ಡಾ ಮನಮೋಹನ ಸಿಂಗ್ ನಿಧನ; ಎಲ್ಲ ಪರೀಕ್ಷೆಗಳನ್ನು ಮುಂದೂಡಿದ ಮೈಸೂರು ವಿಶ್ವವಿದ್ಯಾನಿಲಯ, ಪರಿಷ್ಕೃತ ಪರೀಕ್ಷಾ ವೇಳಾಪಟ್ಟಿ ಶೀಘ್ರ ಪ್ರಕಟ
ಕನ್ನಡ ಸುದ್ದಿ  /  ಕರ್ನಾಟಕ  /  ಡಾ ಮನಮೋಹನ ಸಿಂಗ್ ನಿಧನ; ಎಲ್ಲ ಪರೀಕ್ಷೆಗಳನ್ನು ಮುಂದೂಡಿದ ಮೈಸೂರು ವಿಶ್ವವಿದ್ಯಾನಿಲಯ, ಪರಿಷ್ಕೃತ ಪರೀಕ್ಷಾ ವೇಳಾಪಟ್ಟಿ ಶೀಘ್ರ ಪ್ರಕಟ

ಡಾ ಮನಮೋಹನ ಸಿಂಗ್ ನಿಧನ; ಎಲ್ಲ ಪರೀಕ್ಷೆಗಳನ್ನು ಮುಂದೂಡಿದ ಮೈಸೂರು ವಿಶ್ವವಿದ್ಯಾನಿಲಯ, ಪರಿಷ್ಕೃತ ಪರೀಕ್ಷಾ ವೇಳಾಪಟ್ಟಿ ಶೀಘ್ರ ಪ್ರಕಟ

Manmohan Singh Death: ಮಾಜಿ ಪ್ರಧಾನಿ ಮನಮೋಹನ ಸಿಂಗ್ ನಿಧನ ಹಿನ್ನೆಲೆ ಮೈಸೂರು ವಿಶ್ವವಿದ್ಯಾನಿಲಯದ ಎಲ್ಲಾ ಪರೀಕ್ಷೆಗಳನ್ನೂ ಮುಂದೂಡಲಾಗಿದೆ ಎಂದು ಮೈಸೂರು ವಿವಿ‌ ರಿಜಿಸ್ಟ್ರಾರ್ ಎನ್ ನಾಗರಾಜ್ ಮಾಹಿತಿ ನೀಡಿದ್ದಾರೆ. ಬೆಂಗಳೂರು ವಿಶ್ವವಿದ್ಯಾಲಯ ಕೂಡ ಎಂಬಿಎ ಪರೀಕ್ಷೆ ಮುಂದೂಡಿದೆ.

ಡಾ ಮನಮೋಹನ ಸಿಂಗ್ ನಿಧನ; ಎಲ್ಲ ಪರೀಕ್ಷೆಗಳನ್ನು ಮುಂದೂಡಿದ ಮೈಸೂರು ವಿಶ್ವವಿದ್ಯಾನಿಲಯ, ಪರಿಷ್ಕೃತ ಪರೀಕ್ಷಾ ವೇಳಾಪಟ್ಟಿ ಶೀಘ್ರ ಪ್ರಕಟವಾಗಲಿದೆ.
ಡಾ ಮನಮೋಹನ ಸಿಂಗ್ ನಿಧನ; ಎಲ್ಲ ಪರೀಕ್ಷೆಗಳನ್ನು ಮುಂದೂಡಿದ ಮೈಸೂರು ವಿಶ್ವವಿದ್ಯಾನಿಲಯ, ಪರಿಷ್ಕೃತ ಪರೀಕ್ಷಾ ವೇಳಾಪಟ್ಟಿ ಶೀಘ್ರ ಪ್ರಕಟವಾಗಲಿದೆ.

Manmohan Singh Death: ಭಾರತದ ಮಾಜಿ ಪ್ರಧಾನ ಮಂತ್ರಿ ಡಾ ಮನಮೋಹನ ಸಿಂಗ್ ಅವರು ಗುರುವಾರ (ಡಿಸೆಂಬರ್ 26) ರಾತ್ರಿ ನಿಧನರಾಗಿದ್ದು, ದೇಶಾದ್ಯಂತ ಏಳು ದಿನಗಳ ಕಾಲ ಶೋಕಾಚರಣೆ ಘೋಷಣೆಯಾಗಿದೆ. ಇಂದು ಸರ್ಕಾರಿ ರಜೆ ಘೋಷಣೆಯಾಗಿರುವ ಕಾರಣ ರಾಜ್ಯ ಎಲ್ಲ ಶಿಕ್ಷಣ ಸಂಸ್ಥೆಗಳಿಗೂ, ಸರ್ಕಾರಿ ಕಚೇರಿಗಳು ಕಾರ್ಯನಿರ್ವಹಿಸಿಲ್ಲ. ಇದರಂತೆ, ಮಾಜಿ ಪ್ರಧಾನಿ ಮನಮೋಹನ ಸಿಂಗ್ ನಿಧನ ಹಿನ್ನೆಲೆ ಮೈಸೂರು ವಿಶ್ವವಿದ್ಯಾನಿಲಯದ ಎಲ್ಲಾ ಪರೀಕ್ಷೆಗಳು ಮುಂದೂಡಿಕೆಯಾಗಿವೆ ಎಂದು ಮೈಸೂರು ವಿವಿ‌ ರಿಜಿಸ್ಟ್ರಾರ್ ಎನ್ ನಾಗರಾಜ್ ಮಾಹಿತಿ ನೀಡಿದ್ದಾರೆ. ಪದವಿ, ಸ್ನಾತಕೋತ್ತರ ಪರೀಕ್ಷೆಗಳು ಮುಂದೂಡಿಕೆಯಾಗಿದ್ದು, ಮುಂದಿನ ಪರೀಕ್ಷಾ ದಿನಾಂಕ ಶೀಘ್ರದಲ್ಲೇ ಪ್ರಕಟ ಮಾಡುವುದಾಗಿ ಅವರು ತಿಳಿಸಿದ್ದಾರೆ.

ಎಂಬಿಎ ಪರೀಕ್ಷೆ ಮುಂದೂಡಿದ ಬೆಂಗಳೂರು ವಿವಿ

ಮಾಜಿ ಪ್ರಧಾನಿ ಮನಮೋಹನ ಸಿಂಗ್ ಅವರ ನಿಧನದ ಕಾರಣ ಕರ್ನಾಟಕ ರಾಜ್ಯ ಸರ್ಕಾರ ಘೋಷಿಸಿತು. ಈ ಸಾರ್ವಜನಿಕ ರಜೆಯ ಹಿನ್ನೆಲೆಯಲ್ಲಿ ಬೆಂಗಳೂರು ವಿಶ್ವವಿದ್ಯಾಲಯವು ಡಿಸೆಂಬರ್ 27 ರಂದು ಅಂದರೆ ಇಂದು ನಿಗದಿಯಾಗಿದ್ದ ಎರಡನೇ ಸೆಮಿಸ್ಟರ್ ಎಂಬಿಎ ಪರೀಕ್ಷೆಯನ್ನು ಮುಂದೂಡಿದೆ. ಪರಿಷ್ಕೃತ ಪರೀಕ್ಷಾ ದಿನಾಂಕವನ್ನು ಶೀಘ್ರವೇ ಪ್ರಕಟಿಸಲಾಗುವುದು ಎಂದು ಬೆಂಗಳೂರು ವಿವಿ ಅಧಿಕಾರಿಗಳು ತಿಳಿಸಿದ್ಧಾರೆ.

ಮಾಜಿ ಪ್ರಧಾನಿ ಮನಮೋಹನ ಸಿಂಗ್ ನಿಧನರಾದ ಬೆನ್ನಿಗೆ ಕರ್ನಾಟಕ ಸರ್ಕಾರ ಇಂದು ಸಾರ್ವಜನಿಕ ರಜೆ ಘೋಷಿಸಿದ್ದಲ್ಲದೆ, 7 ದಿನಗಳ ಶೋಕಾಚರಣೆ ಘೋಷಿಸಿತು. ಇದನ್ನು ಅನುಸರಿಸಿ ಬೆಂಗಳೂರು ವಿವಿ ಕೂಡ ಶುಕ್ರವಾರ ಮುಂಜಾನೆ ತಾನು ನಡೆಸುತ್ತಿರುವ ಪರೀಕ್ಷೆಗಳನ್ನು ಮುಂದೂಡುವ ನಿರ್ಧಾರವನ್ನು ಪ್ರಕಟಿಸಿತು. ಪರಿಷ್ಕೃತ ಪರೀಕ್ಷಾ ವೇಳಾಪಟ್ಟಿ ಪ್ರಕಟಿಸುವುದಾಗಿ ತಿಳಿಸಿತು.

"ಮಾಜಿ ಪ್ರಧಾನಿ ಡಾ. ಮನಮೋಹನ್ ಸಿಂಗ್ ಅವರ ನಿಧನದ ಕಾರಣ, ರಾಜ್ಯ ಸರ್ಕಾರ ಇಂದು ರಜೆ ಘೋಷಿಸಿದೆ. ಈ ನಿಟ್ಟಿನಲ್ಲಿ ಬೆಂಗಳೂರು ವಿಶ್ವವಿದ್ಯಾಲಯದಲ್ಲಿ ಇಂದು (27-12-2024) ನಡೆಯಬೇಕಿದ್ದ ಎಂಬಿಎ (2ನೇ ಸೆಮಿಸ್ಟರ್) ಪರೀಕ್ಷೆಯನ್ನು ರದ್ದುಪಡಿಸಿ ಮುಂದೂಡಲಾಗಿದೆ. ಪರಿಷ್ಕೃತ ಪರೀಕ್ಷಾ ದಿನಾಂಕವನ್ನು ಶೀಘ್ರದಲ್ಲೇ ಪ್ರಕಟಿಸಲಾಗುವುದು ಎಂದು ಬೆಂಗಳೂರು ವಿವಿಯ ರಿಜಿಸ್ಟ್ರಾರ್ (ಮೌಲ್ಯಮಾಪನ) ಶ್ರೀನಿವಾಸ್ ಸಿ ತಿಳಿಸಿದ್ದಾರೆ.

ಇಂದು ಸರ್ಕಾರಿ ರಜೆ ಘೋಷಿಸಿತ್ತು ರಾಜ್ಯ ಸರ್ಕಾರ

ಮನಮೋಹನ ಸಿಂಗ್‌ ಅವರ ನಿಧನಕ್ಕೆ ಕರ್ನಾಟಕ ರಾಜ್ಯ ಸರ್ಕಾರವು ತೀವ್ರ ಸಂತಾಪ ಸೂಚಿಸಿದ್ದು. ದಿವಂಗತರ ಗೌರವಾರ್ಥವಾಗಿ ಡಿಸೆಂಬರ್‌ 27ರ ಶುಕ್ರವಾರ ಸರ್ಕಾರಿ ಕಚೇರಿಗಳಿಗೆ ಹಾಗೂ ಎಲ್ಲಾ ಶಾಲಾ ಕಾಲೇಜುಗಳಿಗೆ ರಜೆ ಘೋಷಿಸಿತ್ತು. ಸರ್ಕಾರಿ ಸ್ವಾಮ್ಯದ ಅಂಗ ಸಂಸ್ಥೆಗಳು ಒಳಗೊಂಡಂತೆ ಎಲ್ಲ ಸಂಸ್ಥೆಗಳಿಗೂ ಸಾರ್ವಜನಿಕ ರಜೆಯನ್ನು ನೀಡಲಾಗಿದೆ ಎಂದು ಸರ್ಕಾರದ ಉಪ ಕಾರ್ಯದರ್ಶಿ ಎಲಿಷಾ ಆಂಡ್ರೂಸ್‌ ಹೊರಡಿಸಿರುವ ಆದೇಶದಲ್ಲಿ ತಿಳಿಸಿದ್ದರು.

ಇದರ ಜತೆಗೆ ಡಿಸೆಂಬರ್‌ 26 ರಿಂದ ಆರಂಭಗೊಂಡು ಜನವರಿ 1ವರಗಿನ ಎರಡೂ ದಿನವೂ ಸೇರಿದಂತೆ ಒಟ್ಟು ಏಳು ದಿನ ಕರ್ನಾಟಕ ರಾಜ್ಯಾದ್ಯಂತ ಶೋಕಾಚರಣೆ ಇರಲಿದೆ. ಈ ಅವಧಿಯಲ್ಲಿ ಯಾವುದೇ ಸಾರ್ವಜನಿಕ ಮನೋರಂಜನಾ ಕಾರ್ಯಕ್ರಮ ಇರಲ್ಲ ಎಂದು ಆದೇಶದಲ್ಲಿ ತಿಳಿಸಲಾಗಿದೆ.

ಶೋಕಾಚರಣೆ ಇರುವ ಕಾರಣ ಕರ್ನಾಟಕದ ಪ್ರಮುಖ ನಗರಗಳಲ್ಲಿ ಡಿಸೆಂಬರ್‌ 31ರಂದು ಸಾರ್ವಜನಿಕವಾಗಿ ಮನರಂಜನಾ ಕಾರ್ಯಕ್ರಮಗಳು ಬಂದ್‌ ಆಗಲಿವೆ. ಖಾಸಗಿಯಾಗಿ ಯಾವುದೇ ಚಟುವಟಿಕೆ ನಡೆಸಲು ಈ ಆದೇಶ ಅಡ್ಡಿಯಾಗುವುದಿಲ್ಲ. ಬದಲಿಗೆ ಸಾರ್ವಜನಿಕವಾಗಿ ಕುಣಿತ, ಸಂಗೀತ ಚಟುವಟಿಕೆಗಳು ಇರಲ್ಲ. ಮೈಸೂರು ಅರಮನೆ ಆವರಣದಲ್ಲಿ ಹೊಸ ವರ್ಷವನ್ನು ಸ್ವಾಗತಿಸಲು ಮಂಗಳವಾರ ರಾತ್ರಿ ಹಮ್ಮಿಕೊಳ್ಳಲಾಗಿದ್ದ ಸಂಗೀತ ಕಾರ್ಯಕ್ರಮ, ಕೇಕ್‌ ಕತ್ತರಿಸುವ ಚಟುವಟಿಕೆ, ಪಟಾಕಿ ಸಿಡಿಸುವ ಸಂಭ್ರಮವೂ ಇರಲ್ಲ.

Whats_app_banner