ರೌಡಿಶೀಟರ್‌ಗಳ ಬೆಂಬಲಿಗರ ನಡುವೆ ಪೋಸ್ಟರ್ ವಾರ್ ತೀವ್ರಗೊಂಡ ಹಿನ್ನೆಲೆ: ಪೊಲೀಸ್ ಇಲಾಖೆಯಿಂದ ಖಡಕ್ ಎಚ್ಚರಿಕೆ
ಸಾಮಾಜಿಕ ಮಾಧ್ಯಮದಲ್ಲಿ ಯಾರೇ ಪ್ರಚೋದನಕಾರಿ ಪೋಸ್ಟ್ ಹಾಕಿದರೂ ಅವರುಗಳ ವಿರುದ್ದ ಕಠಿಣ ಕಾನೂನು ಕ್ರಮ ಕೈಗೊಳ್ಳುವ ಎಚ್ಚರಿಕೆ ನೀಡಿದ ಮೈಸೂರು ಪೊಲೀಸರು

ಮೈಸೂರು: ಮೈಸೂರು ಜಿಲ್ಲೆಯ ವ್ಯಾಪ್ತಿಯಲ್ಲಿ ಇತ್ತೀಚೆಗೆ ನಡೆದ ಕಾರ್ತಿಕ್ ಎಂಬ ರೌಡಿ ಅಸಾಮಿಯ ಕೊಲೆಗೆ ಸಂಬಂಧಿಸಿದಂತೆ ಸಾಮಾಜಿಕ ಜಾಲತಾಣಗಳಲ್ಲಿ ಪರ-ವಿರೋಧವಾಗಿ ಪರಸ್ಪರ ಪ್ರಚೋದನಕಾರಿ ಹೇಳಿಕೆಗಳನ್ನು ನೀಡುತ್ತಾ ಬಂದಿದ್ದು, ಇದರಿಂದ ಸಮಾಜದಲ್ಲಿ ಶಾಂತಿ ಮತ್ತು ಕಾನೂನು ಸುವ್ಯವಸ್ಥೆ ಹಾಳಾಗುವ ಸಂಭವಿರುವುದರಿಂದ, ಇವರುಗಳ ಮೇಲೆ ಕಾನೂನು ಕ್ರಮ ಜರುಗಿಸಲಾಗಿದೆ. ಸಾಮಾಜಿಕ ಮಾಧ್ಯಮದಲ್ಲಿ ಯಾರೇ ಪ್ರಚೋದನಕಾರಿ ಪೋಸ್ಟ್ ಹಾಕಿದರೂ ಅವರುಗಳ ವಿರುದ್ದ ಕಠಿಣ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಮೈಸೂರು ಜಿಲ್ಲಾ ಪೊಲೀಸರು ಎಚ್ಚರಿಕೆ ನೀಡಿದ್ದಾರೆ.
ರೌಡಿಶೀಟರ್ ಕಾರ್ತಿಕ್ ಕೊಲೆ ಪ್ರಕರಣಕ್ಕೆ ಸಂಬಂಧಿಸಿ ಸೋಷಿಯಲ್ ಮೀಡಿಯಾದಲ್ಲಿ ಮೃತ ರೌಡಿಶೀಟರ್ ಕಾರ್ತಿಕ್ ಕೊಲೆ ಆರೋಪಿ ಅವಿಗೆ ಕಾರ್ತಿಕ್ ಫಾಲೋವರ್ಸ್ ಬೆದರಿಕೆ ಒಡ್ಡುತ್ತಿದ್ದಾರೆ. ಮೃತ ರೌಡಿಶೀಟರ್ ಕಾರ್ತಿಕ್ ಫಾಲೋವರ್ಸ್‌ಗಳಿಂದ ನಿನ್ ಗೆ ಬಂತೂ ಟೈಂ, ಮೂಟೆ ಕಟ್ತಾರೆ ಅಂತಾ ವಾರ್ನಿಂಗ್ ಕೊಡಲಾಗುತ್ತಿದೆ. ಮತ್ತೊಂದೆಡೆ ರೌಡಿ ಶೀಟರ್ ಅವಿ ಫಾಲೋವರ್ಸ್‌ಗಳಿಂದ ಕೂಡ ರೌಡಿ ಶೀಟರ್ ಕಾರ್ತಿಕ್ ಫಾಲೋವರ್ಸ್‌ಗೆ ವಾರ್ನಿಂಗ್ ನೀಡಲಾಗುತ್ತಿದೆ.
ಈಗಾಗಲೇ ಸೋಷಿಯಲ್ ಮೀಡಿಯಾ ಪೋಸ್ಟರ್ ಹರಿಬಿಟ್ಟ ಜಗದೀಶ್ ಎಂಬಾತನ ವಿರುದ್ಧ ವರುಣ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದೆ. ಕ್ಯಾತಮಾರನಹಳ್ಳಿ ರೌಡಿಶೀಟರ್ ಕಾರ್ತಿಕ್ ಕೊಲೆ ಕೇಸ್‌ನಲ್ಲಿ ಈಗಾಗಲೇ ಜೈಲು ಸೇರಿರುವ ಅವಿ ಆಲಿಯಾಸ್ ಸೊಪ್ಪು, ಆನಂದ್ ಗೌಡ ಗ್ಯಾಂಗ್ ಬಗ್ಗೆ ವಿಚಾರಣೆ ಮುಂದುವರಿದಿದೆ. ಮತ್ತೊಂದೆಡೆ ಜೈಲಿನಲ್ಲಿರುವ ಅವಿ ಗ್ಯಾಂಗ್‌ಗೆ ಬೆದರಿಕೆ ಒಡ್ಡಲಾಗಿದೆ. ಹೀಗಾಗಿ ಪೊಲೀಸರು ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದೆ.