ರೈತ ದಸರಾಗೆ ಚಾಲನೆ ನೀಡಿದ ಕೃಷಿ ಸಚಿವ ಚಲುವರಾಯಸ್ವಾಮಿ; ಗಮನ ಸೆಳೆದ ಎತ್ತಿನಗಾಡಿ, ಬಂಡೂರು ತಳಿಯ ಕುರಿಗಳು
ಕನ್ನಡ ಸುದ್ದಿ  /  ಕರ್ನಾಟಕ  /  ರೈತ ದಸರಾಗೆ ಚಾಲನೆ ನೀಡಿದ ಕೃಷಿ ಸಚಿವ ಚಲುವರಾಯಸ್ವಾಮಿ; ಗಮನ ಸೆಳೆದ ಎತ್ತಿನಗಾಡಿ, ಬಂಡೂರು ತಳಿಯ ಕುರಿಗಳು

ರೈತ ದಸರಾಗೆ ಚಾಲನೆ ನೀಡಿದ ಕೃಷಿ ಸಚಿವ ಚಲುವರಾಯಸ್ವಾಮಿ; ಗಮನ ಸೆಳೆದ ಎತ್ತಿನಗಾಡಿ, ಬಂಡೂರು ತಳಿಯ ಕುರಿಗಳು

ಮೈಸೂರು ದಸರಾದಲ್ಲಿ ರೈತ ದಸರಾಗೆ ಚಾಲನೆ ಸಿಕ್ಕಿದೆ. ಮೆರವಣಿಗೆಯಲ್ಲಿ ಹಳ್ಳಿಕಾರ್ ಜೋಡೆತ್ತುಗಳು, ಎತ್ತಿನಗಾಡಿ, ಬಂಡೂರು ತಳಿಯ ಕುರಿಗಳು ಕಣ್ಮನ ಸೆಳೆದವು. ಇದೇ ವೇಳೆ ವೀರಗಾಸೆ, ದೊಳ್ಳುಕುಣಿತ, ಕಂಸಾಳೆ ಮೊದಲಾದ ಜಾನಪದ ಕಲಾಪ್ರಕಾರಗಳು ಗಮನ ಸೆಳೆದವು.

ರೈತ ದಸರಾಗೆ ಚಾಲನೆ ನೀಡಿದ ಕೃಷಿ ಸಚಿವ ಚಲುವರಾಯಸ್ವಾಮಿ; ಗಮನ ಸೆಳೆದ ಎತ್ತಿನಗಾಡಿ, ಕುರಿಗಳು
ರೈತ ದಸರಾಗೆ ಚಾಲನೆ ನೀಡಿದ ಕೃಷಿ ಸಚಿವ ಚಲುವರಾಯಸ್ವಾಮಿ; ಗಮನ ಸೆಳೆದ ಎತ್ತಿನಗಾಡಿ, ಕುರಿಗಳು

ನಾಡಹಬ್ಬ ಮೈಸೂರು ದಸರಾ ಮೂರನೇ ದಿನಕ್ಕೆ ಕಾಲಿಟ್ಟಿದೆ. ದಸರಾ ಸಂಭ್ರಮಕ್ಕೆ ರೈತ ದಸರಾ ಮೆರಗು ನೀಡಿದೆ. ಮೈಸೂರಿನ ಕೋಟೆ ಆಂಜನೇಯಸ್ವಾಮಿ ದೇವಸ್ಥಾನದ ಮುಂಭಾಗದಿಂದ ರೈತ ದಸರಾ ಮೆರವಣಿಗೆಗೆ ಕೃಷಿ ಸಚಿವ ಚಲುವರಾಯಸ್ವಾಮಿ ಚಾಲನೆ ನೀಡಿದರು. ನಂದಿ ಧ್ವಜ ಸ್ಥಂಭಕ್ಕೆ ಪೂಜೆ ಸಲ್ಲಿಸಿ ರೈತ ದಸರೆಗೆ ಚಾಲನೆ ನೀಡಲಾಯ್ತು. ಇದೇ ವೇಳೆ ಜೆಕೆ ಮೈದಾನದಲ್ಲಿರುವ ವೈದ್ಯಕೀಯ ಮಹಾವಿದ್ಯಾಲಯದ ಅಲ್ಯೂಮಿನಿ ಸಭಾಭವನದಲ್ಲಿ ಕೃಷಿ ಸಚಿವ ಚಲುವರಾಯಸ್ವಾಮಿ ರೈತ ದಸರಾ ವೇದಿಕೆ ಕಾರ್ಯಕ್ರಮವನ್ನು ಉದ್ಘಾಟನೆ ಮಾಡಿದರು. ದೀಪ ಬೆಳಗಿಸುವ ಮೂಲಕ ಕಾರ್ಯಕ್ರಮಕ್ಕೆ ವಿಧ್ಯುಕ್ತ ಚಾಲನೆ‌ ನೀಡಲಾಯ್ತು. ಕಾರ್ಯಕ್ರಮದಲ್ಲಿ ಸಚಿವ ಕೆ ವೆಂಕಟೇಶ್, ಶಾಸಕ ಹರೀಶ್ ಗೌಡ ಸೇರಿದಂತೆ ಹಲವರು ಭಾಗಿಯಾದರು.

ರೈತ ದಸರಾದಲ್ಲಿ ಹಳ್ಳಿಕಾರ್ ಜೋಡೆತ್ತುಗಳು, ಎತ್ತಿನಗಾಡಿ, ಬಂಡೂರು ತಳಿಯ ಕುರಿಗಳು ಕಣ್ಮನ ಸೆಳೆದವು. ಇದೇ ವೇಳೆ ವೀರಗಾಸೆ, ದೊಳ್ಳುಕುಣಿತ, ಕಂಸಾಳೆ ಮೊದಲಾದ ಜಾನಪದ ಕಲಾಪ್ರಕಾರಗಳು ಮೆರವಣಿಗೆಯಲ್ಲಿ ಭಾಗಿಯಾಗಿ ಗಮನ ಸೆಳೆದವು.

ರೈತ ದಸರಾ ಕಾರ್ಯಕ್ರಮದಲ್ಲಿ ಭಾಗಿಯಾಗಿ ಮಾತನಾಡಿದ ಕೃಷಿ ಸಚಿವ ಚಲುವರಾಯಸ್ವಾಮಿ, ರೈತರು ನಮ್ಮೆಲ್ಲರ ಬೆನ್ನೆಲುಬು ಎಂದು ಹೇಳುತ್ತೇವೆ. ಈಗ ಮೈಸೂರಿನಲ್ಲಿ ದಸರಾ ಮಹೋತ್ಸವ ನಡೆಯುತ್ತಿದೆ. ಇಡೀ ವಿಶ್ವ ಪ್ರಸಿದ್ದಿಯನ್ನು ದಸರಾ ಮಹೋತ್ಸವ ಪಡೆದಿದೆ. ರೈತರು ಬೆಳೆಯುವ ಕೃಷಿ ಉತ್ಪನ್ನ, ರೇಷ್ಮೆ, ಪಶುಸಂಗೋಪನೆ ಬಗ್ಗೆ ರೈತರಿಗೆ ಮಾಹಿತಿ ಇರಬೇಕು. ಯಾವ ರೀತಿ ಹೊಸ ತಂತ್ರಜ್ಞಾನ ಬಳಸಿ ಬೆಳೆ ಬೆಳೆಯಬೇಕು ಎಂಬುದರ ಬಗ್ಗೆ ತಿಳಿದುಕೊಳ್ಳಬೇಕು. ಕೃಷಿ, ರೇಷ್ಮೆ, ಪಶುಸಂಗೋಪನೆ ಬಳಸಿಕೊಂಡು ನಿಮ್ಮ ಜೀವನ ವೃದ್ಧಿಗೊಳಿಸಿಕೊಳ್ಳಬೇಕು ಎಂದರು.

ರೈತರಿಗೆ ಭರವಸೆ

ಸಿಎಂ, ಡಿಸಿಎಂ, ಸಚಿವರು ಉತ್ತಮವಾಗಿ ದಸರಾ ನಡೆಸುತ್ತಿದ್ದಾರೆ. ಪ್ರಕೃತಿ ನಮ್ಮ ಕೈಯಲ್ಲಿ ಇಲ್ಲ. ಇವರು ಬಂದರೆ ಮಳೆ ಆಗೋದಿಲ್ಲ ಅಂತೆಲ್ಲ ಹೇಳ್ತಾರೆ. ಈಗ ಸಿದ್ದರಾಮಯ್ಯ ಕಾಲ್ಗುಣದಿಂದ ಉತ್ತಮ ಮಳೆಯಾಗಿದೆ. ರೈತರ ಅಭಿವೃದ್ಧಿಗೆ ನಮ್ಮ ಸರ್ಕಾರ ಸಾಕಷ್ಟು ಯೋಜನೆಗಳನ್ನು ಜಾರಿಗೆ ತಂದಿದೆ. ಯಾವುದೇ ಕಾರಣಕ್ಕೂ ನಮ್ಮ ಗ್ಯಾರಂಟಿ ಯೋಜನೆ ನಿಲ್ಲಿಸೋದಿಲ್ಲ. ಈ ಯೋಜನೆ ಜೊತೆಗೆ ಅನೇಕ ಯೋಜನೆಗಳನ್ನು ಜಾರಿಗೆ ತರುತ್ತೇವೆ. ನಿಮ್ಮ ಜೊತೆ ಸರ್ಕಾರ ಸದಾ ಇರುತ್ತದೆ ಎಂದು ರೈತರಿಗೆ ಭರವಸೆ ನೀಡಿದರು.

ರೈತರಿಗೆ ಕೃಷಿ ಆದಾಯಕ್ಕಿಂತ, ಖರ್ಚು ಹೆಚ್ಚಾಗುತ್ತಿದೆ. ಹೀಗಾಗಿ ಹೊಸ ತಂತ್ರಜ್ಞಾನವನ್ನು ರೈತರು ಅಳವಡಿಕೆ ಮಾಡಿಕೊಳ್ಳಬೇಕು. ಸಣ್ಣ ಪುಟ್ಟ ರೈತರಿಗೂ ಹೊಸ ತಂತ್ರಜ್ಞಾನ ಯೋಜನೆಯನ್ನು ತಲುಪಿಸಬೇಕು. ಅಧಿಕಾರಿಗಳು ರೈತರ ಪರವಾಗಿ ಕೆಲಸ ಮಾಡಲಿ. ನಮ್ಮ ಸರ್ಕಾರ ರೈತರ ಪರವಾಗಿ ಕೆಲಸ ಮಾಡುತ್ತಿದೆ. ಮುಂದೆಯೂ ಕೂಡ ರೈತರ ಜೊತೆ ನಮ್ಮ ಸರ್ಕಾರ ಇರುತ್ತದೆ ಎಂದು ಕಾರ್ಯಕ್ರಮದಲ್ಲಿ ಸಚಿವ ಕೆ ವೆಂಕಟೇಶ್ ಹೇಳಿದರು.

ದಸರಾ ವಸ್ತು ಪ್ರದರ್ಶನ ಹಾಗೂ ಮಾರಾಟ ಮೇಳ

ರೈತ ದಸರಾ ಉಪ ಸಮಿತಿಯಿಂದ ಮೈಸೂರಿನ ಜೆಕೆ ಮೈದಾನದಲ್ಲಿ ರೈತ ದಸರಾ ವಸ್ತು ಪ್ರದರ್ಶನ ಹಾಗೂ ಮಾರಾಟ ಮೇಳ ಆಯೋಜಿಸಲಾಗಿದೆ. ರೈತರ ಉತ್ಪನ್ನಗಳ ವಸ್ತು ಪ್ರದರ್ಶನ ಹಾಗೂ ಮಾರಾಟ ಮೇಳವನ್ನು ಸಚಿವ ಚಲುವರಾಯಸ್ವಾಮಿ ಉದ್ಘಾಟನೆ ಮಾಡಿದರು. ಚಲುವರಾಯಸ್ವಾಮಿಗೆ ಶಾಸಕ ರಮೇಶ್ ಬಂಡಿಸಿದ್ದೇಗೌಡ, ಕೆ ಹರೀಶ್ ಗೌಡ, ಗ್ಯಾರಂಟಿ ಅನುಷ್ಠಾನ ಪ್ರಾಧಿಕಾರದ ಉಪಾಧ್ಯಕ್ಷೆ ಪುಷ್ಪ ಅಮರನಾಥ್ ಸಾಥ್‌ ಕೊಟ್ಟರು.

Whats_app_banner