ಕನ್ನಡ ಸುದ್ದಿ  /  Karnataka  /  Mysuru Dasara Live: Live Broadcast Of Mysuru Dasara Without Interruption Here Is The Video Link

Mysuru Dasara Live: ಅಡಚಣೆ ಇಲ್ಲದೆ ಮೈಸೂರು ದಸರಾ ನೇರ ಪ್ರಸಾರ; ಚಾನೆಲ್‌ಗಾಗಿ ಹುಡುಕಾಟ ನಡೆಸಿದ್ದೀರಾ? ಇಲ್ಲಿದೆ ನೋಡಿ ವಿಡಿಯೋ ಲಿಂಕ್‌

Mysuru Dasara 2022 Live: ಮೈಸೂರು ದಸರಾ ಹಬ್ಬ ಕಣ್ತುಂಬಿಕೊಳ್ಳಲು ಹಲವರು ಈಗಾಗಲೇ ಮೈಸೂರು ತಲುಪಿರಬಹುದು. ಇನ್ನು ಹಲವರು ಊರಲ್ಲೇ ಇದ್ದು, ಮೈಸೂರು ದಸರಾ ಕಾರ್ಯಕ್ರಮ ವೀಕ್ಷಣೆಗೆಮೊಬೈಲ್‌ನಲ್ಲೇ ನೇರ ಪ್ರಸಾರದ ಚಾನೆಲ್‌ಗೆ ಹುಡುಕಾಟ ನಡೆಸಿರಬಹುದು. ಅಡಚಣೆ ಇಲ್ಲದೆ ಮೈಸೂರು ದಸರಾ ನೇರ ಪ್ರಸಾರ; ಚಾನೆಲ್‌ಗಾಗಿ ಹುಡುಕಾಟ ನಡೆಸಿದ್ದೀರಾ? ಇಲ್ಲಿದೆ ನೋಡಿ ವಿಡಿಯೋ ಲಿಂಕ್‌

ಮೈಸೂರು ದಸರಾ (ಕಡತ ಚಿತ್ರ)
ಮೈಸೂರು ದಸರಾ (ಕಡತ ಚಿತ್ರ) (karnatakatourism)

ಬೆಂಗಳೂರು: ಮೈಸೂರು ದಸರಾ ನಮ್ಮ ರಾಜ್ಯದ ನಾಡಹಬ್ಬ. ಎರಡು ವರ್ಷಗಳ ನಂತರ ಮೈಸೂರು ದಸರಾ ಸಾರ್ವಜನಿಕ ಪಾಲ್ಗೊಳ್ಳುವಿಕೆಯೊಂದಿಗೆ ಅದ್ದೂರಿಯಾಗಿ ಆಚರಣೆಗೆ ಸನ್ನದ್ಧವಾಗಿದೆ.

ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಈಗಾಗಲೇ ಮೈಸೂರು ತಲುಪಿದ್ದಾರೆ. ಎರಡು ದಿನ ಕರ್ನಾಟಕ ಪ್ರವಾಸ ಮಾಡಲಿರುವ ಅವರು ಇಂದು ಮೊದಲು ಮೈಸೂರು ದಸರಾಕ್ಕೆ ಚಾಲನೆ ನೀಡಲಿದ್ದಾರೆ.

ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಶಕ್ತಿದೇವತೆ ದರ್ಶನ ಪಡೆದು ಅಗ್ರಪೂಜೆ ಸಲ್ಲಿಸಲಿದ್ದಾರೆ. ಬಳಿಕ, ಮೈಸೂರು ಚಾಮುಂಡಿ ಬೆಟ್ಟದಲ್ಲಿ ಬೆಳಗ್ಗೆ 9 ಗಂಟೆ 45 ನಿಮಿಷದಿಂದ 10 ಗಂಟೆ 5 ನಿಮಿಷದೊಳಗೆ ಸಲ್ಲುವ ವೃಶ್ಚಿಕ ಲಗ್ನದಲ್ಲಿ ದೇವಿಗೆ ಪುಷ್ಪಾರ್ಚನೆ ಮಾಡುವ ಮೂಲಕ ಸಂಭ್ರಮದ ಮೈಸೂರು ದಸರಾ ಮಹೋತ್ಸವಕ್ಕೆ ವಿದ್ಯುಕ್ತ ಚಾಲನೆ ನೀಡಲಿದ್ದಾರೆ.

ಮೈಸೂರು ಅರಮನೆಯಲ್ಲಿ ಹಲವು ಸಾಂಪ್ರದಾಯಿಕ ಕಾರ್ಯಕ್ರಮಗಳು ನಡೆಯಲಿವೆ. ಅರಮನೆಯ ಖಾಸಗಿ ದರ್ಬಾರ್ ಹಾಲ್​ನಲ್ಲಿ ಬೆಳಗ್ಗೆ 11 ಗಂಟೆಗೆ ರಾಜ ಯದುವೀರ್ ಒಡೆಯರ್‌ ಅವರು ಖಾಸಗಿ ದರ್ಬಾರ್ ನಡೆಸಲಿದ್ದಾರೆ. ಬೆಳಗ್ಗೆ 6.15ಕ್ಕೆ ಸಿಂಹಾಸನಕ್ಕೆ ಸಿಂಹ ಜೋಡಣೆ ಆಗಿದೆ. ಬೆಳಗ್ಗೆ 9.45ಕ್ಕೆ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್‌ಗೆ ಕಂಕಣಧಾರಣೆ ಮಾಡಲಾಗುತ್ತದೆ. ಬೆಳಗ್ಗೆ 10.45ಕ್ಕೆ ಅರಮನೆ ಸವಾರಿ ತೊಟ್ಟಿಗೆ ಪಟ್ಟದ ಆನೆ, ಪಟ್ಟದ ಹಸು, ಪಟ್ಟದ ಕುದುರೆ ಆಗಮಿಸುತ್ತದೆ. 11.15ಕ್ಕೆ ಸಿಂಹಾರೋಹಣ ಪೂಜಾ ಕೈಂಕರ್ಯ. ಕಳಸ ಪೂಜೆ ಜತೆಗೆ ವಿವಿಧ ಪೂಜೆಗಳು ನಡೆಯಲಿವೆ.

ಇದಲ್ಲದೆ ಹಲವು ಸಾಂಸ್ಕೃತಿಕ ಕಾರ್ಯಕ್ರಮಗಳು ನವರಾತ್ರಿ ಪೂರ್ತಿ ನಡೆಯಲಿದೆ. ಇವುಗಳ ನೇರ ಪ್ರಸಾರವನ್ನು ವೀಕ್ಷಿಸಲು ಇಲ್ಲಿದೆ ಯೂಟ್ಯೂಬ್‌ ಚಾನೆಲ್.‌

Mysore Dasara 2022: ವಿಶ್ವ ವಿಖ್ಯಾತ ಮೈಸೂರು ದಸರಾ ಮಹೋತ್ಸವಕ್ಕೆ ಇನ್ನೇನು ಚಾಲನೆ ದೊರಕಲಿದೆ. ಇಂದು ರೈತ ದಸರಾ, ದಸರಾ ಚಲನ ಚಿತ್ರೋತ್ಸವ, ದಸರಾ ಮ್ಯಾರಥಾನ್, ಯುವ ದಸರಾ, ದಸರಾ ಕ್ರೀಡಾಕೂಡ, ದಸರಾ ಕುಸ್ತಿ, ದಸರಾ ಆಹಾರ ಮೇಳ ಇತ್ಯಾದಿ ಹಲವು ಕಾರ್ಯಕ್ರಮಗಳು ನಡೆಯಲಿವೆ. Mysore Dasara today programme: ಇಂದಿನಿಂದ ವಿಶ್ವವಿಖ್ಯಾತ ಮೈಸೂರು ದಸರಾ, ರಾಷ್ಟ್ರಪತಿಯಿಂದ ಉದ್ಘಾಟನೆ, ಇಂದಿನ ಕಾರ್ಯಕ್ರಮಗಳ ಪಟ್ಟಿ

ಮೈಸೂರು ನಗರದಲ್ಲಿ ಸಂಚಾರಕ್ಕೆ ಹೊಸ ನಿಯಮಗಳನ್ನು ಟ್ರಾಫಿಕ್‌ ಪೊಲೀಸರು ಮಾಡಿದ್ದಾರೆ. ಏಕಮುಖ ಸಂಚಾರ, ಪಾರ್ಕಿಂಗ್‌ ನಿಯಮಗಳನ್ನು ಘೋಷಿಸಲಾಗಿದೆ. Mysore Dasara: ಇಂದಿನಿಂದ ಮೈಸೂರು ಟ್ರಾಫಿಕ್‌ ನಿಯಮಗಳಲ್ಲಿ ಬದಲಾವಣೆ, ಎಲ್ಲಿ ಒನ್‌ವೇ? ಎಲ್ಲೆಲ್ಲಿ ನಿರ್ಬಂಧ? ವಿವರ ತಿಳಿದುಕೊಳ್ಳಿ

ನಾಡಹಬ್ಬ ಮೈಸೂರು ದಸರಾ ಮಹೋತ್ಸವ ಪ್ರಯುಕ್ತ 2022-23ನೇ ಸಾಲಿನ ದಸರಾ ಫಲಪುಷ್ಪ ಪ್ರದರ್ಶನದಲ್ಲೂ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಸಾಧನೆ ಅನಾವರಣಗೊಳ್ಳಲಿದೆ. Mysore dasara flower show: ಮೈಸೂರು ದಸರಾ ಫಲಪುಷ್ಪ ಪ್ರದರ್ಶನದಲ್ಲಿ ರಾರಾಜಿಸಲಿರುವ ಪ್ರೀತಿಯ 'ಅಪ್ಪು'

ಮೈಸೂರು ದಸರಾ ಅವಧಿಯಲ್ಲಿ ಒಂದೇ ದಿನದ ಪ್ರವಾಸ ಕೈಗೊಳ್ಳುವ ಆಲೋಚನೆ ಇದೆಯಾ? ಮೈಸೂರು, ಮಡಿಕೇರಿ, ಊಟಿ ಸುತ್ತಮುತ್ತ ಕೆಎಸ್‌ಆರ್‌ಟಿಸಿ ದಸರಾ ಟೂರ್‌ ಪ್ಯಾಕೇಜ್‌ ಸೇವೆ ಒದಗಿಸಲಾರಂಭಿಸಿದೆ. ಇದರ ವಿವರ ಇಲ್ಲಿದೆ. Mysuru Dasara 2022: ದಸರಾ ರಜೆ ಬಂತಲ್ವಾ? ಟೂರ್‌ ಏನಾದ್ರೂ ಪ್ಲ್ಯಾನ್‌ ಮಾಡಿದ್ರಾ?; ಮೈಸೂರು, ಮಡಿಕೇರಿ, ಊಟಿ ಪ್ರವಾಸ ಮಾಡ್ತೀರಾ?

ಕೋವಿಡ್‌ ಸಂಕಷ್ಟದ ಬಳಿಕ ಮೈಸೂರಿನಲ್ಲಿ ನಡೆಯುವ ನಾಡಹಬ್ಬವನ್ನು ಕಣ್ತುಂಬಿಕೊಳ್ಳಲು ದೇಶವಿದೇಶಗಳಿಂದ ಯಾತ್ರಿಕರು ಆಗಮಿಸುತ್ತಿದ್ದಾರೆ. ಮೈಸೂರು ದಸರಾ 2022 ಅನ್ನು ನೀವು ಕಣ್ತುಂಬಿಕೊಳ್ಳಲು ಮೈಸೂರು ಹೋಗಲು ಚಿಂತನೆ ನಡೆಸಿದ್ದೀರಾ. ಭಾರತೀಯ ರೈಲ್ವೆ ವಿಶೇಷ ರೈಲು ಸಂಚಾರದ ವೇಳಾಪಟ್ಟಿ (SPECIAL TRAINS ON DUSSEHARA - Train Timetable) ಪ್ರಕಟಿಸಿದೆ. ಅದರ ವಿವರ ಇಲ್ಲಿದೆ ಗಮನಿಸಿ. Mysuru Dasara 2022: ನಾಡಹಬ್ಬಕ್ಕೆ ಹೊರಟ್ರಾ? ವಿಶೇಷ ರೈಲು ಸಂಚಾರದ ವೇಳಾ ಪಟ್ಟಿ ನೋಡೋಕೆ ಮರೆಯಬೇಡಿ!

IPL_Entry_Point