ಕನ್ನಡ ಸುದ್ದಿ  /  Nation And-world  /  Manik Saha Again Tripura Cm Prime Minister Modi Will Attend Swearing Ceremony

Tripura CM Manik Saha: ಮಾಣಿಕ್ ಸಹಾ ಮತ್ತೆ ತ್ರಿಪುರಾ ಸಿಎಂ: ಪ್ರಮಾಣ ವಚನ ಸಮಾರಂಭಕ್ಕೆ ಬರ್ತಾರೆ ಪ್ರಧಾನಿ ಮೋದಿ!

ತ್ರಿಪುರಾ ಮುಖ್ಯಮಂತ್ರಿಯಾಗಿ ಮತ್ತೊಂಮ್ಮೆ ಮಾಣಿಕ್ ಸಹಾ ಅವರು ಆಯ್ಕೆ ಆಗಿದ್ದಾರೆ. ಶಾಸಕಾಂಗ ಪಕ್ಷದ ನಾಯಕರನ್ನಾಗಿ ಸಹಾ ಅವರನ್ನು ಪುನರಾಯ್ಕೆ ಮಾಡಲಾಗಿದೆ.

ಎರಡನೇ ಬಾರಿಗೆ ತ್ರಿಪುರಾ ಸಿಎಂ ಆಗಿ ಪ್ರಮಾಣ ವಚನ ಸ್ವೀಕರಿಸಲಿರುವ ಮಾಣಿಕ್ ಸಹಾ (ಫೋಟೋ-PTI)
ಎರಡನೇ ಬಾರಿಗೆ ತ್ರಿಪುರಾ ಸಿಎಂ ಆಗಿ ಪ್ರಮಾಣ ವಚನ ಸ್ವೀಕರಿಸಲಿರುವ ಮಾಣಿಕ್ ಸಹಾ (ಫೋಟೋ-PTI)

ಅಗರ್ತಲಾ: ಬಿಜೆಪಿ ನಾಯಕ ಮಾಣಿಕ್ ಸಹಾ (Manik Saha) ಅವರಿಗೆ ಮತ್ತೊಮ್ಮೆ ತ್ರಿಪುರಾ ಮುಖ್ಯಮಂತ್ರಿ (Tripura Chief Minister) ಸ್ಥಾನ ಒಲಿದು ಬಂದಿದೆ. ಇವತ್ತು (ಮಾ.6, ಸೋಮವಾರ) ನಡೆದ ಸಭೆಯಲ್ಲಿ ಸಹಾ ಅವರನ್ನು ಅಲ್ಲಿನ ಬಿಜೆಪಿ ಶಾಸಕಾಂಗ ಪಕ್ಷದ ನಾಯಕರನ್ನಾಗಿ ಅವಿರೋಧವಾಗಿ ಆಯ್ಕೆ ಮಾಡಲಾಗಿದೆ.

ತ್ರಿಪುರಾ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ 60 ಕ್ಷೇತ್ರಗಳ ಪೈಕಿ 32 ಸ್ಥಾನಗಳನ್ನು ಪಡೆದುಕೊಂಡಿತ್ತು. ಕೇಸರಿ ಪಕ್ಷದ ಮಿತ್ರಪಕ್ಷ ಐಪಿಎಫ್‌ಟಿ ಒಂದು ಸ್ಥಾನ ಗಳಿಸಿದೆ. ಮಾಣಿಕ್ ಸಹಾ ಮುಖ್ಯಮಂತ್ರಿಯಾಗಿ ಮುಂದುವರಿಯಲಿದ್ದಾರೆ ಎಂದು ಬಿಜೆಪಿ ಮೂಲಗಳು ತಿಳಿಸಿವೆ.

ಪ್ರಮಾಣವಚನ ಕಾರ್ಯಕ್ರಮಕ್ಕೆ ಪ್ರಧಾನಿ ಮೋದಿ

ತ್ರಿಪುರಾ ಮುಖ್ಯಮಂತ್ರಿಯಾಗಿ ಎರಡನೇ ಬಾರಿಗೆ ಮಾಣಿಕ್ ಸಹಾ ಪ್ರಮಾಣ ಸ್ವೀಕಾರ ಕಾರ್ಯಕ್ರಮ ಬುಧವಾರ (ಮಾರ್ಚ್. 8) ನಡೆಯಲಿದೆ. ಅದೇ ದಿನ ಸಚಿವರು ಕೂಡ ಪ್ರತಿಜ್ಞಾವಿಧಿ ಸ್ವೀಕರಿಸಲಿದ್ದಾರೆ.

ಪ್ರಧಾನಿ ನರೇಂದ್ರ ಮೋದಿ, ಕೇಂದ್ರ ಗೃಹ ಇಲಾಖೆ ಸಚಿವ ಅಮಿತ್ ಶಾ, ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆಪಿ ನಡ್ಡಾ ಈ ಪ್ರಮಾಣ ವಚನ ಸಮಾರಂಭಕ್ಕೆ ಹಾಜರಾಗಲಿದ್ದಾರೆ ಎಂದು ತಿಳಿದು ಬಂದಿದೆ.

ಮಾಣಿಕ್ ಸಹಾ ಅವರಿಗೆ ಕಳೆದ ವರ್ಷ ತ್ರಿಪುರ ಮುಖ್ಯಮಂತ್ರಿ ಸ್ಥಾನ ಸಿಕ್ಕಿತ್ತು. ಬಿಪ್ಲಬ್ ಕುಮಾರ್ ದೇಬ್ ಅವರಿಂದ ಸಿಎಂ ಸ್ಥಾನಕ್ಕೆ ರಾಜೀನಾಮೆ ಕೊಡಿಸಿದ್ದ ಬಿಜೆಪಿ ನಾಯಕ ಆ ಜವಾಬ್ದಾರಿಯನ್ನು ಮಾಣಿಕ್‌ ಹೆಗಲಿಗೆ ಹಾಕಿದ್ದರು. ಏಕ್ ತ್ರಿಪುರಾ, ಶ್ರೇಷ್ಠ್ ತ್ರಿಪುರಾ ಘೋಷಣೆಯನ್ನು ಮಾಣಿಕ್ ಸಹಾ ಅವರು ಚುನಾವಣೆ ವೇಳೆ ವ್ಯಾಪಕವಾಗಿ ಪ್ರಚಾರ ಮಾಡಿದ್ದರು.

ತ್ರಿಪುರಾ ಸಿಎಂ ಮಾಣಿಕ್ ಸಹಾ : ಟೌನ್ ಬರ್ದೋವಾಲಿ ವಿಧಾನಸಭಾ ಕ್ಷೇತ್ರದಿಂದ ಮಾಣಿಕ್ ಸಾಹಾ ಗೆದ್ದರು. ಊಹಿಸಿದ ವಿಜಯವನ್ನು ಸಾಧಿಸುವುದಾಗಿ ಅವರು ನಂತರ ಹೇಳಿದರು.

“ಬಿಜೆಪಿ ಗೆಲುವು ಊಹಿಸಿದೆ. ಕಾದಿದ್ದರೆ ಮೇಂ ಕುತೂಹಲದಿಂದ ಎದುರು ನೋಡಿದೆ ಅಷ್ಟೇ. ಈಗ ನಮ್ಮ ಜವಾಬ್ದಾರಿ ಹೆಚ್ಚಾಗಿದೆ. ಪ್ರಧಾನ ಮಂತ್ರಿ ನರೇಂದ್ರ ಮೋದಿ ತೋರಿಸಿದ ದಾರಿಯಲ್ಲಿ ಮೇಂ ಮುಂದಕ್ಕೆ ಸಾಗುತಾಂ” ಎಂದು ಮಾಣಿಕ್ ಸಾಹಾ ಹೇಳಿದರು.

ತ್ರಿಪುರಾ ವಿಧಾನಸಭೆ ಚುನಾವಣಾ ಫಲಿತಾಂಶ

2023ರ ಫೆಬ್ರವರಿ 16 ರಂದು ತ್ರಿಪುರಾದ 60 ವಿಧಾನಸಭಾ ಸ್ಥಾನಗಳಿಗೆ ಮತದಾನ ನಡೆದಿತ್ತು. ಈ ತಿಂಗಳ 2 ರಂದು ಫಲಿತಾಂಶ ಪ್ರಕಟಿಸಲಾಗಿತ್ತು. ಈ ಎಲೆಕ್ಷನ್ ನಲ್ಲಿ ಬಿಜೆಪಿಗೆ 32 ಸೀಟುಗಳು ಗೆಲ್ಲುವ ಮೂಲಕ ಸ್ಪಷ್ಟ ಬಹುಮತದೊಂದಿಗೆ ಹೊರಹೊಮ್ಮಿತ್ತು. ಬಿಜೆಪಿ ಮಿತ್ರಪಕ್ಷಂ ಐಪಿಎಫ್ ಟಿ ಒಂದು ಸ್ಥಾನ ತನ್ನದಾಗಿಸಿಕೊಂಡಿತ್ತು.

ಸಿಪಿಎಂ 11 ಕಡೆ ಗೆದ್ದಿದೆ. ತಿಪ್ರಾ ಮೋತಾ ಪಕ್ಷ 13 ಸ್ಥಾನಗಳಲ್ಲಿ ಗೆಲುವು ಸಾಧಿಸಿದೆ. ಕಾಂಗ್ರೆಸ್‌ಗೆ 3 ಸೀಟುಗಳು ಸಿಕ್ಕಿವೆ. 2018ರಲ್ಲಿ ಕಮ್ಯುನಿಸ್ಟ್ ಪಕ್ಷವನ್ನು ಮಣಿಸಿ ಬಿಜೆಪಿ ಇಲ್ಲಿ ಅಧಿಕಾರಕ್ಕೆ ಬಂದಿತ್ತು. 2018 ರ ಚುನಾವಣೆಯಲ್ಲಿ ಬಿಜೆಪಿ 36 ಸ್ಥಾನಗಳಲ್ಲಿ ಗೆದ್ದು ಅಧಿಕಾರ ಚುಕ್ಕಾಣಿ ಹಿಡಿದಿತ್ತು.

ಮತ್ತೊಂದೆಡೆ ಮೇಘಾಲಯದ ಮುಖ್ಯಮಂತ್ರಿಯಾಗಿ ಕಾನ್ರಾಡ್ ಸಂಗ್ಮಾ ನಾಳೆ (ಮಾ.7) ಪ್ರಮಾಣ ವಚನ ಸ್ವೀಕರಿಸಲಿದ್ದಾರೆ. ಇಲ್ಲಿ ಎನ್ ಪಿಪಿ 26 ಸ್ಥಾನಗಳನ್ನು ಪಡೆಯುವ ಮೂಲಕ ಅತಿ ದೊಡ್ಡ ಪಕ್ಷವಾಗಿ ಹೊರ ಹೊಮ್ಮಿತ್ತು.

ಕಾನ್ರಾಡ್ ಸಂಗ್ಮಾ ನೇತೃತ್ವದ ಎನ್‌ಪಿಪಿ ಪಕ್ಷ ಸರ್ಕಾರ ರಚಿಸಲಿದೆ. ಯುಡಿಪಿ ಮತ್ತು ಪಿಡಿಎಫ್ ಪಕ್ಷಗಳು ಸರ್ಕಾರ ರಚಿಸಲು ಕಾನ್ರಾಡ್ ಸಂಗ್ಮಾಗೆ ಬೆಂಬಲ ನೀಡಿವೆ. ಮೇಘಾಲಯ ವಿಧಾನಸಭಾ ಚುನಾವಣೆಯ ಫಲಿತಾಂಶದಲ್ಲಿ ಎನ್​ಪಿಪಿ 26 ಸ್ಥಾನಗಳನ್ನು ಗೆದ್ದುಕೊಂಡಿತ್ತು.

IPL_Entry_Point