ಬೀದರ್: ಜಲಸಂಗಿ ಗ್ರಾಮದಲ್ಲಿ ಬಿದ್ದ ಸ್ಯಾಟಲೈಟ್ ಪೇಲೋಡ್; ಜನರಲ್ಲಿ ಆತಂಕ ಸೃಷ್ಟಿ
ಕನ್ನಡ ಸುದ್ದಿ  /  ಕರ್ನಾಟಕ  /  ಬೀದರ್: ಜಲಸಂಗಿ ಗ್ರಾಮದಲ್ಲಿ ಬಿದ್ದ ಸ್ಯಾಟಲೈಟ್ ಪೇಲೋಡ್; ಜನರಲ್ಲಿ ಆತಂಕ ಸೃಷ್ಟಿ

ಬೀದರ್: ಜಲಸಂಗಿ ಗ್ರಾಮದಲ್ಲಿ ಬಿದ್ದ ಸ್ಯಾಟಲೈಟ್ ಪೇಲೋಡ್; ಜನರಲ್ಲಿ ಆತಂಕ ಸೃಷ್ಟಿ

ಬೀದರ್‌ ಜಿಲ್ಲೆಯ ಜಲಸಂಗಿ ಗ್ರಾಮದಲ್ಲಿ ಸ್ಯಾಟಲೈಟ್ ಪೇಲೋಡ್ ಬಿದ್ದಿದೆ. ಇದರಿಂದ ಜನರಲ್ಲಿ ಕೆಲಕಾಲ ಆತಂಕ ಸೃಷ್ಟಿಯಾಗಿದೆ. ಸ್ಥಳಕ್ಕೆ ಪೊಲೀಸರು ಬಂದ ಬಳಿಕ, ಯಾವುದೇ ಅಪಾಯ ಇಲ್ಲ ಎಂದು ಗ್ರಾಮದ ಜನರು ನಿರಾಳರಾಗಿದ್ದಾರೆ.

ಬೀದರ್: ಜಲಸಂಗಿ ಗ್ರಾಮದಲ್ಲಿ ಬಿದ್ದ ಸ್ಯಾಟಲೈಟ್ ಪೇಲೋಡ್; ಜನರಲ್ಲಿ ಆತಂಕ ಸೃಷ್ಟಿ
ಬೀದರ್: ಜಲಸಂಗಿ ಗ್ರಾಮದಲ್ಲಿ ಬಿದ್ದ ಸ್ಯಾಟಲೈಟ್ ಪೇಲೋಡ್; ಜನರಲ್ಲಿ ಆತಂಕ ಸೃಷ್ಟಿ

ಬೀದರ್:‌ ಜಿಲ್ಲೆಯ ಹುಮನಾಬಾದ್‌ ತಾಲ್ಲೂಕಿನ ಜಲಸಂಗಿ ಗ್ರಾಮದಲ್ಲಿ ಜನರಿಗೆ ಇಂದು ಬೆಳ್ಳಂಬೆಳಗ್ಗೆ ಅಚ್ಚರಿಯಾಗಿದೆ. ಹವಾಮಾನ ಬದಲಾವಣೆಯ ಅಧ್ಯಯನ ಮಾಡುವ ಸ್ಯಾಟಲೈಟ್ ಪೇಲೋಡ್ ಗ್ರಾಮದಲ್ಲಿ ಬಿದ್ದಿದೆ. ಪೇಲೋಡ್ ಮತ್ತು ಬೆಲೂನ್ ಕೂಡಾ ಗ್ರಾಮದಲ್ಲ ಬಿದ್ದಿದ್ದು, ಜನರಲ್ಲಿ ಕೆಲಕಾಲ ಆತಂಕ ಸೃಷ್ಟಿಯಾಗಿದೆ.

ಬೆಳಗ್ಗಿನ ಜಾವ 6 ಗಂಟೆ ಸುಮಾರಿಗೆ‌ ಮೇಲಿನಿಂದ ಬಂದು ಗ್ರಾಮದ ಬಳಿ ಸ್ಯಾಟಲೈಟ್ ಪೇಲೋಡ್ ಕೂಡಾ ಬಿದ್ದಿದೆ, TIFR (Tata Institute of Fundamental Research) ಕಂಪನಿಯ ಸ್ಯಾಟಲೈಟ್ ಪೇಲೋಡ್ ಬಲೂನ್ ಬಿದ್ದಿರುವುದಾಗಿ ಪ್ರಾಥಮಿಕ ಮಾಹಿತಿ ಲಭ್ಯವಾಗಿದೆ. ದಿಢೀರನೆ ಗ್ರಾಮದಲ್ಲಿ ಬಿದ್ದ ಪೇಲೋಡ್‌ ಕಂಡು ಗ್ರಾಮಸ್ಥರಿಗೆ ಅಚ್ಚರಿಯಾಗಿದೆ. ಆ ಬಳಿಕ ಪೊಲೀಸರಿಗೆ ಮಾಹಿತಿ ನೀಡಲಾಗಿದೆ. ಸ್ಥಳಕ್ಕೆ ಪೊಲೀಸರು ಬಂದ ಬಳಿಕ, ಯಾವುದೇ ಅಪಾಯ ಇಲ್ಲ ಎಂದು ಗ್ರಾಮದ ಜನರು ನಿರಾಳರಾಗಿದ್ದಾರೆ. ಬೆಲೂನ್ ನೋಡಲು ಗ್ರಾಮದಲ್ಲಿ ಜನರ ದಂಡೇ ಸೇರುತ್ತಿದೆ.

ಹವಾಮಾನ ಅಧ್ಯಯನಕ್ಕಾಗಿ ಜನವರಿ 17ರ ಶುಕ್ರವಾರ ರಾತ್ರಿ 10 ಗಂಟೆಗೆ ಹೈದ್ರಾಬಾದ್‌ನಿಂದ ಇದನ್ನು ಉಡಾವಣೆ ಮಾಡಲಾಗಿದೆ. ಈ ಬೇಲೂನ್‌ನ ಕಾರ್ಯ ಅವಧಿ 6ರಿಂದ 7 ಗಂಟೆ ಎಂದು ತಿಳಿದುಬಂದಿದೆ. ಹೈದರಾಬಾದ್‌ನಿಂದ ಬಿಟ್ಟ ಬೆಲೂನ್ ಬಂದು ಬೀದರ್ ಜಿಲ್ಲೆಯ ಹುಮನಾಬಾದ್ ತಾಲೂಕಿನ ಜಲಸಂಗಿ ಗ್ರಾಮದಲ್ಲಿ ಬಂದು ಬಿದ್ದಿದೆ.

ಹಾಳು ಮಾಡದಂತೆ ಮನವಿ

ಇದು ಕೇಂದ್ರ ಸರ್ಕಾರದ ಅಧ್ಯಯನ ಅಡಿಯಲ್ಲಿ ಬರುವ ಸಂಶೋಧನಾ ಸ್ಯಾಟಲೈಟ್ ಪೇಲೋಡ್ ಎಂದು ಮಾಹಿತಿ ಸಿಕ್ಕಿದೆ. ಇದನ್ನು ಹವಾಮಾನ ಬದಲಾವಣೆ ಕುರಿತು ಅಧ್ಯಯನ ಮಾಡಲು ಉಡಾವಣೆ ಮಾಡಲಾಗಿದೆ. ಹವಾಮಾನ ಮಾಹಿತಿ ಪಡೆಯುವ ಸಲುವಾಗಿ ಬಿಟ್ಟ ಪೇಲೋಡ್‌ ಗ್ರಾಮದಲ್ಲಿ ಬಿದ್ದಿದೆ. ಹೀಗಾಗಿ ಈ ಕುರಿತು ಮಾಹಿತಿ ಸಂಗ್ರಹಿಸಲು ಗ್ರಾಮಕ್ಕೆ ಟಾಟಾ ವಿಜ್ಞಾನಿಗಳು ಬರುತ್ತಿದ್ದಾರೆ ಎಂದು ಹೇಳಲಾಗಿದೆ.

ಅಧ್ಯಯನಕ್ಕೆ ಉಡಾವಣೆ ಮಾಡಿದ ಬೆಲೂನ್ ಇದಾಗಿದ್ದು, ಸಿಕ್ಕವರು ಕೂಡಲೇ ಈ ಕೆಳಕಂಡ ನಂಬರ್‌ಗೆ ಕರೆ ಮಾಡಬೇಕು ಎಂದು ನಂಬರ್‌ ಸಹಿತ‌ ಟಾಟಾ ಸಂಸ್ಥೆಯವರು ಅದರ ಮೇಲೆ ಬರೆದಿದ್ದಾರೆ. ಕೆಳಗೆ ಬಿದ್ದ ಬೆಲೂನು ಅನ್ನು ಹಾಳು ಮಾಡಬಾರದು ಎಂದು ಇಂಗ್ಲಿಷ್, ಕನ್ನಡ ಹಾಗೂ ಮರಾಠಿಯಲ್ಲಿ ಬರೆದು ಹಾಕಲಾಗಿದೆ. ಹೀಗಾಗಿ ಯಾವುದನ್ನೂ ಜನರ ಹಾಳು ಮಾಡಿಲ್ಲ.

Whats_app_banner