ಮುಂಗಾರು ಸಮರ್ಪಕ ನಿರ್ವಹಣೆಗೆ ಕೊಡಗಿನಲ್ಲಿ ನೋಡಲ್ ಅಧಿಕಾರಿಗಳ ನಿಯೋಜನೆ, ವಿದ್ಯುತ್ ಸಮಸ್ಯೆಗೆ ಸಹಾಯವಾಣಿ ಆರಂಭ
ಮುಂಗಾರು ಮಳೆ ಆರಂಭವಾಗುವ ದಿನಗಳು ಸಮೀಪಿಸುತ್ತಿರುವ ನಡುವೆಯೇ ಕೊಡಗಿನಲ್ಲಿ ಜಿಲ್ಲಾಡಳಿತವು ತಯಾರಿಯನ್ನು ಆರಂಭಿಸಿದೆ. ವಿದ್ಯುತ್ ಸಂಬಂಧಿತ ಸಹಾಯವಾಣಿಯನ್ನೂ ಸ್ಥಾಪಿಸಲಾಗಿದೆ.

ಮಡಿಕೇರಿ: ಮುಂಗಾರು 2025 ಈ ಬಾರಿ ನಾಲ್ಕೈದು ದಿನ ಮೊದಲೇ ಕೇರಳ ಪ್ರವೇಶಿಸುವ ಮುನ್ಸೂಚನೆ ದೊರೆತಿದೆ. ಕೇರಳಕ್ಕೆ ಹೊಂದಿಕೊಂಡಂತೆ ಇರುವ ಕರ್ನಾಟಕದ ಕೊಡಗಿನಲ್ಲಿ ಮುಂಗಾರು ಎದುರಿಸಲು ಸಿದ್ದತೆಗಳನ್ನು ಮಾಡಿಕೊಳ್ಳಲಾಗುತ್ತಿದೆ.ಕೊಡಗು ಜಿಲ್ಲಾಡಳಿತವು ಮುಂಗಾರು ಸಂಬಂಧ ನೋಡಲ್ ಅಧಿಕಾರಿಗಳು ಹಾಗೂ ಎಂಜಿನಿಯರ್‍ಗಳು ಈಗಿನಿಂದಲೇ ಅಗತ್ಯ ಮುನ್ನೆಚ್ಚರಿಕಾ ಕ್ರಮ ಕೈಗೊಳ್ಳುವಂತೆ ಕಟ್ಟುನಿಟ್ಟಿನ ಸೂಚನೆ ನೀಡಿದೆ. ಇಲ್ಲದೇ ಮುಂಗಾರು ಮಳೆಯ ವೇಳೆ ಅನಾಹುತಗಳಾದರೆ ಅವುಗಳಿಗೆ ಪರಿಹಾರ ಕಂಡುಕೊಳ್ಳಲು ಚಾಮುಂಡೇಶ್ವರಿ ವಿದ್ಯುತ್ ಸರಬರಾಜು ನಿಗಮ( ಸೆಸ್ಕ್) ಸಹಾಯವಾಣಿಯನ್ನು ಆರಂಭಿಸಿದೆ. ದೂರಿನ ಜತೆಗೆ ಗ್ರಾಹಕರು ಸಂಪರ್ಕಿಸಲು ಸಾಧ್ಯವಾಗದಿದ್ದಲ್ಲಿ ಪರ್ಯಾಯವಾಗಿ ವಾಟ್ಸಪ್ ಮೂಲಕ ಪೋಟೋ ಸಂದೇಶ ನೀಡಬಹುದಾಗಿದೆ ಎಂದು ತಿಳಿಸಲಾಗಿದೆ.
ಕೊಡಗು ಜಿಲ್ಲಾಧಿಕಾರಿ ಅವರ ಕಚೇರಿ ಸಭಾಂಗಣದಲ್ಲಿ ‘ಜಿಲ್ಲಾ ವಿಪತ್ತು ನಿರ್ವಹಣಾ ಪ್ರಾಧಿಕಾರ ಸಭೆ’ಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಜಿಲ್ಲಾಧಿಕಾರಿ ವೆಂಕಟ್ ರಾಜಾ,ಜಿಲ್ಲೆಯಲ್ಲಿ ಜೂನ್ ತಿಂಗಳಲ್ಲಿ ಮುಂಗಾರು ಆರಂಭವಾಗುವ ಸಾಧ್ಯತೆ ಇದೆ. ಆದ್ದರಿಂದ ವ್ಯಾಪಕ ಮಳೆಯಿಂದ ಸಂಭವಿಸಬಹುದಾದ ಅನಾಹುತವನ್ನು ತಡೆಯುವ ನಿಟ್ಟಿನಲ್ಲಿ ಅಗತ್ಯ ಮುನ್ನೆಚ್ಚರಿಕಾ ಕ್ರಮ ಕೈಗೊಳ್ಳಬೇಕು. ಮುಂಗಾರು ಸಂದರ್ಭದಲ್ಲಿ ಯಾವುದೇ ರೀತಿಯ ಪ್ರಾಣ ಹಾನಿ, ಜಾನುವಾರು ಹಾನಿಯಾಗದಂತೆ ಎಚ್ಚರವಹಿಸಬೇಕು ಎಂದು ಜಿಲ್ಲಾಧಿಕಾರಿ ಅವರು ಸೂಚಿಸಿದರು.
ನೋಡೆಲ್ ಅಧಿಕಾರಿಗಳ ಕೆಲಸ ಏನು
ಈಗಾಗಲೇ ನೋಡಲ್ ಅಧಿಕಾರಿಗಳನ್ನು ನಿಯೋಜಿಸಲಾಗಿದ್ದು, ತಮ್ಮ ತಮ್ಮ ವ್ಯಾಪ್ತಿಯಲ್ಲಿ ಅಗತ್ಯ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಂಡು ಸೂಕ್ಷ್ಮ ಪ್ರದೇಶಗಳಲ್ಲಿ ಹೆಚ್ಚಿನ ನಿಗಾವಹಿಸಬೇಕು ಎಂದು ಹೇಳಿದರು.
ಪ್ರವಾಹ ಪೀಡಿತ ಪ್ರದೇಶಗಳಲ್ಲಿ ಜನರ ಸುರಕ್ಷತೆ ಕಾಪಾಡುವ ನಿಟ್ಟಿನಲ್ಲಿ ಅಗ್ನಿಶಾಮಕ ಸಿಬ್ಬಂದಿಗಳು ಅಗತ್ಯ ಸಿದ್ಧತೆ ಮಾಡಿಕೊಳ್ಳಬೇಕು. ಎನ್‍ಡಿಆರ್‍ಎಫ್ ತಂಡದ ಜೊತೆ ಸಮನ್ವಯ ಸಾಧಿಸಬೇಕು ಎಂದು ವೆಂಕಟ್ ರಾಜಾ ಅವರು ತಿಳಿಸಿದರು.
ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಅಧಿಕಾರಿಗಳು ಔಷಧಿಗಳನ್ನು ದಾಸ್ತಾನು ಮಾಡಿಕೊಂಡು ಮುಂಗಾರು ಸಂದರ್ಭದಲ್ಲಿ ಸಾಂಕ್ರಾಮಿಕ ರೋಗಗಳು ಉಲ್ಭಣಗೊಳ್ಳದಂತೆ ಹೆಚ್ಚಿನ ಜಾಗೃತಿ ಮೂಡಿಸಬೇಕು ಎಂದು ಹೇಳಿದರು.
ಸೂಕ್ಷ್ಮ ಮತ್ತು ಅತಿ ಸೂಕ್ಷ್ಮ ಪ್ರದೇಶಗಳಲ್ಲಿ ಹೆಚ್ಚಿನ ಎಚ್ಚರವಹಿಸಬೇಕು. ಲೋಕೋಪಯೋಗಿ, ಪಂಚಾಯತ್ ರಾಜ್ ಇಲಾಖೆ ಎಂಜಿನಿಯರ್‍ಗಳು ತಮ್ಮ ತಮ್ಮ ವ್ಯಾಪ್ತಿಯ ರಸ್ತೆಯನ್ನು ಸರಿಪಡಿಸಬೇಕು ಎಂದು ಸೂಚಿಸಿದರು.
ಇಲಾಖೆಗಳ ಸಮನ್ವಯ
ಪೊಲೀಸ್, ಕಂದಾಯ, ಪಂಚಾಯತ್ ರಾಜ್, ಲೋಕೋಪಯೋಗಿ, ಅಗ್ನಿಶಾಮಕ ಹೀಗೆ ವಿವಿಧ ಇಲಾಖೆ ಅಧಿಕಾರಿಗಳು ತಮ್ಮ ತಮ್ಮ ಇಲಾಖಾ ವ್ಯಾಪ್ತಿಯಲ್ಲಿ ಆಗಬೇಕಿರುವ ಕಾರ್ಯಗಳ ಬಗ್ಗೆ ಅಗತ್ಯ ಕ್ರಮವಹಿಸುವಂತೆ ಜಿಲ್ಲಾಧಿಕಾರಿ ಅವರು ಹೇಳಿದರು.
ಹೆಚ್ಚುವರಿ ಜಿಲ್ಲಾಧಿಕಾರಿ ಆರ್.ಐಶ್ವರ್ಯ, ಉಪ ವಿಭಾಗಾಧಿಕಾರಿ ವಿನಾಯಕ ನರ್ವಡೆ, ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ದಿನೇಶ್ ಕುಮಾರ್, ಜಿಲ್ಲಾ ಹಾಗೂ ತಾಲ್ಲೂಕು ಮಟ್ಟದ ಅಧಿಕಾರಿಗಳು ಇತರರು ಇದ್ದರು.
ವಿದ್ಯುತ್ ಅಡಚಣೆ: ಸಹಾಯವಾಣಿ ಕೇಂದ್ರ ಆರಂಭ
ಮುಂಗಾರು ಸಂದರ್ಭದಲ್ಲಿ ವಿದ್ಯುತ್ ಅವಘಡಗಳು ಸಂಭವಿಸುವ ಸಾಧ್ಯತೆ ಇದೆ. ಸಾರ್ವಜನಿಕರು ಯಾವುದೇ ರೀತಿಯ ವಿದ್ಯುತ್ ಜಾಲದ ವ್ಯತ್ಯಯಗಳನ್ನು (ವಿದ್ಯುತ್ ಮಾರ್ಗದ ತಂತಿ ಹಾಗೂ ಕಂಬಗಳು ತುಂಡಾಗುವುದು) ಗಮನಿಸಿದಲ್ಲಿ, ಸ್ವತಃ ಕ್ರಮಕೈಗೊಳ್ಳದೇ (ವಿದ್ಯುತ್ ತಂತಿ ಸ್ಪರ್ಶಿಸದೇ) ತಕ್ಷಣ ಚಾ.ವಿ.ಸ.ನಿನಿ.ಯ ದೂರವಾಣಿ ಸಂಖ್ಯೆಗಳಲ್ಲಿ ತಮ್ಮ ದೂರುಗಳನ್ನು ದಾಖಲಿಸುವಂತೆ ಕೋರಿದೆ. ಗ್ರಾಹಕರು ಸಂಪರ್ಕಿಸಲು ಸಾಧ್ಯವಾಗದಿದ್ದಲ್ಲಿ ಪರ್ಯಾಯವಾಗಿ ವಾಟ್ಸಪ್ ಮೂಲಕ ಪೋಟೋ ಸಂದೇಶ ನೀಡಬಹುದಾಗಿದೆ.
ಕೊಡಗು ಜಿಲ್ಲೆಯ (24*7) ಸಹಾಯವಾಣಿ ಸಂಖ್ಯೆ ಸರ್ವೀಸ್ ಸೆಂಟರ್‍ನ ದೂರವಾಣಿ ಸಂಖ್ಯೆ 1912, ಗ್ರಾಹಕರ ಸೇವಾ ಕೇಂದ್ರ ಸಂಖ್ಯೆ 9449598665.
ಮಡಿಕೇರಿ ತಾಲ್ಲೂಕಿನ ಮಡಿಕೇರಿ ತಾಳತ್‍ಮನೆ, ಮೂರ್ನಾಡು, ಸಂಪಾಜೆ, ಭಾಗಮಂಡಲ, ನಾಪೋಕ್ಲು ಹಾಗೂ ಗ್ರಾಹಕರ ಸೇವಾ ಕೇಂದ್ರಕ್ಕೆ ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್ ವಿನಯ ಕುಮಾರ್ 9449598602, ಸಹಾಯಕ/ ಜೂನಿಯರ್ ಎಂಜಿನಿಯರ್‍ಗಳು ಮಡಿಕೇರಿಗೆ ಚೈತ್ರ 9449598603, ತಾಳತ್‍ಮನೆ ಹೇಮಂತ್ ರಾಜ್ 9449598604, ಮೂರ್ನಾಡು ಶಾಖೆಗೆ ತೇಜ 9449598605, ಸಂಪಾಜೆಗೆ ಅನಿಲ್ ಕುಮಾರ್ 9448994851, ಭಾಗಮಂಡಲ ಹರಿಣಾಕ್ಷಿ 9480810344, ನಾಪೋಕ್ಲು ಶಾಖೆಗೆ ಹರೀಶ್ 9449598606 ಹಾಗೂ ಗ್ರಾಹಕರ ಸೇವಾ ಕೇಂದ್ರ ದೂ.ಸಂ. 08272-248454 ಮತ್ತು 9449598665.
ಕುಶಾಲನಗರ ತಾಲ್ಲೂಕಿನ ಸುಂಟಿಕೊಪ್ಪ, ಕುಶಾಲನಗರ, ಕೂಡಿಗೆ, ಮಾದಾಪುರ, ಚೆಟ್ಟಳ್ಳಿ, ಗ್ರಾಹಕರ ಸೇವಾ ಕೇಂದ್ರಕ್ಕೆ ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್ ಮಂಜುನಾಥ 9449598538, ಸಹಾಯಕ/ಜೂನಿಯರ್ ಎಂಜಿನಿಯರ್‍ಗಳು ಸುಂಟಿಕೊಪ್ಪ ಶಾಖೆಗೆ ಲವಕುಮಾರ್ ಕೆ.ಎ. 9449598615, ಕುಶಾಲನಗರ ಸೋಮೇಶ್ ಕೆ.ವಿ. 9449598589, ಕೂಡಿಗೆ ಶಾಖೆಗೆ ರಾಣಿ 9449598613, ಮಾದಾಪುರ ನಿರಂಜನ್ ಎಸ್.ಜಿ. 9449598588, ಚೆಟ್ಟಳ್ಳಿ ಮಂಜುನಾಥ ಜೆ.ಆರ್.9448499965 ಹಾಗೂ ಗ್ರಾಹಕರ ಸೇವಾ ಕೇಂದ್ರ 08276-271046.
ಸೋಮವಾರಪೇಟೆ ತಾಲ್ಲೂಕಿನ ಸೋಮವಾರಪೇಟೆ, ಶನಿವಾರಸಂತೆ, ಕೊಡ್ಲಿಪೇಟೆ, ಆಲೂರು ಸಿದ್ದಾಪುರ, ಶಾಂತಳ್ಳಿ, ಗ್ರಾಹಕರ ಸೇವಾ ಕೇಂದ್ರ ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್ ವಿನಯ ಕುಮಾರ್ 9449598612, ಸಹಾಯಕ/ಜೂನಿಯರ್ ಎಂಜಿನಿಯರ್‍ಗಳು ಸೋಮವಾರಪೇಟೆ ಶಾಖೆಗೆ ಶಿವಪ್ರಸಾದ್ 9449598614, ಶನಿವಾರಸಂತೆ ಸುದೀಪ್ ಕುಮಾರ್ 9449598616, ಕೊಡ್ಲಿಪೇಟೆ ಶಾಖೆಗೆ ಪ್ರಕಾಶ್ 9449598617, ಆಲೂರು ಸಿದ್ದಾಪುರ ಮನುಕುಮಾರ್ 9449598622, ಶಾಂತಳ್ಳಿ ಎಚ್.ಡಿ.ಲೋಕೇಶ್(ಪ್ರಭಾರ) 9480837509, ಗ್ರಾಹಕರ ಸೇವಾ ಕೇಂದ್ರ 9448283394.
ವಿರಾಜಪೇಟೆ ತಾಲ್ಲೂಕಿನ ವಿರಾಜಪೇಟೆ, ಅಮ್ಮತ್ತಿ, ಸಿದ್ದಾಪುರ, ಪಾಲಿಬೆಟ್ಟ, ಗ್ರಾಹಕರ ಸೇವಾ ಕೇಂದ್ರಕ್ಕೆ ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್ ಸುರೇಶ್ 9480837545, ಸಹಾಯಕ/ಜೂನಿಯರ್ ಎಂಜಿನಿಯರ್‍ಗಳು ವಿರಾಜಪೇಟೆಗೆ ಅಭಿಷೇಕ್ 9449598610, ಅಮ್ಮತ್ತಿ ಮನೋಜ್ 9448994344, ಸಿದ್ದಾಪುರ ಶಾಖೆಗೆ ಸ್ವರಾಗ್ 9449598611, ಪಾಲಿಬೆಟ್ಟ ಶಿವರಾಜ 9448994341, ಗ್ರಾಹಕರ ಸೇವಾ ಕೇಂದ್ರ 9448289410.
ಪೊನ್ನಂಪೇಟೆ ತಾಲ್ಲೂಕಿನ ಗೋಣಿಕೊಪ್ಪಲು, ಶ್ರೀಮಂಗಲ, ಬಾಳೆಲೆ ಹಾಗೂ ಗ್ರಾಹಕರ ಸೇವಾ ಕೇಂದ್ರ ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್ ಸತೀಶ್ 9449598607, ಸಹಾಯಕ/ಜೂನಿಯರ್ ಎಂಜಿನಿಯರ್‍ಗಳು ಗೋಣಿಕೊಪ್ಪ ಶಾಖೆಗೆ ಹೇಮಂತ್ ಕುಮಾರ್ 9449598608, ಶ್ರೀಮಂಗಲ ನಾಗೇಂದ್ರ ಪ್ರಸಾದ್ 9449598609, ಬಾಳೆಲೆ ಶಾಖೆಗೆ ರಂಗಸ್ವಾಮಿ 9449597484, ಗ್ರಾಹಕರ ಸೇವಾ ಕೇಂದ್ರ 9448283394 ಹಾಗೂ ಕಾರ್ಯನಿರ್ವಾಹಕ ಎಂಜಿನಿಯರ್(ವಿ) ಎಂ.ರಾಮಚಂದ್ರ ದೂ.ಸಂ. 9449598601 ನ್ನು ಸಂಪರ್ಕಿಸಬಹುದು ಎಂದು ಮಡಿಕೇರಿ ವಿಭಾಗದ ಸೆಸ್ಕ್ ಕಾರ್ಯನಿರ್ವಾಹಕ ಎಂಜಿನಿಯರ್ ರಾಮಚಂದ್ರ ಅವರು ತಿಳಿಸಿದ್ದಾರೆ.
ವಿಭಾಗ