬಾಲಕಿಯ ಎಐ ಮಾಡೆಲ್ ಆವಿಷ್ಕಾರಕ್ಕೆ ಪ್ರಥಮ ಬಹುಮಾನ; ನ್ಯೂಯಾರ್ಕ್ ವಿಶ್ವ ವಿಜ್ಞಾನ ಕಾರ್ಯಕ್ರಮಕ್ಕೆ ಆಹ್ವಾನ

ಮಂಗಳೂರು ಬಾಲಕಿಯ ಎಐ ಮಾಡೆಲ್ ಆವಿಷ್ಕಾರಕ್ಕೆ ಪ್ರಥಮ ಬಹುಮಾನ; ನ್ಯೂಯಾರ್ಕ್ ವಿಶ್ವ ವಿಜ್ಞಾನ ಕಾರ್ಯಕ್ರಮಕ್ಕೆ ಆಹ್ವಾನ

ಮಂಗಳೂರು ಉಳ್ಳಾಲ ಮೂಲದ ಸಿಂಧೂರ ರಾಜ ಎಂಬ ಬಾಲಕಿ ಫ್ಯೂಚರ್ ಪೋರ್ಟ್ ಯೂತ್-2023 ಪ್ಲೇಗ್ ಚೆಕ್ ರಿಪಬ್ಲಿಕ್ ಆಯೋಜಿಸಿದ್ದ ಸ್ಪರ್ಧೆಯಲ್ಲಿ ಎಐ ಮಾಡೆಲ್ ಆವಿಷ್ಕಾರಕ್ಕೆ ಪ್ರಥಮ ಬಹುಮಾನ ಪಡೆದಿದ್ದಾಳೆ. ಆಕೆಗೆ ನ್ಯೂಯಾರ್ಕ್ ವಿಶ್ವ ವಿಜ್ಞಾನ ಕಾರ್ಯಕ್ರಮಕ್ಕೆ ಆಹ್ವಾನವೂ ಸಿಕ್ಕಿದೆ. (ವರದಿ- ಹರೀಶ್ ಮಾಂಬಾಡಿ, ಮಂಗಳೂರು)

ಮಂಗಳೂರು ಬಾಲಕಿ ಸಿಂಧೂರ ರಾಜ ಅವರ ಎಐ ಮಾಡೆಲ್‌ಗೆ ಪ್ರಥಮ ಬಹುಮಾನ ಸಿಕ್ಕಿದ್ದು, ನ್ಯೂಯಾರ್ಕ್ ವಿಶ್ವ ವಿಜ್ಞಾನ ಕಾರ್ಯಕ್ರಮಕ್ಕೆ ಆಹ್ವಾನ ಸಿಕ್ಕಿದೆ.
ಮಂಗಳೂರು ಬಾಲಕಿ ಸಿಂಧೂರ ರಾಜ ಅವರ ಎಐ ಮಾಡೆಲ್‌ಗೆ ಪ್ರಥಮ ಬಹುಮಾನ ಸಿಕ್ಕಿದ್ದು, ನ್ಯೂಯಾರ್ಕ್ ವಿಶ್ವ ವಿಜ್ಞಾನ ಕಾರ್ಯಕ್ರಮಕ್ಕೆ ಆಹ್ವಾನ ಸಿಕ್ಕಿದೆ.

ಮಂಗಳೂರು: ಕರ್ನಾಟಕದ ರಾಜಧಾನಿ ಬೆಂಗಳೂರಿನಲ್ಲಿ ಎಸ್ಸೆಸ್ಸೆಲ್ಸಿ ಕಲಿಯುತ್ತಿರುವ ಸಿಂಧೂರ ರಾಜ ಎಂಬ ಬಾಲಕಿ ಚೆಕ್ ರಿಪಬ್ಲಿಕ್ ಆಯೋಜಿಸಿದ್ದ ಫ್ಯೂಚರ್ ಪೋರ್ಟ್ ಯೂತ್-2023 ಪ್ಲೇಗ್‌ನಲ್ಲಿ "ಮಾನವ ಸಮಾಜಕ್ಕೆ ವರದಾನವಾಗಲಿರುವ ಆವಿಷ್ಕಾರಗಳು” ಎಂಬ ಸ್ಪರ್ಧೆಯಲ್ಲಿ ಮೊದಲ ಬಹುಮಾನ ಪಡೆದಿದ್ದಾಳೆ. ಸಿಂಧೂರಗೆ ಪ್ರಥಮ ಬಹುಮಾನವಾಗಿ 1.77 ಲಕ್ಷ ರೂಪಾಯಿ ನಗದು ಪಾರಿತೋಷಕ ಲಭಿಸಿದೆ. ಈಕೆ ಮಂಗಳೂರು ಹೊರವಲಯದ ಉಳ್ಳಾಲ ಮೂಲದವರು. ಈ ಬಹುಮಾನದೊಂದಿಗೆ ಸಿಂಧೂರ ರಾಜ ಅವರಿಗೆ ಅಮೆರಿಕಾದ ನ್ಯೂಯಾರ್ಕ್ ನಲ್ಲಿ ನಡೆಯಲಿರುವ "ವರ್ಲ್ಡ್ ಸೈನ್ಸ್ ಸ್ಕಾಲರ್ಸ್" ಫೆಸ್ಟಿವಲ್ ನಲ್ಲಿ ಭಾಗವಹಿಸಲು ಆಹ್ವಾನ ಸಿಕ್ಕಿದೆ.

ಟ್ರೆಂಡಿಂಗ್​ ಸುದ್ದಿ

ಹಿರಿಯರ ಹಾಗೂ ಹೆತ್ತವರ ಮಾರ್ಗದರ್ಶನ ಇರುವ ಕಾರಣ ಈ ಯಶಸ್ಸು ಸಾಧ್ಯವಾಗಿದೆ. ಕೊರೊನಾ ಸಂಕಷ್ಟದ ಸಂದರ್ಭದಲ್ಲಿ ಆಳ ಅಧ್ಯಯನ ನಡೆಸಿದ್ದರಿಂದ ಆರ್ಟಿಫಿಷಿಯಲ್ ಇಂಟೆಲಿಜೆನ್ಸ್ (ಎಐ) ವಿಚಾರ ತಿಳಿದುಕೊಂಡೆ. ಇದರಿಂದಾಗಿ ಯಶಸ್ಸು ಗಳಿಸುವುದು ಸಾಧ್ಯವಾಗಿದೆ. ಭವಿಷ್ಯದಲ್ಲಿ ವಿಜ್ಞಾನಿಯಾಗಬೇಕು ಎಂಬ ಕನಸು ಇದೆ. ಹುಟ್ಟಿ ಬೆಳೆದ ಉಳ್ಳಾಲವನ್ನು ಮರೆಯದೇ ದೇಶದ ತಾಂತ್ರಿಕತೆ ಹಾಗೂ ವೈಜ್ಞಾನಿಕತೆಯ ಬಹುತೇಕ ಸವಾಲುಗಳಿಗೆ ಉತ್ತರ ಕಂಡುಕೊಳ್ಳಲು ಪ್ರಯತ್ನಿಸುತ್ತೇನೆ ಎಂದು ಸಿಂಧೂರ ರಾಜ ಪ್ರತಿಕ್ರಿಯಿಸಿದ್ದಾರೆ.

ಉಳ್ಳಾಲ ಮೂಲ, ಬೆಂಗಳೂರು ವಾಸ

ಉಳ್ಳಾಲದ ಮೊಗವೀರ ಮುಖಂಡ ಬಾಬು ಬಂಗೇರ ಹಾಗೂ ಶಶಿಕಾಂತಿ ದಂಪತಿಯ ಮೊಮ್ಮಗಳಾಗಿರುವ ಸಿಂಧೂರ, ರಾಜಾ ದಯಾಳನ್ ಹಾಗೂ ಶಿಬಾನಿ ದಂಪತಿಯ ಪುತ್ರಿ. ಬೆಂಗಳೂರಿನ ನ್ಯೂ ಹೊರೈಝನ್ ಪಬ್ಲಿಕ್ ಶಾಲೆಯ 10ನೇ ತರಗತಿ ವಿದ್ಯಾರ್ಥಿನಿ. ಸಿಂಧೂರ ಹೆಚ್ಚು ಟಿವಿ ನೋಡುತ್ತಿರಲಿಲ್ಲ. ಬಾಲ್ಯದಲ್ಲಿ ಚಿತ್ರಕಲೆ ಹಾಗೂ ಪಠ್ಯೇತರ ಚಟುವಟಿಕೆಗಳಲ್ಲಿ ಹೆಚ್ಚಾಗಿ ತೊಡಗಿಸಿಕೊಂಡಿದ್ದ ಸಿಂಧೂರ ತನ್ನ ಸ್ಮರಣಶಕ್ತಿ ಹೆಚ್ಚಿಸುವ ಸಾಮರ್ಥ್ಯ ಸಿಕ್ಕಿತು. ಆರ್ಟಿಫಿಷಿಯಲ್ ಇಂಟೆಲಿಜೆನ್ಸ್ ಕುರಿತು ಆಸಕ್ತಿ ಹೊಂದಿದ್ದ ಸಿಂಧೂರ, ಕೊರೊನಾ ಸಂದರ್ಭದಲ್ಲಿ ಯೂಟ್ಯೂಬ್ ಮತ್ತು ಇತರೆ ಸಾಮಾಜಿಕ ಜಾಲತಾಣಗಳಲ್ಲಿ ಅವುಗಳನ್ನು ಸರ್ಚ್ ಮಾಡಿ ಅಧ್ಯಯನ ನಡೆಸಿ ವಿಷಯ ಗ್ರಹಿಸಿಕೊಂಡಿದ್ದಳು.

ಸಿಂಧೂರ ಸಾಧನೆಯ ಹಾದಿ

ಅಂತಾರಾಷ್ಟ್ರೀಯ ಮಟ್ಟದಲ್ಲಿ ನಡೆದಿದ್ದ ಸ್ಪರ್ಧೆಯಲ್ಲಿ 19 ದೇಶದ 33 ಆವಿಷ್ಕಾರಗಳನ್ನು ಕೊನೆಯ ಹಂತದಲ್ಲಿ ಆಯ್ಕೆ ಮಾಡಲಾಗಿತ್ತು.ಇದರಲ್ಲಿ ಸಿಂಧೂರ ರಾಜ ಮಂಡಿಸಿದ್ದ “ಆರ್ಟಿಫಿಷಿಯಲ್ ಇಂಟೆಲಿಜೆಂಟ್ಸ್ ಮಾಡೆಲ್ ಸಿ ಬಿ ಫ್ಲೋ” ಆವಿಷ್ಕಾರ ಪ್ರಥಮ ಸ್ಥಾನ ಪಡೆದಿದೆ. ಈ ಆವಿಷ್ಕಾರವು ಮನುಷ್ಯನ ಮೆದುಳಿನ ಪ್ರಾಯವನ್ನು ಲೆಕ್ಕ ಹಾಕಿ ಡಿಮೆನ್ಸಿಯಾ, ಆಲ್ಝೈಮರ್ ಮುಂತಾದ ನ್ಯೂರೋ ಡಿ ಜನರೇಟಿವ್ ಕಾಯಿಲೆಗಳು ಬರುವ ಸಾಧ್ಯತೆಯನ್ನು ಅಂದಾಜಿಸುತ್ತದೆ. “ವರ್ಲ್ಡ್ ಸೈನ್ಸ್ ಸ್ಕಾಲರ್ 2023"ರ ಪ್ರಥಮ ಬಹುಮಾನ ವಿಜೇತೆಯಾಗಿ ಸಿಂಧೂರ 2024ರ ಮೇ 29 ರಿಂದ ಜೂನ್ 2ರವರೆಗೆ ಅಮೇರಿಕಾದ ನ್ಯೂಯಾರ್ಕ್‌ನಲ್ಲಿ ನಡೆಯಲಿರುವ ಫೆಸ್ಟಿವಲ್‌ನಲ್ಲಿ ಭಾಗವಹಿಸುವ ಅವಕಾಶ ಗಿಟ್ಟಿಸಿಕೊಂಡಿದ್ದಾರೆ. ಜಗತ್ತಿಒನಲ್ಲಿ ಒಟ್ಟಾರೆ 22 ದೇಶಗಳ ಒಟ್ಟು 52 ವಿದ್ಯಾರ್ಥಿಗಳಿಗೆ ಈ ಅವಕಾಶ ದೊರೆತಿದೆ. ಅಲ್ಲಿ ಇವರು ನೊಬೆಲ್ ಪ್ರಶಸ್ತಿ ವಿಜೇತ ವಿಜ್ಞಾನಿಗಳ ಜೊತೆ ಮಹತ್ವದ ವಿಚಾರ ವಿನಿಮಯ ನಡೆಸುವ ಸದವಾಕಾಶ ಪಡೆದುಕೊಂಡಿದ್ದಾರೆ.

ಈಗಾಗಲೇ “ಯುರೋಪಿಯನ್ ಮೆತೆಮ್ಯಾಟಿಕಲ್ ಸೊಸೈಟಿ” ಹಾಗೂ “ಕ್ಯಾಂಪ್‌ ಯೆಲ್ಲೋ" ಇವರು ನಡೆಸಿದ 2022ನೇ ಸಾಲಿನ ಅಂತರಾಷ್ಟ್ರೀಯ ಮೆತೆಮ್ಯಾಟಿಕ್ಸ್ ಚಾಂಪಿಯನ್‌ ಶಿಪ್‌ನಲ್ಲಿ ಕಂಚಿನ ಪದಕ ಪಡೆದಿದ್ದಾರೆ.“ಸ್ಟೆಮ್ ಪೀಡಿಯಾ” ಇವರು ನಡೆಸಿದ “ಕೋಡೆವಾರ್” 2022 ಇಂಟರ್ ನ್ಯಾಶನಲ್ ಸ್ಪರ್ಧೆಯಲ್ಲಿ “ಪೀಪಲ್ ಚಾಯ್ಸ್" ಅವಾರ್ಡನ್ನು ಪಡೆದಿದ್ದಾರೆ.ಸಿಂಧೂರ ಮಾಡಿರುವ ಪ್ರೋಜೆಕ್ಟ್ X-Ray, MRI - Scan ಗಳಲ್ಲಿ ಕಂಡುಬರುವ ಗೆಡ್ಡೆಗಳು ಯಾವ ಗುಂಪಿಗೆ ಸೇರುತ್ತವೆ ಎಂಬುದನ್ನು ಶೇಕಡಾ 95 ರಿಂದ 98 ಪರ್ಸೆಂಟ್‌ವರೆಗೆ ನಿಖರವಾಗಿ ತಿಳಿಸುತ್ತದೆ.ಇದು ವೈದ್ಯರಿಗೆ ರೋಗ ಪತ್ತೆ ಹಚ್ಚಲು ಸಹಕಾರಿಯಾಗಿದೆ

(ವರದಿ- ಹರೀಶ್ ಮಾಂಬಾಡಿ, ಮಂಗಳೂರು)

IPL_Entry_Point