Dakshina Kannada News: ದಕ್ಷಿಣ ಕನ್ನಡದ ಕರಿಯಂಗಳ ಸಮೀಪ ಮನೆಗಳಿಗೆ ಮಧ್ಯರಾತ್ರಿ ಬೆಂಕಿ, ನಿವಾಸಿಗಳು ಅಪಾಯದಿಂದ ಪಾರು
ಕನ್ನಡ ಸುದ್ದಿ  /  ಕರ್ನಾಟಕ  /  Dakshina Kannada News: ದಕ್ಷಿಣ ಕನ್ನಡದ ಕರಿಯಂಗಳ ಸಮೀಪ ಮನೆಗಳಿಗೆ ಮಧ್ಯರಾತ್ರಿ ಬೆಂಕಿ, ನಿವಾಸಿಗಳು ಅಪಾಯದಿಂದ ಪಾರು

Dakshina Kannada News: ದಕ್ಷಿಣ ಕನ್ನಡದ ಕರಿಯಂಗಳ ಸಮೀಪ ಮನೆಗಳಿಗೆ ಮಧ್ಯರಾತ್ರಿ ಬೆಂಕಿ, ನಿವಾಸಿಗಳು ಅಪಾಯದಿಂದ ಪಾರು

ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲ್ಲೂಕಿನ ಕರಿಯಂಗಳದಲ್ಲಿ ಸೋಮವಾರ ಮಧ್ಯರಾತ್ರಿ ಬೆಂಕಿ ಕಾಣಿಸಿಕೊಂಡು ಕೆಲವು ಮನೆಗಳು ಸುಟ್ಟು ಹೋಗಿವೆ.ವರದಿ: ಹರೀಶ ಮಾಂಬಾಡಿ. ಮಂಗಳೂರು

ದಕ್ಷಿಣ ಕನ್ನಡದಲ್ಲಿ ಸೋಮವಾರ ಮಧ್ಯರಾತ್ರಿ ಮನೆಗಳಿಗೆ ಬೆಂಕಿ ಬಿದ್ದಿದೆ.
ದಕ್ಷಿಣ ಕನ್ನಡದಲ್ಲಿ ಸೋಮವಾರ ಮಧ್ಯರಾತ್ರಿ ಮನೆಗಳಿಗೆ ಬೆಂಕಿ ಬಿದ್ದಿದೆ.

Fire at Dakshina Kannada: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಮಧ್ಯರಾತ್ರಿ ಭಾರೀ ಬೆಂಕಿ ಕಾಣಿಸಿಕೊಂಡಿದೆ. ಬಂಟ್ವಾಳ ತಾಲೂಕಿನ ಕರಿಯಂಗಳ ಗ್ರಾಮದ ಬಡಕಬೈಲ್ ಜಂಕ್ಷನ್ ನ ಬಳಿ 3-4 ಮನೆಗಳಿಗೆ ಸೋಮವಾರ ಮಧ್ಯರಾತ್ರಿ ಅಗ್ನಿ ಆಕಸ್ಮಿಕದಿಂದ ಸಮಸ್ಯೆ ಉಂಟಾಯಿತು. ಮನೆಯವರು ಕೂಡಲೇ ಅಗ್ನಿಶಾಮಕ ದಳಕ್ಕೆ ಕರೆ ಮಾಡಿ ಮಾಹಿತಿ ನೀಡಿದರು. ಅಕ್ಕಪಕ್ಕದ ಮನೆಗಳಿಗೆ ಬೆಂಕಿ ಹಬ್ಬಿದ್ದು ಸ್ಥಳಕ್ಕೆ ಆಗಮಿಸಿದ ಅಗ್ನಿಶಾಮಕ ದಳ ಸ್ಥಳೀಯರ ಸಹಕಾರದೊಂದಿಗೆ ಬೆಂಕಿ ನಂದಿಸಿದರು. ಘಟನೆಯಿಂದ ಭಾರೀ ಅನಾಹುತ ಆಗಿಲ್ಲವಾದರೂ ಮನೆಗಳು ಸುಟ್ಟು ಹೋಗಿವೆ. ರಾತ್ರಿ 1.00 ಗಂಟೆಗೆ ಸ್ಥಳಕ್ಕೆ ಆಗಮಿಸಿ ಅಗ್ನಿಶಾಮಕ ದಳದ ಕಾರ್ಯಾಚರಣೆ ವೀಕ್ಷಣೆ ಮಾಡಿ, ಮನೆಮಂದಿಗೆ ಬಂಟ್ವಾಳ ಶಾಸಕರಾದ ರಾಜೇಶ್ ನಾಯ್ಕ್ ಉಳಿಪ್ಪಾಡಿ ಸಾಂತ್ವನ ಹೇಳಿದರು.

ರಾತ್ರಿ ಊಟ ಮಾಡಿ ಮನೆಯಲ್ಲಿ ಮಲಗಿದ್ಧಾಗ ಒಂದು ಮನೆಯಲ್ಲಿ ಶಾರ್ಟ್‌ ಸರ್ಕೂಟ್‌ನಿಂದ ಬೆಂಕಿ ಕಾಣಿಸಿಕೊಂಡಿದೆ. ಏಕಾಏಕಿ ಬೆಂಕಿ ಪ್ರಮಾಣ ಹೆಚ್ಚಿ ಅಕ್ಕಪಕ್ಕದ ಮನೆಗಳಿಗೂ ಹಬ್ಬಿದೆ. ಮನೆಯಲ್ಲಿದ್ದವರು ಹೊರಗೆ ಬಂದಿದ್ದಾರೆ. ಈ ವೇಳೆ ನೆರೆ ಹೊರೆಯವರ ಸಹಕಾರದಿಂದ ಬೆಂಕಿ ಆರಿಸುವ ಪ್ರಯತ್ನ ಮಾಡಿದರೂ ಆಗಿಲ್ಲ. ಅಗ್ನಿಶಾಮಕ ದಳದವರಿಗೆ ಹಾಗೂ ಪೊಲೀಸರಿಗೆ ಸ್ಥಳೀಯರು ಮಾಹಿತಿ ನೀಡಿದ್ದು, ಕೂಡಲೇ ಧಾವಿಸಿದ ಅಗ್ನಿಶಾಮಕ ದಳದ ವಾಹನಗಳು ಬೆಂಕಿಯನ್ನು ನಂದಿಸಿವೆ. ಮಧ್ಯರಾತ್ರಿ ಒಂದು ಗಂಟೆಗೂ ಹೆಚ್ಚು ಕಾರ್ಯಾಚರಣೆ ನಡೆಸಿ ಬೆಂಕಿ ಇನ್ನಷ್ಟು ಮನೆಗಳಿಗೆ ಹಬ್ಬದಂತೆ ನೋಡಿಕೊಂಡರು. ಈ ವೇಳೆ ಬೆಂಕಿಗೆ ಮನೆಯಲ್ಲಿನ ಹಲವು ವಸ್ತುಗಳು ಸುಟ್ಟು ಹೋಗಿವೆ. ಯಾರಿಗೂ ಬೆಂಕಿಯಿಂದ ಅನಾಹುತ ಆಗಿಲ್ಲ,

ಶಾರ್ಟ್‌ ಸರ್ಕೂಟ್‌ನಿಂದ ಬೆಂಕಿ ಬಿದ್ದು ಅಗ್ನಿ ಅವಘಡ ಸಂಭವಿಸಿರಬಹುದು ಎಂದು ಅಂದಾಜಿಸಲಾಗಿದೆ. ಹೀಗಿದ್ದರು ಬೆಂಕಿ ಅವಘಡಕ್ಕೆ ನಿಖರ ಕಾರಣವನ್ನು ಪತ್ತೆ ಮಾಡಲಾಗುತ್ತಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಮನೆಗಳಿಗೆ ಬೆಂಕಿ ಬಿದ್ದು ನಷ್ಟ ಎಷ್ಟು ಆಗಿದೆ ಎನ್ನುವ ನಿಖರ ಮಾಹಿತಿಯೂ ಇಲ್ಲ. ಮಂಗಳವಾರ ನಷ್ಟದ ಅಂದಾಜು ಸಿಗಲಿದೆ ಎಂದು ಕುಟುಂಬಸ್ಥರು ತಿಳಿಸಿದ್ದಾರೆ.

ವಿಷಯ ತಿಳಿದು ಬಂಟ್ವಾಳ ಶಾಸಕ ರಾಜೇಶ್‌ ನಾಯ್ಕ್‌ ಅವರು ಸ್ಥಳಕ್ಕೆ ಧಾವಿಸಿದರು. ಅಲ್ಲದೇ ಬೆಂಕಿ ನಂದಿಸುವ ಕಾರ್ಯಾಚರಣೆ ಮುಗಿಯುವವರೆಗೂ ಅಲ್ಲಿಯೇ ಇದ್ದು ಸಹಕರಿಸಿದರು. ಅಧಿಕಾರಿಗಳು ಕೂಡ ಭೇಟಿ ನೀಡಿದ್ದರು.

ಬೇಸಿಗೆಯೂ ಈಗಾಗಲೇ ಶುರುವಾಗಿದೆ. ಅದರಲ್ಲೂ ಕರಾವಳಿಯಲ್ಲಿ ಬಿಸಿಲ ಕಾವ ಏರತೊಡಗಿದೆ. ಬಿಸಿಲ ಝಳದಿಂದ ತಪ್ಪಿಸಿಕೊಳ್ಳಲು ಜನ ಮನೆಯಲ್ಲಿ ಫ್ಯಾನ್‌ ಇಲ್ಲವೇ ಕೂಲರ್‌ ಅನ್ನು ಬಳಸುತ್ತಾರೆ. ಈ ವೇಳೆ ಶಾರ್ಟ್‌ ಸರ್ಕೂಟ್‌ ಆಗುವ ಸಂಭವ ಇರುವುದರಿಂದ ಜನ ಎಚ್ಚರಿಕೆ ವಹಿಸಬೇಕು ಎಂದು ತಿಳಿಸಲಾಗಿದೆ.

ವರದಿ: ಹರೀಶ ಮಾಂಬಾಡಿ.ಮಂಗಳೂರು

Whats_app_banner