Mangaluru Rains: 10 ದಿನಗಳ ಹಿಂದಷ್ಟೇ ಮದುವೆಯಾಗಿದ್ದ ವ್ಯಕ್ತಿ ಸಿಡಿಲು ಬಡಿದು ಸಾವು; ಸುಬ್ರಹ್ಮಣ್ಯದಲ್ಲಿ ಘಟನೆ
ಕನ್ನಡ ಸುದ್ದಿ  /  ಕರ್ನಾಟಕ  /  Mangaluru Rains: 10 ದಿನಗಳ ಹಿಂದಷ್ಟೇ ಮದುವೆಯಾಗಿದ್ದ ವ್ಯಕ್ತಿ ಸಿಡಿಲು ಬಡಿದು ಸಾವು; ಸುಬ್ರಹ್ಮಣ್ಯದಲ್ಲಿ ಘಟನೆ

Mangaluru Rains: 10 ದಿನಗಳ ಹಿಂದಷ್ಟೇ ಮದುವೆಯಾಗಿದ್ದ ವ್ಯಕ್ತಿ ಸಿಡಿಲು ಬಡಿದು ಸಾವು; ಸುಬ್ರಹ್ಮಣ್ಯದಲ್ಲಿ ಘಟನೆ

10 ದಿನಗಳ ಹಿಂದಷ್ಟೇ ಮದುವೆಯಾಗಿದ್ದ ವ್ಯಕ್ತಿಯೊಬ್ಬರು ಸಿಡಿಲು ಬಡಿದು ಸಾವನ್ನಪ್ಪಿದ ಘಟನೆ ಸುಬ್ರಹ್ಮಣ್ಯದ ಕಡಬದಲ್ಲಿ ನಡೆದಿದೆ. ಕಾರ್‌ ವಾಷಿಂಗ್‌ ಉದ್ಯಮ ನಡೆಸಿಕೊಂಡಿದ್ದ ಸೋಮಸುಂದರ್‌ ಮೃತರು. ಶುಕ್ರವಾರ (ಮೇ 3) ಸಂಜೆ ಈ ಘಟನೆ ನಡೆದಿದೆ.

10 ದಿನಗಳ ಹಿಂದಷ್ಟೇ ಮದುವೆಯಾಗಿದ್ದ ವ್ಯಕ್ತಿ ಸಿಡಿಲು ಬಡಿದು ಸಾವು; ಮೃತ ಸೋಮಸುಂದರ (ಎಡಚಿತ್ರ)
10 ದಿನಗಳ ಹಿಂದಷ್ಟೇ ಮದುವೆಯಾಗಿದ್ದ ವ್ಯಕ್ತಿ ಸಿಡಿಲು ಬಡಿದು ಸಾವು; ಮೃತ ಸೋಮಸುಂದರ (ಎಡಚಿತ್ರ)

ಮಂಗಳೂರು: ಬಿಸಿಲಿನ ತಾಪದಿಂದ ಇಡೀ ರಾಜ್ಯವೇ ಕಂಗೆಟ್ಟಿರುವ ಹೊತ್ತಿನಲ್ಲಿ ಕೆಲವೆಡೆ ವರುಣರಾಯ ದರ್ಶನ ತೋರಿದ್ದಾನೆ. ಮಳೆಯ ಜೊತೆಗೆ ಗುಡುಗು ಸಿಡಿಲು ಜೋರಾಗಿದೆ. ಶುಕ್ರವಾರ ದಕ್ಷಿಣ ಕನ್ನಡದ ಸುಬ್ರಹ್ಮಣ್ಯದಲ್ಲಿ ಸಿಡಿಲು ಬಡಿದು ವ್ಯಕ್ತಿಯೊಬ್ಬರು ದಾರುಣವಾಗಿ ಮೃತಪಟ್ಟಿದ್ದಾರೆ. ಅವರು 10 ದಿನಗಳ ಹಿಂದಷ್ಟೇ ಮದುವೆಯಾಗಿದ್ದರು ಎನ್ನಲಾಗುತ್ತಿದೆ. ಸುಬ್ರಹ್ಮಣ್ಯದ ಕಡಬದಲ್ಲಿ ಶುಕ್ರವಾರ ಸಂಜೆ ಈ ಘಟನೆ ನಡೆದಿದೆ.

ಸುಬ್ರಹ್ಮಣ್ಯ ಗ್ರಾಮದ ಪರ್ವತಮುಖಿ ನಿವಾಸಿ ಸೋಮಸುಂದರ್ (34) ಮೃತರು. ಶುಕ್ರವಾರ ಸಂಜೆ ಸುಬ್ರಹ್ಮಣ್ಯ ಪರಿಸರದಲ್ಲಿ ಮಳೆ ಆರಂಭಕ್ಕೂ ಮೊದಲು ಗಾಳಿ, ಗುಡುಗು ಆರಂಭಗೊಂಡಿದ್ದು ಈ ವೇಳೆ ಮನೆಯಂಗಳದಲ್ಲಿ ಒಣಗಿಸಲು ಹಾಕಲಾಗಿದ್ದ ಅಡಿಕೆಯನ್ನು ರಾಶಿ ಮಾಡುವ ವೇಳೆ ಸಿಡಿಲು ಬಡಿದಿದ್ದು, ಕೂಡಲೇ ಅವರನ್ನು ಆಸ್ಪತ್ರೆಗೆ ಕರೆದೊಯ್ದರೂ ಆ ವೇಳೆಗಾಗಲೇ ಅವರು ಮೃತರಾಗಿದ್ದಾರೆ. ಸೋಮಸುಂದರ್ ಸುಬ್ರಹ್ಮಣ್ಯ ಸಮೀಪ ಕಾರ್ ವಾಷಿಂಗ್ ಉದ್ಯಮ ನಡೆಸಿಕೊಂಡಿದ್ದು, 10 ದಿನಗಳ ಹಿಂದೆಯಷ್ಟೇ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದರು. ಮೃತರು ತಾಯಿ, ತಂಗಿ, ಪತ್ನಿಯನ್ನು ಅಗಲಿದ್ದಾರೆ.

ಇದನ್ನೂ ಓದಿ

ಸಿಡಿಲ ಮಾಹಿತಿ: ಬೇಸಿಗೆ ಬಿರು ಬಿಸಿಲ ನಡುವೆ ಹಲವೆಡೆ ಗುಡುಗಿನ ಭಾರೀ ಮಳೆ, ಸಿಡಿಲಿನಿಂದ ತಪ್ಪಿಸಿಕೊಳ್ಳಿ ಹೀಗೆ

ಸಿಡಿಲಿನಿಂದ ಮನುಷ್ಯರು ಮಾತ್ರವಲ್ಲದೆ ವಿವಿಧ ಪಶು, ಪ್ರಾಣಿಗಳು ಕೂಡ ಸಾಯುತ್ತಿವೆ. ಸಿಡಿಲಿನಿಂದ ಸಾಯುವವರಲ್ಲಿ ಹೆಚ್ಚಿನವರು ರೈತರು, ದನ ಕುರಿ ಕಾಯುವವರು. ಸಿಡಿಲನ್ನು ತಪ್ಪಿಸಲಾಗದು. ಆದರೆ, ಅದರಿಂದಾಗುವ ಸಾವು ನೋವುಗಳನ್ನು ತಪ್ಪಿಸಬಹುದು. ಸಿಡಿಲಿನಿಂದ ರಕ್ಷಣೆ ಹೇಗೆ ಸಾಧ್ಯ, ಈ ಕುರಿತ ಮುನ್ನೆಚ್ಚರಿಕೆ ಕ್ರಮಗಳ ಬಗ್ಗೆ ರಾಜ್ಯ ವಿಪತ್ತು ನಿರ್ವಹಣಾ ಕೇಂದ್ರ, ಕಂದಾಯ ಇಲಾಖೆ ಪ್ರಕಟಣೆ ಹೊರಡಿಸಿದೆ.

Whats_app_banner