ಮೈಸೂರು ದಸರಾಕ್ಕೆ ಬರುತ್ತೀದ್ದೀರಾ, ಒಮ್ಮೆ ಗಮನಿಸಿ; ಈ ಬಾರಿ ಹಲವಾರು ಕಾರ್ಯಕ್ರಮಗಳ ಸ್ಥಳಗಳಲ್ಲಿ ಆಗಿದೆ ಬದಲಾವಣೆ, ಟಿಕೆಟ್‌ ದರ ಕೂಡ
ಕನ್ನಡ ಸುದ್ದಿ  /  ಕರ್ನಾಟಕ  /  ಮೈಸೂರು ದಸರಾಕ್ಕೆ ಬರುತ್ತೀದ್ದೀರಾ, ಒಮ್ಮೆ ಗಮನಿಸಿ; ಈ ಬಾರಿ ಹಲವಾರು ಕಾರ್ಯಕ್ರಮಗಳ ಸ್ಥಳಗಳಲ್ಲಿ ಆಗಿದೆ ಬದಲಾವಣೆ, ಟಿಕೆಟ್‌ ದರ ಕೂಡ

ಮೈಸೂರು ದಸರಾಕ್ಕೆ ಬರುತ್ತೀದ್ದೀರಾ, ಒಮ್ಮೆ ಗಮನಿಸಿ; ಈ ಬಾರಿ ಹಲವಾರು ಕಾರ್ಯಕ್ರಮಗಳ ಸ್ಥಳಗಳಲ್ಲಿ ಆಗಿದೆ ಬದಲಾವಣೆ, ಟಿಕೆಟ್‌ ದರ ಕೂಡ

ಮೈಸೂರು ದಸರಾದ ಚಟುವಟಿಕೆಗಳು ಹಲವು ಕಡೆ ನಡೆಯುತ್ತವೆ. ಈ ಬಾರಿ ಯುವ ದಸರಾ, ಆಹಾರ ಮೇಳ, ಪುಸ್ತಕ ಮೇಳ ಸಹಿತ ಕೆಲವು ದಸರಾ ಕಾರ್ಯಕ್ರಮ ನಡೆಯುವ ಸ್ಥಳ ಬದಲಾವಣೆಯಾಗಿದೆ.ಇದರ ವಿವರ ಇಲ್ಲಿದೆ.

ಮೈಸೂರು ದಸರಾದಲ್ಲಿ ಯುವ ದಸರಾ ಸೇರಿ ಹಲವು  ಕಾರ್ಯಕ್ರಮಗಳ ಸ್ಥಳ ಬದಲಾವಣೆಯಾಗಿದೆ.
ಮೈಸೂರು ದಸರಾದಲ್ಲಿ ಯುವ ದಸರಾ ಸೇರಿ ಹಲವು ಕಾರ್ಯಕ್ರಮಗಳ ಸ್ಥಳ ಬದಲಾವಣೆಯಾಗಿದೆ.

ಮೈಸೂರು: ಮೈಸೂರು ದಸರಾದಲ್ಲಿ ಹದಿನೈದಕ್ಕೂ ಹೆಚ್ಚು ಕಾರ್ಯಕ್ರಮಗಳು ನಿಗದಿತ ಸ್ಥಳಗಳಲ್ಲಿಯೇ ಹಲವಾರು ವರ್ಷಗಳಿಂದ ನಡೆದುಕೊಂಡು ಬರುತ್ತಿದ್ದವು. ಈ ಬಾರಿ ಕೆಲವು ಕಾರ್ಯಕ್ರಮಗಳ ಸ್ಥಳಗಳಲ್ಲಿ ಬದಲಾವಣೆಯಾಗಿದೆ.ಮುಖ್ಯವಾಗಿ ಯುವ ದಸರಾ, ಆಹಾರ ಮೇಳ, ಪುಸ್ತಕ ಮೇಳ, ಕವಿಗೋಷ್ಠಿಗಳು ಸೇರಿದಂತೆ ಕೆಲವು ಕಾರ್ಯಕ್ರಮಗಳ ಸ್ಥಳಗಳನ್ನು ಸಂಚಾರ ಸಹಿತ ನಾನಾ ಕಾರಣಗಳಿಂದ ಬದಲಾವಣೆ ಮಾಡಲಾಗಿದೆ. ಯುವ ದಸರಾವಂತೂ ವಿಶಾಲ ವೇದಿಕೆಗೆ ವರ್ಗಗೊಂಡಿದೆ.

  • ಯುವದಸರಾ ಮೊದಲೆಲ್ಲಾ ಮೈಸೂರಿನ ಮಾನಸ ಗಂಗೋತ್ರಿಯ ಬಯಲು ರಂಗಮಂದಿರದಲ್ಲಿ ನಡೆಯುತ್ತಿತ್ತು. ಆನಂತರ ಮಹಾರಾಜ ಕಾಲೇಜು ಮೈದಾನಕ್ಕೆ ಯುವ ದಸರಾ ಸ್ಥಳಾಂತರಿಸಲಾಯಿತು. ಈಗ ಸಂಚಾರ ದಟ್ಟಣೆಯ ಕಾರಣದಿಂದ ಯುವ ದಸರಾ ಮೊದಲ ಬಾರಿಗೆ ಮೈಸೂರಿನ ಹೊರ ವಲಯಕ್ಕೆ ಸ್ಥಳಾಂತರಗೊಂಡಿದೆ. ಚಾಮುಂಡಿಬೆಟ್ಟದ ತಪ್ಪಲಿನಲ್ಲಿರುವ ಉತ್ತನಹಳ್ಳಿ ಗ್ರಾಮದ ಸಮೀಪದ ವಿಶಾಲ ಜಾಗಕ್ಕೆ ಯುವ ದಸರಾ ಸ್ಥಳಾಂತರಗೊಂಡಿದೆ. ಒಂದು ಲಕ್ಷ ಮಂದಿ ಕುಳಿತುಕೊಳ್ಳಲು ಅವಕಾಶವಾಗುವ ವಿಶಾಲ ವೇದಿಕೆಯನ್ನು ನಿರ್ಮಿಸಲಾಗುತ್ತಿದೆ. ಮಹಾರಾಜ ಕಾಲೇಜು ಮೈದಾನದಲ್ಲಿ 25 ಸಾವಿರ ಮಂದಿಗೆ ಮಾತ್ರ ವೀಕ್ಷಣೆಗೆ ಅವಕಾಶ ಆಗುತ್ತಿತ್ತು. ಹೊಸ ಜಾಗ ಆಗಿರುವುದರಿಂದ ಇಲ್ಲಿ ಸುರಕ್ಷತೆಗೆ ಇನ್ನಿಲ್ಲದ ಒತ್ತು ನೀಡಲಾಗಿದೆ. ಸಾರಿಗೆ ಬಸ್‌ ವ್ಯವಸ್ಥೆಯನ್ನೂ ಬಂದು ಹೋಗಲು ವಿವಿಧ ಬಡಾವಣೆಗಳಿಗೆ ಮಾಡಲಾಗುತ್ತಿದೆ.

ಇದನ್ನೂ ಓದಿರಿ: ಮೈಸೂರು ದಸರಾ ಯುವ ಸಂಭ್ರಮದಲ್ಲಿ ದೇಶ ಭಕ್ತಿಯ ಪರಾಕಾಷ್ಠೆ, ಸರ್ವಧರ್ಮ ಸಹಿಷ್ಣುತೆಯ ಸಂದೇಶ, ಜೋಶ್‌ ನಡುವೆ ಗಮನ ಸೆಳೆದ ಕಾರ್ಯಕ್ರಮ

  • ಹಿಂದೆಲ್ಲಾ ಬೇರೆ ಬೇರೆ ಕಡೆಗಳಲ್ಲಿ ನಾಲ್ಕು ದಿನ ಒಂದೊಂದು ಕವಿಗೋಷ್ಠಿ ಆಯೋಜಿಸಲಾಗುತ್ತಿತ್ತು. ಈ ಬಾರಿ ಪಂಚ ಕಾವ್ಯೋತ್ಸವ ಅಡಿ ನಾಲ್ಕು ಕವಿಗೋಷ್ಠಿಗಳನ್ನೂ ಜಗನ್ಮೋಹನ ಅರಮನೆ ಸಭಾಂಗಣದಲ್ಲೇ ನಡೆಸಲಾಗುತ್ತಿದೆ. ಅ.5ರಂದು ಬೆಳಗ್ಗೆ 10.30ಕ್ಕೆ ಪಂಚ ಕಾವ್ಯೋತ್ಸವ ನಡೆಯಲಿದ್ದು, ಕವಿ ನಾಗತಿಹಳ್ಳಿ ಚಂದ್ರಶೇಖರ್, 6ರಂದು ಬೆಳಗ್ಗೆ 10.30ಕ್ಕೆ ಸಮಾನತಾ ಕವಿಗೋಷ್ಠಿಯನ್ನು ಸಾಹಿತಿ ದೇವು ಪತ್ತಾರ, 7ರಂದು ಬೆಳಗ್ಗೆ 10.30ಕ್ಕೆ ಸಂತಸ ಕವಿಗೋಷ್ಠಿಯನ್ನು ಹಂ.ಪ.ನಾಗರಾಜಯ್ಯ, 8ರಂದು ಬೆಳಗ್ಗೆ 10.30ಕ್ಕೆ ಸಮಷ್ಠಿ ಕವಿಗೋಷ್ಠಿಯನ್ನು ಕವಿ ಎಚ್.ಎಸ್.ಶಿವಪ್ರಕಾಶ್, 9ರಂದು ಬೆಳಗ್ಗೆ 10.30ಕ್ಕೆ ಸಮೃದ್ಧ ಕವಿಗೋಷ್ಠಿಯನ್ನು ಕರ್ನಾಟಕ ಲೇಖಕಿಯರ ಸಂಘದ ಅಧ್ಯಕ್ಷೆ ಎಚ್.ಎಲ್.ಪುಷ್ಪಾ ಉದ್ಘಾಟನೆ ಮಾಡಲಿದ್ದಾರೆ.
  • ಆಹಾರ ಮೇಳ ದಸರಾದ ಮತ್ತೊಂದು ಆಕರ್ಷಣೆ. ಇದು ಡಿಸಿ ಕಚೇರಿ ಎದುರಿನ ಸ್ಕೌಟ್ಸ್‌ ಮತ್ತು ಗೈಡ್ಸ್‌ ಮೈದಾನದಲ್ಲಿ ನಡೆಯುತ್ತಿತ್ತು. ಈ ಬಾರಿ ಇದನ್ನು ಮಹಾರಾಜ ಕಾಲೇಜು ಮೈದಾನಕ್ಕೆ ಸ್ಥಳಾಂತರಿಸಲಾಗಿದೆ. ನೂರಕ್ಕೂ ಹೆಚ್ಚು ಮಳಿಗೆಗಳನ್ನು ಸ್ಕೌಟ್ಸ್‌ ಮತ್ತು ಗೈಡ್ಸ್‌ ಮೈದಾನದಲ್ಲಿ ಹಾಕಲಾಗುತ್ತಿತ್ತು. ಈಗ ಇದನ್ನು ಇನ್ನಷ್ಟು ಹೆಚ್ಚಿಸಿ ವಿಶಾಲವಾಗಿ ಆಹಾರ ಮೇಳವನ್ನು ರೂಪಿಸಲಾಗಿದೆ. ಪಾರ್ಕಿಂಗ್‌ಗೂ ಇಲ್ಲಿ ವ್ಯವಸ್ಥೆ ಮಾಡಲಾಗಿದೆ.

    ಇದನ್ನೂ ಓದಿರಿ: Madikeri Dasara 2024: ಅರ್ಜುನ್‌ ಜನ್ಯ- ರಾಜೇಶ್‌ ಕೃಷ್ಣನ್ ಸಂಗೀತ ವೈವಿಧ್ಯ; ಮಡಿಕೇರಿ ದಸರಾದ 9 ದಿನಗಳ ಕಾರ್ಯಕ್ರಮಗಳು ಏನೇನು ಇವೆ
  • ಚಲನಚಿತ್ರೋತ್ಸವ ಮೊದಲೆಲ್ಲಾ ಕಲಾಮಂದಿರದಲ್ಲಿ ನಡೆಸಲಾಗುತ್ತಿತ್ತು. ಇಲ್ಲಿಗೆ ಹಲವು ಕಲಾವಿದರು ಆಗಮಿಸುತ್ತಿದ್ದರು. ಈಗ ಚಲನಚಿತ್ರೋತ್ಸವ ಉದ್ಘಾಟನೆ ಸ್ಥಳವೂ ಬದಲಾಗಿದೆ. ಮೈಸೂರಿನ ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯದ ಮುಕ್ತ ಗಂಗೋತ್ರಿ ಆವರಣದ ಕಾವೇರಿ ಸಭಾಂಗಣದಲ್ಲಿ ಚಲನ ಚಿತ್ರೋತ್ಸವ ಉದ್ಘಾಟನೆಯಾಗಲಿದೆ. ಆನಂತರ ಚಿತ್ರಗಳ ಪ್ರದರ್ಶನ ಮಾಲ್‌ಗಳಲ್ಲಿ ಇರಲಿದೆ.
  • ದಸರಾ ಪುಸ್ತಕ ಮೇಳವನ್ನು ಕಾಡಾ ಕಚೇರಿಯ ಆವರಣದಲ್ಲಿ ಆಯೋಜಿಸಲಾಗುತ್ತಿತ್ತು. ಆನಂತರ ಜೆಕೆ ಮೈದಾನಕ್ಕೆ ಸ್ಥಳಾಂತರಿಸಲಾಗಿತ್ತು. ಈ ಬಾರಿ ದಸರಾ ಪುಸ್ತಕ ಮೇಳವನ್ನು ಡಿಸಿ ಕಚೇರಿ ಎದುರಿನ ಸ್ಕೌಟ್ಸ್‌ ಮತ್ತು ಗೈಡ್ಸ್‌ ಮೈದಾನದಲ್ಲಿ ಹಮ್ಮಿಕೊಳ್ಳಲಾಗಿದೆ.
  • ಮೈಸೂರಿನಲ್ಲಿರುವ ಕರ್ನಾಟಕ ವಸ್ತು ಪ್ರದರ್ಶನ ಪ್ರಾಧಿಕಾರದ ದಸರಾ ವಸ್ತು ಪ್ರದರ್ಶನವೂ ಆರಂಭಗೊಳ್ಳುತ್ತಿದ್ದು, ಇಲ್ಲಿ ಪ್ರವೇಶ ದರ ಏರಿಕೆಯಾಗಿದೆ. ಪ್ರವೇಶ ದರವನ್ನು 30 ರೂ.ಗಳಿಂದ 35 ರೂ.ಗೆ ಏರಿಕೆ ಮಾಡಲಾಗಿದೆ. ಮಕ್ಕಳ ಪ್ರವೇಶ ದರದಲ್ಲಿ ಬದಲಾವಣೆ ಆಗಿಲ್ಲ.

    ಇದನ್ನೂ ಓದಿರಿ: ಶಹನಾಯ್ ವಾದಕ ಪಂಡಿತ್ ಬಸವರಾಜ ಭಜಂತ್ರಿಗೆ ಸಂಗೀತ ವಿದ್ವಾನ್ ಪ್ರಶಸ್ತಿ; ನಾಡಹಬ್ಬ ದಸರಾ ಮಹೋತ್ಸವದಲ್ಲಿ ಪ್ರಶಸ್ತಿ ಪ್ರದಾನ
  • ಯುವ ದಸರಾ ಹಿಂದೆಲ್ಲಾ ಉಚಿತ ಇತ್ತು. ಪಾಸ್‌ ಮಾತ್ರ ನೀಡಲಾಗುತ್ತಿತ್ತು. ಈಗ ಯುವ ದಸರಕ್ಕೂ ಟಿಕೆಟ್‌. ಟಿಕೆಟ್‌ ಪಡೆದು ಹೋಗುವವರಿಗೆ ಮುಂದಿನ ಸಾಲಿನಲ್ಲಿ ಆಸನ. ಹತ್ತು ಸಾವಿರ ಟಿಕೆಟ್‌ಗಳನ್ನು ಇದಕ್ಕಾಗಿ ಮಾರಾಟ ಮಾಡಲಾಗುತ್ತಿದೆ. ಆರು, ಒಂದು ಸಾವಿರ ರೂ. ಬೆಲೆ ಟಿಕೆಟ್‌ಗಳ ಮೂಲಕ ಯುವ ದಸರಾಕ್ಕೆ ಪ್ರವೇಶ ಪಡೆಯಬಹುದು.
  • ಯೋಗ ದಸರಾವನ್ನು ಜಗನ್ಮೋಹನ ಅರಮನೆ ಆವರಣದಲ್ಲಿ ಹಿಂದೆ ಆಯೋಜಿಸಲಾಗುತ್ತಿತ್ತು. ಈಗ ಅದನ್ನು ರೈಲ್ವೆ ನಿಲ್ದಾಣ ಎದುರಿನ ಜೆಕೆ ಮೈದಾನದಲ್ಲಿರುವ ವೈದ್ಯಕೀಯ ಕಾಲೇಜಿನ ಅಮೃತ ಮಹೋತ್ಸವ ಸಭಾಂಗಣಕ್ಕೆ ಸ್ಥಳಾಂತರಿಸಲಾಗಿದೆ.

Whats_app_banner