Mysore Dasara2024: ಜಂಬೂ ಸವಾರಿ ಪ್ರಾಯೋಜಕತ್ವಕ್ಕೆ 2 ಕೋಟಿ ರೂ. ನಿಗದಿ: 40 ಕೋಟಿ ಅನುದಾನ ನಂತರವೂ ಮೈಸೂರು ದಸರಾ ಪ್ರಾಯೋಜಕರಿಗೆ ಆಹ್ವಾನ-mysore news mysore dasara 2024 sponsorship invited from business men industrialists for grand celebrations kub ,ಕರ್ನಾಟಕ ಸುದ್ದಿ
ಕನ್ನಡ ಸುದ್ದಿ  /  ಕರ್ನಾಟಕ  /  Mysore Dasara2024: ಜಂಬೂ ಸವಾರಿ ಪ್ರಾಯೋಜಕತ್ವಕ್ಕೆ 2 ಕೋಟಿ ರೂ. ನಿಗದಿ: 40 ಕೋಟಿ ಅನುದಾನ ನಂತರವೂ ಮೈಸೂರು ದಸರಾ ಪ್ರಾಯೋಜಕರಿಗೆ ಆಹ್ವಾನ

Mysore Dasara2024: ಜಂಬೂ ಸವಾರಿ ಪ್ರಾಯೋಜಕತ್ವಕ್ಕೆ 2 ಕೋಟಿ ರೂ. ನಿಗದಿ: 40 ಕೋಟಿ ಅನುದಾನ ನಂತರವೂ ಮೈಸೂರು ದಸರಾ ಪ್ರಾಯೋಜಕರಿಗೆ ಆಹ್ವಾನ

Mysore Dasara Sponsorship ಮೈಸೂರು ದಸರಾ ಸಿದ್ದತೆಗಳು ಈಗಾಗಲೇ ಶುರುವಾಗಿದೆ. ದಸರಾದ ಜಂಬೂಸವಾರಿ, ಅಂಬಾರಿ, ಸಾಂಸ್ಕೃತಿಕ ಕಾರ್ಯಕ್ರಮಗಳ ಸಹಿತ ವಿವಿಧೆಡೆ ಪ್ರಾಯೋಜಕತ್ವ ಪಡೆಯಲು ಉದ್ದಿಮೆಗಳು, ವ್ಯಾಪಾರಸ್ಥರನ್ನು ಆಹ್ವಾನಿಸಲಾಗಿದೆ.

ಮೈಸೂರು ದಸರಾದ ಆಚರಣೆ ಪ್ರಾಯೋಜಕತ್ವಕ್ಕೆ ಆಹ್ವಾನಿಸಲಾಗಿದೆ.
ಮೈಸೂರು ದಸರಾದ ಆಚರಣೆ ಪ್ರಾಯೋಜಕತ್ವಕ್ಕೆ ಆಹ್ವಾನಿಸಲಾಗಿದೆ.

ಮೈಸೂರು: ಈ ಬಾರಿಯೂ ಮೈಸೂರು ದಸರಾಕ್ಕೆ ಪ್ರಾಯೋಜಕತ್ವ ಇರಲಿದೆ. ಮೂರ್ನಾಲ್ಕು ವರ್ಷದಿಂದ ಕೋವಿಡ್‌, ಬರದ ಕಾರಣದಿಂದ ವಿಜೃಂಭಣೆಯಿಂದ ದಸರಾ ಆಚರಿಸಲಲ್ಲ. ಈ ಕಾರಣದಿಂದ ದಸರಾಕ್ಕೆ ಪ್ರಾಯೋಜಕತ್ವ ಪಡೆಯುವ ಗೋಜಿಗೆ ಹೋಗಿರಲಿಲ್ಲ. ಸರ್ಕಾರದಿಂದ ಬಂದ ಅನುದಾನದಲ್ಲಿಯೇ ದಸರಾವನ್ನು ನಾಲ್ಕು ವರ್ಷ ಆಚರಿಸಲಾಗಿತ್ತು. ಐದು ವರ್ಷದ ಬಳಿಕ ಈಗ ದಸರಾಕ್ಕೆ ಮತ್ತೆ ಪ್ರಾಯೋಜಕರಿಗೆ ಆಹ್ವಾನಿಸಿದೆ. ಉದ್ಯಮಿದಾರರು, ವ್ಯಾಪಾರಸ್ಥರು ಮೈಸೂರು ದಸರಾಕ್ಕೆ ಪ್ರಾಯೋಜತ್ವ ವಹಿಸಿಕೊಳ್ಳಲು ಆಹ್ವಾನ ನೀಡಲಾಗಿದೆ. ದೊಡ್ಡ ವಹಿವಾಟು ಸಂಸ್ಥೆಗಳ ಜತೆಗೆ ಮೈಸೂರಿನ ವ್ಯಾಪಾರಸ್ಥರೂ ಪ್ರಾಯೋಜಕತ್ವಕ್ಕೆ ಕೈ ಜೋಡಿಸಲು ಅವಕಾಶ ನೀಡಲಾಗುತ್ತಿದೆ. ಒಂದು ಕಡೆ ದಸರಾಕ್ಕೆ ಆರ್ಥಿಕ ಬೆಂಬಲ ನೀಡುವುದು ಇದರ ಉದ್ದೇಶವಾದರೆ, ಇನ್ನೊಂದು ಕಡೆ ಉದ್ದಿಮೆದಾರರೂ ತಮ್ಮನ್ನು ದಸರಾದಂತದ ದೊಡ್ಡ ಉತ್ಸವದಲ್ಲಿ ಬಿಂಬಿಸಿಕೊಳ್ಳಲು ಅವಕಾಶವಾಗಲಿದೆ.

ಜಂಬೂ ಸವಾರಿ ಪ್ರಾಯೋಜಕತ್ವದಲ್ಲಿ 2 ಕೋಟಿ, ಅಂಬಾರಿ ಪ್ರಾಯೋಜಕತ್ವದಲ್ಲಿ 1 ಕೋಟಿ, ಪ್ಲಾಟಿನಂ ಪ್ರಾಯೋಜಕತ್ವದಲ್ಲಿ 75 ಲಕ್ಷ, ಗೋಲ್ಡನ್ ಪ್ರಾಯೋಜಕತ್ವದಲ್ಲಿ 50 ಲಕ್ಷ, ಸಿಲ್ವರ್ ಪ್ರಾಯೋಜಕತ್ವದಲ್ಲಿ 25 ಲಕ್ಷ ಸ್ಪಾನ್ಸರ್ ನೀಡಲು ಅವಕಾಶ ಕಲ್ಪಿಸಲಾಗಿದೆ. ಆಯಾ ಪ್ರಾಯೋಜತ್ವಕ್ಕೆ ಅನುಗುಣವಾಗಿ ಸಂಸ್ಥೆಗಳ ಪ್ರಚಾರಕ್ಕೂ ಅವಕಾಶ ದೊರೆಯಲಿದೆ.

ಪ್ರಾಯೋಜಕತ್ವದಲ್ಲಿ ಜಂಬೂಸವಾರಿ, ಅಂಬಾರಿ, ಪ್ಲಾಟಿನಂ, ಗೋಲ್ಡನ್, ಸಿಲ್ವರ್ ಎಂಬ ವಿಧಗಳಿದ್ದು ತಾವು ಆಯ್ಕೆ ಮಾಡಿಕೊಳ್ಳಬಹುದಾಗಿದೆ. ಅದಲ್ಲದೆ ವಿವಿಧ ಕಾರ್ಯಕ್ರಮಗಳಲ್ಲಿ ಸ್ಥಳಾವಕಾಶದ ಅವಕಾಶಗಳಿದ್ದು ಬಳಸಿಕೊಳ್ಳಿ , ಇದರಲ್ಲಿ ಯಾವುದೇ ಒತ್ತಾಯವಲ್ಲ, ಸ್ವಯಂಪ್ರೇರಿತವಾಗಿ ಮುಂದೆ ಬನ್ನಿ ಎನ್ನುವುದು ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಚ್‌.ಸಿ.ಮಹದೇವಪ್ಪ ಅವರ ಮನವಿ.

ಮೈಸೂರಿನ ಲಲಿತ ಮಹಲ್ ಪ್ಯಾಲೇಸ್ ನಲ್ಲಿ ನಡೆದ ದಸರಾ ಪ್ರಾಯೋಜಕರ ಸಭೆಯಲ್ಲಿ ಮಾತನಾಡಿದ ಸಚಿವರು, ವಿಶ್ವ ವಿಖ್ಯಾತ ಮೈಸೂರು ದಸರಾ ಸಂಭ್ರಮದಲ್ಲಿ ಪ್ರಾಯೋಜಕತ್ವ ನೀಡುವ ಮೂಲಕ ತಮ್ಮ ವ್ಯಾಪಾರ ವಹಿವಾಟುಗಳನ್ನು ವಿಸ್ತರಿಸಿಕೊಳ್ಳುವ ಸದಾವಕಾಶವನ್ನು ಸದುಪಯೋಗಿಸಿಕೊಳ್ಳಬಹುದು ಎಂದು ಸಲಹೆ ನೀಡಿದರು.

ದಸರಾ ಕಾರ್ಯಕ್ರಮಕ್ಕೆ ದೇಶ ವಿದೇಶಗಳಿಂದ ಸಾವಿರಾರು ಜನ ಆಗಮಿಸುತಿದ್ದು, ತಮ್ಮ ಉತ್ಪನ್ನಗಳ, ಕಂಪನಿ, ಕೈಗಾರಿಕೆಗಳನ್ನು, ಜನರ ಬಳಿ ಕೊಂಡೊಯ್ಯಲು ಉತ್ತಮ ವೇದಿಕೆ ಇದಾಗಿದೆ ಹಾಗೂ ವಿಜೃಂಭಣೆಯ ದಸರಾದಲ್ಲಿ ಪಾಲುದಾರರಾದ ಕೀರ್ತಿ ನಿಮ್ಮದಾಗಲಿದೆ ಎಂದು ಕಿವಿಮಾತು ಹೇಳಿದರು.

ತಾವು ಈ ಹಿಂದೆಯೂ ಸಂಪೂರ್ಣ ಸಹಕಾರ ನೀಡಿದ್ದೀರಿ, ಈ ಬಾರಿಯೂ ಸಹಕಾರ ಬಯಸುತ್ತೇವೆ. ತಮಗೆ ಅನುಕೂಲವಾಗುವಂತಹ ಪ್ರಾಯೋಜಕತ್ವವನ್ನು ತಾವು ಉಪಯೋಗಿಸಿಕೊಳ್ಳಬಹುದಾಗಿದ್ದು, ತಕ್ಷಣಕ್ಕೆ ತಿಳಿಸಲಾಗದಿದ್ದಲ್ಲಿ ಜಿಲ್ಲಾಧಿಕಾರಿಗಳ ಕಛೇರಿಯಲ್ಲಿಯೂ ತಿಳಿಸಬಹುದಾಗಿದೆ ಎನ್ನುವುದು ಮೈಸೂರು ದಸರಾ ವಿಶೇಷಾಧಿಕಾರಿಯೂ ಆಗಿರುವ ಜಿಲ್ಲಾಧಿಕಾರಿ ಲಕ್ಷ್ಮಿಕಾಂತ ರೆಡ್ಡಿ ಅವರ ಮನವಿ.

ದಸರಾ ಸಾಂಸ್ಕೃತಿಕ ಕಾರ್ಯಕ್ರಮದ ವೇದಿಕೆಗಳಲ್ಲಿ, ಪ್ರವೇಶ ದ್ವಾರಗಳಲ್ಲಿ, ವಿವಿಧ ಸ್ಟಾಲ್ ಗಳಲ್ಲಿ ಹಾಗೂ ಯುವ ದಸರ, ಯುವ ಸಂಭ್ರಮ, ಆಹಾರ ಮೇಳ, ಫ್ಲವರ್ ಶೋ, ಕುಸ್ತಿ ಇನ್ನು ಮುಂತಾದ ವೇದಿಕೆಗಳಲ್ಲಿ ತಮ್ಮ ಜಾಹೀರಾತುಗಳನ್ನು ಹಾಕುವ ಮೂಲಕ ಪ್ರಾಯೋಜಕತ್ವ ನೀಡಿದವರಿಗೆ ಅವಕಾಶ ಸಿಗಲಿದೆ ಎನ್ನುತ್ತಾರೆ ಪ್ರವಾಸೋದ್ಯಮ ಇಲಾಖೆಯ ಜಂಟಿ ನಿರ್ದೇಶಕರಾದ ಎಂ.ಕೆ.ಸವಿತ.

ಈಗಾಗಲೇ ಸರ್ಕಾರ ಮೈಸೂರು ದಸರಾಕ್ಕಾಗಿ 30 ಕೋಟಿ ರೂ. ಘೋಷಿಸಿದೆ. ಇನ್ನೂ ಹೆಚ್ಚುವರಿ 10 ಕೋಟಿ ರೂ. ಬಳಕೆ ಮಾಡಿಕೊಳ್ಳಲು ಸಿಎಂ ಸಿದ್ದರಾಮಯ್ಯ ಅವಕಾಶ ನೀಡಿದ್ದಾರೆ. ಹೀಗಿದ್ದರೂ ದಸರಾದಲ್ಲಿ ಮತ್ತಷ್ಟು ಪ್ರಾಯೋಜಕತ್ವ ಪಡೆದು ಅದ್ದೂರಿಯಲ್ಲಿ ದಸರಾ ಆಚರಿಸುವುದು ಸಮಿತಿ ಉದ್ದೇಶ. ದಸರಾಕ್ಕೆ ಎರಡು ದಶಕದಿಂದಲೂ ಪ್ರಾಯೋಜಕತ್ವ ಪಡೆಯುತ್ತಾ ಬರಲಾಗುತ್ತಿದ್ದು, ಈಗ ಮತ್ತೆ ಮುಂದುವರಿಯಲಿದೆ.

mysore-dasara_Entry_Point