ಮಾರ್ಚ್ 2025ರ ಶಾಲಾ ರಜಾದಿನಗಳ ಪಟ್ಟಿ; ಸರ್ಕಾರಿ ರಜೆ ಜೊತೆಗೆ ತಿಂಗಳಲ್ಲಿ 5 ಭಾನುವಾರ ದಿನ
ಮಾರ್ಚ್ ತಿಂಗಳು ಐದು ಶನಿವಾರ ಮತ್ತು ಐದು ಭಾನುವಾರ ದಿನಗಳು ಬರುತ್ತವೆ. ಇದರೊಂದಿಗೆ ಹೋಳಿ, ಯುಗಾದಿ ಮತ್ತು ಈದ್-ಉಲ್-ಫಿತರ್ ಹಬ್ಬ ಕೂಡ ಇದೆ. ಶಾಲಾ ವಿದ್ಯಾರ್ಥಿಗಳು ಯಾವಾಗೆಲ್ಲ ರಜೆಯ ಖುಷಿ ಅನುಭವಿಸಬಹುದು ನೋಡೋಣ.

ಹಣಕಾಸು ವರ್ಷದ ಕೊನೆಯ ತಿಂಗಳು ಮಾರ್ಚ್. ಈ ತಿಂಗಳು ಶೈಕ್ಷಣಿಕ ಚಟುವಟಿಕೆಗಳು ಕೂಡಾ ಬಹುತೇಕ ಕೊನೆಯ ಹಂತಕ್ಕೆ ತಲುಪುತ್ತವೆ. ಪಿಯುಸಿ ಮತ್ತು ಎಸ್‌ಎಸ್‌ಎಲ್‌ಸಿ ಪರೀಕ್ಷೆ ಕೂಡಾ ನಡೆಯಲಿದೆ. ಭಾರತದಾದ್ಯಂತದ ವಿದ್ಯಾರ್ಥಿಗಳಿಗೆ 2025ರ ಮಾರ್ಚ್ ತಿಂಗಳಲ್ಲಿ ಹಬ್ಬದ ವಾತಾವರಣವಿರಲಿದೆ. ಅಲ್ಲದೆ ಹೆಚ್ಚುವರಿ ವಾರಾಂತ್ಯ ದಿನದ ಕಾರಣದಿಂದ ಹಲವಾರು ರಜಾದಿನಗಳು ಬರುತ್ತವೆ. ಮಾರ್ಚ್ ತಿಂಗಳು ಐದು ಶನಿವಾರ ಮತ್ತು ಐದು ಭಾನುವಾರ ದಿನಗಳು ಬರುತ್ತವೆ. ಇದರೊಂದಿಗೆ ಹೋಳಿ, ಯುಗಾದಿ ಮತ್ತು ಈದ್-ಉಲ್-ಫಿತರ್ ಹಬ್ಬ ಕೂಡ ಇದೆ. ಶಾಲಾ ವಿದ್ಯಾರ್ಥಿಗಳು ಯಾವಾಗೆಲ್ಲ ರಜೆಯ ಖುಷಿ ಅನುಭವಿಸಬಹುದು ನೋಡೋಣ.
ಮಾರ್ಚ್ 2025ರ ಶಾಲಾ ರಜಾದಿನಗಳ ಪಟ್ಟಿ
ಹೋಳಿ: ಮಾರ್ಚ್ 13ರಂದು ಬಣ್ಣಗಳ ಹಬ್ಬವಾದ ಹೋಳಿಯನ್ನು ಆಚರಿಸಲಾಗುತ್ತದೆ. ಇದು ವಸಂತಕಾಲದ ಆಗಮನವನ್ನು ಸೂಚಿಸುತ್ತದೆ. ದೇಶದ ಹೆಚ್ಚಿನ ರಾಜ್ಯಗಳಲ್ಲಿ ಸಂಭ್ರಮದಿಂದ ಬಣ್ಣಗಳ ಹಬ್ಬವನ್ನು ಆಚರಿಸಲಾಗುತ್ತದೆ. ಈ ದಿನ ಹೆಚ್ಚಿನ ರಾಜ್ಯಗಳಲ್ಲಿ ರಜೆ ಇರಲಿದೆ.
ಯುಗಾದಿ: ಮಾರ್ಚ್ 30ರಂದು ಹಿಂದೂಗಳ ಹೊಸ ವರ್ಷವನ್ನು ಸೂಚಿಸುವ ಯುಗಾದಿಯನ್ನು ಆಚರಿಸಲಾಗುತ್ತದೆ. ಈ ಹಬ್ಬವನ್ನು ಕೆಲವು ರಾಜ್ಯಗಳಲ್ಲಿ ಬೇರೆ ಬೇರೆ ಹೆಸರುಗಳಲ್ಲಿ ಕರೆಯಲಾಗುತ್ತದೆ. ಗುಡಿ ಪಾಡ್ವಾ, ಮತ್ತು ಚೈತ್ರ ಸುಖಲಾಡಿ ಎಂದು ಆಚರಿಸಲಾಗುತ್ತದೆ. ಯುಗಾದಿಯು ಮಹಾರಾಷ್ಟ್ರ, ಕರ್ನಾಟಕ, ಆಂಧ್ರಪ್ರದೇಶ ಮತ್ತು ತೆಲಂಗಾಣದಲ್ಲಿ ಪ್ರಮುಖ ಹಬ್ಬವಾಗಿದೆ. ಈ ಬಾರಿ ಯುಗಾದಿ ಹಬ್ಬವು ಭಾನುವಾರ ಬರುತ್ತದೆ.
ಈದ್ ಉಲ್ ಫಿತರ್: ಮಾರ್ಚ್ 31ರಂದು ರಂಜಾನ್ ಅಂತ್ಯವನ್ನು ಸೂಚಿಸುವ ಈದ್-ಉಲ್-ಫಿತರ್ ಹಬ್ಬವನ್ನು ಆಚರಿಸಲಾಗುತ್ತದೆ. ಇದು ಭಾರತದಾದ್ಯಂತ ಗೆಜೆಟೆಡ್ ರಜಾದಿನವಾಗಿದ್ದು, ಶಾಲೆಗಳು ಮತ್ತು ಸರ್ಕಾರಿ ಕಚೇರಿಗಳು ಮುಚ್ಚಲ್ಪಟ್ಟಿರುತ್ತವೆ. ಈ ಬಾರಿ ಸೋಮವಾರ ದಿನ ಈದ್ ಉಲ್ ಫಿತರ್ ಇರಲಿದ್ದು, ಕರ್ನಾಟಕದಲ್ಲೂ ಸರ್ಕಾರಿ ರಜೆ ಇರಲಿದೆ.
ರಜೆಯ ಯೋಜನೆ ಮಾಡಿಕೊಳ್ಳಿ
2025ರ ಮಾರ್ಚ್ ತಿಂಗಳಲ್ಲಿ ತಲಾ ಐದು ಶನಿವಾರ ಮತ್ತು ಭಾನುವಾರಗಳು ಬರುತ್ತದೆ. ಬ್ಯಾಂಕ್‌ಗಳಿಗೆ ಎರಡನೇ ಶನಿವಾರ ರಜೆ ಇರುತ್ತದೆ. ಕೆಲವು ಶಾಲೆಗಳಲ್ಲಿ ಶನಿವಾರವೂ ರಜೆ ಇರುತ್ತವೆ. ಅದು ಇಲ್ಲದಿದ್ದರೂ ಐದು ಭಾನುವಾರಗಳ ರಜೆ ವಿದ್ಯಾರ್ಥಿಗಳಿಗೆ ಸುದೀರ್ಘ ರಜೆಯ ಮಜಾ ಕೊಡಲಿದೆ. ಯುಗಾದಿ ಮತ್ತು ಈದ್ ಉಲ್ ಫಿತರ್ 30 ಮತ್ತು 31ರಂದು ಇದ್ದು, ಸತತ ಎರಡು ದಿನ ರಜೆ ಇರಲಿದೆ. ವಿದ್ಯಾರ್ಥಿಗಳು ತಮ್ಮ ವಾರಾಂತ್ಯಗಳನ್ನು ಯೋಜಿಸಲು ತಮ್ಮ ತಮ್ಮ ಶಾಲೆಯ 2025ರ ರಜಾ ದಿನಗಳ ಕ್ಯಾಲೆಂಡರ್ ಅನ್ನು ಪರಿಶೀಲಿಸಿಕೊಳ್ಳುವುದು ಉತ್ತಮ.
ಮಾರ್ಚ್ 8 ಮತ್ತು 22ರಂದು ಎರಡು ಹಾಗೂ ನಾಲ್ಕನೇ ಶನಿವಾರ. ಈ ದಿನ ಬ್ಯಾಂಕ್‌ಗಳಿಗೆ ರಜೆ ಇರಲಿದೆ. 2,9, 16 ಹಾಗೂ 23 ರಂದು ಭಾನುವಾರ ಆಗಿರುವುದರಿಂದ ಸಹಜವಾಗಿ ಬ್ಯಾಂಕ್ ರಜೆ ಜೊತೆಗೆ ಶಾಲೆಗಳಿಗೂ ರಜೆ ಇರಲಿದೆ. ಈ ದಿನಗಳಲ್ಲಿ ಪ್ರವಾಸ ಯೋಜನೆ ಮಾಡುವವರಿಗೆ ಉತ್ತಮ.