ಕನ್ನಡ ಸುದ್ದಿ  /  Karnataka  /  Mysore Yuva Dasara 2022 Latest Updates Today News

Yuva dasara 2022: ಮೈಸೂರು ಯುವ ದಸರಾ ಕಾರ್ಯಕ್ರಮಕ್ಕೆ ನಟ ಸುದೀಪ್ ಬರುತ್ತಿಲ್ಲ, ಬಿಗ್‌ಬಾಸ್‌ ಕಾರಣನಾ?

ಮೈಸೂರು ದಸರಾ ಕಾರ್ಯಕ್ರಮಕ್ಕೆ ಕಿಚ್ಚ ಸುದೀಪ್‌ ಬರುತ್ತಿಲ್ಲ ಎಂದು ಸಚಿವ ಎಸ್‌.ಟಿ. ಸೋಮಶೇಖರ್‌ ಮಾಹಿತಿ ನೀಡಿದ್ದಾರೆ. "ದಸರಾ ಕಾರ್ಯಕ್ರಮಕ್ಕೆ ಬರಲಾಗುತ್ತಿಲ್ಲ ಎಂದು ನಟ ಸುದೀಪ್‌ ತಿಳಿಸಿದ್ದಾರೆ. ಇವರ ಬದಲು ಯಾರನ್ನು ಕರೆಸಬೇಕೆಂದು ಯೋಚಿಸುತ್ತಿದ್ದೇವೆʼʼ ಎಂದು ಅವರು ತಿಳಿಸಿದ್ದಾರೆ. ಬಿಗ್‌ಬಾಸ್‌ ಕನ್ನಡ 9ನೇ ಸೀಸನ್‌ ಆರಂಭಗೊಂಡಿರುವುದರಿಂದ ಕಿಚ್ಚ ಸುದೀಪ್‌ಗೆ ಈ ಕಾರ್ಯಕ್ರಮಕ್ಕೆ ಬರಲಾಗುತ್ತಿಲ್ಲ ಎನ್ನಲಾಗಿದೆ.

ನಟ ಸುದೀಪ್ (PTI Photo)
ನಟ ಸುದೀಪ್ (PTI Photo) (PTI)

ಮೈಸೂರು: ಮೈಸೂರು ದಸರಾ ಕಾರ್ಯಕ್ರಮಕ್ಕೆ ಕಿಚ್ಚ ಸುದೀಪ್‌ ಬರುತ್ತಿಲ್ಲ ಎಂದು ಸಚಿವ ಎಸ್‌.ಟಿ. ಸೋಮಶೇಖರ್‌ ಮಾಹಿತಿ ನೀಡಿದ್ದಾರೆ. "ದಸರಾ ಕಾರ್ಯಕ್ರಮಕ್ಕೆ ಬರಲಾಗುತ್ತಿಲ್ಲ ಎಂದು ನಟ ಸುದೀಪ್‌ ತಿಳಿಸಿದ್ದಾರೆ. ಇವರ ಬದಲು ಯಾರನ್ನು ಕರೆಸಬೇಕೆಂದು ಯೋಚಿಸುತ್ತಿದ್ದೇವೆʼʼ ಎಂದು ಅವರು ತಿಳಿಸಿದ್ದಾರೆ. ಬಿಗ್‌ಬಾಸ್‌ ಕನ್ನಡ 9ನೇ ಸೀಸನ್‌ ಆರಂಭಗೊಂಡಿರುವುದರಿಂದ ಕಿಚ್ಚ ಸುದೀಪ್‌ಗೆ ಈ ಕಾರ್ಯಕ್ರಮಕ್ಕೆ ಬರಲಾಗುತ್ತಿಲ್ಲ ಎನ್ನಲಾಗಿದೆ.

ದಸರಾ ಮಹೋತ್ಸವದ ಪ್ರಮುಖ ಆಕರ್ಷಣೆಗಳಲ್ಲಿ ಒಂದಾದ ಯುವ ದಸರಾಕ್ಕೆ ಸುದೀಪ್‌ ಬರಲಿದ್ದಾರೆ ಎಂಬ ಸುದ್ದಿಯು ಕಿಚ್ಚ ಅಭಿಮಾನಿಗಳ ಖುಷಿಗೆ ಕಿಚ್ಚು ಹೊತ್ತಿಸಿತ್ತು. ಆದರೆ, ಇದೀಗ ಅವರು ಬರುವುದಿಲ್ಲವೆಂಬ ಮಾಹಿತಿಯನ್ನು ಸೋಮಶೇಖರ್‌ ಖಚಿತಪಡಿಸಿದ್ದಾರೆ.

ಯಾವಾಗ ಯುವ ದಸರಾ?

ಮೈಸೂರು ಯುವ ದಸರಾ ಕಾರ್ಯಕ್ರಮವು ಇದೇ ಸೆಪ್ಟೆಂಬರ್‌ 27ರಿಂದ ಅಕ್ಟೋಬರ್‌ 3ರವರೆಗೆ ನಡೆಯಲಿದೆ. ಏಳು ದಿನಗಳ ಈ ಕಾರ್ಯಕ್ರಮದಲ್ಲಿ ಸ್ಥಳೀಯ ಕಲಾವಿದರ ಜತೆ ಸ್ಯಾಂಡಲ್‌ವುಡ್‌, ಬಾಲಿವುಡ್‌ ಗಾಯಕರು, ತಾರೆಯರ ನೃತ್ಯ ಗಾಯನ, ಕವಿಗೋಷ್ಠಿ ಸೇರಿದಂತೆ ವೈವಿದ್ಯಮಯ ಕಾರ್ಯಕ್ರಮಗಳು ಇರುತ್ತವೆ.

ಈ ಬಾರಿಯ ಯುವ ದಸರಾದಲ್ಲಿ ಸ್ಥಳೀಯ ಕಲಾವಿದರಿಗೆ ಹೆಚ್ಚಿನ ಆದ್ಯತೆ ನೀಡಲಾಗಿದೆ. ಒಂದು ದಿನ ಪೂರ್ತಿಯನ್ನು 'ಅಪ್ಪು ನಮನ' ಕಾರ್ಯಕ್ರಮಕ್ಕೆ ಮೀಸಲಿಡಲಾಗುವುದು ಎಂದು ದಸರಾ ಉಪಸಮಿತಿ ವಿಶೇಷಾಧಿಕಾರಿ ಆರ್‌.ಚೇತನ್‌ ಮಾಹಿತಿ ನೀಡಿದ್ದರು.

ಇತ್ತೀಚೆಗೆ ನಡೆದಿತ್ತು ಯುವ ಸಂಭ್ರಮ

ಮೈಸೂರಿನ ಮಾನಸಗಂಗೋತ್ರಿಯ ಬಯಲು ರಂಗಮಂದಿರದಲ್ಲಿ ಯುವ ಸಂಭ್ರಮ ಕಾರ್ಯಕ್ರಮ ನಡೆದಿತ್ತು. ಈ ಕಾರ್ಯಕ್ರಮದ್ಲಿ ಪ್ರಮುಖ ಆಕರ್ಷಣೆಯಾಗಿದ್ದವರು ಚಿತ್ರನಟ ಡಾಲಿ ಧನಂಜಯ್‌. ಬಿಳಿ ಪಂಚೆ, ಬಿಳಿ ಶರ್ಟ್‌ ತೊಟ್ಟು ಸಾಂಪ್ರದಾಯಿಕವಾಗಿ ಕಾಣಿಸಿಕೊಂಡ ಡಾಲಿ ಯುವ ಸಮೂಹದ ನಡುವೆ ಸಂಚಲನ ಮೂಡಿಸಿದರು. ಜಿಲ್ಲಾಉಸ್ತುವಾರಿ ಸಚಿವ ಎಸ್‌.ಟಿ. ಸೋಮಶೇಖರ್‌ ಡೊಳ್ಳು ಬಾರಿಸಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದ್ದರು. ಈ ಕುರಿತು ಚಿತ್ರಗಳ ಸಹಿತ ವರದಿ ಓದಲು ಇಲ್ಲಿ ಕ್ಲಿಕ್‌ ಮಾಡಿ.

ಸಾಂಸ್ಕೃತಿಕ ನಗರಿ ಮೈಸೂರಿನ ಅರಮನೆ ಆವರಣ ನಾಡಹಬ್ಬ ದಸರಾಕ್ಕೆ ಸಜ್ಜಾಗುತ್ತಿದೆ. ಅರಮನೆ ಆವರಣದಲ್ಲಿ ಸೆ.26ರಿಂದ ಅ.3ರ ತನಕ ನಡೆಯಲಿರುವ ಸಾಂಸ್ಕೃತಿಕ ಕಾರ್ಯಕ್ರಮಗಳ ಪಟ್ಟಿಯನ್ನು ಬಿಡುಗಡೆ ಮಾಡಲಾಗಿದೆ. ಸೆಪ್ಟೆಂಬರ್‌ 26ರಂದು ನಡೆಯುವ ಕಾರ್ಯಕ್ರಮ: ನಾದಸ್ವರ- ಯದುನಾಥ್ ಮತ್ತು ಗುರುರಾಜ್ ತಂಡ, ವೀರಭದ್ರ ಕುಣಿತ-ಕಿರಾಳು ಮಹೇಶ್, ನೃತ್ಯರೂಪಕ-ಅಮೃತ ಭಾರತಿಗೆ ಕನ್ನಡದಾರತಿ-ಸಪ್ತಸ್ವರ ಆರ್ಟ್ಸ್ ಅಂಡ್ ಕ್ರಿಯೇಷನ್, ಸುಗಮಸಂಗೀತ-ಎಚ್.ಆರ್.ಲೀಲಾವತಿ, ಮೈಸೂರು. ಉಳಿದ ದಿನಗಳ ಕಾರ್ಯಕ್ರಮದ ಮಾಹಿತಿ ತಿಳಿಯಲ್ಲಿ ಈ ಲಿಂಕ್‌ ಕ್ಲಿಕ್‌ ಮಾಡಿ.