Mysore Tour packages: ಮೈಸೂರು ದಸರಾ ಪ್ರವಾಸ ಬರುತ್ತೀದ್ದೀರಾ, ಕೆಎಸ್‌ಟಿಡಿಸಿ ಗೋವಾ, ಊಟಿ ಸಹಿತ ಹಲವು ಟೂರ್‌ ಪ್ಯಾಕೇಜ್‌ ಉಂಟು
ಕನ್ನಡ ಸುದ್ದಿ  /  ಕರ್ನಾಟಕ  /  Mysore Tour Packages: ಮೈಸೂರು ದಸರಾ ಪ್ರವಾಸ ಬರುತ್ತೀದ್ದೀರಾ, ಕೆಎಸ್‌ಟಿಡಿಸಿ ಗೋವಾ, ಊಟಿ ಸಹಿತ ಹಲವು ಟೂರ್‌ ಪ್ಯಾಕೇಜ್‌ ಉಂಟು

Mysore Tour packages: ಮೈಸೂರು ದಸರಾ ಪ್ರವಾಸ ಬರುತ್ತೀದ್ದೀರಾ, ಕೆಎಸ್‌ಟಿಡಿಸಿ ಗೋವಾ, ಊಟಿ ಸಹಿತ ಹಲವು ಟೂರ್‌ ಪ್ಯಾಕೇಜ್‌ ಉಂಟು

ಕರ್ನಾಟಕ ರಾಜ್ಯ ಪ್ರವಾಸೋದ್ಯಮ ಅಭಿವೃದ್ದಿ ನಿಗಮವು ಮೈಸೂರು ದಸರಾಕ್ಕೆ ಆಗಮಿಸುವವರು ಹಾಗೂ ಸ್ಥಳೀಯವಾಗಿ ಪ್ರವಾಸ ಹೋಗ ಬಯಸುವವರಿಗೆ ವಿಶೇಷ ಪ್ಯಾಕೇಜ್‌ಗಳನ್ನು ಆರಂಭಿಸಿದೆ.

ಕೆಎಸ್‌ಟಿಡಿಸಿ ಮೈಸೂರಿನಿಂದ ದಸರಾ ವೇಳೆ ಹಲವು ಟೂರ್‌ ಪ್ಯಾಕೇಜ್‌ ಆರಂಭಿಸಿದೆ.
ಕೆಎಸ್‌ಟಿಡಿಸಿ ಮೈಸೂರಿನಿಂದ ದಸರಾ ವೇಳೆ ಹಲವು ಟೂರ್‌ ಪ್ಯಾಕೇಜ್‌ ಆರಂಭಿಸಿದೆ.

ಮೈಸೂರು:ದಸರಾ ರಜೆ ಶುರುವಾಗಿರುವುದರಿಂದ ದಸರಾ ನೆಪದಲ್ಲಿ ಮೈಸೂರು ಭಾಗಕ್ಕೆ ಪ್ರವಾಸಿಗರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸುತ್ತಿದ್ದಾರೆ. ಮೈಸೂರು ದಸರಾ ನೋಡುವ ಜತೆಗೆ ಸುತ್ತಮುತ್ತಲಿನ ಪ್ರದೇಶಗಳನ್ನೂ ವೀಕ್ಷಿಸಲು ಮುಂದಾಗುತ್ತಿದ್ದಾರೆ. ಮೈಸೂರಿನ ಸುತ್ತಮುತ್ತಲ ಇರುವ ಹಲವಾರು ಪ್ರವಾಸಿ ತಾಣಗಳೂ ಪ್ರವಾಸಿಗರಿಂದ ಕೂಡಿವೆ. ಹೆಚ್ಚು ಪ್ರವಾಸಿಗರು ಮೈಸೂರಿನತ್ತ ಆಗಮಿಸುತ್ತಿರುವುದರಿಂದ ಕರ್ನಾಟಕ ಪ್ರವಾಸೋದ್ಯಮ ಅಭಿವೃದ್ದಿ ನಿಗಮವು ದಸರಾ ಪ್ರವಾಸಿಗರಿಗೆ ವಿಶೇಷ ಪ್ಯಾಕೇಜ್‌ಗಳನ್ನು ರೂಪಿಸಿದೆ. ಇದರಲ್ಲಿ ಗೋವಾ, ಊಟಿ ಪ್ರವಾಸ ಪ್ಯಾಕೇಜ್‌ಗಳು ಸೇರಿವೆ.

ಮೈಸೂರು ದಸರಾ 2024 ಹಬ್ಬದ ಪ್ರಯುಕ್ತ ಪ್ರವಾಸೋದ್ಯಮ ಇಲಾಖೆ ಮೈಸೂರು ವಿಭಾಗದಿಂದ ವಿಶೇಷ ವ್ಯವಸ್ಥಿತ ಪ್ರವಾಸವನ್ನು ಆಯೋಜಿಸಲಾಗಿರುವ ವಿವರ ಇಲ್ಲಿದೆ.

ಪ್ರವಾಸದ ವಿವರ( ಮೈಸೂರಿನಿಂದ ಹೊರಡುವುದು)

  • ಜೋಗ್ ಫಾಲ್ಸ್ – ಗೋಕರ್ಣ – ಗೋವಾ (ಅವಳಿ ಹಂಚಿಕೆ) : 5 ದಿನ ದರ 7990/-
  • ನಂಜನಗೂಡು ಬಂಡೀಪುರ ಮತ್ತು ಮದುಮಲೈ ಅರಣ್ಯ – ಊಟಿ ದೊಡ್ಡಬೆಟ್ಟ (ಅವಳಿ ಹಂಚಿಕೆ) 2 ದಿನ, ದರ 3359/-
  • ಶ್ರವಣಬೆಳಗೊಳ- ಬೇಲೂರು –ಹಳೇಬೀಡು 1ದಿನ, ದರ 1089/-
  • ಸೋಮನಾಥಪುರ ಶಿವನಸಮುದ್ರ (ಗಗನಚುಕ್ಕಿ & ಭರಚುಕ್ಕಿ) – ತಲಕಾಡು ಮುಡುಕುತೊರೆ 1ದಿನ, ದರ 755 ರೂ
  • ನಂಜನಗೂಡು – ಹಿಮವದ್ ಗೋಪಾಲಸ್ವಾಮಿ ದೇವಸ್ಥಾನ – ಬಿಆರ್ ಹಿಲ್ಸ್, 1 ದಿನ, ದರ 728/-
  • ಕೆಆರ್ ಎಸ್ ಹಿನ್ನಿರು – ವೇಣುಗೋಪಾಲ ಸ್ವಾಮಿ ದೇವಸ್ಥಾನ – ಚೆಲುವರಾಯಸ್ವಾಮಿ ದೇವಸ್ಥಾನ – ಯೋಗಾನರಸಿಂಹ ಸ್ವಾಮಿ ದೇವಸ್ಥಾನ ಆದಿಚುಂಚನಗಿರಿ, 1 ದಿನ, ದರ 660/-
  • ದುಬಾರೆ – ಅಬ್ಬೆ ಫಾಲಿಸ್ – ರಾಜಾ ಸೀಟ್ – ನಿಸರ್ಗಧಾಮ – ಗೋಲ್ಡನ್ ಟೆಂಪಲ್, ಬೈಲಕುಪ್ಪೆ 1 ದಿನ, ದರ 979/-
  • ಜಗನ್ಮೋಹನ ಅರಮನೆ ಆರ್ಟ್ ಗ್ಯಾಲರಿ – ಮೈಸೂರು ಮೃಗಾಲಯ, ಚಾಮುಂಡಿ ಬೆಟ್ಟ – ಮೈಸೂರು ಅರಮನೆ – ಸೇಂಟ್ ಫಿಲೋಮಿನಾ ಚರ್ಚ್ – ಶ್ರೀರಂಗಪಟ್ಟಣ ಗುಂಬಜ್ – ಟಿಪ್ಪು ಸುಲ್ತಾನರ ಬೇಸಿಗೆ ಅರಮನೆ – ಶ್ರೀರಂಗನಾಥ ಸ್ವಾಮಿ ದೇವಸ್ಥಾನ- ಬೃಂದಾವನ ಉದ್ಯಾನವನ, 1ದಿನ , 510 ರೂ.

ಸಂಪರ್ಕ: 0821 2423652 ಆನ್‌ಲೈನ್ ಬುಕಿಂಗ್: www.kstdc.co

ಡಬ್ಬಲ್‌ ಡೆಕ್ಕರ್‌ ಬಸ್‌

ಐತಿಹಾಸಿಕ ದಸರಾ ಹಬ್ಬದ ಪ್ರಯುಕ್ತ ಕರ್ನಾಟಕ ರಾಜ್ಯ ಪ್ರವಾಸೋದ್ಯಮ ಅಭಿವೃದ್ದಿ ನಿಗಮದಿಂದ ವಿಶೇಷ ಅಂಬಾರಿ ಡಬಲ್‌ ಡೆಕ್ಕರ್‌ ಪ್ರವಾಸವೂ ಉಂಟು. ಇದಕ್ಕೂ ಮುಂಗಡ ಬುಕ್ಕಿಂಗ್‌ ಇದೆ ಎಂದು ನಿಗಮ ತಿಳಿಸಿದೆ.

Whats_app_banner