ಮದರ್ಸ್ ಡೇಗೆ ವಂಡರ್ ಲಾ ಕಡೆಯಿಂದ ಸ್ಪೆಷಲ್ ಆಫರ್; ಮೇ 10, 11ಕ್ಕೆ ಅಮ್ಮಂದಿರಿಗೆ ಪ್ರವೇಶ ಉಚಿತ
ಮದರ್ಸ್ ಡೇ ಸಲುವಾಗಿ ವಂಡರ್ಲಾ ಅಮ್ಮಂದಿರಿಗಾಗಿ ವಿಶೇಷ ಆಫರ್ ಒಂದನ್ನು ನೀಡುತ್ತಿದೆ. ಮೇ 10 ಹಾಗೂ 11ಕ್ಕೆ ಎಲ್ಲಾ ತಾಯಂದಿರಿಗೂ ವಂಡರ್ಲಾದಲ್ಲಿ ಉಚಿತ ಪ್ರವೇಶಕ್ಕೆ ಅವಕಾಶ ಕಲ್ಪಿಸಿದೆ. ಈ ಕುರಿತ ಹೆಚ್ಚಿನ ಮಾಹಿತಿ ಇಲ್ಲಿದೆ.

ಪ್ರತಿ ವರ್ಷ ಮೇ ತಿಂಗಳ ಎರಡನೇ ಭಾನುವಾರ ಪ್ರಪಂಚದಾದ್ಯಂತ ಮದರ್ಸ್ ಡೇ ಅಥವಾ ತಾಯಂದಿರ ದಿನವನ್ನು ಆಚರಿಸಲಾಗುತ್ತದೆ. ಈ ವರ್ಷ ಮೇ 11ಕ್ಕೆ ತಾಯಂದಿರ ದಿನವಿದ್ದು, ಈ ವರ್ಷ ನೀವು ನಿಮ್ಮ ಅಮ್ಮನಿಗೆ ವಿಶೇಷ ಗಿಫ್ಟ್ ಕೊಡಬೇಕು ಅಥವಾ ತಾಯಂದಿರ ದಿನವನ್ನು ವಿಶೇಷವಾಗಿ ಆಚರಿಸಬೇಕು ಅಂತಿದ್ರೆ ಅವರನ್ನು ವಂಡರ್ಲಾಗೆ ಕರೆದುಕೊಂಡು ಹೋಗಿ.
ವಂಡರ್ ಲಾ ಮದರ್ಸ್ ಡೇ ಸಲುವಾಗಿ ವಿಶೇಷ ಆಫರ್ವೊಂದನ್ನು ನೀಡುತ್ತಿದೆ. ಈ ವಿಶೇಷ ದಿನದ ಸಲುವಾಗಿ ಎಲ್ಲಾ ತಾಯಂದಿರಿಗೂ ಉಚಿತ ಪ್ರವೇಶಕ್ಕೆ ಅವಕಾಶ ಕೊಡ್ತಿದೆ. ದೇಶದಾದ್ಯಂತ ಇರುವ ವಂಡರ್ ಲಾ ಅಮ್ಯೂಸ್ಮೆಂಟ್ ಪಾರ್ಕ್ಗಳಲ್ಲಿ ಮೇ 10 ಹಾಗೂ 11 ರಂದು ಪ್ರವೇಶ ಉಚಿತ ಪ್ರವೇಶಕ್ಕೆ ಅವಕಾಶವಿದೆ.
ಬೆಂಗಳೂರು, ಕೊಚ್ಚಿ, ಹೈದರಾಬಾದ್ ಹಾಗೂ ಭುವನೇಶ್ವರದಲ್ಲಿರುವ ವಂಡರ್ ಲಾದಲ್ಲಿ ಈ ವಿಶೇಷ ಆಫರ್ ಇದ್ದು, ತಾಯಂದಿರ ದಿನವನ್ನು ವಿಶೇಷವನ್ನಾಗಿಸಲು ಈ ಸೂಪರ್ ಅವಕಾಶವನ್ನು ನೀವೂ ಬಳಸಿಕೊಳ್ಳಬಹುದು.
ಪ್ರತಿದಿನ ಮಕ್ಕಳು, ಗಂಡ, ಮನೆ, ಕೆಲಸ ಎಂದು ತನ್ನ ಜೀವನವನ್ನು ಮುಡಿಪಾಗಿಡುವ ತಾಯಿಗಾಗಿ ಅವಳ ದಿನದಂದು ಏನಾದ್ರೂ ವಿಶೇಷ ಮಾಡಬೇಕು ಅಂತಿದ್ರೆ ನೀವು ಕುಟುಂಬದವರೆಲ್ಲಾ ಸೇರಿ ವಂಡರ್ಲಾಗೆ ಭೇಟಿ ನೀಡಿ ಎಂಜಾಯ್ ಮಾಡಬಹುದು.
ವಂಡರ್ಲಾದಲ್ಲಿ ಹತ್ತು ಹಲವು ರೀತಿಯ ಆಟಗಳಿದ್ದು, ಮನೆಯವರೆಲ್ಲಾ ಸೇರಿ ಸಖತ್ ಎಂಜಾಯ್ ಮಾಡಬಹುದು. ಈ ಬಾರಿಯ ಅಮ್ಮಂದಿರ ದಿನವನ್ನು ನೀವು ವಂಡರ್ಲಾದಲ್ಲಿ ಆಚರಿಸಿದ್ರೆ ಖಂಡಿತ ಇದು ನಿಮ್ಮ ಬದುಕಿನ ಅತ್ಯಂತ ಸುಂದರ ಕ್ಷಣಗಳಲ್ಲಿ ಒಂದಾಗೋದು ಖಂಡಿತ.
ಉಚಿತ ಟಿಕೆಟ್ ಪಡೆಯಲು ಏನು ಮಾಡಬೇಕು?
ಈ ವಿಶೇಷ ಆಫರ್ ಆನ್ಲೈನ್ನಲ್ಲಿ ಕನಿಷ್ಠ 3 ಟಿಕೆಟ್ ಖರೀದಿ ಮಾಡುವ ಕುಟುಂಬಗಳಿಗೆ ಅನ್ವಯಿಸುತ್ತದೆ. ಇದರಲ್ಲಿ ಒಂದು ಮಗುವನ್ನು ಕೂಡ ಸೇರಿಸಿಕೊಳ್ಳಬಹುದು. ತಂದೆ, ಮಗು ಹಾಗೂ ತಾಯಿ 3 ಜನಕ್ಕೆ ಟಿಕೆಟ್ ಬುಕ್ ಮಾಡಿದ್ರೆ ತಾಯಿಗೆ ಟಿಕೆಟ್ ಫ್ರಿ ಇರುತ್ತದೆ. ಇದರಲ್ಲಿ ಎಂಟ್ರಿ ಟಿಕೆಟ್ ಹಾಗೂ ಊಟದ ಕಾಂಬೊ ಕೂಡ ಸೇರಿದೆ. ಈ ಉಚಿತ ಟಿಕೆಟ್ನಲ್ಲಿ ನೀವು ಒಂದಿಡೀ ದಿನ ವಂಡರ್ಲಾದಲ್ಲಿ ಎಂಜಾಯ್ ಮಾಡಬಹುದು. ಆನ್ಲೈನ್ನಲ್ಲಿ ಬುಕ್ಕಿಂಗ್ ಮಾಡಿದವರಿಗೆ ಮಾತ್ರ ಈ ಆಫರ್ ಲಭ್ಯವಿರುತ್ತದೆ.
ಈ ವಿಶೇಷ ಆಫರ್ ಮೂಲಕ ವಂಡರ್ಲಾ ಅಮ್ಮಂದಿರ ದಿನವನ್ನು ವಿಶೇಷವನ್ನಾಗಿಸಲು ಹೊರಟಿದೆ. ಇದರೊಂದಿಗೆ ಮಾಮ್ ಅಂಡ್ ಮಿ ಆಟಗಳು, ಜುಂಬಾ ಅವಧಿ, ಕೇಕ್ ಡೆಕೊರೇಷನ್ ಸೆಷನ್, ಲೈವ್ ಎಂಟರ್ಟೈನ್ಮೆಂಟ್ ಈ ಎಲ್ಲವನ್ನೂ ತಾಯಂದಿರು ತಮ್ಮ ಕುಟುಂಬದವರ ಜೊತೆ ಎಂಜಾಯ್ ಮಾಡಬಹುದು.
ಕೆಲವು ವಂಡರ್ಲಾ ಅಮ್ಯೂಸ್ಮೆಂಟ್ ಪಾರ್ಕ್ಗಳಲ್ಲಿ ವಿಶೇಷವಾಗಿ ತಾಯಂದಿರಿಗಾಗಿ ಮಸಾಜ್ ಕುರ್ಚಿಗಳು ಮತ್ತು ಫಿಶ್ ಸ್ಪಾ ಕೂಡ ಇರುತ್ತವೆ. ಕೆಲವು ಕಡೆ ತಾಯಂದಿರಿಗಾಗಿ ವಿಶೇಷ ಸ್ಪರ್ಧೆಗಳನ್ನು ಕೂ ಏರ್ಪಡಿಸಲಾಗುತ್ತದೆ.
‘ನಾವು ಸಾಮಾನ್ಯ ಉಡುಗೊರೆಗಳನ್ನು ಮೀರಿ ಈ ವರ್ಷ ತಾಯಂದಿರ ದಿನದಂದು ನಿಜವಾಗಿಯೂ ಅರ್ಥಪೂರ್ಣವಾಗಿರುವುದನ್ನು ಮಾಡಲು ಬಯಸಿದ್ದೇವೆ‘ ಎಂದು ಎಂದು ವಂಡರ್ಲಾ ಹಾಲಿಡೇಸ್ ಲಿಮಿಟೆಡ್ನ ಧೀರನ್ ಸಿಂಗ್ ಚೌಧರಿ ಹೇಳಿದ್ದಾರೆ.
‘ವಂಡರ್ಲಾದಲ್ಲಿ ನೀವು ತಾಯಿಗೆ ನೀಡಿದ ಕೊಡಬಹುದಾದ ಅತ್ಯುತ್ತಮ ಉಡುಗೊರೆ ಎಂದರೆ ಸಮಯ ಎಂದು ನಾವು ನಂಬುತ್ತೇವೆ. ಈ ವಿಶೇಷ ಕೊಡುಗೆಯು ಕುಟುಂಬಗಳು ದೈನಂದಿನ ಕೆಲಸ, ಒತ್ತಡಗಳಿಂದ ದೂರ ಸರಿದು ಒಟ್ಟಿಗೆ ಸಂತೋಷದಾಯಕ, ಶಾಶ್ವತವಾದ ನೆನಪುಗಳನ್ನು ಸೃಷ್ಟಿಸಲು ಪ್ರೋತ್ಸಾಹಿಸುವ ಮಾರ್ಗವಾಗಿದೆ. ಈ ಮದರ್ಸ್ ಡೇ ನಿಮ್ಮ ತಾಯಿಯ ಪಾಲಿಗೆ ಮಾತ್ರವಲ್ಲ, ನಿಮ್ಮ ಪಾಲಿಗೂ ವಿಶೇಷವಾಗಿರಲಿದೆ ಎಂದು ನಾವು ಭಾವಿಸುತ್ತೇವೆ‘ ಎಂದು ಅವರು ಹೇಳಿದ್ದಾರೆ.
ಟಿಕೆಟ್ ಬುಕ್ಕಿಂಗ್ ವಿವರ
ವಂಡರ್ಲಾಗೆ ಭೇಟಿ ಕೊಡಲು ಇಷ್ಟಪಡುವವರು ಪ್ರವೇಶ ಟಿಕೆಟ್ಗಳನ್ನು https://bookings.wonderla.com/ ನಲ್ಲಿ ಆನ್ಲೈನ್ ಪೋರ್ಟಲ್ ಮೂಲಕ ಮುಂಚಿತವಾಗಿ ಬುಕ್ ಮಾಡಿಕೊಳ್ಳಬಹುದು ಅಥವಾ ನೇರವಾಗಿ ಪಾರ್ಕ್ ಕೌಂಟರ್ಗಳಿಂದ ಟಿಕೆಟ್ ಪಡೆಯಬಹುದು. ಹೆಚ್ಚಿನ ಮಾಹಿತಿಗೆ
ಬೆಂಗಳೂರು ಪಾರ್ಕ್: +91 80372 30333 ಅಥವಾ +91 9945557777
ಕೊಚ್ಚಿ ಪಾರ್ಕ್: 0484-3514001 ಅಥವಾ 75938 53107
ಹೈದ್ರಾಬಾದ್ ಪಾರ್ಕ್: 084 146 76333 ಅಥವಾ +91 91000 63636
ಭುವನೇಶ್ವರ ಪಾರ್ಕ್: 0674 – 6640300 ಸಂಪರ್ಕಿಸಿ.
ವಿಭಾಗ