ಕನ್ನಡ ಸುದ್ದಿ  /  ಕರ್ನಾಟಕ  /  ಪ್ರಧಾನಿ ಮೋದಿ ಕುರಿತು ಹಾಡು ಬರೆದಿದ್ದಕ್ಕೆ ಮೈಸೂರಿನಲ್ಲಿ ಅನ್ಯಕೋಮಿನ ಯುವಕರಿಂದ ಹಲ್ಲೆ ಆರೋಪ; ನೋವು ತೋಡಿಕೊಂಡ ಗಾಯಾಳು

ಪ್ರಧಾನಿ ಮೋದಿ ಕುರಿತು ಹಾಡು ಬರೆದಿದ್ದಕ್ಕೆ ಮೈಸೂರಿನಲ್ಲಿ ಅನ್ಯಕೋಮಿನ ಯುವಕರಿಂದ ಹಲ್ಲೆ ಆರೋಪ; ನೋವು ತೋಡಿಕೊಂಡ ಗಾಯಾಳು

ಪ್ರಧಾನಿ ನರೇಂದ್ರ ಮೋದಿ ಕುರಿತು ಹಾಡು ಬರೆದಿದ್ದಕ್ಕೆ ಯುವಕನೊರ್ವನ ಮೇಲೆ ಅನ್ಯಕೋಮಿನ ಯುವಕರ ಗುಂಪು ಹಲ್ಲೆ ಮಾಡಿರುವ ಆರೋಪದ ಘಟನೆ ಮೈಸೂರಿನಲ್ಲಿ ನಡೆದಿದೆ.

ಮೈಸೂರಿನಲ್ಲಿ ಹಲ್ಲೆಗೊಳಗಾಗಿರುವ ಯುವಕ
ಮೈಸೂರಿನಲ್ಲಿ ಹಲ್ಲೆಗೊಳಗಾಗಿರುವ ಯುವಕ

ಮೈಸೂರು: ಪ್ರಧಾನಿ ನರೇಂದ್ರ ಮೋದಿ ಪರ ಹಾಡು ಬರೆದಿದ್ದಕ್ಕೆ ಯುವಕನ ಮೇಲೆ ಅನ್ಯ‌ಕೋಮಿನ ಯುವಕರು ಹಲ್ಲೆ ಮಾಡಿರುವ ಆರೋಪ ಕೇಳಿಬಂದಿದೆ. ಮೈಸೂರಿನ ರೋಹಿತ್ ಎಂಬಾತನ ಹಲ್ಲೆಗೊಳಗಾಗಿರುವ ವ್ಯಕ್ತಿ. ಮೈಸೂರಿನ ಸರ್ಕಾರಿ ಅತಿಥಿ ಗೃಹದ ಬಳಿ ಘಟನೆ ನಡೆದಿದ್ದು, ಈ ಸಂಬಂಧ ಗಾಯಾಳು ರೋಹಿತ್ ಮೈಸೂರಿನ ಲಕ್ಷ್ಮೀಪುರಂ ಪೊಲೀಸ್ ಠಾಣೆಗೆ ದೂರು ನೀಡಿದ್ದಾನೆ. ಸುದ್ದಿ ತಿಳಿದು ಸ್ಥಳಕ್ಕೆ ಆಗಮಿಸಿದ್ದ ಪೊಲೀಸರು ಗಾಯಾಳುವನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಿದ್ದಾರೆ.

ಟ್ರೆಂಡಿಂಗ್​ ಸುದ್ದಿ

ಹಲ್ಲೆಗೊಳಗಾದ ರೋಹಿತ್ ಘಟನೆ ಬಗ್ಗೆ ವಿವರಿಸಿದ್ದು ಹೀಗೆ

ಕಳೆದ ವಾರ ನಾನೊಂದು ಮೋದಿ ಸಾಂಗ್ ರಿಲೀಸ್ ಮಾಡಿದ್ದೆ, ಆಫೀಸ್ ಸೇರಿದಂತೆ ಎಲ್ಲಾ ಕಡೆ ಸಬ್‌ಸ್ಕ್ರೈಬ್ ಮಾಡಿಸ್ತಾ ಇದ್ದೆ, ಶೇರ್ ಮಾಡ್ತಾ ಇದ್ದೆ. ಅದೇ ರೀತಿ ನಾನು ಸರ್ಕಾರಿ ಗೆಸ್ಟ್‌ಹೌಸ್ ಬಳಿ ಹಾಡು ತೋರಿಸಿ ಸಬ್‌ಸ್ಕ್ರೈಬ್ ಮಾಡಿಸುತ್ತಿದ್ದಾಗ ಅಲ್ಲಿಗೆ ಯುವಕನೊರ್ವ ಬಂದ. ಆತ ಅನ್ಯಕೋಮಿನ ಯುವಕ ಅಂತ ನನಗೆ ಗೊತ್ತಿರಲಿಲ್ಲ. ನಾವು ಈತರ ಒಂದು ಸಾಂಗ್ ಮಾಡಿದ್ದೇವೆ ನೋಡಿ ಎಂದೆ, ಹೌದಾ ತೋರಿಸಿ ಎಂದಾಗ ನಾನು ಹಾಡು ತೋರಿಸಿದೆ. ಸಾಂಗ್ ತುಂಬಾ ಚೆನ್ನಾಗಿದೆ ಅಂತ ಹೇಳಿ ನನ್ನ ಫ್ರೆಂಡ್ಸ್ ಬಳಿಯೂ ಸಬ್‌ಸ್ಕ್ರೈಬ್ ಮಾಡಿಸ್ತೀನಿ ಬಾ ಅಂತ ಕರೆದುಕೊಂಡು ಹೋದ.

ಒಳಗಡೆ ಕರೆದುಕೊಂಡು ಹೋಗುವಷ್ಟರಲ್ಲಿ ಒಬ್ಬ ನನ್ನ ಹಿಂದೆಯಿಂದ ಕೈ ಹಿಡಿದುಕೊಂಡು ಬಾಯಿ ಮುಚ್ಚಿಕೊಂಡ, ಮೋದಿ ಸಾಂಗ್ ಮಾಡಿದ್ದೀಯಾ ಅಂತ ಕೆಟ್ಟದಾಗಿ ಬೈದು, ಪಾಕಿಸ್ತಾನ ಜಿಂದಾಬಾದ್ ಅಂತ ಕೂಗು, ಅಲ್ಲಾಹ್ ಅಕ್ಬರ್ ಅಂತ ಕೂಗಲು ಹೇಳಿದ್ರು, ಮೋದಿ ಬಗ್ಗೆ ಸಾಂಗ್ ಮಾಡಿದ್ದೀಯಾ ನಿನ್ನ ಇಲ್ಲೇ ಸಾಯಿಸ್ತೀವಿ ಅಂದ್ರು. ನನ್ನ ಕೈಯಲ್ಲಿ ಶ್ರೀರಾಮ ಫೋಟೊ, ಪ್ಲಾಗ್ ಇತ್ತು, ಅದನ್ನೆಲ್ಲಾ ಕಿತ್ತುಕೊಂಡರು. ಬಾಟಲಿಯಲ್ಲಿ ಕೊಯ್ದು, ಸೀಗರೆಟ್‌ನಲ್ಲಿ ಸುಟ್ಟಿದ್ದಾರೆ ಎಂದು ಗಾಯಾಳು ರೋಹಿತ್ ಹೇಳಿದ್ದಾರೆ. ಸದ್ಯ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ಕೈಗೊಂಡಿದ್ದಾರೆ.

ಸದ್ಯ ಪ್ರಕರಣವನ್ನು ನಜರ್‌ಬಾದ್ ಪೊಲೀಸ್ ಠಾಣೆಗೆ ವರ್ಗಾವಣೆ ಮಾಡಲಾಗಿದ್ದು, ಡಿಸಿಪಿ ಮುತ್ತುರಾಜ್ ನೇತೃತ್ವದಲ್ಲಿ ತನಿಖೆ ಆರಂಭವಾಗಿದೆ. ಇನ್ಸ್‌ಪೆಕ್ಟರ್ ಮಹದೇವಸ್ವಾಮಿ ನೇತೃತ್ವದಲ್ಲಿ ಘಟನೆ ನಡೆದಿರುವ ಮೈಸೂರಿನ‌ ಸರ್ಕಾರಿ ಅಥಿತಿ ಗೃಹದ ಸುತ್ತಮುತ್ತ ಸ್ಥಳ ಮಹಜರು ನಡೆಸಿದ್ದಾರೆ. ಬಳಿಕ ಗಾಯಾಳು ರೋಹಿತ್ ಅವರನ್ನು ಅಜ್ಞಾತ ಸ್ಥಳಕ್ಕೆ ಕರೆದೊಯ್ದು ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ ಎಂದು ತಿಳಿದು ಬಂದಿದೆ.

IPL_Entry_Point