Kannada News  /  Karnataka  /  Mysuru Dasara 2022: Cultural Events In Nadahabba Mysuru Dasara Here Is The List
Mysuru Dasara 2022: ಅರಮನೆ ಆವರಣದಲ್ಲಿ ಸೆ.26ರಿಂದ ಅ.3ರ ತನಕ ನಡೆಯಲಿರುವ ಸಾಂಸ್ಕೃತಿಕ ಕಾರ್ಯಕ್ರಮಗಳ ಪಟ್ಟಿ ಬಿಡುಗಡೆಯಾಗಿದೆ.
Mysuru Dasara 2022: ಅರಮನೆ ಆವರಣದಲ್ಲಿ ಸೆ.26ರಿಂದ ಅ.3ರ ತನಕ ನಡೆಯಲಿರುವ ಸಾಂಸ್ಕೃತಿಕ ಕಾರ್ಯಕ್ರಮಗಳ ಪಟ್ಟಿ ಬಿಡುಗಡೆಯಾಗಿದೆ.

Mysuru Dasara 2022: ನಾಡಹಬ್ಬದ ಸಾಂಸ್ಕೃತಿಕ ವೈಭವ; ಯಾವ ದಿನ ಏನು ಪ್ರೋಗ್ರಾಂ? - ಇಲ್ಲಿದೆ ವಿವರ

21 September 2022, 17:51 ISTHT Kannada Desk
21 September 2022, 17:51 IST

Mysuru Dasara 2022: ಮೈಸೂರು ದಸರಾಗೆ ದಿನಗಣನೆ ಶುರುವಾಗಿದೆ. ಅರಮನೆ ಆವರಣದಲ್ಲಿ ಸೆ.26ರಿಂದ ಅ.3ರ ತನಕ ನಡೆಯಲಿರುವ ಸಾಂಸ್ಕೃತಿಕ ಕಾರ್ಯಕ್ರಮಗಳ ಪಟ್ಟಿ ಬಿಡುಗಡೆ ಆಗಿದೆ. ಅದರ ವಿವರ ಇಲ್ಲಿದೆ. 

ಮೈಸೂರು: ಸಾಂಸ್ಕೃತಿಕ ನಗರಿ ಮೈಸೂರಿನ ಅರಮನೆ ಆವರಣ ನಾಡಹಬ್ಬ ದಸರಾಕ್ಕೆ ಸಜ್ಜಾಗುತ್ತಿದೆ. ಅರಮನೆ ಆವರಣದಲ್ಲಿ ಸೆ.26ರಿಂದ ಅ.3ರ ತನಕ ನಡೆಯಲಿರುವ ಸಾಂಸ್ಕೃತಿಕ ಕಾರ್ಯಕ್ರಮಗಳ ಪಟ್ಟಿಯನ್ನು ಬಿಡುಗಡೆ ಮಾಡಿದೆ. ಇದರ ಪ್ರಕಾರ ಎಂಟು ದಿನಗಳ ಸಾಂಸ್ಕೃತಿಕ ಕಾರ್ಯಕ್ರಮಗಳ ವಿವರ ಹೀಗಿದೆ.

ಟ್ರೆಂಡಿಂಗ್​ ಸುದ್ದಿ

ಸೆ.26: ನಾದಸ್ವರ- ಯದುನಾಥ್ ಮತ್ತು ಗುರುರಾಜ್ ತಂಡ, ವೀರಭದ್ರ ಕುಣಿತ-ಕಿರಾಳು ಮಹೇಶ್, ನೃತ್ಯರೂಪಕ-ಅಮೃತ ಭಾರತಿಗೆ ಕನ್ನಡದಾರತಿ-ಸಪ್ತಸ್ವರ ಆರ್ಟ್ಸ್ ಅಂಡ್ ಕ್ರಿಯೇಷನ್, ಸುಗಮಸಂಗೀತ-ಎಚ್.ಆರ್.ಲೀಲಾವತಿ, ಮೈಸೂರು.

ಸೆ.27: ಕಂಸಾಳೆ-ಕಂಸಾಳೆ ಮಹೇಶ ಮತ್ತು ತಂಡ, ಭಕ್ತಿಸಂಗೀತ- ಇಂದೂ ನಾಗರಾಜ್ ಮತ್ತು ಲಕ್ಷ್ಮೀನಾಗರಾಜ್ ತಂಡ, ನೃತ್ಯರೂಪಕ- ಲಲಿತಾರ್ಣ ವಲಯಾಭಿನಯ ಕಲ್ಚರಲ್ ಫೌಂಡೇಷನ್, ಕರ್ನಾಟಕ ಶಾಸ್ತ್ರೀಯ ಸಂಗೀತ-ಚೆನ್ನೈನ ವಿದ್ವಾನ್ ಸಂದೀಪ್ ನಾರಾಯಣ್.

ಸೆ.28: ಹಾರ್ಮೋನಿಯಂ- ಕರ್ನಾಟಕ ಕಲಾಶ್ರೀ ವಿದ್ವಾನ ಸಿ.ರಾಮದಾಸ್, ದಾಸರಪದ- ಪಂಡಿತ ಗಣಪತಿ ಭಟ್ ಹಾಸಣಗಿ, ಭರತನಾಟ್ಯ- ಕರ್ನಾಟಕ ಕಲಾಶ್ರೀ ಸತ್ಯನಾರಾಯಣರಾಜು ಮತ್ತು ತಂಡ, ತಬಲವಾದನ- ಮುಂಬೈನ ಉಸ್ತಾದ್ ಘಜಲ್ ಖುರೇಷಿ.

ಸೆ.29: ಪೊಲೀಸ್ ಬ್ಯಾಂಡ್- ಕರ್ನಾಟಕ ಮತ್ತು ಇಂಗ್ಲಿಷ್ ಬ್ಯಾಂಡ್, ವಚನಗಾಯನ- ಪಂಡಿತ್ ವೆಂಕಟೇಶ್ ಕುಮಾರ್, ಓಡಿಸ್ಸಿ ನೃತ್ಯ- ಮಧುಲಿತ ಮಹೋಪಾತ್ರ ಮತ್ತು ತಂಡ, ವಿಶ್ವಸಂಗೀತ (ಕರ್ನಾಟಕ ವಾದ್ಯಸಂಗೀತಗಳ ಸಮ್ಮಿಲನ)-ಪಂಡಿತ್ ಪ್ರವೀಣ್ ಡಿ.ರಾವ್ ತಂಡ.

ಸೆ.30: ಭಕ್ತಿಸಂಗೀತ- ಜ್ಞಾನಮೂರ್ತಿ ಮತ್ತು ತಂಡ, ವಾದ್ಯಗಳಲ್ಲಿ ಒಡೆಯರ್ ಕೃತಿಗಳು- ಡಾ.ಸುಕನ್ಯಾ ಪ್ರಭಾಕರ್ ಮತ್ತು ತಂಡ, ಕೂಚುಪುಡಿ ನೃತ್ಯ- ಕರ್ನಾಟಕ ಕಲಾಶ್ರೀ ಊಪಾ ರಾಜೇಶ ಮತ್ತು ತಂಡ, ಹಿಂದೂಸ್ತಾನಿ ಶಾಸ್ತ್ರೀಯ ಸಂಗೀತ- ಕಲ್ಕತ್ತಾದ ವಿದುಷಿ ಕೌಶಿಕಿ ಚಕ್ರವರ್ತಿ.

ಅ.1: ಜಾನಪದ ಗಾಯನ- ಪನ್ನಗ ವಿಜಯಕುಮಾರ ವೇದವ್ಯಾಸ ಸೇವಾ ಟ್ರಸ್ಟ್, ರಂಗಗೀತೆಗಳು- ಟಿ.ಎಸ್.ನಾಗಾಭರಣ ಬೆನಕ ತಂಡ, ಪೊಲೀಸ್ ಬ್ಯಾಂಡ್-ಮಾಸ್ ಬ್ಯಾಂಡ್, ಸಿತಾರ್ ಸಿಂಪೋನಿ- ಮನೋ ಮ್ಯೂಸಿಕ್ ಲೈನ್ಸ್.

ಅ.2: ಜನಪದ ಸಂಗೀತ- ಕಂಬದ ರಂಗಯ್ಯ ಮತ್ತು ತಂಡ, ನೃತ್ಯ ರೂಪಕ ನವಶಕ್ತಿ ವೈಭವ- ಕು.ರೂಪಿಕಾ ಮತ್ತು ವಂದನಾ ಕಾಸರವಳ್ಳಿ, ಸಂಗೀತ ವೈವಿಧ್ಯ(ಜಾನಪದ, ಸೂಫಿ ಮತ್ತು ಆಕ್ಯಾವೆಲ್ಲಾ)- ಮನೋಜ್ ವಶಿಷ್ಟ ಮತ್ತು ಆರುಂಧತಿ ವಶಿಷ್ಟ ತಂಡ.

ಅ.3 : ನೃತ್ಯ ಮತ್ತು ಸಂಗೀತ ಸಮ್ಮಿಲನ- ವಿಶೇಷ ಚೇತನ ಕಲಾವಿದರು, ಜನಪದ ಸಂಗೀತ -ಕಡಬಗೆರೆ ಮುನಿರಾಜು, ಪಾರಂಪರಿಕ ನೃತ್ಯ ಸಮ್ಮಿಲನ- ಸ್ಥಳೀಯ ಕಲಾವಿದರು, ಗಜಲ್- ಭಜನ್ ಸಾಮ್ರಾಟ್ ಪದ್ಮಶ್ರೀ ಅನೂಪ್ ಬಲೋಟ.

--------------------------------------------------------------------

Special Trains on Mysuru Dasara: ಮೈಸೂರು ದಸರಾ 2022ಕ್ಕೆ ದಿನಗಣನೆ ಶುರುವಾಗಿದೆ. ಕೋವಿಡ್‌ ಸಂಕಷ್ಟದ ಬಳಿಕ ನಾಡಹಬ್ಬವನ್ನು ಕಣ್ತುಂಬಿಕೊಳ್ಳಲು ದೇಶವಿದೇಶಗಳಿಂದ ಯಾತ್ರಿಕರು ಆಗಮಿಸುತ್ತಿದ್ದು, ಭಾರತೀಯ ರೈಲ್ವೆ ಇಂದು ವಿಶೇಷ ರೈಲು ಸಂಚಾರದ ವೇಳಾಪಟ್ಟಿ (SPECIAL TRAINS ON DUSSEHARA - Train Timetable) ಪ್ರಕಟಿಸಿದೆ. ಅದರ ವಿವರ ಇಲ್ಲಿದೆ ಗಮನಿಸಿ. Mysuru Dasara 2022: ನಾಡಹಬ್ಬಕ್ಕೆ ಹೊರಟ್ರಾ? ವಿಶೇಷ ರೈಲು ಸಂಚಾರದ ವೇಳಾ ಪಟ್ಟಿ ನೋಡೋಕೆ ಮರೆಯಬೇಡಿ!

Yuva Sambhrama Mysuru Dasara: ಮೈಸೂರಿನ ಮಾನಸಗಂಗೋತ್ರಿಯ ಬಯಲು ರಂಗಮಂದಿರದಲ್ಲಿ ಯುವ ಸಂಭ್ರಮದ ಆಕರ್ಷಣೆಯಾಗಿದ್ದರು ಚಿತ್ರನಟ ಡಾಲಿ ಧನಂಜಯ್‌. ಬಿಳಿ ಪಂಚೆ, ಬಿಳಿ ಶರ್ಟ್‌ ತೊಟ್ಟು ಸಾಂಪ್ರದಾಯಿಕವಾಗಿ ಕಾಣಿಸಿಕೊಂಡ ಡಾಲಿ ಯುವ ಸಮೂಹದ ನಡುವೆ ಸಂಚಲನ ಮೂಡಿಸಿದರು. ಜಿಲ್ಲಾಉಸ್ತುವಾರಿ ಸಚಿವ ಎಸ್‌.ಟಿ. ಸೋಮಶೇಖರ್‌ ಡೊಳ್ಳು ಬಾರಿಸಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. Mysuru Dasara 2022 Yuva Sambhrama: ಮೈಸೂರು ದಸರಾ ಯುವ ಸಂಭ್ರಮ ಫೋಟೋಗಳಲ್ಲಿ ಸೆರೆ; ಇಲ್ಲಿವೆ ಕೆಲವು ಫೋಟೋಸ್‌