ಕನ್ನಡ ಸುದ್ದಿ  /  Karnataka  /  Mangaluru News Two Kambalas In The Same Village In Hokkadigoli Of Bantwala Taluk Dakshina Kannada Kambala Hsm

Kambala: ಒಂದೇ ಊರು, ಒಂದೇ ಹೆಸರು, ಕಂಬಳ ಮಾತ್ರ ಎರಡು: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ನಡೆಯಿತು ವಿಶೇಷ ವಿದ್ಯಮಾನ

ಒಂದು ಊರಲ್ಲಿ ಒಂದು ಕಂಬಳ ನಡೆಯುವುದು ಸಾಮಾನ್ಯ. ಆದರೆ ಒಂದೇ ಊರಿನಲ್ಲಿ ಎರಡು ಕಂಬಳ ನಡೆದ ವಿದ್ಯಮಾನ ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನ ಹೊಕ್ಕಾಡಿಗೋಳಿ ಎಂಬಲ್ಲಿ ನಡೆಯಿತು. ಇದಕ್ಕೆ ಕಾರಣ ಇಷ್ಟೇ. ಕಂಬಳ ಸಮಿತಿಯೊಳಗಿನ ವೈಮನಸ್ಸು. (ವರದಿ: ಹರೀಶ ಮಾಂಬಾಡಿ)

 ಹೊಕ್ಕಾಡಿಗೋಳಿ ಕಂಬಳ
ಹೊಕ್ಕಾಡಿಗೋಳಿ ಕಂಬಳ

ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕಂಬಳ ನಡೆಯುವುದು ಹೊಸದೇನಲ್ಲ. ಪ್ರತಿ ಸೀಸನ್​​ನಲ್ಲಿ ಕಂಬಳದ ಲಿಸ್ಟ್ ಅನ್ನು ಕಂಬಳ ಸಮಿತಿ ನೀಡುತ್ತದೆ. ಅದರಂತೆ ನಡೆಯುವ ಕಂಬಳಕೂಟಗಳಿಗೆ ನೂರಾರು ಸಂಖ್ಯೆಯಲ್ಲಿ ಜನರು ಸೇರುತ್ತಾರೆ. ಬೆಂಗಳೂರಿನಲ್ಲಿ ನಡೆದ ಕಂಬಳ ಮತ್ತಷ್ಟು ಜನಾಕರ್ಷಣೆಯ ಕೇಂದ್ರಬಿಂದುವಾಗಿ ಮಾರ್ಪಟ್ಟಿತು. ಒಂದು ಊರಲ್ಲಿ ಒಂದು ಕಂಬಳ ನಡೆಯುವುದು ಸಾಮಾನ್ಯ. ಆದರೆ ಒಂದೇ ಊರಿನಲ್ಲಿ ಎರಡು ಕಂಬಳ ನಡೆದ ವಿದ್ಯಮಾನ ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನ ಹೊಕ್ಕಾಡಿಗೋಳಿ ಎಂಬಲ್ಲಿ ನಡೆಯಿತು. ಇದಕ್ಕೆ ಕಾರಣ ಇಷ್ಟೇ. ಕಂಬಳ ಸಮಿತಿಯೊಳಗಿನ ವೈಮನಸ್ಸು. ಇದನ್ನು ಬಗೆಹರಿಸಲು ಜಿಲ್ಲಾ ಕಂಬಳ ಸಮಿತಿ ಪ್ರಯತ್ನಿಸಿದಾದರೂ ಫಲ ಶೂನ್ಯ. ಹೀಗಾಗಿ ಹಠಕ್ಕೆ ಬಿದ್ದವರಂತೆ ಕಂಬಳ ಆಯೋಜನೆಗೊಂಡಿತು .ಅವುಗಳಲ್ಲಿ ಒಂದು ಕಂಬಳಕ್ಕೆ ಜಿಲ್ಲಾ ಸಮಿತಿ ಮಾನ್ಯತೆ ನೀಡಿತು.

ಬಂಟ್ವಾಳ ತಾಲೂಕಿನ ಉತ್ತರ ಭಾಗದಲ್ಲಿರುವ ಸಿದ್ಧಕಟ್ಟೆ ಸಮೀಪದ ಹೊಕ್ಕಾಡಿಗೋಳಿ ಎಂಬುದು ಪುಟ್ಟ ಊರು. ಶನಿವಾರ ಇದೇ ಊರಿನಲ್ಲಿ ವೀರ ವಿಕ್ರಮ ಕಂಬಳ. ನಡೆದದ್ದು ಮಾತ್ರ ಎರಡು ಕಡೆ. ಹೊಕ್ಕಾಡಿಗೋಳಿಯ ಮಹಿಷಮರ್ದಿನಿ ಕಂಬಳ ಸಮಿತಿ ವತಿಯಿಂದ ಒಂದು ಕಂಬಳ ನಡೆದರೆ, ಮತ್ತೊಂದು ಕಂಬಳ ಅಲ್ಲೇ ಪಕ್ಕದ ಕೊಡಂಗೆ ಎಂಬಲ್ಲಿ ಜಿಲ್ಲಾ ಕಂಬಳ ಸಮಿತಿ ಬೆಂಬಲದಲ್ಲಿ ವೀರ ವಿಕ್ರಮ ಕಂಬಳ ಸಮಿತಿ ವತಿಯಿಂದ ನಡೆಯಿತು. ಎರಡೂ ಕಂಬಳಗಳ ಜೋಡುಕರೆಗಳಿಗೆ ವೀರ ವಿಕ್ರಮ ಎಂದೇ ಹೆಸರಿಡಲಾಗಿತ್ತು.

ಶನಿವಾರ ಸ್ಥಳೀಯರು, ಗಣ್ಯರು ಎರಡೂ ಕಂಬಳಗಳಲ್ಲಿ ಪಾಲ್ಗೊಂಡರು. ಕಂಬಳ ಕೋಣಗಳ ಯಜಮಾನರು ತಮ್ಮ ಆಯ್ಕೆಯ ಕಂಬಳದಲ್ಲಿ ಪಾಲ್ಗೊಂಡರು. ಕಂಬಳಾಭಿಮಾನಿಗಳು ಎರಡೂ ಕಡೆ ಹಂಚಿ ಹೋದರು. ಕೋಣಗಳ ಸಂಖ್ಯೆ, ಜನರ ಸಂಖ್ಯೆ ಇತರ ಕಂಬಳಗಳಿಗಿಂತ ಕಡಿಮೆ ಇದ್ದರೂ ಕುತೂಹಲಿಗರ ದಂಡು ಕಂಡುಬಂತು. ಒಂದು ಕಂಬಳ ನಡೆಯುತ್ತಿದ್ದ ಜಾಗದ ಗೊಂದಲದ ಕಾರಣದಿಂದಾಗಿ ಈ ಕಂಬಳ ಮುಂದೂಡಲ್ಪಟ್ಟಿತ್ತು. ಎರಡೂ ಆಯೋಜಕರ ಮಧ್ಯೆ ಮಾತುಕತೆಯೂ ವಿಫಲವಾಗಿತ್ತು. ಹೀಗಾಗಿ ಕಂಬಳ ಆಯೋಜನೆಗೊಂಡವು. ಎರಡೂ ಕಂಬಳಗಳು ಸಾಕಷ್ಟು ಕುತೂಹಲಕ್ಕೆ ಕಾರಣವಾಯಿತು. ಒಂದು ಕಂಬಳದಲ್ಲಿ 99 ಜೊತೆ ಕೋಣಗಳು ಹಾಗೂ ಇನ್ನೊಂದು ಕಂಬಳದಲ್ಲಿ 115 ಜೊತೆ ಕೋಣಗಳು ಭಾಗವಹಿಸಿದ್ದವು.

ಪ್ರಥಮ ವರ್ಷದ ಹೊಕ್ಕಾಡಿಗೋಳಿ ಕೋಡಂಗೆ "ವೀರ - ವಿಕ್ರಮ" ಜೋಡುಕರೆ ಕಂಬಳ ಕೂಟದ ಫಲಿತಾಂಶ:

ಕೂಟದಲ್ಲಿ ಭಾಗವಹಿಸಿದ ಕೋಣಗಳ ಸಂಖ್ಯೆ : ಕನೆಹಲಗೆ: 01 ಜೊತೆ ಅಡ್ಡಹಲಗೆ: 03 ಜೊತೆ, ಹಗ್ಗ ಹಿರಿಯ: 06 ಜೊತೆ, ನೇಗಿಲು ಹಿರಿಯ: 11 ಜೊತೆ, ಹಗ್ಗ ಕಿರಿಯ: 12 ಜೊತೆ, ನೇಗಿಲು ಕಿರಿಯ: 36 ಜೊತೆ , ನೇಗಿಲು ಸಬ್ ಜೂನಿಯರ್: 30, ಒಟ್ಟು ಕೋಣಗಳ ಸಂಖ್ಯೆ: 99 ಜೊತೆ,

ಕನೆಹಲಗೆ: ವಾಮಂಜೂರು ತಿರುವೈಲುಗುತ್ತು ನವೀನ್ಚಂದ್ರ ಆಳ್ವ, ಹಲಗೆ ಮುಟ್ಟಿದವರು: ಬೈಂದೂರು ಬಾಸ್ಕರ ದೇವಾಡಿಗ

ಅಡ್ಡ ಹಲಗೆ: ಪ್ರಥಮ: ಹೊಸ್ಮಾರ್ ಸೂರ್ಯಶ್ರೀ ಜ್ಯೋತಿ ಸುರೇಶ್ ಕುಮಾರ್ ಶೆಟ್ಟಿ, ಹಲಗೆ ಮುಟ್ಟಿದವರು: ತೆಕ್ಕಟ್ಟೆ ಸುಧೀರ್ ದೇವಾಡಿಗ ದ್ವಿತೀಯ: ಹಂಕರಜಾಲು ಶ್ರೀನಿವಾಸ ಭಿರ್ಮಣ್ಣ ಶೆಟ್ಟಿ, ಹಲಗೆ ಮುಟ್ಟಿದವರು: ಮುಳಿಕಾರು ಕೆವುಡೇಲು ಅಣ್ಣಿ ದೇವಾಡಿಗ

ಹಗ್ಗ ಹಿರಿಯ: ಪ್ರಥಮ: ಮೂಡಬಿದ್ರಿ ಕರಿಂಜೆ ವಿನು ವಿಶ್ವನಾಥ ಶೆಟ್ಟಿ "ಎ", ಓಡಿಸಿದವರು: ಪಣಪೀಲ ಪ್ರವೀಣ್ ಕೋಟ್ಯಾನ್, ದ್ವಿತೀಯ: ಮೂಡಬಿದ್ರಿ ಕರಿಂಜೆ ವಿನು ವಿಶ್ವನಾಥ ಶೆಟ್ಟಿ "ಬಿ" ಓಡಿಸಿದವರು: ಬಾರಾಡಿ ನತೀಶ್

ಹಗ್ಗ ಕಿರಿಯ: ಪ್ರಥಮ: ಕಾರ್ಕಳ ನೆಕ್ಲಾಜೆ ಗುತ್ತು ಪ್ರಜ್ವಲ್ ಪ್ರಖ್ಯಾತ್ ಕೋಟ್ಯಾನ್, ಓಡಿಸಿದವರು: ಪೆಂರ್ಗಾಲು ಕೃತಿಕ್ ಗೌಡ, ದ್ವಿತೀಯ: ಮೂಡಬಿದ್ರಿ ಹೊಸಬೆಟ್ಟು ಏರಿಮಾರು ಬರ್ಕೆ ಚೇತನ್ ಚಂದ್ರಹಾಸ ಸಾಧು ಸನಿಲ್ ಓಡಿಸಿದವರು: ಮಾಸ್ತಿಕಟ್ಟೆ ಸ್ವರೂಪ್

ನೇಗಿಲು ಹಿರಿಯ: ಪ್ರಥಮ: ಕಕ್ಕೆಪದವು ಪೆಂರ್ಗಾಲು ಬಾಬು ತನಿಯಪ್ಪ ಗೌಡ, ಓಡಿಸಿದವರು: ಪೆಂರ್ಗಾಲು ಕೃತಿಕ್ ಗೌಡ, ದ್ವಿತೀಯ: ಹೊಸ್ಮಾರ್ ಸೂರ್ಯಶ್ರೀ ರತ್ನ ಸದಾಶಿವ ಶೆಟ್ಟಿ "ಬಿ" ಓಡಿಸಿದವರು: ಹೊಕ್ಕಾಡಿಗೋಳಿ ಹಕ್ಕೇರಿ ಸುರೇಶ್ ಶೆಟ್ಟಿ

ನೇಗಿಲು ಕಿರಿಯ: ಪ್ರಥಮ: ಮುನಿಯಾಲ್ ಉದಯ ಕುಮಾರ್ ಶೆಟ್ಟಿ "ಎ", ಓಡಿಸಿದವರು: ಮಾಸ್ತಿಕಟ್ಟೆ ಸ್ವರೂಪ್, ದ್ವಿತೀಯ: ಮುನಿಯಾಲ್ ಉದಯ ಕುಮಾರ್ ಶೆಟ್ಟಿ "ಬಿ", ಓಡಿಸಿದವರು: ಮಾಸ್ತಿಕಟ್ಟೆ ಸ್ವರೂಪ್

ನೇಗಿಲು ಸಬ್ ಜೂನಿಯರ್: ಪ್ರಥಮ: ಶ್ರೀ ಸ್ವಾಮಿಧಾಮ ಹೊಳೆಕಟ್ಟು ಕುಂಭಾಶಿ, ಓಡಿಸಿದವರು: ಕೋರಿಂಜೆ ಅರುಣ್ ಕುಮಾರ್, ದ್ವಿತೀಯ: ಕಕ್ಕೆಪದವು ಕಿಂಜಾಲು ಶಾಂಭವಿ ಸಂಜೀವ ಶೆಟ್ಟಿ ಓಡಿಸಿದವರು: ಕಕ್ಕೆಪದವು ಕಿಂಜಾಲು ಪ್ರದೀಪ್ ಶೆಟ್ಟಿ

ವೀರವಿಕ್ರಮ ಜೋಡುಕರೆ ಕಂಬಳ - 2 ಫಲಿತಾಂಶ ಹೀಗಿದೆ:

ಕೂಟದಲ್ಲಿ ಭಾಗವಹಿಸಿದ ಕೋಣಗಳ ಸಂಖ್ಯೆ : ಕನೆಹಲಗೆ: 02 ಜೊತೆ, ಅಡ್ಡಹಲಗೆ: 02 ಜೊತೆ , ಹಗ್ಗ ಹಿರಿಯ: 07 ಜೊತೆ , ನೇಗಿಲು ಹಿರಿಯ: 15 ಜೊತೆ , ಹಗ್ಗ ಕಿರಿಯ: 11 ಜೊತೆ , ನೇಗಿಲು ಕಿರಿಯ: 30 ಜೊತೆ , ನೇಗಿಲು ಸಬ್ ಜೂನಿಯರ್: 48, ಒಟ್ಟು ಕೋಣಗಳ ಸಂಖ್ಯೆ: 115 ಜೊತೆ

ಕನೆಹಲಗೆ: ( 6.5 ಕೋಲು ನಿಶಾನೆಗೆ ನೀರು ಹಾಯಿಸಿದ್ದಾರೆ ) ಕಾಂತಾವರ ಬೇಲಾಡಿ ಬಾವ ಅಶೋಕ್ ಶೆಟ್ಟಿ, ಹಲಗೆ ಮುಟ್ಟಿದವರು: ತೆಕ್ಕಟ್ಟೆ ಸುಧೀರ್ ದೇವಾಡಿಗ

ಅಡ್ಡ ಹಲಗೆ: ಪ್ರಥಮ: ನಾರಾವಿ ಯುವರಾಜ್ ಜೈನ್, ಹಲಗೆ ಮುಟ್ಟಿದವರು: ಭಟ್ಕಳ ಹರೀಶ್ , ದ್ವಿತೀಯ: ನೇರಳ ಕಟ್ಟೆ ಕೊಡ್ಲಾಡಿ ಅದ್ವಿನ್ ರವಿರಾಜ್ ಶೆಟ್ಟಿ ಹಲಗೆ ಮುಟ್ಟಿದವರು: ಭಟ್ಕಳ ಹರೀಶ್

ಹಗ್ಗ ಹಿರಿಯ: ಪ್ರಥಮ: ಮಿಜಾರು ಪ್ರಸಾದ್ ನಿಲಯ ಪ್ರಖ್ಯಾತ್ ಶಕ್ತಿ ಪ್ರಸಾದ್ ಶೆಟ್ಟಿ "ಎ", ಓಡಿಸಿದವರು: ಮಿಜಾರು ಅಶ್ವಥಪುರ ಶ್ರೀನಿವಾಸ ಗೌಡ, ದ್ವಿತೀಯ: ನಂದಳಿಕೆ ಶ್ರೀಕಾಂತ್ ಭಟ್ "ಬಿ", ಓಡಿಸಿದವರು: ನಕ್ರೆ ಪವನ್ ಮಡಿವಾಳ

ಹಗ್ಗ ಕಿರಿಯ: ಪ್ರಥಮ: ಶಿಬರೂರು ಮುಟ್ಟಿಕಲ್ಲು ಕೀರ್ತನ್ ರಾಜೇಶ್ ಪಾಣಾರ,ಓಡಿಸಿದವರು: ಕಡಂದಲೆ ಮುಡಾಯಿಬೆಟ್ಟು ರೋಹಿತ್ ಪಾಣಾರ್, ದ್ವಿತೀಯ: ಕಕ್ಕೆಪದವು ಕಕ್ಯ ಇಂದಿರಾ ಮಹಾಬಲ ರೈ, ಓಡಿಸಿದವರು: ಉಜಿರೆ ಹೊಸಮನೆ ಸ್ಪಂದನ್ ಶೆಟ್ಟಿ

ನೇಗಿಲು ಹಿರಿಯ: ಪ್ರಥಮ: ಬೆಳ್ಳಿಪ್ಪಾಡಿ ಕೈಪ ಕೇಶವ ಮಾಂಕು ಭಂಡಾರಿ, ಓಡಿಸಿದವರು: ಮಿಜಾರು ಅಶ್ವಥಪುರ ಶ್ರೀನಿವಾಸ ಗೌಡ, ದ್ವಿತೀಯ: ಮಾಣಿ ಗುತ್ತು ಪ್ರಸನ್ನ ರಘುರಾಮ್ ನಾಯ್ಕ, ಓಡಿಸಿದವರು: ಉಜಿರೆ ಹೊಸಮನೆ ಸ್ಪಂದನ್ ಶೆಟ್ಟಿ

ನೇಗಿಲು ಕಿರಿಯ: ಪ್ರಥಮ: ಹೆಬ್ರಿ ಮಾಡಿಗೆ ಮನೆ ದಿಲೀಪ್ ಶಿವರಾಮ ಹೆಗ್ಡೆ ಓಡಿಸಿದವರು: ಕಕ್ಕೆಪದವು ಗೌತಮ್ ಗೌಡ ದ್ವಿತೀಯ: ನಲ್ಲೂರು ಬಜಗೋಳಿ ಶಿವಪ್ರಸಾದ್ ನಿಲಯ ದಿನೀಶ್ ಭಂಡಾರಿ, ಓಡಿಸಿದವರು: ಮಾಳ ಆಧೀಶ್ ಪೂಜಾರಿ

ನೇಗಿಲು ಸಬ್ ಜೂನಿಯರ್: ಪ್ರಥಮ: ಕನಡ್ತ್ಯಾರು ಕೃಷ್ಣ ಶೆಟ್ಟಿ ಓಡಿಸಿದವರು: ಕಕ್ಕೆಪದವು ಗೌತಮ್ ಗೌಡ ದ್ವಿತೀಯ: ಪಡು ಸಾಂತೂರು ಕಲ್ಯಾಣಿ ನಿವಾಸ ರಾಮ ದೇಜು ಪೂಜಾರಿ ಓಡಿಸಿದವರು: ಪಡು ಸಾಂತೂರು ಸುಕೇಶ್ ಪೂಜಾರಿ

ವರದಿ: ಹರೀಶ ಮಾಂಬಾಡಿ, ಮಂಗಳೂರು