Mangaluru News: ಫ್ಯಾಷನ್ ಲೋಕದಲ್ಲಿ ಅಮ್ಮ-ಮಗಳ ಮೋಡಿ: ಮಿಸ್ ಇಂಡಿಯಾ ಕರ್ನಾಟಕ ರನ್ನರ್ ಅಪ್ ಇವರೇ-mangaluru news miss india karnataka runner up mother daughter in the fashion world ,ಕರ್ನಾಟಕ ಸುದ್ದಿ
ಕನ್ನಡ ಸುದ್ದಿ  /  ಕರ್ನಾಟಕ  /  Mangaluru News: ಫ್ಯಾಷನ್ ಲೋಕದಲ್ಲಿ ಅಮ್ಮ-ಮಗಳ ಮೋಡಿ: ಮಿಸ್ ಇಂಡಿಯಾ ಕರ್ನಾಟಕ ರನ್ನರ್ ಅಪ್ ಇವರೇ

Mangaluru News: ಫ್ಯಾಷನ್ ಲೋಕದಲ್ಲಿ ಅಮ್ಮ-ಮಗಳ ಮೋಡಿ: ಮಿಸ್ ಇಂಡಿಯಾ ಕರ್ನಾಟಕ ರನ್ನರ್ ಅಪ್ ಇವರೇ

ಡಿಸಲ್ ತೌರೋ ಮೊದಲ ಬಾರಿಗೆ ಫ್ಯಾಷನ್ ಲೋಕಕ್ಕೆ ಕಾಲಿಟ್ಟಿದ್ದಾರೆ. ಈವರೆಗೆ ಎಲ್ಲಿಯೂ ಫ್ಯಾಷನ್ ಲೋಕದತ್ತ ಬಾರದ ಅವರು ಬೆಂಗಳೂರಿ‌ನಲ್ಲಿ ನಡೆದ ಸ್ಪರ್ಧೆಯಲ್ಲಿ ಭಾಗಿಯಾಗಿದ್ದಾರೆ. ಭಾಗಿಯಾದ ಮೊದಲ ಸ್ಪರ್ಧೆಯಲ್ಲಿಯೇ ರನ್ನರ್ ಅಪ್ ಆಗಿ ಕಿರೀಟ ಮುಡಿಗೇರಿಸಿಕೊಂಡಿದ್ದಾರೆ. (ವರದಿ:ಹರೀಶ ಮಾಂಬಾಡಿ,ಮಂಗಳೂರು)

ಡಿಸಲ್ ತೌರೋ ಭಾಗಿಯಾದ ಮೊದಲ ಸ್ಪರ್ಧೆಯಲ್ಲಿಯೇ ರನ್ನರ್ ಅಪ್ ಆಗಿ ಕಿರೀಟ ಮುಡಿಗೇರಿಸಿಕೊಂಡಿದ್ದಾರೆ.
ಡಿಸಲ್ ತೌರೋ ಭಾಗಿಯಾದ ಮೊದಲ ಸ್ಪರ್ಧೆಯಲ್ಲಿಯೇ ರನ್ನರ್ ಅಪ್ ಆಗಿ ಕಿರೀಟ ಮುಡಿಗೇರಿಸಿಕೊಂಡಿದ್ದಾರೆ.

ಮಂಗಳೂರು: ಆಧುನಿಕ ಕಾಲದಲ್ಲಿ ಫ್ಯಾಷನ್ ಲೋಕದಲ್ಲಿ ಆಕರ್ಷಣೆ ಜಾಸ್ತಿಯಾಗಿದೆ. ಫ್ಯಾಷನ್ ಲೋಕಕ್ಕೆ ಬರಲಿಚ್ಚಿಸುವ ಯುವತಿಯರಿಗೆ ಮನೆಯವರ ಬೆಂಬಲ ಇರುವುದಿಲ್ಲ. ಆದರೆ, ಮಂಗಳೂರಿನಲ್ಲಿ ಅಮ್ಮ-ಮಗಳು ಫ್ಯಾಷನ್ ಲೋಕದಲ್ಲಿ ಆಸಕ್ತಿ ಹೊಂದಿದ್ದು, ಇಬ್ಬರೂ ಕ್ಯಾಟ್ ವಾಕ್ ಮಾಡುವ ಮೂಲಕ ಮನಗೆದ್ದಿದ್ದಾರೆ. ಮೊದಲ ಪ್ರಯತ್ನದಲ್ಲೇ ಡಿಸಲ್ ತೌರೋ ಮಿಸ್ ಇಂಡಿಯಾ ಕರ್ನಾಟಕ ರನ್ನರ್ ಅಪ್ ಆಗುವ ಮೂಲಕ ಎಲ್ಲರ ಗಮನ ಸೆಳೆದಿದ್ದಾರೆ.

ಚಿಕ್ಕಮಗಳೂರು ಮೂಲದ ಡಿಸಲ್ ತೌರೋ, ಚಿಕ್ಕಮಗಳೂರಿನ ಎಐಟಿ ಯಲ್ಲಿ ಪ್ರಥಮ ಬಿಬಿಎ ವಿದ್ಯಾರ್ಥಿನಿ. ಚಿಕ್ಕಮಗಳೂರಿನ ಶಿವಂ ಸ್ಕೂಲ್ ಆಫ್ ಡ್ಯಾನ್ಸ್ ನ ಶರತ್ ಅವರಿಂದ ತರಬೇತಿ ಪಡದಿರುವ ಇವರು, ಚಿಕ್ಕಮಗಳೂರಿನ ದ ಸ್ಕಲ್ಟ್ ಫಿಟ್ನೆಸ್‍ನ ಅಲಿ ಹಸೀಬ್ ಅವರಿಂದ ಫಿಟ್ನೆಸ್ ತರಬೇತಿ ಪಡೆದಿದ್ದಾರೆ. ಇತ್ತೀಚೆಗೆ ಬೆಂಗಳೂರಿನ ಕಿಂಗ್ಸ್‌ ಮೆಡೋಸ್‌ನಲ್ಲಿ ಆಗಸ್ಟ್ 29ರಿಂದ 3 ದಿನಗಳ ಕಾಲ ನಡೆದ ಮಿಸ್ ಆ್ಯಂಡ್ ಮಿಸೆಸ್ ಇಂಡಿಯಾ ಕರ್ನಾಟಕ 2024ರ 8ನೇ ಆವೃತ್ತಿಯ ಫ್ಯಾಷನ್‌ ಶೋ ಸ್ಪರ್ಧೆಯಲ್ಲಿ ಮಿಸ್ ಇಂಡಿಯಾ ಕರ್ನಾಟಕ‌ ರನ್ನರ್ ಅಪ್ ಆಗಿದ್ದಾರೆ.

ಡಿಸಲ್ ತೌರೋ ಮೊದಲ ಬಾರಿಗೆ ಫ್ಯಾಷನ್ ಲೋಕಕ್ಕೆ ಕಾಲಿಟ್ಟಿದ್ದಾರೆ. ಈವರೆಗೆ ಎಲ್ಲಿಯೂ ಫ್ಯಾಷನ್ ಲೋಕದತ್ತ ಬಾರದ ಅವರು ಬೆಂಗಳೂರಿ‌ನಲ್ಲಿ ನಡೆದ ಸ್ಪರ್ಧೆಯಲ್ಲಿ ಭಾಗಿಯಾಗಿದ್ದಾರೆ. ಭಾಗಿಯಾದ ಮೊದಲ ಸ್ಪರ್ಧೆಯಲ್ಲಿಯೇ ರನ್ನರ್ ಅಪ್ ಆಗಿ ಕಿರೀಟ ಮುಡಿಗೇರಿಸಿಕೊಂಡಿದ್ದಾರೆ. ಅಷ್ಟು ಮಾತ್ರವಲ್ಲದೆ ಬೆಸ್ಟ್ ವಾಕ್ ಅವಾರ್ಡ್, ಬೆಸ್ಟ್ ಟ್ಯಾಲೆಂಟ್ ಅವಾರ್ಡ್ ಅನ್ನೂ ಪಡೆದುಕೊಂಡಿದ್ದಾರೆ.

ಅಂದಹಾಗೆ, ಡಿಸಲ್ ತೌರೋ ಅವರು ಫ್ಯಾಷನ್ ಲೋಕಕ್ಕೆ ಎಂಟ್ರಿಯಾಗಲು ಕಾರಣವಾಗಿದ್ದು ಅವರ ತಾಯಿ ಶಾಲೆಟ್ ತೌರೊ. ಮೂಲತಃ ಮಂಗಳೂರಿನವರಾದ ಶಾಲೆಟ್ ತೌರೋ, ವಿವಾಹವಾದ ಬಳಿಕ ಚಿಕ್ಕಮಗಳೂರಿನಲ್ಲಿ ನೆಲೆಸಿದ್ದಾರೆ. ಬೆಂಗಳೂರಿನಲ್ಲಿ ನಡೆದ ಮಿಸೆಸ್ ಇಂಡಿಯಾ ಕರ್ನಾಟಕ 2023 ಕ್ಲಾಸಿಕ್‍ನಲ್ಲಿ ಸೆಕೆಂಡ್ ರನ್ನರ್ ಅಪ್ ಆಗಿ ಕಿರೀಟ ಮುಡಿಗೇರಿಸಿಕೊಂಡಿದ್ದರು. ಅಷ್ಟು ಮಾತ್ರವಲ್ಲದೆ ಫಿಟ್ನೆಸ್ ಅವಾರ್ಡ್ ಕೂಡ ಪಡೆದಿದ್ದರು.

ತನ್ನ ಮಗಳು ತನ್ನಂತೆ ಫ್ಯಾಷನ್ ಲೋಕಕ್ಕೆ ಬರಬೇಕೆಂದು ತಾಯಿ ಶಾಲೆಟ್ ತೌರೊ ಅವರ ಮಹದಾಸೆಯಾಗಿತ್ತು. ಅದರಂತೆ ಮಂಗಳೂರಿನ ಪಾಥ್ ವೇ ಎಂಟರ್ ಪ್ರೈಸಸ್‍ನ ದೀಪಕ್ ಗಂಗೂಲಿ ಅವರನ್ನು ಸಂಪರ್ಕಿಸಿದ ಅವರು, ತನ್ನ ಮಗಳಿಗೆ ಟ್ರೈನಿಂಗ್ ನೀಡುವಂತೆ ಮನವಿ ಮಾಡಿದ್ದಾರೆ. ಇದಕ್ಕೊಪ್ಪಿದ ದೀಪಕ್ ಗಂಗೂಲಿ ಡಿಸಲ್ ತೌರೋ ಅವರಿಗೆ ತರಬೇತಿ ನೀಡಿದ್ದಾರೆ. ಜೊತೆಗೆ ಮಿಸ್ ಇಂಡಿಯಾ ಕರ್ನಾಟಕ ಸ್ಪರ್ಧೆಯಲ್ಲಿ ರನ್ನರ್ ಅಪ್ ಆಗಿಸುವಲ್ಲಿ ಇವರ ಪಾತ್ರವೂ ಮಹತ್ವದ್ದು.

ಫ್ಯಾಷನ್ ಲೋಕದಲ್ಲಿ ಅಮ್ಮ-ಮಗಳ ಮೋಡಿ
ಫ್ಯಾಷನ್ ಲೋಕದಲ್ಲಿ ಅಮ್ಮ-ಮಗಳ ಮೋಡಿ

ಈ ಬಗ್ಗೆ ಮಾತನಾಡಿದ ಡಿಸಲ್ ತೌರೋ, ಇದೇ ಮೊದಲ ಬಾರಿಗೆ ಆರಂಭಗೊಂಡ ಮಿಸ್ ಇಂಡಿಯಾ ಕರ್ನಾಟಕ ಸ್ಪರ್ಧೆಯಲ್ಲಿ ಭಾಗವಹಿಸಿ, ರನ್ನರ್ ಅಪ್ ಆಗಿರುವುದು ಸಂತಸ ತಂದಿದೆ. ತನಗೆ ಪ್ರೋತ್ಸಾಹ ನೀಡಿದ ತಾಯಿ ಹಾಗೂ ತರಬೇತಿ ನೀಡಿದ ದೀಪಕ್ ಗಂಗೂಲಿ ಅವರಿಗೆ ಕೃತಜ್ಞತೆ ಸಲ್ಲಿಸಿದ್ದಾರೆ. ಮೊದಲ ಬಾರಿಗೆ ಸ್ಪರ್ಧಿಸಿ ರನ್ನರ್ ಅಪ್ ಬಂದಿರುವುದು ಸಂತಸ ತಂದಿದೆ. ತನ್ನ ತಾಯಿ ಮಿಸೆಸ್ ಇಂಡಿಯಾ ಕರ್ನಾಟಕ ರನ್ನರ್ ಅಪ್ ಆಗಿದ್ದರು. ಹೀಗಾಗಿ ತಾಯಿಗೆ ತಾನು ಸ್ಪರ್ಧಿಸಬೇಕೆಂಬ ಆಸೆಯಿತ್ತು. ಅವರ ಪ್ರೋತ್ಸಾಹವೇ ತನ್ನ ಸಾಧನೆಗೆ ಕಾರಣ ಎಂದು ಸಂತಸ ಹಂಚಿಕೊಂಡಿದ್ದಾರೆ.

ಇನ್ನು ತನ್ನ ಮಗಳ ಬಗ್ಗೆ ಸಂತಸ ಹಂಚಿಕೊಂಡ ಡಿಸಲ್ ತೌರೋ ತಾಯಿ ಶಾಲೆಟ್ ತೌರೊ,ಕಳೆದ ಸಲ ಎರಡನೇ ರನ್ನರ್ ಅಪ್ ವಿನ್ನರ್ ಆಗಿದ್ದೆ. ಈ ಬಾರಿ ಮಗಳು ಫಸ್ಟ್ ರನ್ನರ್ ಅಪ್ ಆಗಿರುವುದು ತುಂಬಾ ಖುಷಿ ನೀಡಿದೆ ಎಂದು ಹೇಳುತ್ತಾ ತಂಡದ ಎಲ್ಲಾ ಸದಸ್ಯರಿಗೆ ಧನ್ಯವಾದ ತಿಳಿಸಿದರು.

ಈ ಬಾರಿ ಮಿಸ್ ಇಂಡಿಯಾ ಕರ್ನಾಟಕ ಎಂಬುದನ್ನು ಮೊದಲ ಬಾರಿಗೆ ಆರಂಭಿಸಿದ್ದಾರೆ. ಇದರಲ್ಲಿ ಡಿಸಲ್ ಮೊದಲ ಬಾರಿಗೆ ಪಾಲ್ಗೊಂಡು ಮೊದಲ ರನ್ನರ್ ಅಪ್ ಆಗಿದ್ದಾರೆ. ಇದು ತುಂಬಾ ಸಂತಸ ತ‌ಂದಿದೆ ಎಂದು ಪಾಥ್ ವೆ ಎಂಟರ್ ಪ್ರೈಸಸ್‍ನ ದೀಪಕ್ ಗಂಗೂಲಿ ತಿಳಿಸಿದ್ದಾರೆ.

mysore-dasara_Entry_Point