Breaking News: ಮೈಸೂರು ದಸರಾ ಉದ್ಘಾಟನೆಗೆ ಹಿರಿಯ ಸಾಹಿತಿ ಹಂಪ ನಾಗರಾಜಯ್ಯ ಹೆಸರು ಅಂತಿಮ; ನಾಲ್ಕು ದಿನದ ಹಿಂದೆಯೇ ಪ್ರಕಟಿಸಿದ್ದ ಎಚ್‌ಟಿ-mysore news mysore dasara 2024 inauguration senior literary personality hampa nagarajaiah name finalized kub ,ಕರ್ನಾಟಕ ಸುದ್ದಿ
ಕನ್ನಡ ಸುದ್ದಿ  /  ಕರ್ನಾಟಕ  /  Breaking News: ಮೈಸೂರು ದಸರಾ ಉದ್ಘಾಟನೆಗೆ ಹಿರಿಯ ಸಾಹಿತಿ ಹಂಪ ನಾಗರಾಜಯ್ಯ ಹೆಸರು ಅಂತಿಮ; ನಾಲ್ಕು ದಿನದ ಹಿಂದೆಯೇ ಪ್ರಕಟಿಸಿದ್ದ ಎಚ್‌ಟಿ

Breaking News: ಮೈಸೂರು ದಸರಾ ಉದ್ಘಾಟನೆಗೆ ಹಿರಿಯ ಸಾಹಿತಿ ಹಂಪ ನಾಗರಾಜಯ್ಯ ಹೆಸರು ಅಂತಿಮ; ನಾಲ್ಕು ದಿನದ ಹಿಂದೆಯೇ ಪ್ರಕಟಿಸಿದ್ದ ಎಚ್‌ಟಿ

ಮೈಸೂರು ದಸರಾ ಉದ್ಘಾಟನೆಗೆ ಹಿರಿಯ ಸಾಹಿತಿ ಹಂಪನಾಗರಾಜಯ್ಯ ಅವರ ಹೆಸರು ಅಂತಿಮಗೊಂಡಿದೆ. ಮೈಸೂರಿನಲ್ಲಿ ಸಿಎಂ ಸಿದ್ದರಾಮಯ್ಯ ಇದನ್ನು ಪ್ರಕಟಿಸಿದ್ದಾರೆ.

ಹಿರಿಯ ಸಾಹಿತಿ ಹಂಪನಾ ದಸರಾ ಉದ್ಘಾಟಿಸುವರು.
ಹಿರಿಯ ಸಾಹಿತಿ ಹಂಪನಾ ದಸರಾ ಉದ್ಘಾಟಿಸುವರು.

ಮೈಸೂರು: ವಿಶ್ವವಿಖ್ಯಾತ ಮೈಸೂರು ದಸರಾ ಆರಂಭಕ್ಕೆ ದಿನಗಣನೆಗಳು ಶುರುವಾಗಿವೆ.2024ರ ದಸರಾ ಚಟುವಟಿಗಳ ಸಿದ್ದತೆ ಈಗಾಗಲೇ ಆರಂಭಗೊಂಡಿದ್ದು, ದಸರಾಗೆ ಅಕ್ಟೋಬರ್‌ 3ರಂದು ಚಾಲನೆ ಸಿಗಲಿದೆ. ದಸರಾದ ಉದ್ಘಾಟನೆಯೂ ಪ್ರಮುಖವಾಗಿರುವುದರಿಂದ ಈ ಬಾರಿಯ ದಸರಾ ಉದ್ಘಾಟಿಸುವವರು ಎನ್ನುವ ಪ್ರಶ್ನೆಗೆ ಉತ್ತರ ದೊರಕಿದ್ದು, ನಾಡಿನ ಹಿರಿಯ ಸಾಹಿತಿ ಹಂಪ ನಾಗರಾಜಯ್ಯ ಅವರೇ ಈ ಬಾರಿ ದಸರಾ ಉದ್ಘಾಟಿಸುವರು. ಕರ್ನಾಟಕದಲ್ಲಿ ಕಾಂಗ್ರೆಸ್‌ ಸರ್ಕಾರ ಅಸ್ತಿತ್ವಕ್ಕೆ ಬಂದ ನಂತರ ಸಮಾಜದಲ್ಲಿ ವಿವಿಧ ಸ್ಥರದಲ್ಲಿ ಕೆಲಸ ಮಾಡಿದ ಸಮಾಜಮುಖಿ ಗಣ್ಯರನ್ನು ಕರೆಯಿಸುವುದನ್ನು ಮಾಡಿಕೊಂಡು ಬಂದಿದೆ. ಈ ಬಾರಿ ಇದೇ ರೀತಿ ಗಣ್ಯರೊಬ್ಬರನ್ನು ಆಯ್ಕೆ ಮಾಡುವ ಕುರಿತು ಚರ್ಚೆಗಳು ನಡೆದಿವೆ. ಹಿರಿಯ ಸಾಹಿತಿ ಹಂಪ ನಾಗರಾಜಯ್ಯ ಅವರ ಹೆಸರು ಪರಿಗಣನೆಯಲ್ಲಿತ್ತಾದರೂ ಸಿಎಂ ಸಿದ್ದರಾಮಯ್ಯ ಅವರು ಮೈಸೂರಿನಲ್ಲಿ ಅಧಿಕೃತವಾಗಿಯೇ ಹಂಪ ನಾಗರಾಜಯ್ಯ ಅವರ ಹೆಸರು ಪ್ರಕಟಿಸಿದ್ದಾರೆ. ಈ ಕುರಿತು ಎಚ್‌ಟಿ ಕನ್ನಡ ಡಿಜಿಟಲ್‌ ನಾಲ್ಕು ದಿನದ ಹಿಂದೆಯೇ ಇದನ್ನು ಪ್ರಕಟಿಸಿತ್ತು.

ಕರ್ನಾಟಕದ ನಾಡಹಬ್ಬ ಮೈಸೂರು ದಸರಾಗೆ ತನ್ನದೇ ಆದ ಇತಿಹಾಸವಿದೆ. ಮೈಸೂರು ಮಹಾರಾಜರು ಮೊದಲು 414 ವರ್ಷಗಳ ಹಿಂದೆಯೇ ದಸರಾವನ್ನು ಆರಂಭಿಸಿದ್ದು ಶ್ರೀರಂಗಪಟ್ಟಣದಲ್ಲಿ. ಅಲ್ಲಿಂದ ಮೈಸೂರಿಗೆ ದಸರಾ ಸ್ಥಳಾಂತರಗೊಂಡು ಪ್ರತಿ ವರ್ಷ ನವರಾತ್ರಿ ಹಾಗೂ ವಿಜಯದಶಮಿಗಳು ಸಡಗರದಿಂದ ನಡೆದುಕೊಂಡು ಬಂದಿವೆ. ಕೆಲವೊಮ್ಮೆ ಅರಮನೆ ಆವರಣದಲ್ಲಿ ಸೀಮಿತರಾದರೂ ಹೆಚ್ಚು ದಸರಾಗಳು ಜಂಬೂಸವಾರಿ ಮೆರವಣಿಗೆಯೊಂದಿಗೆ ಬನ್ನಿಮಂಟಪದವರೆಗೂ ಸಾಗಿದೆ. ಈ ರೀತಿಯ ದಸರಾವನ್ನು ಗಣ್ಯರೊಬ್ಬರಿಂದ ಉದ್ಘಾಟಿಸುವ ಪರಂಪರೆ ಮೂರು ದಶಕದ ಹಿಂದೆಯೇ ಆರಂಭಗೊಂಡಿದೆ. ಈ ಬಾರಿ ಹಂಪನಾಗರಾಜಯ್ಯ ಅವರಂತಹ ಕನ್ನಡ ವಿದ್ವಾಂಸರಿಗೆ ಲಭಿಸಿದೆ.

ಹಿಂದೆ ಸಾಹಿತಿಗಳಾದ ಚಂದ್ರಶೇಖರ ಕಂಬಾರ, ಗಿರೀಶ ಕಾರ್ನಾಡ, ಡಾ.ಎಸ್‌.ಎಲ್‌. ಭೈರಪ್ಪ. ಯು.ಆರ್‌.ಅನಂತಮೂರ್ತಿ ಸಹಿತ ಹಲ ಹಿರಿಯ ಸಾಹಿತಿಗಳು ದಸರಾ ಉದ್ಘಾಟಿಸಿದ್ದಾರೆ.ರಾಷ್ಟ್ರಪತಿಯಿಂದ ಶುರು

ಈ ಹಿಂದೆ 1990ರಲ್ಲಿ ರಾಷ್ಟ್ರಪತಿ ಆಗಿದ್ದ ವೆಂಕಟರಾಮನ್ ಅವರು ದಸರಾ ಮಹೋತ್ಸವದ ಕೊನೆದಿನ ನಡೆದಿದ್ದ, ಜಂಬೂಸವಾರಿಯಲ್ಲಿ ಪುಷ್ಪಾರ್ಚನೆ ನೆರವೇರಿಸಿದ್ದರು. 1988ರಲ್ಲಿ ಉಪ ರಾಷ್ಟ್ರಪತಿ ಶಂಕರ್ ದಯಾಳ್ ಶರ್ಮಾ ಕೂಡ ಜಂಬೂಸವಾರಿಗೆ ಚಾಲನೆ ನೀಡಿದ್ದರು. 1988ರಲ್ಲಿ ರಾಜ್ಯಪಾಲರಾಗಿದ್ದ ಪಿ.ವೆಂಕಟಸುಬ್ಬಯ್ಯ ಹಾಗೂ 2007ರಲ್ಲಿ ರಾಜ್ಯಪಾಲರಾಗಿದ್ದ ರಾಮೇಶ್ವರ ಠಾಕೂರ್‌ ಜಂಬೂಸವಾರಿಯನ್ನು ಉದ್ಘಾಟಿಸಿದ್ದರು.

ಎರಡು ವರ್ಷದ ಹಿಂದೆ ದಸರಾವನ್ನು ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಉದ್ಘಾಟಿಸಿದ್ದರು. ದ್ರೌಪದಿ ಮುರ್ಮು ದಸರಾ ಉದ್ಘಾಟಿಸಿದ ಎರಡನೇ ರಾಷ್ಟಪತಿ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದರು.

ಹಂಸಲೇಖಗೆ ಮಣೆ

ಬಿಜೆಪಿ ಆಡಳಿತದ ಅವಧಿಯಲ್ಲಿ ಧರ್ಮಗುರುಗಳೇ ದಸರಾ ಉದ್ಘಾಟಿಸಿದ್ದರೆ, ಕಾಂಗ್ರೆಸ್‌ ಆಡಳಿತ ಇದ್ಧಾಗ ಸಾಹಿತಿಗಳು, ಪ್ರಗತಿಪರ ಚಿಂತಕರು, ಸಾಧಕರನ್ನು ಗುರುತಿಸಲಾಗಿದೆ. ಇದೇ ನೆಲೆಯಲ್ಲಿ ಕಳೆದ ವರ್ಷ ಸಂಗೀತ ನಿರ್ದೇಶಕ ಹಾಗೂ ಚಿಂತಕ ಹಂಸಲೇಖ ಅವರು ದಸರಾ ಉದ್ಘಾಟಿಸುವ ಅವಕಾಶ ಪಡೆದಿದ್ದರು.

ಡಾ. ರಾಜ್‌ ಚಾಲನೆ

1993ರಲ್ಲಿ ವರನಟ ಡಾ.ರಾಜ್‌ಕುಮಾರ್‌ ಅವರಿಂದ ದಸರಾ ಉದ್ಘಾಟನೆ ನೆರವೇರಿಸಿದ್ದರು. ರೆಬಲ್ ಸ್ಟಾರ್ ಅಂಬರೀಶ್‌, ಬಿ.ಸರೋಜಾದೇವಿ ಕೂಡ ದಸರಾ ಉದ್ಘಾಟಿಸಿದ್ದಾರೆ. 2002ರಲ್ಲಿ ಖ್ಯಾತ ವಿಜ್ಞಾನಿ ಪ್ರೊ.ಸಿ.ಎನ್.ಆರ್.ರಾವ್ ಅವರನ್ನು ಆಹ್ವಾನಿಸಿದ್ದರೂ, ಅವರು ಕಾರಣಾಂತರದಿಂದ ಗೈರಾಗಿದ್ದರು.

ಕೃಷಿಕಗೂ ಅವಕಾಶ

2015ರಲ್ಲಿ ಎಚ್.ಡಿ.ಕೋಟೆ ತಾಲೂಕಿನ ಹೈರಿಗೆ ಗ್ರಾಮದ ಸಾಮಾನ್ಯ ರೈತ ಮಲಾರ ಕಾಲನಿಯ ಪ್ರಗತಿಪರ ರೈತ ಮಲಾರದ ಪುಟ್ಟಯ್ಯ ಅವರು ದಸರಾವನ್ನು ಉದ್ಘಾಟಿಸಿದ್ದರು. ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಯು.ಆರ್.ಅನಂತಮೂರ್ತಿ, ಸಂಗೀತ ಕಲಾವಿದೆ ಡಾ.ಗಂಗೂಬಾಯಿ ಹಾನಗಲ್, ಸ್ವಾತಂತ್ರ್ಯ ಹೋರಾಟಗಾರ ಎಂ.ಎನ್.ಜೋಯಿಸ್, ಸಾಹಿತಿಗಳಾದ ದೇಜಗೌ, ಬರಗೂರು ರಾಮಚಂದ್ರಪ್ಪ, ಡಾ.ಎಸ್.ಎಲ್.ಬೈರಪ್ಪ, ಚಂದ್ರಶೇಖರ ಕಂಬಾರ, ಗಿರೀಶ್‌ ಕಾರ್ನಾಡ್‌, ಪರಿಸರ ಅಂಬಾಸಿಡರ್‌ ಸಾಲುಮರದ ತಿಮ್ಮಕ್ಕ, ಇನ್ಫೋಸಿಸ್ ಫೌಂಡೇಶನ್ ಸಂಸ್ಥಾಪಕಿ ಡಾ.ಸುಧಾಮೂರ್ತಿ ಕೂಡ ದಸರಾ ಉದ್ಘಾಟಿಸಿದ್ದಾರೆ.

ಧರ್ಮಗುರುಗಳ ಹೆಜ್ಜೆ

ಇದರೊಟ್ಟಿಗೆ ಹಲವಾರು ಧರ್ಮಗುರುಗಳು ದಸರಾಗೆ ಚಾಲನೆ ನೀಡಿರುವ ಇತಿಹಾಸವೂ ಇದೆ. 2007ರಲ್ಲಿ ಆದಿಚುಂಚನಗಿರಿ ಮಠದ ಶ್ರೀ ಬಾಲಗಂಗಾಧರನಾಥ ಸ್ವಾಮೀಜಿ, 2008ರಲ್ಲಿ ತುಮಕೂರು ಸಿದ್ದಗಂಗೆಯ ಡಾ.ಶಿವಕುಮಾರ ಸ್ವಾಮೀಜಿ, 2009ರಲ್ಲಿ ಆರ್ಟ್ ಆಫ್‌ ಲಿವಿಂಗ್‌ನ ರವಿಶಂಕರ್ ಗುರೂಜಿ, 2010ರಲ್ಲಿ ಧರ್ಮಸ್ಥಳದ ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆ, 2011ರಲ್ಲಿ ಪೇಜಾವರ ಮಠದ ವಿಶ್ವೇಶ್ವರತೀರ್ಥ ಸ್ವಾಮೀಜಿ, 2012ರಲ್ಲಿ ವಿಜಯಪುರ ಜ್ಞಾನಯೋಗಾಶ್ರಮದ ಸಿದ್ದೇಶ್ವರ ಸ್ವಾಮೀಜಿ ದಸರಾ ಉದ್ಘಾಟಿಸಿ ಸ್ವಾಮೀಜಿಗಳು.

mysore-dasara_Entry_Point