ಮೈಸೂರು: ಹುಣಸೂರು ತಾಲೂಕು ಬಿಳಿಕೆರೆಯಲ್ಲಿ ಎಟಿಎಂಗೆ ಹಣ ತುಂಬಿಸದೇ ವಂಚನೆ, ಇಬ್ಬರ ವಿರುದ್ಧ ಕೇಸ್‌
ಕನ್ನಡ ಸುದ್ದಿ  /  ಕರ್ನಾಟಕ  /  ಮೈಸೂರು: ಹುಣಸೂರು ತಾಲೂಕು ಬಿಳಿಕೆರೆಯಲ್ಲಿ ಎಟಿಎಂಗೆ ಹಣ ತುಂಬಿಸದೇ ವಂಚನೆ, ಇಬ್ಬರ ವಿರುದ್ಧ ಕೇಸ್‌

ಮೈಸೂರು: ಹುಣಸೂರು ತಾಲೂಕು ಬಿಳಿಕೆರೆಯಲ್ಲಿ ಎಟಿಎಂಗೆ ಹಣ ತುಂಬಿಸದೇ ವಂಚನೆ, ಇಬ್ಬರ ವಿರುದ್ಧ ಕೇಸ್‌

Hunsur ATM Fraud: ಬೀದರ್‌ ಎಟಿಎಂ ವಾಹನದಿಂದ ಹಣ ದೋಚಿದ ಪ್ರಕರಣದ ಕಾವು ಆರುವ ಮೊದಲೇ ಬ್ಯಾಂಕ್ ದರೋಡೆ ಗಮನಸೆಳೆದಿದೆ. ಇನ್ನೊಂದೆಡೆ, ಮೈಸೂರು ಜಿಲ್ಲೆ ಹುಣಸೂರು ತಾಲೂಕು ಬಿಳಿಕೆರೆಯಲ್ಲಿ ಎಟಿಎಂಗೆ ಹಣ ತುಂಬಿಸದೇ ವಂಚನೆ ಎಸಗಿದ್ದಾರೆ. ಈ ಹುಣಸೂರು ಎಟಿಎಂ ವಂಚನೆ ಸಂಬಂಧ ಇಬ್ಬರ ವಿರುದ್ಧ ಕೇಸ್ ದಾಖಲಾಗಿದೆ.

ಹುಣಸೂರು ತಾಲೂಕು ಬಿಳಿಗೆರೆಯಲ್ಲಿ ಎಟಿಎಂಗೆ ಹಣ ತುಂಬಿಸದೇ ವಂಚನೆ ಪ್ರಕರಣದಲ್ಲಿ ಇಬ್ಬರ ವಿರುದ್ಧ ಕೇಸ್ ದಾಖಲಾಗಿದೆ.
ಹುಣಸೂರು ತಾಲೂಕು ಬಿಳಿಗೆರೆಯಲ್ಲಿ ಎಟಿಎಂಗೆ ಹಣ ತುಂಬಿಸದೇ ವಂಚನೆ ಪ್ರಕರಣದಲ್ಲಿ ಇಬ್ಬರ ವಿರುದ್ಧ ಕೇಸ್ ದಾಖಲಾಗಿದೆ.

Hunsur ATM Fraud: ಬೀದರ್‌ ಎಟಿಎಂ ವಾಹನದಿಂದ ಹಣ ದೋಚಿದ ಪ್ರಕರಣದ ಕಾವು ಆರುವ ಮೊದಲೇ ಮಂಗಳೂರು ಸಮೀಪ ಉಳ್ಳಾಲದ ಕೋಟೆಕಾರ್ ಬ್ಯಾಂಕ್‌ ದರೋಡೆ ನಡೆಯಿತು. ಈಗ ಮೈಸೂರು ಜಿಲ್ಲೆ ಹುಣಸೂರು ತಾಲೂಕು ಬಿಳಿಕೆರೆಯಲ್ಲಿ ಎಟಿಎಂಗೆ ಹಣ ತುಂಬಿಸದೇ ವಂಚಿಸಿದ ಪ್ರಕರಣ ಗಮನಸೆಳೆದಿದೆ.

ಬಿಳಿಕೆರೆಯಲ್ಲಿ ಎಟಿಎಂಗೆ ಹಣ ತುಂಬಿಸದೇ ವಂಚನೆ, ಇಬ್ಬರ ವಿರುದ್ಧ ಕೇಸ್‌

ಮೈಸೂರು ಜಿಲ್ಲೆ ಹುಣಸೂರು ತಾಲೂಕು ಬಿಳಿಕೆರೆಯಲ್ಲಿ ಎಟಿಎಂಗೆ ಹಣ ತುಂಬಿಸದೇ ವಂಚಿಸಿದ ಪ್ರಕರಣ ಬೆಳಕಿಗೆ ಬಂದಿದೆ. ಹುಣಸೂರು ಎಟಿಎಂ ವಂಚನೆಗೆ ಸಂಬಂಧಿಸಿ, ಟಿಎಲ್ ಎಂಟರ್‌ಪ್ರೈಸಸ್‌ನ ಇಬ್ಬರು ಉದ್ಯೋಗಿಗಳ ವಿರುದ್ಧ ಕೇಸ್ ದಾಖಲಾಗಿದೆ.

ಹುಣಸೂರು ತಾಲೂಕಿನಲ್ಲಿ ಎಟಿಎಂಗಳಿಗೆ ಹಣ ತುಂಬಿಸುವ ಗುತ್ತಿಗೆ ಪಡೆದಿದ್ದ ಟಿಎಲ್ ಎಂಟರ್ ಪ್ರೈಸಸ್ ಕಂಪನಿಯ ಉದ್ಯೋಗಿಗಳಾದ ಅಕ್ಷಯ್ ಕುಮಾರ್ ಮತ್ತು ತೇಜಸ್ವಿನಿ ಎಂಬುವವರ ವಿರುದ್ಧ ಕೇಸ್ ದಾಖಲಾಗಿದೆ. ಈ ಇಬ್ಬರ ಪೈಕಿ ಅಕ್ಷಯ್ ಕುಮಾರ್ ಎಟಿಎಂಗಳಿಗೆ ಹಣ ತುಂಬಿಸುವ ಕೆಲಸ ಮಾಡುತ್ತಿದ್ದ. ಆತ ಹಣವನ್ನು ಎಟಿಎಂಗಳಿಗೆ ತುಂಬಿಸದೇ ಬ್ಯಾಗ್‌ಗೆ ತುಂಬಿಸಿ ಮನೆಗೆ ಕೊಂಡೊಯ್ಯುತ್ತಿದ್ದ ಎಂಬ ಆರೋಪ ಕೇಳಬಂದಿತ್ತು.

ಎಟಿಎಂ ಆಡಿಟ್ ನಡೆಸಿದಾಗ ಇಬ್ಬರ ವಂಚನಾ ಕೃತ್ಯ ಬಯಲಾಗಿದೆ. ಇನ್ನೊಂದೆಡೆ, ಬ್ಯಾಗ್‌ನಲ್ಲಿ ಹಣ ಕೊಂಡೊಯ್ಯುತ್ತಿದ್ದ ಮತ್ತು ಚಿನ್ನದ ಅಂಗಡಿಗೆ ಹೋಗಿ ಚಿನ್ನ ಖರೀದಿಸುತ್ತಿದ್ದ ದೃಶ್ಯಗಳು ಸಿಸಿಟಿವಿಯಲ್ಲಿ ಸೆರೆಯಾಗಿವೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.

ಬಿಳಿಕೆರೆಯಲ್ಲಿ ನಿನ್ನೆ ರಾತ್ರಿ ಅಕ್ಷಯ್ ಕುಮಾರ್ ಬಂಧನದ ವೇಳೆ ಹೈಡ್ರಾಮಾ

ಟಿಎಲ್ ಎಂಟರ್ ಪ್ರೈಸಸ್ ಕಂಪನಿಯ ಪರವಾಗಿ ಮೈಸೂರಿನ 16 ಎಟಿಎಂಗಳಿಗೆ ಹಣ ತುಂಬಿಸುವ ಹೊಣೆ ಉದ್ಯೋಗಿ ಅಕ್ಷಯ್ ಕುಮಾರ್‌ನದ್ದಾಗಿತ್ತು. ಆತ ಗದ್ದಿಗೆ ಗ್ರಾಮದ ಎಟಿಎಂಗೆ ಹಣ ತುಂಬಿಸುವಾಗ 5.8 ಲಕ್ಷ ರೂಪಾಯಿ ತುಂಬಿಸಿರಲಿಲ್ಲ. ಖಚಿತ ಸಾಕ್ಷ್ಯ ಮತ್ತು ಮಾಹಿತಿ ಸಂಗ್ರಹಿಸಿದ ಬಳಿಕ ಪೊಲೀಸರು ನಿನ್ನೆ (ಜನವರಿ 17) ರಾತ್ರಿ ಅಕ್ಷಯ್ ಕುಮಾರ್‌ನನ್ನು ವಶಕ್ಕೆ ಪಡೆಯಲು ಆತನ ಗ್ರಾಮಕ್ಕೆ ಹೋಗಿದ್ದಾರೆ. ಅಲ್ಲಿ ಹೈಡ್ರಾಮಾ ಸೃಷ್ಟಿಯಾಗಿತ್ತು ಎಂದು ಪೊಲೀಸ್ ಮೂಲಗಳು ತಿಳಿಸಿವೆ.

Whats_app_banner