Mysore Dasara2024: ಮೈಸೂರು ದಸರಾ ಎರಡನೇ ತಂಡದ ಆನೆಗಳ ತೂಕ ಪರೀಕ್ಷೆ, ಸುಗ್ರೀವನೇ ಬಲಶಾಲಿ; ಪ್ರಶಾಂತಗೆ ಶುರುವಾಯ್ತು ಭೇದಿ-mysore news mysore dasara2024 elephants 2nd batch weighing sugreeva strongest prashant having dysentery kub ,ಕರ್ನಾಟಕ ಸುದ್ದಿ
ಕನ್ನಡ ಸುದ್ದಿ  /  ಕರ್ನಾಟಕ  /  Mysore Dasara2024: ಮೈಸೂರು ದಸರಾ ಎರಡನೇ ತಂಡದ ಆನೆಗಳ ತೂಕ ಪರೀಕ್ಷೆ, ಸುಗ್ರೀವನೇ ಬಲಶಾಲಿ; ಪ್ರಶಾಂತಗೆ ಶುರುವಾಯ್ತು ಭೇದಿ

Mysore Dasara2024: ಮೈಸೂರು ದಸರಾ ಎರಡನೇ ತಂಡದ ಆನೆಗಳ ತೂಕ ಪರೀಕ್ಷೆ, ಸುಗ್ರೀವನೇ ಬಲಶಾಲಿ; ಪ್ರಶಾಂತಗೆ ಶುರುವಾಯ್ತು ಭೇದಿ

Dasara Elephants ಮೈಸೂರು ದಸರಾಕ್ಕೆಂದು ಬಂದಿರುವ ಎರಡನೇ ತಂಡದ ಆನೆಗಳ ತೂಕದ ಪ್ರಕ್ರಿಯೆ ಶುಕ್ರವಾರ ನಡೆಯಿತು.ವರದಿ: ಪಿ.ರಂಗಸ್ವಾಮಿ, ಮೈಸೂರು

ಮೈಸೂರಿನಲ್ಲಿ ಆನೆಗಳ ತೂಕದ ಪ್ರಕ್ರಿಯೆ ನಡೆದು ಸುಗ್ರೀವ ಆನೆ ಬಲಶಾಲಿ ಎನ್ನಿಸಿತು.
ಮೈಸೂರಿನಲ್ಲಿ ಆನೆಗಳ ತೂಕದ ಪ್ರಕ್ರಿಯೆ ನಡೆದು ಸುಗ್ರೀವ ಆನೆ ಬಲಶಾಲಿ ಎನ್ನಿಸಿತು.

ಮೈಸೂರು: ಮೈಸೂರು ದಸರಾ ಮಹೋತ್ಸವದಲ್ಲಿ ಭಾಗಿಯಾಗಲು ಆಗಮಿಸಿರುವ ಎರಡನೇ ತಂಡದ ಆನೆಗಳ ಬಲಾಬಲ ಲೆಕ್ಕಾಚಾರ ಶುಕ್ರವಾರ ನಡೆಯಿತು. ಎರಡನೇ ತಂಡದಲ್ಲಿ ಆಗಮಿಸಿರುವ ಐದು ಆನೆಗಳ ತೂಕವನ್ನು ಅರಣ್ಯ ಇಲಾಖೆ ಅಧಿಕಾರಿಗಳು ಹಾಗೂ ಸಿಬ್ಬಂದಿ ಪರಿಶೀಲಿಸಿದರು. ಐದು ಆನೆಗಳಲ್ಲಿ ಸುಗ್ರೀವ ಆನೆ 5190 ಕೆ ಜಿ ತೂಗುವುದರಿಂದ ಬಲಶಾಲಿ ಎನ್ನಿಸಿತು.ಅಭಿಮನ್ಯುವಿಗಿಂತ ಮೂರು ನೂರು ಕೆ.ಜಿ.ಕಡಿಮೆ ಇದ್ದು ಬಲದಲ್ಲಿ ಎರಡನೇ ಸ್ಥಾನದಲ್ಲಿ ಸುಗ್ರೀವ ಇದ್ದಾನೆ. ಆನೆಗಳು ದಸರಾಗೆ ಬಂದಾಗ ತೂಕ ಹಾಕುವ ಸಂಪ್ರದ್ರಾಯವನ್ನು ಮೊದಲಿನಿಂದಲೂ ಹಾಕಿಕೊಂಡು ಬರಲಾಗುತ್ತಿದೆ. ಈಗಾಗಲೇ ಮೊದಲ ತಂಡದ ತೂಕ ಹಾಕುವ ಪ್ರಕ್ರಿಯೆ ಕಳೆದ ತಿಂಗಳೇ ನಡೆದಿತ್ತು. ಈಗ ಎರಡನೇ ತಂಡದ ಸರದಿ.

ಗುರುವಾರ ಸಂಜೆ ಆಗಮಿಸಿದ ಆನೆಗಳನ್ನು ಶುಕ್ರವಾರ ಬೆಳಿಗ್ಗೆ ಮೈಸೂರು ಅರಮನೆ ಆವರಣದಿಂದ ತಾಲೀಮಿಗೆ ಕರೆದುಕೊಂಡು ಹೋಗುವ ಮುನ್ನ ತೂಕಕ್ಕೆ ಕರೆ ತರಲಾಯಿತು.

ಮೈಸೂರಿನ ದೇವರಾಜ ಮೊಹಲ್ಲಾದ ಧನ್ವಂತರಿ ರಸ್ತೆಯಲ್ಲಿರುವ ಸಾಯಿರಾಂ ಅಂಡ್ ಕೊ., ಎಲೆಕ್ಟ್ರಾನಿಕ್ ತೂಕ ಮಾಪನ ಕೇಂದ್ರದಲ್ಲಿ ನಡೆದ ಆನೆಗಳ ತೂಕ ಪರೀಕ್ಷೆ ಮಾಡಿದಾಗ ದಸರಾ ಗಜಪಡೆಯ ಕ್ಯಾಪ್ಟನ್ ಅಭಿಮನ್ಯುವಿನ ಬಳಿಕ ಅತಿ ಹೆಚ್ಚು ತೂಕ ಹೊಂದಿರುವ ಸುಗ್ರೀವ ಎನ್ನುವುದು ತಿಳಿಯಿತು. ಇದೇ ತಂಡದ ಪ್ರಶಾಂತ್ ಆನೆ 4875 ಕೆ ಜಿ ತೂಗಿತು.

ಕೆ ಜಿ, ಮಹೇಂದ್ರ 4910 ಕೆ ಜಿ, ದೊಡ್ಡಹರವೆ ಲಕ್ಷ್ಮಿ 3485 ಕೆ ಜಿ, ಹಿರಣ್ಯ 2930 ತೂಗಿದವು. ತೂಕದ ಪ್ರಕ್ರಿಯೆ ಮುಗಿಸಿ ಅರಮನೆಗೆ ಆನೆಗಳು ವಾಪಾಸಾದವು. ಇಂದು ಸಂಜೆಯಿಂದಲೇ ಎಲ್ಲಾ ಆನೆಗಳು ತಾಲಿಮಿನಲ್ಲಿ ಭಾಗಿಯಾಗುತ್ತವೆ ಎಂದು ಮೈಸೂರು ವನ್ಯಜೀವಿ ವಿಭಾಗದ ಡಿಸಿಎಫ್‌ ಡಾ.ಪ್ರಭುಗೌಡ ಬಿರಾದಾರ ಹೇಳಿದ್ದಾರೆ.

ಆನೆಗೆ ಭೇದಿ

ಈ ನಡುವೆ ಕಾಡಿನಿಂದ ಆಗಮಿಸಿ ಮೈಸೂರು ಅರಮನೆ ಆವರಣದಲ್ಲಿ ಬೀಡು ಬಿಟ್ಟಿರುವ ಪ್ರಶಾಂತ ಆನೆಗೆ ಭೇದಿ ಕಾಣಿಸಿಕೊಂಡಿದೆ. ರಾತ್ರಿಯಿಂದಲೇ ಈ ರೀತಿ ಆಗಿದೆ.

ಪ್ರಶಾಂತ ಆನೆಗೆ ಭೇದಿ ಕಾಣಿಸಿಕೊಂಡ ನಂತರ ಅದಕ್ಕೆ ಸೂಕ್ತ ಚಿಕಿತ್ಸೆ ನೀಡಲಾಗಿದೆ. ಉಳಿದಂತೆ ಆನೆಗಳ ಆರೋಗ್ಯ ಉತ್ತಮವಾಗಿದೆ ಎನ್ನುವುದು ಅಧಿಕಾರಿಗಳ ಹೇಳಿಕೆ.

ಅಂಬಾರಿ ತಾಲೀಮು

ಆನೆಗಳಿಗೆ ಸೆಪ್ಟೆಂಬರ್ 15ರ ಬಳಿಕ ಮರದ ಅಂಬಾರಿ ಹೊರಿಸಿ ತಾಲಿಮು ನಡೆಸಲು ಸಿದ್ದತೆ ಮಾಡಿಕೊಳ್ಳಲಾಗುತ್ತದೆ. ಅಭಿಮನ್ಯುವಿನ ಜತೆಗೆ ಧನಂಜಯ, ಗೋಪಿ, ಭೀಮ ಆನೆಗೂ ಅಂಬಾರಿ ತಾಲೀಮು ಮಾಡಿಸುವ ಸಾಧ್ಯತೆಯಿದೆ.

ಮುಂದಿನ ದಸರೆಗಳಿಗೆ ಅಣಿಯಾಗಲು ಪೂರಕವಾಗಿ ಅಭಿಮನ್ಯುವಿನ ಜತೆಗೆ ಇತರೆ ಆನೆಗಳನ್ನು ಸಜ್ಜುಗೊಳಿಸಲಾಗುತ್ತದೆ.

ವರಲಕ್ಷ್ಮಿ ಕ್ಯಾಂಪ್ ನ ಅತ್ಯಂತ ಹಿರಿಯ ಆನೆಯಾಗಿದೆ. ಅವಶ್ಯಕತೆ ಇದ್ದಾಗ ಮಾತ್ರ ವರಲಕ್ಷ್ಮಿ ಆನೆಯನ್ನು ತಾಲಿಮಿಗೆ ಕರೆ ತರಲಾಗುತ್ತದೆ. ಈ ಆನೆ ವಯಸ್ಸಿನಲ್ಲಿ ಹಿರಿಯದಾಗಿರುವುದರಿಂದ ಹೆಚ್ಚಾಗಿ ತಾಲೀಮಿಗೆ ಕರೆ ತರುತ್ತಿಲ್ಲ. ಉಳಿದಂತೆ ಎಲ್ಲಾ ಹದಿನಾಲ್ಕು ಆನೆಗಳು ನಿತ್ಯ ತಾಲೀಮಿನಲ್ಲಿ ಭಾಗಿಯಾಗಲಿವೆ.

(ವರದಿ: ಪಿ.ರಂಗಸ್ವಾಮಿ.ಮೈಸೂರು)