ಕನ್ನಡ ಸುದ್ದಿ  /  ಕರ್ನಾಟಕ  /  ಮಂಗಳೂರು ಬಜಪೆಯ ಖಾಸಗಿ ಫೈನಾನ್ಸ್‌ನಲ್ಲಿ ಕ್ಲೋರೋಫಾರ್ಮ್ ಬಳಸಿ ಹಗಲುದರೋಡೆಗೆ ಯತ್ನ, ಮೂವರು ಆರೋಪಿಗಳು ಪರಾರಿ

ಮಂಗಳೂರು ಬಜಪೆಯ ಖಾಸಗಿ ಫೈನಾನ್ಸ್‌ನಲ್ಲಿ ಕ್ಲೋರೋಫಾರ್ಮ್ ಬಳಸಿ ಹಗಲುದರೋಡೆಗೆ ಯತ್ನ, ಮೂವರು ಆರೋಪಿಗಳು ಪರಾರಿ

ಮಂಗಳೂರು ಬಜಪೆಯ ಖಾಸಗಿ ಫೈನಾನ್ಸ್‌ನಲ್ಲಿ ಕ್ಲೋರೋಫಾರ್ಮ್ ಬಳಸಿ ಹಗಲುದರೋಡೆಗೆ ಯತ್ನ ನಡೆಯಿತು. ಗುರುವಾರ ಸಂಜೆ ಈ ದರೋಡೆಯತ್ನ ನಡೆದಿದ್ದು, ಫೈನಾನ್ಸ್ ಸಿಬ್ಬಂದಿ ಕಿರುಚಿಕೊಂಡ ಕಾರಣ ಮೂವರು ಆರೋಪಿಗಳು ಪರಾರಿಯಾಗಿದ್ದಾರೆ. (ವರದಿ- ಹರೀಶ್ ಮಾಂಬಾಡಿ, ಮಂಗಳೂರು)

ಮಂಗಳೂರು ಬಜಪೆಯ ಖಾಸಗಿ ಫೈನಾನ್ಸ್‌ನಲ್ಲಿ ಕ್ಲೋರೋಫಾರ್ಮ್ ಬಳಸಿ ಹಗಲುದರೋಡೆಗೆ ಯತ್ನ ನಡೆಸಿದ ಮೂವರು ಆರೋಪಿಗಳು ಪರಾರಿಯಾಗಿದ್ದಾರೆ. ಪೊಲೀಸರಿಂದ ಸ್ಥಳಮಹಜರು ನಡೆಯಿತು.
ಮಂಗಳೂರು ಬಜಪೆಯ ಖಾಸಗಿ ಫೈನಾನ್ಸ್‌ನಲ್ಲಿ ಕ್ಲೋರೋಫಾರ್ಮ್ ಬಳಸಿ ಹಗಲುದರೋಡೆಗೆ ಯತ್ನ ನಡೆಸಿದ ಮೂವರು ಆರೋಪಿಗಳು ಪರಾರಿಯಾಗಿದ್ದಾರೆ. ಪೊಲೀಸರಿಂದ ಸ್ಥಳಮಹಜರು ನಡೆಯಿತು.

ಮಂಗಳೂರು: ಮೂವರು ಅಪರಿಚಿತ ವ್ಯಕ್ತಿಗಳು ಗುರುವಾರ ಮಂಗಳೂರು ಬಜಪೆಯ ಮಾರುಕಟ್ಟೆ ಸಮೀಪದ ಖಾಸಗಿ ಫೈನಾನ್ಸೊಂದಕ್ಕೆ ದಿಢೀರ್ ನುಗ್ಗಿ ಕ್ಲೋರೋಫಾರ್ಮ್ ಬಳಸಿ ದರೋಡೆಗೆ ಯತ್ನಿಸಿ ಪರಾರಿಯಾಗಿರುವ ಬಗ್ಗೆ ಬಜಪೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಸಂಜೆ ಸುಮಾರು 4:30 ರ ವೇಳೆಗೆ ಆಕ್ಟೀವ(ಸ್ಕೂಟಿ)ದಲ್ಲಿ ಬಜಪೆಯ ಮಸೀದಿ ಕಡೆಯಿಂದ ಆಗಮಿಸಿ ಹೂವಿನ ಮಾರುಕಟ್ಟೆ ಬಳಿಗೆ ಹೋಗಿ ವಾಪಾಸು ಬಂದು ಮಾರುಕಟ್ಟೆ ಸಮೀಪದ ಖಾಸಗಿ ಫೈನಾನ್ಸ್ ನ ಒಳಗೆ ಏಕಾಏಕಿ ನುಗ್ಗಿ ಚಿಕ್ಕ ಆಸಿಡ್ ತುಂಬಿದ ಡಬ್ಬವೊಂದರ ಮುಚ್ಚಳ ತೆಗೆದು ಟೇಬಲ್ ಮೇಲಿಟ್ಟು ಕ್ಯಾಶ್ ಗೆ ಬಲಾತ್ಕಾರವಾಗಿ ಕೈ ಹಾಕಲು ಪ್ರಯತ್ನಿಸಿದ ವೇಳೆ ತಡೆಯಲು ಯತ್ನಿಸಿದ ಫೈನಾನ್ಸ್ ನ ಇಬ್ಬರು ಸಿಬ್ಬಂದಿಗಳನ್ನು ದೂಡಿ ಹಾಕಿದಾಗ ಸಿಬ್ಬಂದಿಗಳು ಜೋರಾಗಿ ಕಿರುಚಿದ ಕಾರಣದಿಂದಾಗಿ ಆರೋಪಿಗಳು ಪ್ರಯತ್ನ ಕೈಬಿಟ್ಟು ಪರಾರಿಯಾಗಿದ್ದಾರೆ.

ಮೂವರು ಆರೋಪಿಗಳ ಪೈಕಿ ಓರ್ವ ಹೆಲ್ಮೆಟ್ ಧಾರಿ ಸ್ಕೂಟರನ್ನು ಸ್ಟಾರ್ಟಿಂಗ್ ನಲ್ಲಿಯೇ ಕಾಯುತ್ತಿದ್ದು ಇಬ್ಬರ ಪೈಕಿ ಓರ್ವ ಬುರ್ಖಾಧಾರಿಯಾಗಿದ್ದು ಸವಾರನ ಹಿಂಬದಿಯಲ್ಲಿ (ಮಧ್ಯದಲ್ಲಿ) ಕುಳಿತು ಹೋದ ಚಲನವಲನಗಳನ್ನು ಪ್ರತ್ಯಕ್ಷದರ್ಶಿಯಾಗಿ ಹಾಗೂ ಸಿಸಿ ಕ್ಯಾಮರಾದ ದೃಶ್ಯಗಳನ್ನು ಗಮನಿಸಿ ಬುರ್ಖಾಧಾರಿ ವ್ಯಕ್ತಿ ಮಹಿಳೆಯಲ್ಲ ಗಂಡಸು ಎಂದು ಶಂಕಿಸಲಾಗಿದೆ.

ಟ್ರೆಂಡಿಂಗ್​ ಸುದ್ದಿ

ಫೈನಾನ್ಸ್ ಗೆ ನುಗ್ಗಿದ ಇಬ್ಬರಲ್ಲಿ ಓರ್ವ ಹೆಲ್ಮೆಟ್ ಹಾಗೂ ರೈನ್ ಕೋಟ್ ಧರಿಸಿಯೇ ಇದ್ದ ಎನ್ನಲಾಗಿದೆ. ಪ್ರಕರಣದ ತನಿಖೆಗಾಗಿ ಫೋರೇನ್ಸಿಕ್, ಬೆರಳಚ್ಚು ತಜ್ಞರ ತಂಡ ಹಾಗೂ ಬಜಪೆ ಪೊಲೀಸರು ಸ್ಥಳಕ್ಕಾಗಮಿಸಿ ಪರಿಶೀಲನೆ ನಡೆಸಿದ್ದಾರೆ. ದರೋಡೆಗೆ ಯತ್ನಿಸಿದ ಮೂವರು ಅಪರಿಚಿತರ ತಂಡ ಒಂದೇ ಸ್ಕೂಟರ್ ನಲ್ಲಿ ಅತಿವೇಗದಿಂದ ಮಸೀದಿ ಪಕ್ಕದ ರಸ್ತೆಯ ಮುರಾ ಜಂಕ್ಷನ್ ಮೂಲಕ ಕೊಳಂಬೆ ಮಾರ್ಗವಾಗಿ ಗುರುಪುರ ಕೈಕಂಬ ಕಡೆಗೆ ಹೋಗಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.

ಆರೋಪಿಗಳು ತಂದಿಟ್ಟ ಆಸಿಡ್ ಕ್ಲೋರೋಫಾರ್ಮ್ ಎನ್ನಲಾಗಿದ್ದು ಹೆಚ್ಚುವರಿ ತಪಾಸಣೆಯ ಬಳಿಕ ದೃಢಪಡಬೇಕಾಗಿದ್ದು ವ್ಯವಸ್ಥಿತ ಸಂಚು ನಡೆಸಿ ಹಗಲುದರೋಡೆಯ ಪ್ರಯತ್ನ ನಡೆಸಿರುವುದರ ಹಿಂದೆ ಜಾಲವೊಂದರ ಕೈವಾಡ ಇರಬಹುದೆಂದು ಶಂಕಿಸಲಾಗಿದೆ. ಬಜಪೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಚಾರ್ಮಾಡಿ ಘಾಟಿಯಲ್ಲಿ ಭೂಕುಸಿತ ಭೀತಿ

ಕಳೆದ ಕೆಲ ದಿನಗಳಿಂದ ಕಾಫಿನಾಡಿನಲ್ಲಿ ನಿರಂತರ ಮಳೆಯಾಗುತ್ತಿದ್ದು ಪರಿಣಾಮ ಚಾರ್ಮಾಡಿ ಘಾಟಿಯ ಹೆದ್ದಾರಿ ಹಾಗೂ ತಡೆಗೋಡೆಗಳಲ್ಲಿ ಬಿರುಕು ಕಂಡುಬಂದಿದ್ದು ಕುಸಿಯುವ ಭೀತಿ ಎದುರಾಗಿದೆ ಎನ್ನಲಾಗಿದೆ.

ಹಿಂದೆ ಕುಸಿದಿದ್ದ ಜಾಗದಲ್ಲಿ ಕಾಮಗಾರಿ ನಡೆದಿದ್ದು ಅದೇ ಜಾಗ ಸೇರಿದಂತೆ ಸುಮಾರು ಮೂರೂ ನಾಲ್ಕು ಕಡೆಗಳಲ್ಲಿ ಬಿರುಕು ಕಂಡುಬಂದಿದ್ದು ಕುಸಿಯುವ ಭೀತಿ ಎದುರಾಗಿದೆ.

100-200 ಅಡಿ ಮಣ್ಣು ತುಂಬಿಸಿ ರಸ್ತೆ ಸಿರ್ಮಿಸಿದ ಜಾಗದಲ್ಲೇ ಬಿರುಕು ಬಿಟ್ಟಿದೆ, ಚಾರ್ಮಾಡಿ ರಾಷ್ಟ್ರೀಯ ಹೆದ್ದಾರಿಯ ಅದ್ವಾನ ಕಂಡು ಸ್ಥಳಿಯರು, ಪ್ರಯಾಣಿಕರಲ್ಲಿ ಆತಂಕ ಮನೆಮಾಡಿದೆ ಅಲ್ಲದೆ ಮಳೆ ಹಾಗೂ ಮಂಜಿನ ನಡುವೆ ರಸ್ತೆ ಬಿರುಕು ಬಿಟ್ಟಿರುವುದು ಕಾಣದಂತಾಗಿದೆ.

ಕೋಟ್ಯಂತರ ರೂಪಾಯಿ ವ್ಯಯಿಸಿ ಹೆದ್ದಾರಿ ಕಾಮಗಾರಿ ನಡೆಸಿದರೂ ಯಾವುದೇ ಪ್ರಯೋಜನ ಆಗಲಿಲ್ಲ ಕಳಪೆ ಗುಣಮಟ್ಟದ ಕಾಮಗಾರಿ ನಡೆದಿದೆ ಎಂದು ಸ್ಥಳೀಯರು ಆರೋಪ ಮಾಡುತ್ತಿದ್ದಾರೆ.

(ವರದಿ- ಹರೀಶ್ ಮಾಂಬಾಡಿ, ಮಂಗಳೂರು)