Kannada News  /  Karnataka  /  Mylara Lingeshwara Karnika 2023: Ambali Halasithu Kambali Beesithale Parak
Mylara lingeshwara karnika 2023: ಅಂಬಲಿ ಹಳಸಿತು, ಕಂಬಳಿ ಬೀಸಿತಲೇ ಪರಾಕ್‌, ಕಾರಣಿಕದ ನುಡಿಗೆ ಇದೆ ಹಲವು ಅರ್ಥ
Mylara lingeshwara karnika 2023: ಅಂಬಲಿ ಹಳಸಿತು, ಕಂಬಳಿ ಬೀಸಿತಲೇ ಪರಾಕ್‌, ಕಾರಣಿಕದ ನುಡಿಗೆ ಇದೆ ಹಲವು ಅರ್ಥ (DIPR VIJAYANAGARA)

Mylara lingeshwara karnika 2023: ಅಂಬಲಿ ಹಳಸಿತು, ಕಂಬಳಿ ಬೀಸಿತಲೇ ಪರಾಕ್‌, ಗೊರವಯ್ಯ ರಾಮಪ್ಪಜ್ಜ ನುಡಿದ ಕಾರಣಿಕದ ನುಡಿಗಿದೆ ಹಲವು ಅರ್ಥ

07 February 2023, 20:42 ISTHT Kannada Desk
07 February 2023, 20:42 IST

Mylara lingeshwara karnika: ಗೊರವಯ್ಯ ರಾಮಪ್ಪಜ್ಜ ನುಡಿದ ಅಂಬಲಿ ಹಳಸಿತು, ಕಂಬಳಿ ಬೀಸಿತಲೇ ಪರಾಕ್‌ ಕಾರಣಿಕದ ನುಡಿಯು ಭವಿಷ್ಯದ ಶುಭನುಡಿಯೆಂದು ಜನರು ವಿಶ್ಲೇಷಿಸುತ್ತಿದ್ದಾರೆ. 

ಮೈಲಾರ(ವಿಜಯನಗರ): ವಿಜಯನಗರ ಜಿಲ್ಲೆಯ ಐತಿಹಾಸಿಕ ಶ್ರೀ ಕ್ಷೇತ್ರ ಮೈಲಾರಲಿಂಗೇಶ್ವರ ವಾರ್ಷಿಕೋತ್ಸವ ಇಂದು ಅದ್ಧೂರಿಯಾಗಿ ಜರುಗಿದ್ದು, ಗೊರವಯ್ಯ ರಾಮಪ್ಪಜ್ಜ ನುಡಿದ ಅಂಬಲಿ ಹಳಸಿತು, ಕಂಬಳಿ ಬೀಸಿತಲೇ ಪರಾಕ್‌ ಕಾರಣಿಕದ ನುಡಿಯು ಭವಿಷ್ಯದ ಶುಭನುಡಿಯೆಂದು ಜನರು ವಿಶ್ಲೇಷಿಸುತ್ತಿದ್ದಾರೆ.

ಟ್ರೆಂಡಿಂಗ್​ ಸುದ್ದಿ

ಅಂಬಲಿ ಹಳಸಿತು, ಕಂಬಳಿ ಬೀಸಿತಲೇ ಪರಾಕ್‌

ವರದಿಗಳ ಪ್ರಕಾರ, ದೇವಸ್ಥಾನದ ಧರ್ಮದರ್ಶಿ ವೆಂಕಪ್ಪಯ್ಯ ಒಡೆಯರ್ ಅವರು ಅಂಬಲಿ ಹಳಸಿತು, ಕಂಬಳಿ ಬೀಸಿತಲೇ ಪರಾಕ್‌ ಎಂದರೆ "ಈ ಹಿಂದೆಯೂ ಕಾರಣಿಕ ಆಗಿದ್ದು, ಈಗ ಮತ್ತೆ ಆಗಿದೆ ಎಂದು ವಿಶ್ಲೇಷಣೆ ಮಾಡಿದ್ದಾರೆ.

ಈ ಕಾರಣಿಕವನ್ನು ಜನರು ತಮ್ಮ ಭಾವಕ್ಕೆ ತಕ್ಕಂತೆ ವಿಶ್ಲೇಷಣೆ ಮಾಡುತ್ತಿದ್ದಾರೆ. ಈ ನುಡಿಯನ್ನು ರಾಜಕೀಯವಾಗಿ, ಸಾಮಾಜಿಕವಾಗಿ ವಿವಿಧ ಅರ್ಥಗಳಲ್ಲಿ ವಿಶ್ಲೇಷಣೆ ಮಾಡಲಾಗುತ್ತದೆ.

ಕಾಂಗ್ರೆಸ್, ಬಿಜೆಪಿ, ಜೆಡಿಎಸ್ ಪಕ್ಷದಲ್ಲಿ ನಿಷ್ಠೆಯಿಂದಿರುವ ನಾಯಕರಿಗೆ ರಾಜ್ಯದ ಮುಖ್ಯಮಂತ್ರಿ ಪಟ್ಟ ಸಾಧ್ಯತೆ ಎನ್ನುವುದು ಮೈಲಾರ ಕಾರ್ಣಿಕದ ರಾಜಕೀಯವಾಗಿ ವಿಶ್ಲೇಷಣೆಯಾಗಿದೆ ಎಂದು ವರದಿಯೊಂದು ತಿಳಿಸಿದೆ. ಪ್ರಾಮಾಣಿಕವಾಗಿ, ನಿಷ್ಠಯಿಂದ ಇರುವ ವ್ಯಕ್ತಿಯು ರಾಜ್ಯ ಹಾಗೂ ರಾಷ್ಟ್ರವನ್ನಾಳುತ್ತಾನೆ. ಭಗವಂತ ದೈವವಾಣಿ ಮೂಲಕ ಇದನ್ನು ತಿಳಿಸಿದ್ದಾನೆ ಎಂದು ರಾಜಕೀಯವಾಗಿ ಈ ಕಾರಣಿಕದ ನುಡಿಯನ್ನು ವಿಶ್ಲೇಷಿಸಲಾಗಿದೆ.

ರೈತಾಪಿ ವರ್ಗವು ಇದನ್ನು ತಮಗೆ ಬೇಕಾದಂತೆ ವಿಶ್ಲೇಷಣೆ ಮಾಡಿದೆ. ರೈತರ ಪ್ರಕಾರ, ಇನ್ನು ಮಳೆ ಬೆಳೆ ಜಾಸ್ತಿ ಆಗಲಿದ್ದು ಸಮೃದ್ಧಿಯಾಗಿ ರೈತರಿಗೆ ಒಳ್ಳೆಯದಾಗುತ್ತದೆ. ರೈತರಿಗೆ ಬೆಳೆದ ಬೆಳೆ ಸಿಗುತ್ತದೆ, ಎನ್ನುವ ಸೂಚನೆ ಮೈಲಾರಲಿಂಗೇಶ್ವರ ಕಾರ್ಣಿಕದಲ್ಲಿ ಸಿಕ್ಕಿದೆ. ಇದರ ಜೊತೆಗೆ ಮಳೆ ಜಾಸ್ತಿಯಾಗಿ ಬೆಳೆ ಹಾನಿಯಾಗಲಿದೆ ಎಂದು ವಿಶ್ಲೇಷಣೆ ಮಾಡಿದ್ದಾರೆ.

ಅಂಬಲಿ ಹಳಸಿತು, ಕಂಬಳಿ ಬೀಸಿತಲೇ ಪರಾಕ್‌
ಅಂಬಲಿ ಹಳಸಿತು, ಕಂಬಳಿ ಬೀಸಿತಲೇ ಪರಾಕ್‌

ಇನ್ನು ಮಳೆ ಬೆಳೆ ಜಾಸ್ತಿ ಆಗಲಿದ್ದು ಸಮೃದ್ಧಿಯಾಗಿ ರೈತರಿಗೆ ಒಳ್ಳೆಯದಾಗುತ್ತದೆ. ರೈತರಿಗೆ ಬೆಳೆದ ಬೆಳೆ ಸಿಗುತ್ತದೆ, ಎನ್ನುವ ಸೂಚನೆ ಮೈಲಾರಲಿಂಗೇಶ್ವರ ಕಾರ್ಣಿಕದಲ್ಲಿ ಸಿಕ್ಕಿದೆ. ಇದರ ಜೊತೆಗೆ ಮಳೆ ಜಾಸ್ತಿಯಾಗಿ ಬೆಳೆ ಹಾನಿಯಾಗಲಿದೆ ಎಂದು ಈ ಕಾರಣಿಕದ ನುಡಿಯನ್ನು ಮಾಜಿ ಸಚಿವ ಬಸವರಾಜ್ ಶಿವಣ್ಣ ವಿಶ್ಲೇಷಣೆ ಮಾಡಿದ್ದಾರೆ. ಅವರ ಪ್ರಕಾರ ಅಂಬಳಿ ಹಳಸಿತ್ತು ಎಂದರೆ ಒಳ್ಳೆಯ ಬೆಳೆ ಈ ಬಾರಿ ಬರಲಿದೆ. ನಮ್ಮ ಜನ ಹಾಗೂ ರೈತರಿಗೆ ಊಟ ಮಾಡಿ ಹಳಸುವಷ್ಟು ಬೆಳೆ ಬರುತ್ತದೆ ಎಂದು ಅವರು ವಿಶ್ಲೇಷಣೆ ಮಾಡಿದ್ದಾರೆ. ಕಂಬಳಿ ಬಿಸಿತಲೆ ಎಂದರೆ ವಿಶೇಷವಾಗಿ ಸಾಮಾಜಿಕ ನ್ಯಾಯ ಹಿನ್ನಲೆಯಲ್ಲಿ ಇರುವ ಉತ್ತಮ ವ್ಯಕ್ತಿ, ರಾಜ್ಯದ ಮುಖ್ಯಮಂತ್ರಿ ಆಗುತ್ತಾರೆ ಎಂದು ಅವರು ವಿಶ್ಲೇಷಿಸಿದ್ದಾರೆ.

ಭಾಗ್ಯದ ನಿಧಿ ತುಂಬಿ ತುಳುಕಿತ್ತಲೇ ಪರಾಕ್

ನಿನ್ನೆ ಹರಪನಹಳ್ಳಿ ಪಟ್ಟಣದ ಹೊರವಲಯದಲ್ಲಿರುವ ದೇಗುಲದಲ್ಲಿ ಮೈಲಾರ ಗೊರವಯ್ಯ ಕಾರ್ಣಿಕವನ್ನು ನುಡಿದಿದ್ದರು. ಗೊರವಯ್ಯ ಬಿಲ್ಲನ್ನು ಏರಿ , ಭಾಗ್ಯದ ನಿಧಿ ತುಂಬಿ ತುಳುಕಿತ್ತಲೇ ಪರಾಕ್ ಎಂದು ಕಾರ್ಣಿಕ ನುಡಿದರು. ಈ ವಾಕ್ಯವನ್ನು ಕೇಳಿದ ಜನರು ಇದು ಶುಭದ ನುಡಿ ಎಂದು ಹೇಳುತ್ತಿದ್ದಾರೆ. ಈ ವರ್ಷ ಮಳೆ ಬೆಳೆ ಸಮೃದ್ದವಾಗಿ ಆಗಲಿದೆ ಎಂದು ಅರ್ಚಕರು ಕಾರ್ಣಿಕವನ್ನು ವಿವರಿಸಿದ್ದರು.

ಮಳೆ ಸಂಪಾದೀತಲೇ ಪರಾಕ್‌

ಇದು ಹಾವನೂರ (ಚಿಕ್ಕ ಮೈಲಾರ) ಸಮೀಪದ ಜೋಗ ಮರಡಿಯಲ್ಲಿ ಮೈಲಾರ ಲಿಂಗೇಶ್ವರನ ಕಾರ್ಣಿಕದ ನುಡಿಯನ್ನು ಗೊರವಪ್ಪ ಆನಂದ ಬಿಲ್ಲರ ನಿನ್ನೆ ಸಂಜೆ ನುಡಿದ ಕಾರಣಿಕದ ನುಡಿ. ಕಳೆದ 357 ವರ್ಷಗಳಿಂದ ಹಾವನೂರ ಗ್ರಾಮದಲ್ಲಿನ ಚಿಕ್ಕ ಮೈಲಾರದ ಕಾರ್ಣಿಕೋತ್ಸವವು ಮೈಲಾರದ ಡೆಂಕನ ಮರಡಿಯಲ್ಲಿ ನುಡಿಯುವ ಕಾರ್ಣಿಕ ದಿನದ ಹಿಂದಿನ ದಿನ (ಭರತ ಹುಣ್ಣಿಮೆಯ ಮರುದಿನ) ನುಡಿಯಲಾಗುತ್ತದೆ.

ಈ ಬಾರಿಯ ಭವಿಷ್ಯವು ಅನೇಕ ರೀತಿಯಲ್ಲಿ ಅರ್ಥೈಸಲಾಗಿದ್ದು ಪ್ರಸ್ತಕ ವರ್ಷ ರೈತರಿಗೆ ಈ ಕಾರ್ಣಿಕ ಹೆಚ್ಚು ಮಹತ್ವ ನೀಡಿದ್ದು, ಈ ವರ್ಷದ ಮುಂಗಾರು ಹಾಗೂ ಹಿಂಗಾರು ಮಳೆ ಉತ್ತಮವಾಗಿ ಆಗುವುದು. ಕಳೆದ 2-3 ವರ್ಷಗಳಿಂದ ಉತ್ತಮ ಮಳೆಯಾಗುತ್ತಿದ್ದು, ಈ ವರ್ಷ ಪುನಃ ಉತ್ತಮ ಮಳೆಯಾಗುವುದೆಂದು ಈ ಕಾರಣಿಕ ನುಡಿಯ ಅರ್ಥ ಎಂದು ವಿಶ್ಲೇಷಿಸಲಾಗಿದೆ.