ಮುತ್ತಪ್ಪ ರೈ ಪುತ್ರ ರಿಕ್ಕಿ ರೈ ಮೇಲೆ ಗುಂಡಿನ ದಾಳಿ; ಕೂದಲೆಳೆ ಅಂತರದಲ್ಲಿ ಪಾರು, ಹತ್ಯೆಗೆ ಸಂಚು ನಡೆಸಿದ್ದು ಯಾರು?
ಕನ್ನಡ ಸುದ್ದಿ  /  ಕರ್ನಾಟಕ  /  ಮುತ್ತಪ್ಪ ರೈ ಪುತ್ರ ರಿಕ್ಕಿ ರೈ ಮೇಲೆ ಗುಂಡಿನ ದಾಳಿ; ಕೂದಲೆಳೆ ಅಂತರದಲ್ಲಿ ಪಾರು, ಹತ್ಯೆಗೆ ಸಂಚು ನಡೆಸಿದ್ದು ಯಾರು?

ಮುತ್ತಪ್ಪ ರೈ ಪುತ್ರ ರಿಕ್ಕಿ ರೈ ಮೇಲೆ ಗುಂಡಿನ ದಾಳಿ; ಕೂದಲೆಳೆ ಅಂತರದಲ್ಲಿ ಪಾರು, ಹತ್ಯೆಗೆ ಸಂಚು ನಡೆಸಿದ್ದು ಯಾರು?

ಬೆಂಗಳೂರು ಹೊರ ವಲಯದ ಬಿಡದಿ ಬಳಿ ಮುತ್ತಪ್ಪರೈ ಅವರ ಪುತ್ರ ರಿಕ್ಕಿ ರೈ ಹತ್ಯೆಗೆ ಗುಂಡಿನ ದಾಳಿ ನಡೆದಿದ್ದು, ಈ ವೇಳೆ ರಿಕ್ಕಿ ರೈ ಪಾರಾಗಿದ್ದಾರೆ. ಈ ಸಂಬಂಧ ಬಿಡದಿ ಪೊಲೀಸರು ತನಿಖೆ ಚುರುಕುಗೊಳಿಸಿದ್ದಾರೆವರದಿ: ಎಚ್‌.ಮಾರುತಿ, ಬೆಂಗಳೂರು

ಮುತ್ತಪ್ಪ ರೈ ಪುತ್ರ ರಿಕ್ಕಿ ರೈ ಮೇಲೆ ಗುಂಡಿನ ದಾಳಿ ನಡೆದಿದೆ.
ಮುತ್ತಪ್ಪ ರೈ ಪುತ್ರ ರಿಕ್ಕಿ ರೈ ಮೇಲೆ ಗುಂಡಿನ ದಾಳಿ ನಡೆದಿದೆ.

ಬೆಂಗಳೂರು: ಗತಕಾಲದ ಭೂಗತಲೋಕದ ಡಾನ್‌ ಮುತ್ತಪ್ಪ ರೈ ಪುತ್ರ ರಿಕ್ಕಿ ರೈ ಮೇಲೆ ಮಧ್ಯರಾತ್ರಿಯಲ್ಲಿ ಗುಂಡಿನ ದಾಳಿ ನಡೆದಿದ್ದು ಕೂದಲೆಳೆ ಅಂತರದಲ್ಲಿ ಪಾರಾಗಿದ್ದಾರೆ. ರಾಮನಗರ ತಾಲೂಕಿನ ಬಿಡದಿಯ ಅವರ ಭವ್ಯ ಬಂಗಲೆಯ ಸಮೀಪವೇ ಈ ದಾಳಿ ನಡೆದಿದೆ. ಸದ್ಯಕ್ಕೆ ಬೆಂಗಳೂರಿನ ಮಣಿಪಾಲ್ ಆಸ್ಪತ್ರೆಯಲ್ಲಿ ರಿಕ್ಕಿ ರೈಗೆ ಚಿಕಿತ್ಸೆ ಮುಂದುವರೆದಿದೆ. ಗುಂಡು ಹಾರಿಸಿದ ಘಟನೆಗೆ ಸಂಬಂಧಿಸಿದಂತೆ ರಿಕ್ಕಿ ಕಾರು ಚಾಲಕ ಬಸವರಾಜು ಬಿಡದಿಠಾಣೆಗೆ ದೂರು ನೀಡಿದ್ದಾರೆ. ರಿಕ್ಕಿ ರೈ ಮೊದಲ ಪತ್ನಿ ಮೊದಲ ಪತ್ನಿ ಅನ್ನಪೂರ್ಣ, ರಾಕೇಶ್ ಮಲ್ಲಿ ಹಾಗೂ ನಿತೇಶ್ ರಿಯಲ್‌ ಎಸ್ಟೇಟ್ ಕಂಪನಿ ವಿರುದ್ಧ ದೂರು ದಾಖಲಿಸಲಾಗಿದೆ.

ಸಾಮಾನ್ಯವಾಗಿ ಯಾವಾಗಲೂ ರಿಕ್ಕಿ ಕಾರು ಚಾಲನೆ ಮಾಡುತ್ತಿದ್ದರು. ಅವರ ಅದೃಷ್ಟ ಚೆನ್ನಾಗಿತ್ತೇನೋ? ಕಾರು ಚಾಲಕ ಬಸವರಾಜು ಡ್ರೈವಿಂಗ್‌ ಮಾಡುತ್ತಿದ್ದರು. ಮನೆಯಿಂದ ಹೊರ ಬರುತ್ತಿದ್ದಂತೆ ಏಕಾಏಕಿ ಗುಂಡು ಹಾರಿಸಲಾಗಿದೆ. ಆಗ ಬಸವರಾಜು ಮುಂದೆ ಬಾಗಿ ಬಚಾವ್‌ ಆಗಿದ್ದಾರೆ. ಗುಂಡು ಪಕ್ಕದಲ್ಲಿ ಕುಳಿತಿದ್ದ ರಿಕ್ಕಿ ಗೆ ತಗುಲಿದ್ದು, ಅವರ ಕೈ ಮತ್ತು ಮೂಗಿಗೆ ಗಂಭೀರ ಗಾಯಗಳಾಗಿವೆ.

ಈ ದಾಳಿ ಹಿಂದೆ ಭೂಗತ ಲೋಕದ ಕೈವಾಡ ಇರುವ ಅನುಮಾಗಳು ವ್ಯಕ್ತವಾಗಿವೆ. ರಿಕ್ಕಿ ತಂದೆಮುತ್ತಪ್ಪ ರೈ ಅವರ ಮೇಲಿನ ದ್ವೇಷ, ರಿಕ್ಕಿ ಮೇಲಿನ ವೈಯಕ್ತಿಕ ದ್ವೇಷಕ್ಕೆ ದಾಳಿ ನಡೆದಿದೆ ಎನ್ನಲಾಗಿದೆ.

ರೈ ಕುಟುಂಬದ ವಕೀಲ ನಾರಾಯಣಸ್ವಾಮಿ ಪ್ರತಿಕ್ರಿಯಿಸಿ ರಿಕ್ಕಿ ರೈಗೆ ಬೆದರಿಕೆ ಇತ್ತು, ಕೆಲವರ ಮೇಲೆ ಅನುಮಾನವಿದೆ. ಆಸ್ತಿ ವಿಚಾರವಾಗಿ ಗೊಂದಲ ಇತ್ತು. ಮುತ್ತಪ್ಪ ರೈ ಅವರ ಎರಡನೇ ಪತ್ನಿಗೆ ಸಂಬಂದಿಸಿದ ಆಸ್ತಿ ಪ್ರಕರಣಕ್ಕೆ ಸಂಬಂಧಿಸಿದಂತೆ ನ್ಯಾಯಾಲಯದಲ್ಲಿ ವಿಚಾರಣೆ ನಡೆಯುತ್ತಿದೆ. ಉದ್ದೇಶಪೂರ್ವಕವಾಗಿಯೇ ಈ ದಾಳಿ ನಡೆದಿದೆ ಎಂದಿದ್ದಾರೆ.ಇನ್ನು ಆರೋಪಿಗಳ ಪತ್ತೆಗಾಗಿ 4 ವಿಶೇಷ ತಂಡಗಳನ್ನು ರಚಿಸಲಾಗಿದೆ.

ರಾಮನಗರ ಎಸ್ಪಿ ಶ್ರೀನಿವಾಸಗೌಡ ಮಾತನಾಡಿ ಬಿಡದಿ ಇನ್ಸ್‌ ಪೆಕ್ಟರ್‌ ಶಂಕರ್‌ ನೇತೃತ್ವದಲ್ಲಿ ಸ್ಥಳ ಪರಿಶೀಲನೆ ಮಾಡಲಾಗಿದೆ.ಘಟನೆ ಸಂಬಂಧ ಬಿಡಿದಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಲಾಗಿದ್ದು, ಚಾಲಕ ದೂರುದಾರ ಬಸವರಾಜ್ ನೀಡಿದ ದೂರಿನ ಮೇಲೆ ಎಫ್ ಐ ಆರ್ ದಾಖಲಾಗಿದೆ.

ರಾಕೇಶ್ ಮಲ್ಲಿ, ಮೊದಲನೇ ಪತ್ನಿ ಅನ್ನಪೂರ್ಣ, ನಿತೀಶ್ ಎಸ್ಟೇಟ್ ಮಾಲೀಕ ನಿತೀಶ್ ಶೆಟ್ಟಿ ಮತ್ತು ವೈದ್ಯನಾಥ ಎಂಬುವರ ಮೇಲೆ ದೂರು ದಾಖಲಾಗಿದೆ. ಘಟನಾ ಸ್ಥಳದಲ್ಲಿ ಸಿಕ್ಕ ವಸ್ತುಗಳನ್ನು ಎಫ್‌ ಎಸ್‌ ಎಲ್‌ ಪರೀಕ್ಷೆಗೆ ಕಳುಹಿಸಲಾಗಿದೆ.ಎಂದಿದ್ದಾರೆ. ರಿಕ್ಕಿ ರೈಗೆ ಗಂಭೀರ ಗಾಯಗಳಾಗಿದ್ದು, ಚಿಕಿತ್ಸೆ ನಡೆಯುತ್ತಿದೆ.

ರಿಕ್ಕಿ ವಿಚಾರಣೆ ನಡೆಸಿ ಮಾಹಿತಿ ಕಲೆ ಹಾಕಬೇಕಾಗಿದೆ. ಮೇಲ್ನೋಟಕ್ಕೆ ಒಂದು ಸುತ್ತು ಫೈರ್ ಆಗಿರುವ ಸಾಧ್ಯತೆ ಇದೆ. ಇದರ ಹಿಂದೆ ಯಾರಿದ್ದಾರೆ ಎನ್ನುವ ಕುರಿತು ಪೊಲೀಸ್‌ ತಂಡಗಳು ಮಾಹಿತಿ ಸಂಗ್ರಹಿಸುತ್ತಿದ್ದಾರೆ ಎಂದು ಎಸ್ಪಿ ತಿಳಿಸಿದ್ದಾರೆ.

ಮುತ್ತಪ್ಪ ರೈ ಸಾವಿನ ಬಳಿಕ ಆಸ್ತಿ ವಿಚಾರಕ್ಕೆ ಸಂಬಂಧಿಸಿದಂತೆ ಕಲಹವಿತ್ತು.ಮುತ್ತಪ್ಪ ರೈ ಅವರ ಮೊದಲ ಪತ್ನಿ, ಎರಡನೇ ಪತ್ನಿ ಮಕ್ಕಳ ನಡುವೆ ಆಸ್ತಿ ವಿಚಾರಕ್ಕೆಜಗಳವಿತ್ತು. ಬಿಡದಿಯಲ್ಲಿ ಮುತ್ತಪ್ಪ ರೈ ಸಂಬಂಧಿ ಪ್ರಕಾಶ್ ರೈ ಮಾಹಿತಿ ನೀಡಿ ಸೆಕ್ಯುರಿಟಿ ಗಾರ್ಡ್‌ ರಾತ್ರಿಯೇ ನನಗೆ ಫೋನ್ ಮಾಡಿದ್ದರು. ಮುತ್ತಪ್ಪ ರೈ ಕುಟುಂಬದ ಮೇಲೆ ಹಲವಾರು ಮಂದಿಗೆ ದ್ವೇಷ ಇದೆ. ಆಸ್ತಿ ವಿಚಾರಕ್ಕೂ ಸಂಬಂಧಿಸಿದಂತೆಯೂ ವಿವಾದಗಳಿವೆ. ಬೆಂಗಳೂರಿನಲ್ಲಿದ್ದಾಗ ರಿಕ್ಕಿ ಬಹುತೇಕ ಸಮಯವನ್ನು ಬಿಡದಿಯಲ್ಲಿ ಕಳೆಯುತ್ತಿದ್ದ. ಬೆಂಗಳೂರಿನ ಸದಾಶಿವ ನಗರದಲ್ಲೂ ಮನೆ ಇದ್ದು ಬಹುಶಃ ಅಲ್ಲಿಗೆ ಹೊರಟಿದ್ದಾಗ ಈ ದಾಳಿ ನಡೆದಿರಬಹುದು ಎಂದು ಶಂಕಿಸಿದ್ದಾರೆ.

ಮುತ್ತಪ್ಪ ರೈ ಬದುಕಿರುವಾಗಲೇ ರಿಕ್ಕಿ ಮೊದಲ ಪತ್ನಿಯಿಂದ ವಿಚ್ಛೇದನ ಪಡೆದುಕೊಂಡಿದ್ದರು. ಎರಡನೇ ಪತ್ನಿ ವಿದೇಶದವರಾಗಿದ್ದು, ಅವರು ಮಗು ಜತೆ ಅವರ ದೇಶದಲ್ಲಿಯೇ ಉಳಿದುಕೊಂಡಿದ್ದಾರೆ. ರಿಕ್ಕಿಯೂ ಹೆಚ್ಚಿನ ಸಮಯವನ್ನು ಅಲ್ಲಿಯೇ ಕಳೆಯುತ್ತಿದ್ದರು ಎಂದು ಮೂಲಗಳು ತಿಳಿಸಿವೆ.

ವರದಿ: ಎಚ್.‌ ಮಾರುತಿ, ಬೆಂಗಳೂರು

Umesha Bhatta P H

TwittereMail
ಕುಂದೂರು ಉಮೇಶಭಟ್ಟ ಪಿ.ಎಚ್.: 'ಹಿಂದೂಸ್ತಾನ್ ಟೈಮ್ಸ್ ಕನ್ನಡ'ದಲ್ಲಿ ಡೆಪ್ಯುಟಿ ಚೀಫ್ ಕಂಟೆಂಟ್ ಪ್ರೊಡ್ಯೂಸರ್. ವಿಜಯ ಕರ್ನಾಟಕದಲ್ಲಿ ವಿಜಯಪುರ ಬ್ಯೂರೊ ಚೀಫ್ ಸೇರಿ ಹಲವು ಮಹತ್ವದ ಹುದ್ದೆಗಳ ನಿರ್ವಹಣೆ. ಮಲೆನಾಡು ಮಿತ್ರ, ಆಂದೋಲನ ಸೇರಿ ವಿವಿಧ ಪತ್ರಿಕೆಗಳಲ್ಲಿ 25 ವರ್ಷಗಳ ಅನುಭವ. ಪರಿಸರ, ಅರಣ್ಯ, ವನ್ಯಜೀವಿ, ಅಭಿವೃದ್ದಿ, ರಾಜಕೀಯ ಆಸಕ್ತಿ ಕ್ಷೇತ್ರಗಳು. 'ಕಾಡಿನ ಕಥೆಗಳು' ಅಂಕಣ ಬರೆಯುತ್ತಿದ್ದಾರೆ. ದಾವಣಗೆರೆ ಜಿಲ್ಲೆಯ ಕುಂದೂರು ಸ್ವಂತ ಊರು. ಸದ್ಯಕ್ಕೆ ಮೈಸೂರು ನಿವಾಸಿ.