Mysore News: ಮೈಸೂರಿನಲ್ಲಿ ಮನಕಲಕುವ ಸನ್ನಿವೇಶ, ಮನೆ ಬಿಟ್ಟ ಅಪ್ಪನಿಗೆ ಕಾಯುತ್ತಿದೆ ಮಗಳ ಮೃತದೇಹ-mysore news mysore heart touching story father left home 3 months ago daughter died in accident waiting fathers arrival ,ಕರ್ನಾಟಕ ಸುದ್ದಿ
ಕನ್ನಡ ಸುದ್ದಿ  /  ಕರ್ನಾಟಕ  /  Mysore News: ಮೈಸೂರಿನಲ್ಲಿ ಮನಕಲಕುವ ಸನ್ನಿವೇಶ, ಮನೆ ಬಿಟ್ಟ ಅಪ್ಪನಿಗೆ ಕಾಯುತ್ತಿದೆ ಮಗಳ ಮೃತದೇಹ

Mysore News: ಮೈಸೂರಿನಲ್ಲಿ ಮನಕಲಕುವ ಸನ್ನಿವೇಶ, ಮನೆ ಬಿಟ್ಟ ಅಪ್ಪನಿಗೆ ಕಾಯುತ್ತಿದೆ ಮಗಳ ಮೃತದೇಹ

mysore accident ಇದು ಮನಕಲಕುವ ಘಟನೆ. ಮೈಸೂರಿನಲ್ಲಿ ಅಪ್ಪ ಮನೆ ಬಿಟ್ಟು ಹೋದ ಬೇಸರದಲ್ಲೇ ಇದ್ದ ಮಗಳೂ ಅಪಘಾತದಲ್ಲಿ ತೀರಿಕೊಂಡಳು. ಪ್ರೀತಿಯ ಅಪ್ಪ ಮಗಳ ಮುಖವನ್ನು ಈಗಲಾದರೂ ನೋಡಲು ಬರಬಹುದು ಎನ್ನುವ ಕಾತರ ಮನೆಯವರದ್ದು.

ಅಪಘಾತದಲ್ಲಿ ಮೃತಪಟ್ಟ ಕವನ. ಮನೆ ಬಿಟ್ಟ ತಂದೆ ನಾಗರಾಜು.
ಅಪಘಾತದಲ್ಲಿ ಮೃತಪಟ್ಟ ಕವನ. ಮನೆ ಬಿಟ್ಟ ತಂದೆ ನಾಗರಾಜು. (TV10 )

ಮೈಸೂರು: ಇದೊಂದು ನಿಜಕ್ಕೂ ಮನಮಿಡಿಯುವ ಸನ್ನಿವೇಶ. ಮನೆಯಲ್ಲಿನ ಸ್ಥಿತಿಯನ್ನು ಗಮನಿಸಿದ ಯಾರಿಗೆ ಆದರೂ ಮನ ಕಲಕಿಬಿಡಬಹುದು. ಅಷ್ಟರ ಮಟ್ಟಿಗೆ ಇದೊಂದು ರೀತಿ ದುರಂತಗಾಥೆ. ಇದು ನಡೆದಿರುವುದು ಮೈಸೂರಿನಲ್ಲಿ. ಆಕೆಯ ಅಪ್ಪನ ಪ್ರೀತಿಯ ಮಗಳು. ಅಪ್ಪನ ಆಸರೆಯಲ್ಲಿಯೇ ಬೆಳೆಯದವಳು. ಪದವಿ ಶಿಕ್ಷಣ ಪಡೆಯುತ್ತಿದ್ದವಳು. ಅದೇನಾಯಿತೋ ಅಪ್ಪ ಕೆಲವೇ ದಿನಗಳ ಹಿಂದೆ ಮನೆಯನ್ನು ಬಿಟ್ಟು ಹೊರಟೇ ಬಿಟ್ಟರು. ಅಪ್ಪನ ಬರುವಿಕೆಯ ಕೊರಗಿನಲ್ಲಿಯೇ ಕುಟುಂಬದವರು ದಿನ ಕಳೆದರು. ಅಪ್ಪ ಮನೆಗೆ ಬರುವವರೆಂದು ಕಾದಿದ್ದ ಮಗಳೂ ಅಪಘಾತದಲ್ಲಿ ತೀರಿ ಹೋದಳು. ಆಕೆಯ ಶವವನ್ನು ಮನೆಯಲ್ಲಿ ಇರಿಸಿಕೊಂಡು ಅಪ್ಪ ಬಂದು ಪ್ರೀತಿಯ ಮಗಳನ್ನು ನೋಡಬಹುದು ಎನ್ನುವ ಕರುಳು ಬಳ್ಳಿಯ ನಿರೀಕ್ಷೆಯೊಂದಿಗೆ.

ಮೈಸೂರಿನಲ್ಲಿ ಉದ್ಯೋಗಿಯಾಗಿರುವ ನಾಗರಾಜು ಅವರು ಕನಕಗಿರಿ ನಿವಾಸಿ. ಪತ್ನಿ ಇಂದಿರಾ, ಪುತ್ರಿ ಕವನಾ ಅವರೊಂದಿಗೆ ಇದ್ದವರು. ಆದರೆ ಮೂರು ತಿಂಗಳ ಹಿಂದೆ ಮನೆಯಲ್ಲಿ ಉಂಟಾದ ಮನಸ್ತಾಪದಿಂದ ಹೊರಟೇ ಹೋದರು. ಮನೆಗೆ ಮತ್ತೆ ಬರಲೇ ಇಲ್ಲ. ,ಮೂರು ತಿಂಗಳಿನಿಂದಲೂ ಇಡೀ ಕುಟುಂಬ ನಾಗರಾಜು ಅವರು ಆಗ ಬರಬಹುದು, ಈಗ ಬರಬಹುದು ಎಂದು ಕಾಯುತ್ತಲೇ ಇದೆ. ಈವರೆಗೂ ನಾಗರಾಜು ಬಂದಿಲ್ಲ. ಅವರು ಎಲ್ಲಿದ್ದಾರೆ ಎನ್ನುವ ಮಾಹಿತಿಯು ಇಲ್ಲ. ಪೊಲೀಸ್‌ ದೂರು ಕೂಡ ನೀಡಲಾಗಿದೆ. ಎಲ್ಲ ಪ್ರಯತ್ನಗಳನ್ನು ಮಾಡಿ ಮನೆಯವರು ಸುಮ್ಮನಾಗಿದ್ದಾರೆ. ಮಗಳು ಕವನಾ ಕೂಡ ಇದೇ ಕೊರಗಿನಲ್ಲಿಯೇ ಶಿಕ್ಷಣವನ್ನೂ ಮುಂದುವರೆಸಿದ್ದಳು.

ಇದರ ನಡುವೆ ಮೈಸೂರಿನ ಆದಿಚುಂಚನಗಿರಿ ಕಾಲೇಜಿನಲ್ಲಿ ಅಂತಿಮ ವರ್ಷದ ಬಿಕಾಂ ಓದುತ್ತಿದ್ದ ಕವನ ಸ್ನೇಹಿತರ ಜೊತೆ ತೆರಳುತ್ತಿದ್ದಾಗ ದಾರುಣವಾಗಿ ಸಾವನ್ನಪ್ಪಿದ್ದಾಳೆ.ಹೂಟಗಳ್ಳಿಯಲ್ಲಿ ಸ್ನೇಹಿತರ ಜೊತೆ ಸ್ಕೂಟರ್ ನಲ್ಲಿ ತೆರಳುತ್ತಿದ್ದ ವೇಳೆ ಡಿವೈಡರ್ ಗೆ ಢಿಕ್ಕಿ ಹೊಡೆದ ಪರಿಣಾಮ ಕವನ ಸ್ಥಳದಲ್ಲೇ

ಮೃತಪಟ್ಟಿದ್ದಾಳೆ. ಕುಟುಂಬದವರಿಗೆ ಪೊಲೀಸರು ವಿಷಯ ತಿಳಿಸಿ ಮರಣೋತ್ತರ ಪರೀಕ್ಷೆ ನಂತರ ಸೋಮವಾರ ಸಂಜೆಯೇ ದೇಹವನ್ನು ಮನೆಯವರಿಗೆ ನೀಡಲಾಗಿದೆ. ಟುಂಬಕ್ಕೆ ಊರುಗೋಲಾಗಿದ್ದ ತಂದೆ ಇಲ್ಲದೆ ಅಘಾತಗೊಂಡಿದ್ದ ಕುಟುಂಬಕ್ಕೆ ಇದೀಗ ಮಗಳು ಅಪಘಾತದಲ್ಲಿ ಮೃತಪಟ್ಟಿರುವುದು ಮತ್ತೊಂದು ಶಾಕ್ ಗೆ ಕಾರಣವಾಗಿದೆ. ಆದರೆ ಮಗಳ ಮುಖವನ್ನ ನೋಡಲು ತಂದೆ ಬರಬಹುದು ಎನ್ನುವ ನಿರೀಕ್ಷೆಯಲ್ಲಿ ಕುಟುಂಬದವರು ಇದ್ದಾರೆ.

ಎಲ್ಲೇ ಇದ್ರೂ ವಾಪಸ್ ಬನ್ನಿ ನಿಮ್ಮ ಮಗಳು ಅಪಘಾತದಲ್ಲಿ ಮೃತಪಟ್ಟಿದ್ದಾಳೆ.ನಿಮಗಾಗಿ ಮೃತದೇಹವನ್ನ ಇರಿಸಿಕೊಂಡಿದ್ದೇವೆ.ಯಾವುದೇ ಬೇಸರವಿದ್ರೂ ಮರೆತು ಬನ್ನಿ.ನಾಳೆ ಅಂತ್ಯಕ್ರಿಯೆ ಮಾಡುವುದಾಗಿ ಕಳಕಳಿಯಿಂದ ಮನವಿ ಮಾಡಿದ್ದಾರೆ.ಮಗಳ ಸಾವಿನ ಮಾಹಿತಿ ಅರಿತ ಮೇಲಾದ್ರೂ ಬರಬಹುದೆಂಬ ಆಶಾಕಿರಣ ಕುಟುಂಬಸ್ಥರಲ್ಲಿದೆ. ಮಂಗಳವಾರ ಕವನಾ ಅಪ್ಪನ ಬರುವಿಕೆ ನೋಡಿಕೊಂಡು ಅಂತ್ಯಕ್ರಿಯೆ ನಡೆಸಲಾಗುತ್ತದೆ ಎನ್ನುವುದು ಕುಟುಂಬಸ್ಥರು ಬೇಸರದಿಂದಲೇ ಹೇಳುತ್ತಾರೆ.