Mangaluru News: ಕಾಡುತ್ತಿರುವ ಕಾಡಾನೆ; ಕಡಬ ಸಮೀಪ ಕೂಲಿ ಕಾರ್ಮಿಕನ ಎತ್ತಿ ಎಸೆದ ಒಂಟಿಸಲಗ
ದಕ್ಷಿಣ ಕನ್ನಡ ಜಿಲ್ಲೆಯ ಕಡಬ ಪರಿಸರದಲ್ಲಿ ಕಾಡಾನೆ ಹಾವಳಿ ಹೆಚ್ಚಿದೆ. ಐತ್ತೂರು ಗ್ರಾಮದ ನೆಲ್ಯಡ್ಕದಲ್ಲಿ ಕೂಲಿ ಕಾರ್ಮಿಕರೊಬ್ಬರನ್ನು ಸೊಂಡಿಲಲ್ಲಿ ಎತ್ತಿ ರಸ್ತೆಯ ಮತ್ತೊಂದು ಮಗ್ಗಲಿಗೆ ಎಸೆದು ಪರಾಕ್ರಮ ಮೆರೆದಿದೆ.

ಮಂಗಳೂರು: ಕೆಲ ಸಮಯಗಳಿಂದ ಘಟ್ಟದ ತಪ್ಪಲು ಪ್ರದೇಶಗಳಾದ ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ, ಕಡಬ, ಸುಳ್ಯ ತಾಲೂಕುಗಳಲ್ಲಿ ಸಲಗಗಳು ನಾಡಿಗೆ ಬರಲಾರಂಭಿಸಿವೆ. ಆನೆಗಳು ಸಂಚರಿಸುವ ಜಾಗದಲ್ಲಿ ಸಾರ್ವಜನಿಕರೇನಾದರೂ ಕಂಡುಬಂದರೆ, ದಾಳಿ ಮಾಡುವ ಮಟ್ಟಕ್ಕೆ ಪರಿಸ್ಥಿತಿ ಮುಂದುವರಿದಿದ್ದು, ಕೆಲ ತಿಂಗಳ ಹಿಂದೆ ಆನೆ ದಾಳಿಗೆ ಇಬ್ಬರು ಬಲಿಯಾಗಿದ್ದರು. ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿದ್ದ ಕಾರ್ಮಿಕನೋರ್ವನ ಮೇಲೆ ದಾಳಿ ಮಾಡಿದ್ದು ತಾಜಾ ಘಟನೆ.
ಟ್ರೆಂಡಿಂಗ್ ಸುದ್ದಿ
ದಕ್ಷಿಣ ಕನ್ನಡ ಜಿಲ್ಲೆಯ ಕಡಬ ಪರಿಸರದಲ್ಲಿ ಕಾಡಾನೆ ಹಾವಳಿ ಹೆಚ್ಚಿದೆ. ಐತ್ತೂರು ಗ್ರಾಮದ ನೆಲ್ಯಡ್ಕದಲ್ಲಿ ಕೂಲಿ ಕಾರ್ಮಿಕರೊಬ್ಬರನ್ನು ಸೊಂಡಿಲಲ್ಲಿ ಎತ್ತಿ ರಸ್ತೆಯ ಮತ್ತೊಂದು ಮಗ್ಗಲಿಗೆ ಎಸೆದು ಪರಾಕ್ರಮ ಮೆರೆದಿದೆ. ನೆಲ್ಯಡ್ಕದಲ್ಲಿ ರಸ್ತೆ ದಾಟುತ್ತಿದ್ದ ಕಾಡಾನೆ, ನಡೆದುಕೊಂಡು ಹೋಗುತ್ತಿದ್ದ ಐತ್ತೂರು ಗ್ರಾಮದ ಗೇರ್ತಿಲ ಚೋಮ ಎಂಬವರನ್ನು ಸೊಂಡಿಲಲ್ಲಿ ಎತ್ತಿ ಎಸೆದಿದೆ. ಅದೃಷ್ಟವಶಾತ್ ಅದೇ ಸಂದರ್ಭದಲ್ಲಿ ಕಾರೊಂದು ಬಂದಿದ್ದು, ಆನೆ ಸ್ಥಳದಿಂದ ಓಡಿದೆ. ಬಳಿಕ ಗಾಯಾಳುವನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು, ಅವರು ಈಗ ಗಂಭೀರ ಗಾಯಗಳೊಂದಿಗೆ ಚಿಕಿತ್ಸೆ ಪಡೆಯುತ್ತಿದ್ದಾರೆ.
ಹೊಸದುರ್ಗ: ಮಾವನ ಕೊಂದ ಅಳಿಯ
ತೃಕ್ಕರಿಪುರ ಪರುತ್ತಿಚ್ಚಾಲ್ ನಿವಾಸಿ ಕೇಳಪ್ಪನ್ ಅವರ ಪುತ್ರ, ಪರತಿಚಾಲ್‌ನಲ್ಲಿ ವೆಲ್ಡಿಂಗ್ ಕಾರ್ಮಿಕರಾಗಿದ್ದ ಎಂ.ವಿ. ಬಾಲಕೃಷ್ಣನ್ (54) ತಲೆಗೆ ಗಂಭೀರ ಹೊಡೆತದ ಗಾಯದಿಂದ ಸಾವಿಗೀಡಾದ ಘಟನೆಗೆ ಸಂಬಂಧಿಸಿ ಅಳಿಯ ರಜೀಶ್(36)ನನ್ನು ಚಂದೇರ ಪೊಲೀಸರು ಬಂಧಿಸಿದ್ದಾರೆ. ಆರೋಪಿಯನ್ನು ಹೊಸದುರ್ಗ ಪ್ರಥಮ ದರ್ಜೆ ಮ್ಯಾಜಿಸ್ಟ್ರೇಟ್ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು, ನ್ಯಾಯಾಂಗ ಬಂಧನ ವಿಧಿಸಲಾಗಿದೆ. ಸಾವಿಗೀಡಾದ ಬಾಲಕೃಷ್ಣನ್ ಪತ್ನಿಯೊಂದಿಗೆ ವಿರಸದಿಂದ ಮನೆಯಲ್ಲಿ ಏಕಾಂಗಿಯಾಗಿದ್ದರು. ಅವರ ಹಿರಿಯ ಪುತ್ರಿಯ ಪತಿ ರತೀಶ್‌ನೊಂದಿಗೆ ಆಸ್ತಿ ಕುರಿತಾದ ವಿವಾದವಿತ್ತು. ಅವರು ಸೆ. 25ರಂದು ಮನೆಗೆ ಕರೆಸಿದ್ದರೆಂದೂ, ಬಳಿಕ ಮದ್ಯ ಸೇವಿಸಿದ್ದರು. ಮದ್ಯದ ಅಮಲಿನಲ್ಲಿ ಇವರ ಮಧ್ಯೆ ವಾಗ್ವಾದ ನಡೆದಿದ್ದು, ರತೀಶ್, ಬಾಲಕೃಷ್ಣನ್ ಅವರ ತಲೆಗೆ ಹೊಡೆದಿದ್ದ. ಮಂಗಳವಾರ ಬೆಳಗ್ಗೆ ಮನೆಯಲ್ಲಿ ತಲೆಗೆ ಏಟು ಬಿದ್ದು ಗಂಭೀರಾವಸ್ಥೆಯಲ್ಲಿ ಪತ್ತೆಯಾಗಿದ್ದರು. ಕೂಡಲೇ ಅವರನ್ನು ಆಸ್ಪತ್ರೆಗೆ ತಲುಪಿಸಿದರೂ ಆಗಲೇ ಸಾವು ಸಂಭವಿಸಿತ್ತು
ಕಾರವಾರ: ಮಾಜಾಳಿ ಚೆಕ್ ಪೊಸ್ಟ್ ನಲ್ಲಿ ಅಕ್ರಮ ಮದ್ಯ ಸಾಗಾಟ ಪತ್ತೆ
ಅಕ್ರಮವಾಗಿ ಗೋವಾ ಸಾರಾಯಿಯನ್ನು ಸಾಗಿಸುತ್ತಿದ್ದ ಅಬಕಾರಿ ಅಧಿಕಾರಿಗಳು ಚೆಕ್ ಪೋಸ್ಟ್ ನಲ್ಲಿ ಪತ್ತೆ ಹಚ್ಚಿ 5 ಲಕ್ಷ ರೂ.ಬೆಲೆಯ ಗೋವಾ ಮದ್ಯವನ್ನು ವಶಕ್ಕೆ ಪಡೆದ ಘಟನೆ ಕಾರವಾರ ಗಡಿಭಾಗ ಮಾಜಾಳಿ ಚೆಕ್ ಪೊಸ್ಟ್ ಬಳಿ ಗುರುವಾರ ಸಂಜೆ ನಡೆದಿದೆ. ಗೋವಾದಿಂದ ಕಂಟೇನರ್ ವಾಹನದ ಮೂಲಕ ಮಂಗಳೂರಿಗೆ ಅಕ್ರಮವಾಗಿ ಗೋವಾದಿಂದ ಮದ್ಯವನ್ನು ಸಾಗಾಟ ಮಾಡುತ್ತಿರುವ ಬಗ್ಗೆ ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಲಾಯಿತು. ಈ ಸಂಬಂಧ ಇಬ್ಬರನ್ನು ವಶಕ್ಕೆ ಪಡೆದು, ನಂತರ ಬಂಧಿಸಲಾಗಿದೆ.
ಗೋವಾದಿಂದ ಮಂಗಳೂರಿಗೆ ಮದ್ಯ ಸಾಗಾಟ ಮಾಡಲಾಗುತ್ತಿರುವ ಬಗ್ಗೆ ಅಬಕಾರಿ ಇಲಾಖೆಗೆ ಖಚಿತ ಮಾಹಿತಿ ಬಂದಿತ್ತು. ಅಬಕಾರಿ ಆಯುಕ್ತರಾಗಿರುವ ಕೆ. ವಿನೋದ್ ಕುಮಾರ್ ನೇತೃತ್ವದಲ್ಲಿ ದಾಳಿ ನಡೆಸಲಾಗಿದ್ದು, ಐದು ಲಕ್ಷ ಬೆಲೆಯ 58 ಬಾಕ್ಸ್ ಗೋವಾದಲ್ಲಿ ತಯಾರಿಸಿದ ವಿಸ್ಕಿ ಹಾಗೂ ವಾಹನ ಸೇರಿ 25 ಲಕ್ಷದ ಸ್ವತ್ತು ವಶಕ್ಕೆ ಪಡೆಯಲಾಗಿದೆ.
ಮದ್ಯ ಸಾಗಾಟ ಮಾಡುತ್ತಿದ್ದ ಕಂಟೇನರ್ ವಾಹನ ಚಾಲಕ ಮಹಮ್ಮದ್ ಸಲೀಮ್ ಹಾಗೂ ಕಾರವಾರ ತಾಲೂಕಿನ ಸದಾಶಿವಗಡ ನಿವಾಸಿ ತೇಜಸ್ ಶೇಟ್ ಎಂಬುವವರನ್ನ ಬಂಧಿಸಲಾಗಿದೆ. ಈ ಕುರಿತು ಕಾರವಾರ ಅಬಕಾರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.