MUDA Case: ತನಿಖಾಧಿಕಾರಿಗಳ ಕಾರ್ಯವೈಖರಿ ಏನು, ಸಿಎಂ ಸಿದ್ದರಾಮಯ್ಯ ಮುಂದಿರುವ ಆಯ್ಕೆಗಳೇನು, ಎದುರಾಗುವ ಸವಾಲುಗಳೇನು?-muda case what is the conduct of the investigators cm siddaramaiah will face further choices what are the challenges prs ,ಕರ್ನಾಟಕ ಸುದ್ದಿ
ಕನ್ನಡ ಸುದ್ದಿ  /  ಕರ್ನಾಟಕ  /  Muda Case: ತನಿಖಾಧಿಕಾರಿಗಳ ಕಾರ್ಯವೈಖರಿ ಏನು, ಸಿಎಂ ಸಿದ್ದರಾಮಯ್ಯ ಮುಂದಿರುವ ಆಯ್ಕೆಗಳೇನು, ಎದುರಾಗುವ ಸವಾಲುಗಳೇನು?

MUDA Case: ತನಿಖಾಧಿಕಾರಿಗಳ ಕಾರ್ಯವೈಖರಿ ಏನು, ಸಿಎಂ ಸಿದ್ದರಾಮಯ್ಯ ಮುಂದಿರುವ ಆಯ್ಕೆಗಳೇನು, ಎದುರಾಗುವ ಸವಾಲುಗಳೇನು?

MUDA Case: ಮುಡಾ‌ ಪ್ರಕರಣದಲ್ಲಿ ಸಿಎಂ ಸಿದ್ದರಾಮಯ್ಯ ವಿರುದ್ಧ ಎಫ್​ಐಆರ್ ದಾಖಲಾದ ಹಿನ್ನೆಲೆ ತನಿಖಾಧಿಕಾರಿಗಳ ಕಾರ್ಯವೈಖರಿ ಏನು? ಸಿಎಂ ಸಿದ್ದರಾಮಯ್ಯ ಮುಂದಿರುವ ಆಯ್ಕೆಗಳೇನು? ಮುಖ್ಯಮಂತ್ರಿಗೆ ಎದುರಾಗುವ ಸವಾಲುಗಳೇನು? ಇಲ್ಲಿದೆ ವಿವರ.

ಸಿಎಂ ಸಿದ್ದರಾಮಯ್ಯ
ಸಿಎಂ ಸಿದ್ದರಾಮಯ್ಯ

ಮೈಸೂರು: ಮುಡಾ ಹಗರಣಕ್ಕೆ ಸಂಬಂಧಿಸಿ ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ಮೈಸೂರು ಲೋಕಾಯುಕ್ತದಲ್ಲಿ ಪ್ರಕರಣ ದಾಖಲಾಗಿದೆ. ಈ ಪ್ರಕರಣದಲ್ಲಿ ಸಿಎಂ ಮೊದಲ ಆರೋಪಿಯಾಗಿದ್ದರೆ, ಅವರ ಪತ್ನಿ ಪಾರ್ವತಿ ಎ2 ಆರೋಪಿಯಾಗಿದ್ದಾರೆ. ಬಾಮೈದ ಮಲ್ಲಿಕಾರ್ಜುನ್ ಎ3, ಭೂಮಿ ಮಾರಾಟಗಾರ ದೇವರಾಜ್ ಎ4 ಆರೋಪಿ. ಹಾಗಿದ್ದರೆ ಸಿಎಂ ವಿರುದ್ಧ ಎಫ್​ಐಆರ್ ದಾಖಲಾದ ಹಿನ್ನೆಲೆ ತನಿಖಾಧಿಕಾರಿಗಳ ಕಾರ್ಯವೈಖರಿ ಏನು? ಸಿದ್ದರಾಮಯ್ಯ ಮುಂದಿರುವ ಆಯ್ಕೆಗಳೇನು? ಮುಖ್ಯಮಂತ್ರಿಗೆ ಎದುರಾಗುವ ಸವಾಲುಗಳೇನು? ಇಲ್ಲಿದೆ ವಿವರ.

1. ಎಫ್​​ಐಆರ್ ನಂತರ ಆರೋಪಿಗಳಿಗೆ ತನಿಖಾಧಿಕಾರಿ ನೋಟಿಸ್ ಕೊಡಬೇಕು

2. ಸಿಆರ್‌ಪಿಸಿ 41 ಅಡಿಯಲ್ಲಿ ನೋಟಿಸ್ ಜಾರಿ ಮಾಡಬೇಕು

3. ಮುಡಾದಲ್ಲಿ ಮೂಲ‌ ದಾಖಲೆಗಳನ್ನು ವಶಪಡಿಸಿಕೊಳ್ಳುವುದು

4. ಆರೋಪಿಗಳಿಂದ ದಾಖಲೆಗಳನ್ನು ವಶಪಡಿಸಿಕೊಳ್ಳುವುದು

5. ಆಯಾ ಸಂದರ್ಭದಲ್ಲಿದ್ದ ಮುಡಾ ಅಧಿಕಾರಿಗಳನ್ನು ಪತ್ತೆ ಹಚ್ಚುವುದು

6. ಆ ಅಧಿಕಾರಿಗಳಿಗೆ ನೋಟಿಸ್ ಜಾರಿ ಮಾಡುವುದು

7. ಹೆಚ್ಚುವರಿ ಆರೋಪಿಗಳು ಕಂಡುಬಂದರೆ ಅವರನ್ನು ಕೇಸಿಗೆ ಸೇರಿಸುವುದು

8. ಈ ಪ್ರಕರಣದಲ್ಲಿ ಅಧಿಕಾರಿಗಳು ಕೂಡ ಸೇರುತ್ತಾರೆ

9. ನಂತರ ದಾಖಲೆಗಳ ಫೋರ್ಜರಿಯಾಗಿದ್ದರೆ ಅಂತಹ ದಾಖಲೆಗಳನ್ನು ಎಫ್‌ಎಸ್ ಎಲ್ ವರದಿ ಕೋರುವುದು.

ಸಿದ್ದರಾಮಯ್ಯ ಅವರ ಮುಂದಿನ ಆಯ್ಕೆಗಳು

1. ಸಿಆರ್​ಪಿಸಿ 438 ಅಡಿಯಲ್ಲಿ ಜನಪ್ರತಿನಿಧಿಗಳ ನ್ಯಾಯಾಲಯದಲ್ಲಿ ಬೇಲ್ ಅರ್ಜಿ ಹಾಕುವುದು

2. ಬೇಲ್ ಜೊತೆಗೆ 482ರ ಅಡಿಯಲ್ಲಿ ನೇರವಾಗಿ ಹೈಕೋರ್ಟ್‌ಗೆ ಪ್ರಕರಣ ರದ್ಧತಿ ಕೋರಿ ಅರ್ಜಿ ಹಾಗು ತನಿಖೆಗೆ ತಾತ್ಕಲಿಕ ತಡೆಯಾಜ್ಞೆ ಕೋರಿ ಅರ್ಜಿ ಸಲ್ಲಿಸಬಹುದು

3. ಎಫ್‌ಐಆರ್ ಮಾಡಿರುವುದನ್ನು ಚಾಲೆಂಜ್ ಮಾಡುವುದು

4. ನ್ಯಾಯಾಲಯದ ಆದೇಶವನ್ನೇ ಹೈ‌ಕೋರ್ಟ್​​ನಲ್ಲಿ ಚಾಲೆಂಜ್ ಮಾಡಬಹುದು

5. ಹೈಕೋರ್ಟ್ ಮಾಡಿರುವ ಆದೇಶವನ್ನು ಸುಪ್ರೀಂಕೋರ್ಟ್​ಗೆ ಹೋಗುವುದು

ಸಿದ್ದರಾಮಯ್ಯಗೆ ಇರುವ ಸವಾಲುಗಳು

1. ದಸರಾ ಪ್ರಯುಕ್ತ ನ್ಯಾಯಾಲಯಗಳು ಅಕ್ಟೋಬರ್ 2 ರಿಂದ 13 ರವರಗೆ ರಜೆ ಇರುವುದು ಸಮಸ್ಯೆ

2. ನಿರಂತರವಾಗಿ ಜಡ್ಜ್ ಸೆಟ್ಟಿಂಗ್ ಕೂರದಿರುವುದು ವಿಳಂಬವಾಗಬಹುದು

3. ನ್ಯಾಯಾಧೀಶರು ರಜೆಯಲ್ಲಿರುವ ಕಾರಣ ತುರ್ತು ಆದೇಶ ನಿರಾಕರಿಸುವ ಸಾಧ್ಯತೆ ಹೆಚ್ಚು

ತನಿಖಾಧಿಕಾರಿಗಳ ಕಾರ್ಯವೈಖರಿ

1. ಆರೋಪಿಗಳಿಗೆ ನೋಟಿಸ್ ಜಾರಿ ಮಾಡಿ ದಾಖಲೆಗಳ ಪರಿಶೀಲನೆ‌ ಮಾಡಬಹುದು

2. ದಸ್ತಗಿರಿ ಮಾಡದೇ ತನಿಖೆ ನಡೆಸಬಹುದು

3. ಸಾಕ್ಷ್ಯ‌ನಾಶ ಕಂಡು ಬಂದರೆ ಅಂತಹ ಸಂದರ್ಭದಲ್ಲಿ ಅವರನ್ನು ಬಂಧಿಸಬಹುದು

4. ತನಿಖೆ ಸಂದರ್ಭದಲ್ಲಿ ಎಲ್ಲಾ‌ ಆರೋಪಿಗಳನ್ನು ಬಂಧಿಸಬಹುದು, ಬಂಧಿಸದೆಯೂ ಇರಬಹುದು

5. ಆರೋಪಿಗಳನ್ನು ದಸ್ತಗಿರಿ ಮಾಡುವುದು ಬಂಧಿಸುವುದು ವಿಳಂಬವಾಗಬಹದು

ಇದೆಲ್ಲದರ‌ ನಡುವೆ ಒಂದು ವೇಳೆ ದಸ್ತಗಿರಿ ಆದರೆ ಸಿಆರ್​​ಪಿಸಿ 439 ಅಡಿ ಬೇಲ್ ಅರ್ಜಿ ಹಾಕಬೇಕಾಗುತ್ತದೆ. ಅಂತಹ ಸಂದರ್ಭದಲ್ಲೂ‌ ಕೂಡ ಪಿಪಿ ತಕರಾರು ಸಲ್ಲಿಸಿದರೆ ಬೇಲ್‌ ವಿಳಂಬವಾಗಬಹುದು.

mysore-dasara_Entry_Point