ಉತ್ತರ ಕನ್ನಡ: ಅಂಕೋಲದಲ್ಲಿ ಎರಡು ದಿನಗಳ ಮಾವು ಮೇಳ; ವೈವಿಧ್ಯಮಯ ಮಾವಿನ ಹಣ್ಣುಗಳ ಪ್ರದರ್ಶನ ಮತ್ತು ಮಾರಾಟ
ಕನ್ನಡ ಸುದ್ದಿ  /  ಕರ್ನಾಟಕ  /  ಉತ್ತರ ಕನ್ನಡ: ಅಂಕೋಲದಲ್ಲಿ ಎರಡು ದಿನಗಳ ಮಾವು ಮೇಳ; ವೈವಿಧ್ಯಮಯ ಮಾವಿನ ಹಣ್ಣುಗಳ ಪ್ರದರ್ಶನ ಮತ್ತು ಮಾರಾಟ

ಉತ್ತರ ಕನ್ನಡ: ಅಂಕೋಲದಲ್ಲಿ ಎರಡು ದಿನಗಳ ಮಾವು ಮೇಳ; ವೈವಿಧ್ಯಮಯ ಮಾವಿನ ಹಣ್ಣುಗಳ ಪ್ರದರ್ಶನ ಮತ್ತು ಮಾರಾಟ

ಅಂಕೋಲದಲ್ಲಿ ಮೂರನೇ ವರ್ಷದ ಮಾವು ಮೇಳವು ಮೇ 24 ಮತ್ತು ಮೇ 25 ರಂದು ಎರಡು ದಿನಗಳ ಕಾಲ ಜೈಹಿಂದ್ ಹೈಸ್ಕೂಲ್ ಆವರಣದಲ್ಲಿ ನಡೆಯಲಿದೆ.

ಮಾವು ಮೇಳವು ಮೇ 24 ಮತ್ತು ಮೇ 25 ರಂದು ಎರಡು ದಿನಗಳ ಕಾಲ ಜೈಹಿಂದ್ ಹೈಸ್ಕೂಲ್ ಆವರಣದಲ್ಲಿ ನಡೆಯಲಿದೆ.
ಮಾವು ಮೇಳವು ಮೇ 24 ಮತ್ತು ಮೇ 25 ರಂದು ಎರಡು ದಿನಗಳ ಕಾಲ ಜೈಹಿಂದ್ ಹೈಸ್ಕೂಲ್ ಆವರಣದಲ್ಲಿ ನಡೆಯಲಿದೆ.

ಅಂಕೋಲ: ವೈವಿಧ್ಯಮಯ ರುಚಿ ಮತ್ತು ತಳಿಗಳ ಮಾವಿನ ಹಣ್ಣುಗಳನ್ನು ಮಾವು ಪ್ರಿಯರಿಗೆ ಪರಿಚಯಿಸುವ ಉದ್ದೇಶದಿಂದ ಬೆಳೆಗಾರರ ಸಮಿತಿ ಉತ್ತರ ಕನ್ನಡ ಸಹಯೋಗದಲ್ಲಿ ಅಂಕೋಲದಲ್ಲಿ ಎರಡು ದಿನಗಳ ಮಾವು ಮೇಳ ಆಯೋಜಿಸಲಾಗಿದೆ. ಮೇ 24 ಶನಿವಾರ ಮತ್ತು ಮೇ 25 ಭಾನುವಾರದಂದು ಎರಡು ದಿನಗಳ ಕಾಲ ಅಂಕೋಲದ ಜೈಹಿಂದ್ ಹೈಸ್ಕೂಲ್ ಆವರಣದಲ್ಲಿ ಮಾವು ಮೇಳ ನಡೆಯಲಿದೆ. ಈ ಮಾವು ಮೇಳದಲ್ಲಿ ಉತ್ತರ ಕನ್ನಡದ ವಿವಿಧ ಭಾಗಗಳ ಮಾವು ಬೆಳೆಗಾರರು ಭಾಗವಹಿಸಿ ವ್ಯಾಪಾರ ವಹಿವಾಟು ನಡೆಸಲು ಮುಕ್ತ ಅವಕಾಶ ಇದೆ ಎಂದು ಬೆಳೆಗಾರರ ಸಮಿತಿಯ ಅಧ್ಯಕ್ಷ, ಮಾವು ಮೇಳದ ಸಂಘಟಕ ನಾಗರಾಜ ನಾಯಕ ತಿಳಿಸಿದ್ದಾರೆ.

ಮೇ.24 ರಂದು ಬೆಳಗ್ಗೆ ಮಾವು ಮೇಳವನ್ನು ಖ್ಯಾತ ಚಲನಚಿತ್ರ ನಿರ್ದೇಶಕ ರಾಜೇಂದ್ರಸಿಂಗ್ ಬಾಬು ಉದ್ಘಾಟಿಸಲಿದ್ದಾರೆ. ನಂತರ ಚಾಲ್ತಿ ಮಾವಿನ ಮರಗಳ ಕುರಿತು ಪರಿಸರ ಬರಹಗಾರ ಶಿವಾನಂದ ಕಳವೆ ಅವರಿಂದ ಉಪನ್ಯಾಸ ನಡೆಯಲಿದೆ. ಮಾವು ಬೆಳೆಗಾರರಿಗೆ ಉತ್ತೇಜನ ನೀಡುವುದು ಮತ್ತು ಜಿಲ್ಲೆಯ ವೈವಿಧ್ಯಮಯ ಮಾವಿನ ಹಣ್ಣುಗಳನ್ನು ಮಾವು ಪ್ರಿಯರಿಗೆ ಪರಿಚಯಿಸುವ ಉದ್ದೇಶದಿಂದ ಮಾವು ಮೇಳ ನಡೆಸಲಾಗುತ್ತಿದೆ.

ಅದರ ಜತೆಗೆ ಅಂಕೋಲಾ ತಾಲೂಕಿನಲ್ಲಿ ಬೆಳೆಯುವ ಕರಿ ಇಶಾಡ ಮಾವಿನ ಹಣ್ಣು ದೇಶದ ವಿವಿಧ ಭಾಗಗಳಲ್ಲಿ ಪ್ರಸಿದ್ಧಿ ಪಡೆದಿದೆ. ಕರಿ ಇಶಾಡ ಮಾವಿನ ಹಣ್ಣಿಗೆ ಜಿ ಟ್ಯಾಗ್ ಪಡೆದುಕೊಂಡಿದೆ. ಅದರ ಜತೆಗೆ ಸ್ಥಳೀಯ ಕೆಲವು ತಳಿ ವೈವಿಧ್ಯಗಳು, ಕಾಡು ಮಾವಿನ ಹಣ್ಣುಗಳ ಗಿಡ, ಉತ್ಪನ್ನಗಳು ಕೂಡ ಈ ಸಂದರ್ಭದಲ್ಲಿ ಖರೀದಿಗೆ ದೊರೆಯಲಿದೆ.

Kiran Kumar I G

TwittereMail
ಕಿರಣ್ ಐ.ಜಿ.: 'ಹಿಂದೂಸ್ತಾನ್ ಟೈಮ್ಸ್​​ ಕನ್ನಡ'ದಲ್ಲಿ ಸೀನಿಯರ್​ ಕಂಟೆಂಟ್ ಪ್ರೊಡ್ಯೂಸರ್. ಜನರ ಬದುಕು ಸುಧಾರಿಸಬಲ್ಲ ಟೆಕ್‌ ಮತ್ತು ಗ್ಯಾಜೆಟ್ ಇವರ ಆಸಕ್ತಿಯ ಕ್ಷೇತ್ರ. ಯಾವುದೇ ವಿಷಯವಾದರೂ ಶ್ರದ್ಧೆಯಿಂದ ಕಲಿಯಬಲ್ಲೆ, ಬರೆಯಬಲ್ಲೆ ಎನ್ನುವುದು ಇವರ ವಿಶ್ವಾಸ. ಊರು ದಕ್ಷಿಣ ಕನ್ನಡ ಜಿಲ್ಲೆಯ ಉಪ್ಪಿನಂಗಡಿ. ಪ್ರಜಾವಾಣಿ, ವಿಜಯವಾಣಿ ಮತ್ತು ವಿಜಯ ಕರ್ನಾಟಕ ವೆಬ್ ಹಾಗೂ ಟಿವಿ9 ಕನ್ನಡ ಡಿಜಿಟಲ್‌ನ ವಿವಿಧ ವಿಭಾಗಗಳಲ್ಲಿ ಒಟ್ಟು 10 ವರ್ಷ ಕೆಲಸ ಮಾಡಿದ ಅನುಭವ. ಇಮೇಲ್: kiran.kumar@htdigital.in