ನಾಳೆಯಿಂದ ಹುಬ್ಬಳ್ಳಿ-ವಿಜಯಪುರ ಸೇರಿದಂತೆ ಹಲವು ರೈಲು ಸಂಚಾರ ರದ್ದು; ಬಾಗಲಕೋಟೆಗೆ ರೈಲು ಇರಲ್ಲ
ಕನ್ನಡ ಸುದ್ದಿ  /  ಕರ್ನಾಟಕ  /  ನಾಳೆಯಿಂದ ಹುಬ್ಬಳ್ಳಿ-ವಿಜಯಪುರ ಸೇರಿದಂತೆ ಹಲವು ರೈಲು ಸಂಚಾರ ರದ್ದು; ಬಾಗಲಕೋಟೆಗೆ ರೈಲು ಇರಲ್ಲ

ನಾಳೆಯಿಂದ ಹುಬ್ಬಳ್ಳಿ-ವಿಜಯಪುರ ಸೇರಿದಂತೆ ಹಲವು ರೈಲು ಸಂಚಾರ ರದ್ದು; ಬಾಗಲಕೋಟೆಗೆ ರೈಲು ಇರಲ್ಲ

ನಾಳೆಯಿಂದ (ಏ.21) ರಾಜ್ಯದ ಕೆಲವು ರೈಲು ಸಂಚಾರದಲ್ಲಿ ವ್ಯತ್ಯಯವಾಗಲಿದೆ. ಬಾಗಲಕೋಟೆ ರೈಲು ನಿಲ್ದಾಣದಲ್ಲಿ ಕೆಲಸಗಳು ನಡೆಯುವುದರಿಂದ, ಈ ನಿಲ್ದಾಣಕ್ಕೆ ರೈಲುಗಳು ಸಂಪರ್ಕಿಸುವುದಿಲ್ಲ. ಹೀಗಾಗಿ ಕೆಲವು ರೈಲುಗಳನ್ನು ರದ್ದು ಮಾಡಲಾಗಿದೆ.

ನಾಳೆಯಿಂದ ಹುಬ್ಬಳ್ಳಿ-ವಿಜಯಪುರ ಸೇರಿದಂತೆ ಹಲವು ರೈಲು ಸಂಚಾರ ರದ್ದು; ಬಾಗಲಕೋಟೆಗೆ ರೈಲು ಇರಲ್ಲ
ನಾಳೆಯಿಂದ ಹುಬ್ಬಳ್ಳಿ-ವಿಜಯಪುರ ಸೇರಿದಂತೆ ಹಲವು ರೈಲು ಸಂಚಾರ ರದ್ದು; ಬಾಗಲಕೋಟೆಗೆ ರೈಲು ಇರಲ್ಲ (X)

ಹುಬ್ಬಳ್ಳಿ: ಬಾಗಲಕೋಟೆ ರೈಲು ನಿಲ್ದಾಣದಲ್ಲಿ ಸುರಕ್ಷತಾ ಕ್ರಮಕ್ಕೆ ಸಂಬಂಧಿಸಿದಂತೆ ಅಗತ್ಯ ಎಂಜಿನಿಯರಿಂಗ್ ಕಾರ್ಯಗಳು ನಡೆಯುತ್ತಿರುವುದರಿಂದ, ಕೆಲವು ದಿನಗಳ ಕಾಲ ಪ್ರಮುಖ ರೈಲು ಸೇವೆಗಳನ್ನು ರದ್ದುಗೊಳಿಸಲಾಗುತ್ತಿದೆ. ಇನ್ನೂ ಕೆಲವು ರೈಲುಗಳು ಭಾಗಶಃ ರದ್ದಾಗಿವೆ. ಕೆಲವು ರೈಲುಗಳು ಸತತ 5 ದಿನಗಳ ಕಾಲ ಓಡುತ್ತಿಲ್ಲ. ಈ ಕುರಿತು ನೈಋತ್ಯ ರೈಲ್ವೆ ಮಾಹಿತಿ ನೀಡಿದೆ. ಹೀಗಾಗಿ ಪ್ರಯಾಣಿಕರು ಬದಲಿ ವ್ಯವಸ್ಥೆ ಮಾಡಿಕೊಂಡು ಪ್ರಯಾಣ ಮಾಡಲು ಕ್ರಮ ಕೈಗೊಳ್ಳಬಹುದು. ಉತ್ತರ ಕರ್ನಾಟಕ ಮಾತ್ರವಲ್ಲದೆ ದಕ್ಷಿಣ ಕರ್ನಾಟಕವನ್ನು ಬಾಗಲಕೋಟೆಗೆ ಸಂಪರ್ಕಿಸುವ ರೈಲುಗಳು ಕೂಡಾ ಭಾಗಶಃ ರದ್ದಾಗಿವೆ.

ರದ್ದಾದ ರೈಲುಗಳ ವಿವರ

  • ರೈಲು ಸಂಖ್ಯೆ 06920: ವಿಜಯಪುರ-ಎಸ್‌ಎಸ್‌ಎಸ್ ಹುಬ್ಬಳ್ಳಿ ನಡುವಿನ ಪ್ಯಾಸೆಂಜರ್ ವಿಶೇಷ ರೈಲು ಏಪ್ರಿಲ್ 21 ರಿಂದ 25ರವರೆಗೆ 5 ದಿನ ರದ್ದಾಗಲಿದೆ.
  • ರೈಲು ಸಂಖ್ಯೆ 06919: ಎಸ್‌ಎಸ್‌ಎಸ್ ಹುಬ್ಬಳ್ಳಿ-ವಿಜಯಪುರ ಪ್ಯಾಸೆಂಜರ್ ವಿಶೇಷ ರೈಲು ಏಪ್ರಿಲ್ 21 ರಿಂದ 25ರವರೆಗೆ 5 ದಿನ ರದ್ದಾಗಲಿದೆ.
  • ರೈಲು ಸಂಖ್ಯೆ 56906: ಎಸ್‌ಎಸ್‌ಎಸ್ ಹುಬ್ಬಳ್ಳಿ-ಸೋಲಾಪುರ ಪ್ಯಾಸೆಂಜರ್ ರೈಲು ಏಪ್ರಿಲ್ 21 ರಿಂದ 24ರವರೆಗೆ 4 ದಿನ ರದ್ದುಗೊಳಿಸಲಾಗುತ್ತದೆ.
  • ರೈಲು ಸಂಖ್ಯೆ 56903: ಸೋಲಾಪುರ-ಧಾರವಾಡ ಪ್ಯಾಸೆಂಜರ್ ರೈಲು ಏಪ್ರಿಲ್ 22 ರಿಂದ 25ರವರೆಗೆ 4 ದಿನ ರದ್ದುಗೊಳಿಸಲಾಗುತ್ತದೆ.
  • ರೈಲು ಸಂಖ್ಯೆ 11415: ಸೋಲಾಪುರ-ಹೊಸಪೇಟೆ ಎಕ್ಸ್‌ಪ್ರೆಸ್ ರೈಲನ್ನು ಏಪ್ರಿಲ್ 22ರಿಂದ 24 ರವರೆಗೆ 3 ದಿನ ರದ್ದುಗೊಳಿಸಲಾಗುತ್ತದೆ
  • ರೈಲು ಸಂಖ್ಯೆ 11416: ಹೊಸಪೇಟೆ-ಸೋಲಾಪುರ ಎಕ್ಸ್‌ಪ್ರೆಸ್ ಅನ್ನು ಏಪ್ರಿಲ್ 23ರಿಂದ 25 ರವರೆಗೆ 3 ದಿನ ರದ್ದುಗೊಳಿಸಲಾಗುತ್ತದೆ
  • ರೈಲು ಸಂಖ್ಯೆ 07329: ಎಸ್‌ಎಸ್‌ಎಸ್ ಹುಬ್ಬಳ್ಳಿ-ವಿಜಯಪುರ ಎಕ್ಸ್‌ಪ್ರೆಸ್ ವಿಶೇಷ ರೈಲು ಏಪ್ರಿಲ್ 22 ರಿಂದ 24ರವರೆಗೆ 3 ದಿನ ರದ್ದಾಗಲಿದೆ
  • ರೈಲು ಸಂಖ್ಯೆ 07330: ವಿಜಯಪುರ-ಎಸ್‌ಎಸ್‌ಎಸ್ ಹುಬ್ಬಳ್ಳಿ ಎಕ್ಸ್‌ಪ್ರೆಸ್ ವಿಶೇಷ ರೈಲು ಏಪ್ರಿಲ್ 23 ರಿಂದ 25ರವರೆಗೆ 3 ದಿನ ರದ್ದಾಗಲಿದೆ.

ಭಾಗಶಃ ರದ್ದಾದ ರೈಲುಗಳ ವಿವರ

  • ರೈಲು ಸಂಖ್ಯೆ 07378: ಮಂಗಳೂರು ಸೆಂಟ್ರಲ್-ವಿಜಯಪುರ ಡೈಲಿ ಎಕ್ಸ್‌ಪ್ರೆಸ್ ವಿಶೇಷ ರೈಲು, ಏಪ್ರಿಲ್ 20ರಿಂದ 24ರವರೆಗೆ ಎಸ್‌ಎಸ್‌ಎಸ್ ಹುಬ್ಬಳ್ಳಿ-ವಿಜಯಪುರ ನಿಲ್ದಾಣಗಳ ನಡುವೆ ಪ್ರಯಾಣಿಸುವುದನ್ನು ಭಾಗಶಃ ರದ್ದುಗೊಳಿಸಲಾಗುವುದು. ಈ ರೈಲನ್ನು ಹುಬ್ಬಳ್ಳಿಯಲ್ಲಿ ಅಲ್ಪಾವಧಿಗೆ ಮಾತ್ರ ನಿಲ್ಲಿಸಲಾಗುವುದು.
  • ರೈಲು ಸಂಖ್ಯೆ 07377: ವಿಜಯಪುರ-ಮಂಗಳೂರು ಸೆಂಟ್ರಲ್ ಡೈಲಿ ಎಕ್ಸ್‌ಪ್ರೆಸ್ ವಿಶೇಷ ರೈಲು, ಏಪ್ರಿಲ್ 21 ರಿಂದ 25ರವರೆಗೆ ವಿಜಯಪುರದ ಬದಲಿಗೆ ಎಸ್‌ಎಸ್‌ಎಸ್ ಹುಬ್ಬಳ್ಳಿಯಿಂದ ಹೊರಡಲಿದೆ. ವಿಜಯಪುರದಿಂದ ಎಸ್‌ಎಸ್‌ಎಸ್ ಹುಬ್ಬಳ್ಳಿ ನಿಲ್ದಾಣಗಳ ನಡುವಿನ ಸೇವೆ ರದ್ದುಗೊಳಿಸಲಾಗಿದೆ.
  • ರೈಲು ಸಂಖ್ಯೆ 06545: ಏಪ್ರಿಲ್ 20ರಿಂದ 24ರವರೆಗೆ ಯಶವಂತಪುರ-ವಿಜಯಪುರ ದೈನಂದಿನ ಎಕ್ಸ್‌ಪ್ರೆಸ್ ವಿಶೇಷ ರೈಲು ಗದಗ ಮತ್ತು ವಿಜಯಪುರ ನಡುವೆ ಭಾಗಶಃ ರದ್ದಾಗಲಿದೆ.
  • ರೈಲು ಸಂಖ್ಯೆ 06546: ವಿಜಯಪುರ-ಯಶವಂತಪುರ ದೈನಂದಿನ ಎಕ್ಸ್‌ಪ್ರೆಸ್ ವಿಶೇಷ ರೈಲು ಏಪ್ರಿಲ್ 21 ರಿಂದ 25ರವರೆಗೆ ವಿಜಯಪುರದ ಬದಲಿಗೆ ಗದಗದಿಂದ ಹೊರಡಲಿದೆ. ವಿಜಯಪುರದಿಂದ ಗದಗ ನಡುವಿನ ರೈಲು ಸೇವೆ ರದ್ದುಗೊಳಿಸಲಾಗಿದೆ.
  • ರೈಲು ಸಂಖ್ಯೆ 17307: ಮೈಸೂರು-ಬಾಗಲಕೋಟೆ ನಡುವೆ ಸಂಚರಿಸುವ ಬಸವ ದೈನಂದಿನ ಎಕ್ಸ್‌ಪ್ರೆಸ್ ರೈಲು ಸೇವೆಯು ಏಪ್ರಿಲ್ 20 ರಿಂದ 24ರವರೆಗೆ ವಿಜಯಪುರ ಮತ್ತು ಬಾಗಲಕೋಟೆ ನಿಲ್ದಾಣಗಳ ನಡುವಿನ ಪ್ರಯಾಣ ಭಾಗಶಃ ರದ್ದುಪಡಿಸಲಾಗುತ್ತದೆ.
  • ರೈಲು ಸಂಖ್ಯೆ 17308: ಬಾಗಲಕೋಟೆ - ಮೈಸೂರು ನಡುವೆ ಸಂಚರಿಸುವ ಬಸವ ಡೈಲಿ ಎಕ್ಸ್‌ಪ್ರೆಸ್, ಏಪ್ರಿಲ್ 21ರಿಂದ 25ರವರೆಗೆ ಬಾಗಲಕೋಟೆಯ ಬದಲಿಗೆ ವಿಜಯಪುರದಿಂದ ಹೊರಡಲಿದೆ. ಬಾಗಲಕೋಟೆಯಿಂದ ವಿಜಯಪುರ ನಡುವಿನ ಸೇವೆಯನ್ನು ರದ್ದುಗೊಳಿಸಲಾಗಿದೆ.

ಇದನ್ನೂ ಓದಿ | ಬೆಂಗಳೂರು ಹೊಸಪೇಟೆ ಪ್ಯಾಸೆಂಜರ್ ರೈಲು ಹೊಳಲ್ಕೆರೆ, ಅಮೃತಾಪುರ ರೈಲು ನಿಲ್ದಾಣಗಳಲ್ಲಿ ತಾತ್ಕಾಲಿಕ ನಿಲುಗಡೆ

Jayaraj

TwittereMail
ಜಯರಾಜ್‌ ಅಮಿನ್: 'ಹಿಂದೂಸ್ತಾನ್ ಟೈಮ್ಸ್ ಕನ್ನಡ'ದಲ್ಲಿ ಸೀನಿಯರ್ ಕಂಟೆಂಟ್‌ ಪ್ರೊಡ್ಯೂಸರ್. ಕ್ರೀಡಾ (ಕ್ರಿಕೆಟ್) ವಿಭಾಗದಲ್ಲಿ ಕಾರ್ಯನಿರ್ವಹಣೆ. ಈಟಿವಿ ಭಾರತ್, ಇನ್‌ಶಾರ್ಟ್ಸ್‌ ವಿವಿಧ ವಿಭಾಗಗಳಲ್ಲಿ ಒಟ್ಟು 6 ವರ್ಷಗಳ ಅನುಭವ. ಕಲೆ, ಸಾಹಿತ್ಯ, ಭೂಗೋಳದ ಬಗ್ಗೆ ಹೆಚ್ಚು ಆಸಕ್ತಿ. ದಕ್ಷಿಣ ಕನ್ನಡ ಜಿಲ್ಲೆಯ ಉಪ್ಪಿನಂಗಡಿ ಸಮೀಪದ ಹೊಸಮೊಗ್ರು ನಿವಾಸಿ.