ಕುಸಿದು ಬಿದ್ದು ಹೃದಯಾಘಾತಕ್ಕೆ ಕಾರಣವೇನು: ಕೋವಿಡ್ ಲಸಿಕೆಗಳ ದೀರ್ಘಕಾಲಿಕ ಅಧ್ಯಯನದಿಂದ ಕಂಡ ಹೊಸ ಬೆಳವಣಿಗೆ:ರಾಜಾರಾಂ ತಲ್ಲೂರು ಬರಹ
ಕನ್ನಡ ಸುದ್ದಿ  /  ಕರ್ನಾಟಕ  /  ಕುಸಿದು ಬಿದ್ದು ಹೃದಯಾಘಾತಕ್ಕೆ ಕಾರಣವೇನು: ಕೋವಿಡ್ ಲಸಿಕೆಗಳ ದೀರ್ಘಕಾಲಿಕ ಅಧ್ಯಯನದಿಂದ ಕಂಡ ಹೊಸ ಬೆಳವಣಿಗೆ:ರಾಜಾರಾಂ ತಲ್ಲೂರು ಬರಹ

ಕುಸಿದು ಬಿದ್ದು ಹೃದಯಾಘಾತಕ್ಕೆ ಕಾರಣವೇನು: ಕೋವಿಡ್ ಲಸಿಕೆಗಳ ದೀರ್ಘಕಾಲಿಕ ಅಧ್ಯಯನದಿಂದ ಕಂಡ ಹೊಸ ಬೆಳವಣಿಗೆ:ರಾಜಾರಾಂ ತಲ್ಲೂರು ಬರಹ

ಕೋವಿಡ್‌ ಕಾಲದ ನಂತರ ಕರ್ನಾಟಕ, ಭಾರತ ಮಾತ್ರವಲ್ಲದೇ ಜಗತ್ತಿನ ಹಲವು ದೇಶಗಳಲ್ಲಿ ಯುವಕರ ಹಠಾತ್‌ ಹೃದಯಾಘಾತದ ಪ್ರಕರಣದಲ್ಲಿ ಏರಿಕೆ ಕಂಡಿದೆ. ಈ ಕುರಿತು ಹಲವೆಡೆ ಅಧ್ಯಯನಗಳೂ ನಡೆದಿವೆ. ಇದರ ಬಗ್ಗೆ ರಾಜಾರಾಂ ತಲ್ಲೂರು ಬೆಳಕು ಚೆಲ್ಲಿದ್ದಾರೆ.

ಕೋವಿಡ್‌ ಹಾಗೂ ಹೃದಯಾಘಾತಕ್ಕೆ ಸಂಬಂಧ ಇದೆಯಾ ಅಧ್ಯಯನ ವರದಿ ಹೇಳೋದೇನು
ಕೋವಿಡ್‌ ಹಾಗೂ ಹೃದಯಾಘಾತಕ್ಕೆ ಸಂಬಂಧ ಇದೆಯಾ ಅಧ್ಯಯನ ವರದಿ ಹೇಳೋದೇನು

ಕುಸಿದು ಸಾವು-ಹೃದಯಾಘಾತ

ಇನ್ನು ಎಲ್ಲ ಗುಡಿಸಿಹಾಕಿ

“ಸಬ್ ಚೆಂಗಾಸಿ” ಅನ್ನಲು ಕಷ್ಟವಿದೆ!

ಇದೇ ಎಪ್ರಿಲ್ 17ರಂದು ಕೋವಿಡ್ ಲಸಿಕೆ ತಯಾರಿಸುವ ಪ್ರಮುಖ ಸಂಸ್ಥೆಗಳಾದ ಮೊಡೆರ್ನಾ ಮತ್ತು ಫೈಝರ್, ಬೈಯೊನ್‌ಟೆಕ್ ಸಂಸ್ಥೆಗಳಿಗೆ ಅಮೆರಿಕದ ಔಷಧಿ ನಿಯಂತ್ರಣ ಪ್ರಾಧಿಕಾರವು (USFDA) ಪತ್ರ ಬರೆದಿದ್ದು, ಕೋವಿಡ್ ಲಸಿಕೆಗಳ ದೀರ್ಘಕಾಲಿಕ ಅಧ್ಯಯನದಲ್ಲಿ ಹೊಸ ಬೆಳವಣಿಗೆಗಳು ಕಂಡುಬಂದಿವೆ, ಹೃದಯದ ಸ್ನಾಯು ಸಂಬಂಧಿ ಸಮಸ್ಯೆಗಳು 16-25 ವರ್ಷ ಪ್ರಾಯದವರಲ್ಲಿ ಹೆಚ್ಚಾಗಿ ಕಾಣಿಸಿಕೊಂಡಿದೆ, ಈ ಬಗ್ಗೆ ಔಷಧಿ ಲೇಬಲ್‌ನಲ್ಲಿ ಸಾರ್ವಜನಿಕ ಮಾಹಿತಿ ನೀಡಬೇಕು ಎಂದಿದೆ. ಈ ವಿಚಾರವನ್ನು ದಾಖಲಿಸುವ ಮೂಲಕ, ಔಷಧಿ ಲೇಬಲ್‌ನಲ್ಲಿ ಅಗತ್ಯ ಬದಲಾವಣೆಗಳನ್ನು ಮಾಡಿ, 30 ದಿನಗಳ ಒಳಗೆ ತನಗೆ ಸಲ್ಲಿಸುವಂತೆ USFDA ಆ ಕಂಪನಿಗಳಿಗೆ ಆದೇಶಿಸಿದೆ. ಕೋವಿಡ್ ಲಸಿಕೆ ಪಡೆದವರಲ್ಲಿ ಹೃದಯದ ಸ್ನಾಯುಗಳು ಮತ್ತು ಹೃದಯದ ಹೊರಕವಚದ ಉರಿಯೂತದ ಪ್ರಕರಣಗಳು ಹೆಚ್ಚಿರುವುದು ಅಧ್ಯಯನದಲ್ಲಿ ಕಂಡುಬಂದ ಹಿನ್ನೆಲೆಯಲ್ಲಿ ಅದು ಈ ಕ್ರಮ ಕೈಗೊಂಡಿದೆ.

ಲಸಿಕೆ ಪಡೆದವರಲ್ಲಿ ಅಮೆರಿಕದ 38 ಆಸ್ಪತ್ರೆಗಳಲ್ಲಿ ನಡೆಸಿದ ಅಧ್ಯಯನದಲ್ಲಿ 5-29 ವರ್ಷ ಪ್ರಾಯದವರಲ್ಲಿ 333 ರೋಗಿಗಳು ಮಯೊಕಾರ್ಡೈಟಿಸ್ (ಹೃದಯದ ಸ್ನಾಯುಗಳ ಉರಿಯೂತ) ಅಥವಾ, ಪೆರಿಕಾರ್ಡೈಟಿಸ್ (ಹೃದಯದ ಹೊರಕವಚದ ಉರಿಯೂತ) ಹೊಂದಿರುವುದು ಪತ್ತೆ ಆಗಿದ್ದು, ಅವರ ದೀರ್ಘಕಾಲಿಕ ಅಧ್ಯಯನದಲ್ಲಿ ಕೂಡ ಹೃದಯದ ಸ್ನಾಯುಗಳಿಗೆ ಹಾನಿ ಆಗಿರುವ ಚಿಹ್ನೆಗಳು ಕಂಡುಬಂದಿರುವ, ಹೃದಯದ ತೊಂದರೆಗಳು ಕಾಣಿಸಿಕೊಂಡಿರುವ ಹಿನ್ನೆಲೆಯಲ್ಲಿ, ಈ ಔಷಧಿ ದೀರ್ಘಕಾಲಿಕವಾಗಿ ಹೃದಯದ ಸ್ನಾಯುಗಳ ಉರಿಯೂತದ ಮೇಲೆ ಹೇಗೆ ಪರಿಣಾಮ ಬೀರಲಿವೆ ಎಂದು ಹೇಳುವುದು ಕಷ್ಟ. ಈ ನಿಟ್ಟಿನಲ್ಲಿ ಅಧ್ಯಯನಗಳು ಇನ್ನೂ ನಡೆಯುತ್ತಿವೆ. ಈ ಬಗ್ಗೆ ಲಸಿಕೆಯ ಉಪಯೋಗ-ಅಪಾಯಗಳ ಲೇಬಲ್‌ನಲ್ಲಿ ಸಾರ್ವಜನಿಕರಿಗೆ ಮಾಹಿತಿ ನೀಡಬೇಕು ಎಂದು USFDA ಯು ಮಾಡೆರ್ನಾ ಸಂಸ್ಥೆಗೆ ತಿಳಿಸಿದೆ.

ಕರ್ನಾಟಕದ ಮುಖ್ಯಮಂತ್ರಿಗಳು (Siddaramaiah Siddaramaiah CM Of Karnataka Siddaramaiah CM) ಈಗಾಗಲೇ ಈ ವಿಚಾರದಲ್ಲಿ ಅಧ್ಯಯನ ನಡೆಸುವಂತೆ ಆರೋಗ್ಯ ಇಲಾಖೆಗೆ ಆದೇಶ ನೀಡಿರುವುದು ಬಹಳ ಒಳ್ಳೆಯ ಸಂಗತಿ. ಅಮೆರಿಕದಲ್ಲಿನ ಈ ಹೊಸ ಬೆಳವಣಿಗೆಯು ಕರ್ನಾಟಕದ ಅಧ್ಯಯನ ಸಮಿತಿ “ಸರ್ಕಾರದ ಉದ್ದೇಶವನ್ನು ಗಂಭೀರವಾಗಿ ಪರಿಗಣಿಸುವಂತೆ”, ಎಲ್ಲವನ್ನೂ ಮೇಲುಪದರದಲ್ಲೇ “ಸಬ್ ಚೆಂಗಾಸಿ” ಎಂದು ಗುಡಿಸಿಹಾಕದಂತೆ ಮಾರ್ಗದರ್ಶನ ನೀಡುವಲ್ಲಿ ಅತ್ಯಂತ ಮಹತ್ವದ ಬೆಳವಣಿಗೆ ಆಗಲಿದೆ. ಈ ಬೆಳವಣಿಗೆಯ ಹಿನ್ನೆಲೆಯಲ್ಲಿ ಕೆಲವಾದರೂ ಜೀವಗಳು ಅನಗತ್ಯವಾಗಿ ಸಾವಿಗೀಡಾಗುವುದು ತಪ್ಪಲಿ ಎಂದು ಪ್ರಾರ್ಥನೆ.

USFDA ಯು ಮಾಡೆರ್ನಾಕ್ಕೆ ಬರೆದಿರುವ, ಅಧ್ಯಯನದ ವಿವರಗಳನ್ನೊಳಗೊಂಡ ಪೂರ್ಣ ಪತ್ರದ ಲಿಂಕ್ ಇಲ್ಲಿದೆ: https://www.fda.gov/media/186580/download?attachment

-ರಾಜಾರಾಂ ತಲ್ಲೂರು, ಬರಹಗಾರ

Umesha Bhatta P H

TwittereMail
ಕುಂದೂರು ಉಮೇಶಭಟ್ಟ ಪಿ.ಎಚ್.: 'ಹಿಂದೂಸ್ತಾನ್ ಟೈಮ್ಸ್ ಕನ್ನಡ'ದಲ್ಲಿ ಡೆಪ್ಯುಟಿ ಚೀಫ್ ಕಂಟೆಂಟ್ ಪ್ರೊಡ್ಯೂಸರ್. ವಿಜಯ ಕರ್ನಾಟಕದಲ್ಲಿ ವಿಜಯಪುರ ಬ್ಯೂರೊ ಚೀಫ್ ಸೇರಿ ಹಲವು ಮಹತ್ವದ ಹುದ್ದೆಗಳ ನಿರ್ವಹಣೆ. ಮಲೆನಾಡು ಮಿತ್ರ, ಆಂದೋಲನ ಸೇರಿ ವಿವಿಧ ಪತ್ರಿಕೆಗಳಲ್ಲಿ 25 ವರ್ಷಗಳ ಅನುಭವ. ಪರಿಸರ, ಅರಣ್ಯ, ವನ್ಯಜೀವಿ, ಅಭಿವೃದ್ದಿ, ರಾಜಕೀಯ ಆಸಕ್ತಿ ಕ್ಷೇತ್ರಗಳು. 'ಕಾಡಿನ ಕಥೆಗಳು' ಅಂಕಣ ಬರೆಯುತ್ತಿದ್ದಾರೆ. ದಾವಣಗೆರೆ ಜಿಲ್ಲೆಯ ಕುಂದೂರು ಸ್ವಂತ ಊರು. ಸದ್ಯಕ್ಕೆ ಮೈಸೂರು ನಿವಾಸಿ.