Mysore News: ಮೈಸೂರಿನಲ್ಲಿ ಡಿಸೆಂಬರ್ 9ರಿಂದ ಎರಡು ದಿನ ನೀರು ಸರಬರಾಜಿನಲ್ಲಿ ವ್ಯತ್ಯಯ, ಈ ಬಡಾವಣೆಗಳಲ್ಲಿ ನೀರು ಬರೋಲ್ಲ
ಕನ್ನಡ ಸುದ್ದಿ  /  ಕರ್ನಾಟಕ  /  Mysore News: ಮೈಸೂರಿನಲ್ಲಿ ಡಿಸೆಂಬರ್ 9ರಿಂದ ಎರಡು ದಿನ ನೀರು ಸರಬರಾಜಿನಲ್ಲಿ ವ್ಯತ್ಯಯ, ಈ ಬಡಾವಣೆಗಳಲ್ಲಿ ನೀರು ಬರೋಲ್ಲ

Mysore News: ಮೈಸೂರಿನಲ್ಲಿ ಡಿಸೆಂಬರ್ 9ರಿಂದ ಎರಡು ದಿನ ನೀರು ಸರಬರಾಜಿನಲ್ಲಿ ವ್ಯತ್ಯಯ, ಈ ಬಡಾವಣೆಗಳಲ್ಲಿ ನೀರು ಬರೋಲ್ಲ

ಮೈಸೂರಿನಲ್ಲಿ ಡಿಸೆಂಬರ್‌ 9 ಹಾಗೂ 10ರ ಸೋಮವಾರ ಹಾಗೂ ಮಂಗಳವಾರದಂದು ನೀರು ಸರಬರಾಜಿನಲ್ಲಿ ವ್ಯತ್ಯಯವಾಗಲಿದೆ ಎಂದು ಮೈಸೂರು ಮಹಾನಗರಪಾಲಿಕೆಯ ವಾಣಿ ವಿಲಾಸ ನೀರು ಸರಬರಾಜು ಕಾರ್ಯಾಗಾರ ತಿಳಿಸಿದೆ.

ಮೈಸೂರು ಮಹಾನಗರದ ಪ್ರಮುಖ ಬಡಾವಣೆಗಳಲ್ಲಿ ಎರಡು ದಿನ ನೀರು ಸರಬರಾಜಿನಲ್ಲಿ ವ್ಯತ್ಯಯ ಆಗಲಿದೆ.
ಮೈಸೂರು ಮಹಾನಗರದ ಪ್ರಮುಖ ಬಡಾವಣೆಗಳಲ್ಲಿ ಎರಡು ದಿನ ನೀರು ಸರಬರಾಜಿನಲ್ಲಿ ವ್ಯತ್ಯಯ ಆಗಲಿದೆ.

ಮೈಸೂರು:ಮೈಸೂರು ನಗರದ ಪ್ರಮುಖ ಬಡಾವಣೆಗಳಲ್ಲಿ ಎರಡು ದಿನಗಳ ಕಾಲ ನೀರು ಸರಬರಾಜು ಇರುವುದಿಲ್ಲ. ಡಿಸೆಂಬರ್ 9 ಹಾಗೂ 10 ರಂದು ಮೈಸೂರಿನ ಕೆಲ ಭಾಗಗಳಲ್ಲಿ ನೀರು ಸರಬರಾಜು ವ್ಯತ್ಯಯ ಆಗಲಿದೆ ಎಂದು ವಾಣಿ ವಿಲಾಸ ನೀರು ಸರಬರಾಜು ಕೇಂದ್ರದ ವತಿಯಿಂದ ಸಾರ್ವಜನಿಕ ಪ್ರಕಟಣೆ ಹೊರಡಿಸಲಾಗಿದೆ. ಹೊಂಗಳ್ಳಿ 2 ಮತ್ತು 3 ನೇ ಹಂತ ಯಂತ್ರಾಗಾರಕ್ಕೆ ವಿದ್ಯುತ್ ಸರಬರಾಜು ಮಾಡುವ ಬೆಳಗೊಳ ವಿದ್ಯುತ್ ಕೇಂದ್ರದಲ್ಲಿ ತ್ರೈಮಾಸಿಕ ನಿರ್ವಹಣೆ ಹಮ್ಮಿಕೊಂಡಿರುವ ಹಿನ್ನಲೆ ನೀರು ಸರಬರಾಜಿನಲ್ಲಿ ವ್ಯತ್ಯಯವಾಗಲಿದೆ ಎಂದು ಮೈಸೂರು ನಗರಪಾಲಿಕೆಯ ವಾಣಿ ವಿಲಾಸ ನೀರು ಸರಬರಾಜು ಕಾರ್ಯಾಗಾರದ ಸಹಾಯಕ ಕಾರ್ಯಪಾಲಕ ಎಂಜಿನಿಯರ್‌ ತಿಳಿಸಿದ್ದಾರೆ.

ವಾರ್ಡ್ 1 ರಿಂದ 7ನೇ ವಾರ್ಡ್ , 20, 23, 38, 42 ರಿಂದ 45, ಹಾಗೂ ವಾರ್ಡ್ ನಂ 47 ಈ ಪ್ರದೇಶಗಳ ವ್ಯಾಪ್ತಿಗೆ ಸೇರುವ ಹೆಬ್ಬಾಳ್, ಕುಂಬಾರಕೊಪ್ಪಲು, ಮಂಚೇಗೌಡನ ಕೊಪ್ಪಲು, ಕೆಜಿ ಕೊಪ್ಪಲು, ಮೇಟಗಳ್ಳಿ, ಲೋಕನಾಯಕ ನಗರ, ಬೃಂದಾವನ ಬಡಾವಣೆ, ಒಂಟಿಕೊಪ್ಪಲು, ಪಡುವಾರಹಳ್ಳಿ, ವಿನಾಯಕನಗರದಲ್ಲಿ ನೀರು ಸರಬರಾಜು ಇರುವುದಿಲ್ಲ.

ಇದಲ್ಲದೇ ಮಂಡಿಮೊಹಲ್ಲ, ಲಷ್ಕರ್ ಮೊಹಲ್ಲ, ಶಾರದಾದೇವಿ ನಗರ, ಸರಸ್ವತಿಪುರಂ, ಬೋಗಾದಿ, ವಿಜಯನಗರ 1 ಮತ್ತು 3 ನೇ ಹಂತ, ಗೋಕುಲಂ 1,2,3 ನೇ ಹಂತ, ಹಾಗೂ ಹೊರವಲಯವಾದ ಆರ್.ಎಂ.ಪಿ, ಬಿಇಎಂಎಲ್, ಯಾದವಗಿರಿ, ಬನ್ನಿಮಂಟಪ, ಈರನಗೆರೆ, ಸಿದ್ದಿಖಿ ನಗರ, ಶಿವರಾತ್ರೀಶ್ವರ ನಗರ, ತಿಲಕ್ ನಗರ, ಬಡೇಮಕಾನ್, ಹಲೀಂ ನಗರದಲ್ಲೂ ನೀರಿನ ಸರಬರಾಜು ವ್ಯತ್ಯಯ ಆಗಲಿದೆ.

ದೇವರಾಜ ಮೊಹಲ್ಲ ಭಾಗಶಃ, ಎನ್ ಆರ್.ಮೊಹಲ್ಲ ಭಾಗಶಃ, ಕೆ.ಆರ್.ಮೊಹಲ್ಲಾ ಭಾಗಶಃ, ನಜರಬಾದ್, ಕೃಷ್ಣಮೂರ್ತಿಪುರಂ, ವಿದ್ಯಾರಣ್ಯಪುರಂ, ಜಯನಗರ ಬಡಾವಣೆಗಳಲ್ಲಿ ನೀರು ಸರಬರಾಜಿನಲ್ಲಿ ವ್ಯತ್ಯಯ ಕಂಡು ಬರಲಿದೆ.

ಈ ಕಾರಣದಿಂದ ನೀರು ಬಂದಾಗ ಸಂಗ್ರಹಿಸಿಟ್ಟುಕೊಂಡು ಎರಡು ದಿನ ಸಾರ್ವಜನಿಕರು ಸಹಕರಿಸಬೇಕು ಎಂದು ಮನವಿ ಮಾಡಲಾಗಿದೆ.

Whats_app_banner