ಮುಡಾ ದಾಖಲೆಗಳು ಬೈರತಿ ಸುರೇಶ್ ಮನೆಯಲ್ಲಿವೆ; ಶ್ರೀವತ್ಸ ಆರೋಪ, ಸಿದ್ದರಾಮಯ್ಯ ವಿರುದ್ಧ ಯದುವೀರ್, ಮಹೇಶ್ ವಾಗ್ದಾಳಿ
ಕನ್ನಡ ಸುದ್ದಿ  /  ಕರ್ನಾಟಕ  /  ಮುಡಾ ದಾಖಲೆಗಳು ಬೈರತಿ ಸುರೇಶ್ ಮನೆಯಲ್ಲಿವೆ; ಶ್ರೀವತ್ಸ ಆರೋಪ, ಸಿದ್ದರಾಮಯ್ಯ ವಿರುದ್ಧ ಯದುವೀರ್, ಮಹೇಶ್ ವಾಗ್ದಾಳಿ

ಮುಡಾ ದಾಖಲೆಗಳು ಬೈರತಿ ಸುರೇಶ್ ಮನೆಯಲ್ಲಿವೆ; ಶ್ರೀವತ್ಸ ಆರೋಪ, ಸಿದ್ದರಾಮಯ್ಯ ವಿರುದ್ಧ ಯದುವೀರ್, ಮಹೇಶ್ ವಾಗ್ದಾಳಿ

MUDA Case: ಮುಡಾ ಪ್ರಕರಣದ ತನಿಖೆ ಚುರುಕುಗೊಂಡ ಬೆನ್ನಲ್ಲೇ ಸಿಎಂ ಸಿದ್ದರಾಮಯ್ಯ ವಿರುದ್ಧ ಶಾಸಕ ಶ್ರೀವತ್ಸ, ಸಂಸದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್, ಬಿಜೆಪಿ ವಕ್ತಾರ ಮಹೇಶ್ ವಾಗ್ದಾಳಿ ನಡೆಸಿದ್ದಾರೆ.

ಮುಡಾ ದಾಖಲೆಗಳು ಬೈರತಿ ಸುರೇಶ್ ಮನೆಯಲ್ಲಿವೆ; ಶ್ರೀವತ್ಸ ಆರೋಪ, ಸಿದ್ದರಾಮಯ್ಯ ವಿರುದ್ಧ ಯದುವೀರ್, ಮಹೇಶ್ ವಾಗ್ದಾಳಿ
ಮುಡಾ ದಾಖಲೆಗಳು ಬೈರತಿ ಸುರೇಶ್ ಮನೆಯಲ್ಲಿವೆ; ಶ್ರೀವತ್ಸ ಆರೋಪ, ಸಿದ್ದರಾಮಯ್ಯ ವಿರುದ್ಧ ಯದುವೀರ್, ಮಹೇಶ್ ವಾಗ್ದಾಳಿ

ಮೈಸೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ವಿರುದ್ಧ ದಾಖಲಾಗಿರುವ ಮುಡಾ ಪ್ರಕರಣಕ್ಕೆ ಸಂಬಂಧಿಸಿ ಮೈಸೂರು ಲೋಕಾಯುಕ್ತ ಮತ್ತು ಇಡಿ ಅಧಿಕಾರಿಗಳಿಂದ ತನಿಖೆ ಚುರುಕುಗೊಂಡಿದೆ. ಇದರ ನಡುವೆಯೇ ಸಂಸದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಸೇರಿದಂತೆ ಶಾಸಕ ಶ್ರೀವತ್ಸ, ಮಾಜಿ ಶಾಸಕ ಎಲ್ ನಾಗೇಂದ್ರ, ಬಿಜೆಪಿ ವಕ್ತಾರ ಎಂಜಿ ಮಹೇಶ್ ಸೇರಿ ಪ್ರಮುಖರು ಮೈಸೂರಿನ ಬಿಜೆಪಿ ಕಚೇರಿಯಲ್ಲಿ ಜಂಟಿ ಸುದ್ದಿಗೋಷ್ಠಿ ನಡೆಸಿ ಸಿದ್ದರಾಮಯ್ಯ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

ರಾಜೀನಾಮೆಗೆ ಒತ್ತಾಯಿಸಿದ ಯದುವೀರ್​

ಮುಡಾ ಹಗರಣದಲ್ಲಿರುವ ಸಿದ್ದರಾಮಯ್ಯ ನೈತಿಕ ಹೊಣೆ ಹೊತ್ತು ಸಿಎಂ ಸ್ಥಾನಕ್ಕೆ ಕೂಡಲೇ ರಾಜೀನಾಮೆ ನೀಡಬೇಕು ಎಂದು ಯದುವೀರ್ ಒತ್ತಾಯಿಸಿದ್ದಾರೆ. ಮುಡಾ ಅಕ್ರಮದ ವಿರುದ್ಧ ಬಿಜೆಪಿ ನಿರಂತರ ಹೋರಾಟ ನಡೆಸುತ್ತಾ ಬಂದಿದೆ. ಬಿಜೆಪಿಯಿಂದ ಬೆಂಗಳೂರಿನಿಂದ ಮೈಸೂರಿ‌ನವರೆಗೆ ಪಾದಯಾತ್ರೆ ‌ನಡೆಸಲಾಗಿತ್ತು. ಇದೀಗ ಮುಡಾ ಮೇಲೆ ಇಡಿ ದಾಳಿ ‌ನಡೆದಿದೆ. ನಿಷ್ಪಕ್ಷಪಾತ ತನಿಖೆಯ ದೃಷ್ಟಿಯಿಂದ ಸಿಎಂ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಬೇಕು. ಮುಡಾ ಹಗರಣವನ್ನು ಸಿಬಿಐ ತನಿಖೆಗೆ ವಹಿಸಬೇಕು. ಈ ಬಗ್ಗೆ ರಾಜ್ಯಪಾಲರಿಗೂ ಮನವಿ ಸಲ್ಲಿಸುತ್ತೇವೆ ಎಂದು ಹೇಳಿಕೆ ನೀಡಿದ್ದಾರೆ.

ಬೈರತಿ ಸುರೇಶ್ ವಿರುದ್ಧ ಶಾಸಕ ಶ್ರೀವತ್ಸ ಆರೋಪ

ಮುಡಾದ ಮಹತ್ವದ ದಾಖಲೆಗಳನ್ನು ಸಚಿವ ಬೈರತಿ ಸುರೇಶ್ ತೆಗೆದುಕೊಂಡು ಹೋಗಿದ್ದಾರೆ. ಹೀಗಾಗಿ ಇಡಿ ಅಧಿಕಾರಿಗಳು ಸುರೇಶ್ ಮನೆ, ಕಚೇರಿಯ ಮೇಲೂ ದಾಳಿ ಮಾಡಬೇಕು ಎಂದು ಶಾಸಕ ಶ್ರೀವತ್ಸ ಒತ್ತಾಯಿಸಿದ್ದಾರೆ. ಇಡಿ ದಾಳಿ ತೃಪ್ತಿ ತಂದಿದೆ, ಸಮಾಧಾನ ತಂದಿದೆ. ಬೈರತಿ ಸುರೇಶ್, ಈ ಹಿಂದಿನ ಮುಡಾ ಆಯುಕ್ತ ದಿನೇಶ್ ಸಾಕಷ್ಟು ದಾಖಲೆಗಳನ್ನು ತೆಗೆದುಕೊಂಡು ಹೋಗಿದ್ದಾರೆ. ಇಡಿ ದಾಳಿಯಿಂದ ಯಾವೆಲ್ಲಾ ದಾಖಲೆಗಳು ಮಿಸ್ ಆಗಿವೆ ಎಂಬುದು ಇಡಿ ತನಿಖೆಯಿಂದ ಗೊತ್ತಾಗಲಿದೆ. ಸಿಎಂ ಕಚೇರಿ, ಬೈರತಿ ಸುರೇಶ್ ಕಚೇರಿಯಲ್ಲಿ ಹುಡುಕಾಡಿದರೆ ದಾಖಲೆಗಳು ಸಿಗಲಿವೆ ಎಂದಿದ್ದಾರೆ.

ಕಾಂಗ್ರೆಸ್ ಲೂಟಿ ಮಾಡಿದೆ ಎಂದ ಎಂಜಿ ಮಹೇಶ್

ವಾಲ್ಮೀಕಿ ನಿಗಮದ ಹಣವನ್ನು ಲೋಕಸಭಾ ಚುನಾವಣೆ ವೇಳೆ ದುರ್ಬಳಕೆ ಮಾಡಿಕೊಳ್ಳಲಾಗಿದೆ. ಹಿಂದುಳಿದ ವರ್ಗಗಳಿಗೆ ಮೀಸಲಿಟ್ಟಿದ್ದ ಹಣವನ್ನು ಕಾಂಗ್ರೆಸ್ ಲೂಟಿ ಮಾಡಿದೆ. ಹಾಗಾಗಿ ಕಾಂಗ್ರೆಸ್ ಸಂಸದರಾದ ತುಕಾರಾಂ ಹಾಗೂ ಕುಮಾರ್ ನಾಯಕ್ ಅವರನ್ನು ಅನರ್ಹಗೊಳಿಸಬೇಕು. ಈ ಬಗ್ಗೆ ಅಕ್ಟೊಬರ್ 22ರಂದು ಕೇಂದ್ರ ಚುನಾವಣಾ ಆಯೋಗಕ್ಕೆ ಬಿಜೆಪಿ ವತಿಯಿಂದ ಲಿಖಿತ ದೂರು ನೀಡುತ್ತೇವೆ ಎಂದು ರಾಜ್ಯ ಬಿಜೆಪಿ ವಕ್ತಾರ ಎಂಜಿ ಮಹೇಶ್ ಮೈಸೂರಿನಲ್ಲಿ ಹೇಳಿಕೆ ನೀಡಿದ್ದಾರೆ.

ರಾಜ್ಯದಲ್ಲಿ ಬೈ ಎಲೆಕ್ಷನ್ ವಿಚಾರಕ್ಕೆ ಸಂಬಂಧಿಸಿ ಪ್ರತಿಕ್ರಿಯಿಸಿ ಮಾತನಾಡಿದ ಮಹೇಶ್, 3 ಕ್ಷೇತ್ರಗಳಲ್ಲೂ ಮೈತ್ರಿ ಅಭ್ಯರ್ಥಿಗಳೇ ಕಣಕ್ಕಿಳಿಯಲಿದ್ದು, ಮೂವರೂ ಗೆಲ್ಲಲಿದ್ದಾರೆ ಎಂದರು. ಚನ್ನಪಟ್ಟಣ ಕ್ಷೇತ್ರದ ಮೈತ್ರಿ ಅಭ್ಯರ್ಥಿ ಆಯ್ಕೆ ವಿಚಾರಕ್ಕೆ ಉತ್ತರಿಸಿ, 2 ಪಕ್ಷದ ನಾಯಕರು ಕುಳಿತು ಚರ್ಚೆ ಮಾಡುತ್ತಾರೆ. ಅಭ್ಯರ್ಥಿ ಆಯ್ಕೆಯನ್ನು ಹೈಕಮಾಂಡ್ ಫೈನಲ್ ಮಾಡುತ್ತದೆ. ಬೈ ಎಲೆಕ್ಷನ್​ನಲ್ಲಿ 2 ಪಕ್ಷಗಳು ಒಗ್ಗಟ್ಟಾಗಿ ಕೆಲಸ ಮಾಡುತ್ತವೆ. ಯಾವುದೇ ಭಿನ್ನಾಭಿಪ್ರಾಯಗಳು ನಮ್ಮಲ್ಲಿ ಇಲ್ಲ ಎಂದು ಹೇಳಿದ್ದಾರೆ.

Whats_app_banner