ಮೈಸೂರಿನಲ್ಲಿ ನಮ್ಮ ಯಾತ್ರಿ ಆ್ಯಪ್ ಕಾರ್ಯಾರಂಭ, 8 ಸಾವಿರಕ್ಕೂ ಹೆಚ್ಚು ಚಾಲಕರು ಸೇರ್ಪಡೆ; ಬೆಳಗಾವಿ, ಬೀದರ್‌ನತ್ತ ಮುಂದಿನ ಪ್ರಯಾಣ
ಕನ್ನಡ ಸುದ್ದಿ  /  ಕರ್ನಾಟಕ  /  ಮೈಸೂರಿನಲ್ಲಿ ನಮ್ಮ ಯಾತ್ರಿ ಆ್ಯಪ್ ಕಾರ್ಯಾರಂಭ, 8 ಸಾವಿರಕ್ಕೂ ಹೆಚ್ಚು ಚಾಲಕರು ಸೇರ್ಪಡೆ; ಬೆಳಗಾವಿ, ಬೀದರ್‌ನತ್ತ ಮುಂದಿನ ಪ್ರಯಾಣ

ಮೈಸೂರಿನಲ್ಲಿ ನಮ್ಮ ಯಾತ್ರಿ ಆ್ಯಪ್ ಕಾರ್ಯಾರಂಭ, 8 ಸಾವಿರಕ್ಕೂ ಹೆಚ್ಚು ಚಾಲಕರು ಸೇರ್ಪಡೆ; ಬೆಳಗಾವಿ, ಬೀದರ್‌ನತ್ತ ಮುಂದಿನ ಪ್ರಯಾಣ

ನಮ್ಮ ಯಾತ್ರಿ ಆ್ಯಪ್ ಇದೀಗ ಮೈಸೂರಿನಲ್ಲೂ ಕಾರ್ಯಾರಂಭ ಮಾಡಿದೆ. ಈಗಾಗಲೇ 8 ಸಾವಿರಕ್ಕೂ ಹೆಚ್ಚು ಚಾಲಕರು ಇದಕ್ಕೆ ಸೇರ್ಪಡೆಯಾಗಿದ್ದಾರೆ. ಬೆಂಗಳೂರು, ತುಮಕೂರು, ಕಲಬುರಗಿ ಮತ್ತು ಮಂಗಳೂರಿನಲ್ಲಿ ಈಗಾಗಲೇ ನಮ್ಮ ಯಾತ್ರಿ ಸೇವೆ ಸಲ್ಲಿಸುತ್ತಿದೆ.

ಮೈಸೂರಿನಲ್ಲಿ ನಮ್ಮ ಯಾತ್ರಿ ಆ್ಯಪ್ ಕಾರ್ಯಾರಂಭ, 8 ಸಾವಿರಕ್ಕೂ ಹೆಚ್ಚು ಚಾಲಕರು ಸೇರ್ಪಡೆ
ಮೈಸೂರಿನಲ್ಲಿ ನಮ್ಮ ಯಾತ್ರಿ ಆ್ಯಪ್ ಕಾರ್ಯಾರಂಭ, 8 ಸಾವಿರಕ್ಕೂ ಹೆಚ್ಚು ಚಾಲಕರು ಸೇರ್ಪಡೆ

ಬೆಂಗಳೂರು: ಓಲಾ, ಉಬರ್‌ ಮುಂತಾದ ಟ್ಯಾಕ್ಸಿ ಅಗ್ರಿಗೇಟರ್‌ಗಳಿಗೆ ಎದುರಾಗಿ ಬೆಂಗಳೂರಿನಲ್ಲಿ ಆರಂಭಗೊಂಡಿದ್ದ ನಮ್ಮ ಯಾತ್ರಿ ಆ್ಯಪ್ ಇದೀಗ ಮೈಸೂರಿನಲ್ಲೂ ಕಾರ್ಯಾರಂಭ ಮಾಡಿದೆ. ತುಮಕೂರು, ಕಲಬುರಗಿ ಮತ್ತು ಮಂಗಳೂರಿನಲ್ಲಿ ಈಗಾಗಲೇ ನಮ್ಮ ಯಾತ್ರಿಗೆ ಚಾಲನೆ ನೀಡಲಾಗಿದೆ. ಇದೀಗ ನಮ್ಮ ಯಾತ್ರಿ ಮೈಸೂರಿನಲ್ಲೂ ಆರಂಭಗೊಂಡಿದೆ. 'ನಮ್ಮ ಯಾತ್ರಿ'ಯನ್ನು ಬುಧವಾರ ಮೈಸೂರಿನಲ್ಲಿ ಜಿಲ್ಲಾಧಿಕಾರಿ ಜಿ ಲಕ್ಷ್ಮಿಕಾಂತ್ ರೆಡ್ಡಿ ಅಧಿಕೃತವಾಗಿ ಬಿಡುಗಡೆ ಮಾಡಿದ್ದಾರೆ.

"ಮೈಸೂರಿಗೆ ನಮ್ಮ ಯಾತ್ರಿ ಆಗಮಿಸಿರುವುದು ಉತ್ತಮ ಬೆಳವಣಿಗೆ. ಇದು ಚಾಲಕರಿಗೆ ಪ್ರಯೋಜನಕಾರಿ. ಜತೆಗೆ, ನಾಗರಿಕರಿಗೆ ದೈನಂದಿನ ಪ್ರಯಾಣದ ಅನುಭವವನ್ನು ಉತ್ತಮಗೊಳಿಸುತ್ತದೆ" ಎಂದು ಮೈಸೂರಿನಲ್ಲಿ ನಮ್ಮ ಯಾತ್ರಿ ಉದ್ಘಾಟನೆಗೊಳಿಸಿದ ಬಳಿಕ ಜಿಲ್ಲಾಧಿಕಾರಿ ಜಿ ಲಕ್ಷ್ಮಿಕಾಂತ್ ರೆಡ್ಡಿ ಹೇಳಿದ್ದಾರೆ.

"ಮೈಸೂರಿನಲ್ಲಿ ಈಗಾಗಲೇ ನಮ್ಮ ಯಾತ್ರಿ ಆ್ಯಪ್‌ಗೆ 8 ಸಾವಿರಕ್ಕೂ ಹೆಚ್ಚು ಚಾಲಕರು ಸೇರ್ಪಡೆಯಾಗಿದ್ದಾರೆ. ಇಲ್ಲಿವಯರೆಗೆ 3.16 ಲಕ್ಷ ಟ್ರಿಪ್‌ಗಳನ್ನು ಪೂರ್ಣಗೊಳಿಸಲಾಗಿದೆ" ಎಂದು ನಮ್ಮ ಯಾತ್ರಿಯು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದೆ.

ನಮ್ಮ ಯಾತ್ರಿ ಆ್ಯಪ್ ಇನ್ನು ಬೀದರ್‌ ಮತ್ತು ಬೆಳಗಾವಿಯಲ್ಲೂ ಆರಂಭವಾಗಲಿದೆ. ಈ ಮೂಲಕ ಕರ್ನಾಟಕದ್ಯಾಂತ ನಮ್ಮ ಯಾತ್ರಿ ಆ್ಯಪ್ ವಿಸ್ತರಣೆಯಾಗಲಿದೆ ಎಂದು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದೆ.

ನಮ್ಮ ಯಾತ್ರಿ ಆ್ಯಪ್ ಬಗ್ಗೆ

ಇದು ಕರ್ನಾಟಕದ ಸ್ವದೇಶಿ ಆ್ಯಪ್. ಓಲಾ, ಉಬರ್‌ ಮುಂತಾದ ಅಪ್ಲಿಕೇಷನ್‌ಗಳು ಕಮಿಷನ್‌ ಆಧಾರದಲ್ಲಿ ಕಾರ್ಯನಿರ್ವಹಿಸುತ್ತದೆ. ಆದರೆ, ಈ ಅಪ್ಲಿಕೇಷನ್‌ ಚಾಲಕರಿಂದ ಮತ್ತು ಪ್ರಯಾಣಿಕರಿಂದ ಯಾವುದೇ ಕಮಿಷನ್‌ ಪಡೆಯುವುದಿಲ್ಲ. ನಮ್ಮ ಯಾತ್ರಿ ಆ್ಯಪ್ ಈಗ ಆಟೋ ಮಾತ್ರವಲ್ಲದೆ ಟ್ಯಾಕ್ಸಿ ಸೇವೆಗೂ ವಿಸ್ತರಣೆಯಾಗಿದೆ. ಎಸಿ ಅಲ್ಲದ ಮಿನಿ, ಎಸಿ ಮಿನಿ, ಸೆಡಾನ್ ಮತ್ತು ಎಕ್ಸ್‌ಎಲ್‌ ಕ್ಯಾಬ್‌ಗಳನ್ನೂ ಬುಕ್‌ ಮಾಡಬಹುದು.

Whats_app_banner