ಕನ್ನಡ ಸುದ್ದಿ  /  ಕರ್ನಾಟಕ  /  Mysuru News: ರಾಜ್ಯ ಕಾಂಗ್ರೆಸ್ ಸರ್ಕಾರದ ಐದನೇ ಗ್ಯಾರಂಟಿ ಯುವನಿಧಿ ಯೋಜನೆ ಜನವರಿ ತಿಂಗಳಲ್ಲಿ ಜಾರಿಯಾಗಲಿದೆ

Mysuru News: ರಾಜ್ಯ ಕಾಂಗ್ರೆಸ್ ಸರ್ಕಾರದ ಐದನೇ ಗ್ಯಾರಂಟಿ ಯುವನಿಧಿ ಯೋಜನೆ ಜನವರಿ ತಿಂಗಳಲ್ಲಿ ಜಾರಿಯಾಗಲಿದೆ

CM Siddaramaiah: ಈಗಾಗಲೇ ನಾಲ್ಕು ಯೋಜನೆಗಳನ್ನು ಜಾರಿಗೆ ತಂದಿದ್ದೇವೆ. ಯುವನಿಧಿ ಯೋಜನೆಯನ್ನು ಡಿಸೆಂಬರ್ ಅಂತ್ಯ ಅಥವಾ ಜನವರಿಯಲ್ಲಿ ಜಾರಿ ಮಾಡುವುದಾಗಿ ಸಿಎಂ ಹೇಳಿದ್ದಾರೆ.

ಸಿಎಂ ಸಿದ್ದರಾಮಯ್ಯ: ಕರ್ನಾಟಕ ರಾಜ್ಯ ಕಾಂಗ್ರೆಸ್ ಸರ್ಕಾರದ ಐದನೇ ಗ್ಯಾರಂಟಿ ಯುವನಿಧಿ ಯೋಜನೆ ಜನವರಿ ತಿಂಗಳಲ್ಲಿ ಜಾರಿಯಾಗಲಿದೆ.
ಸಿಎಂ ಸಿದ್ದರಾಮಯ್ಯ: ಕರ್ನಾಟಕ ರಾಜ್ಯ ಕಾಂಗ್ರೆಸ್ ಸರ್ಕಾರದ ಐದನೇ ಗ್ಯಾರಂಟಿ ಯುವನಿಧಿ ಯೋಜನೆ ಜನವರಿ ತಿಂಗಳಲ್ಲಿ ಜಾರಿಯಾಗಲಿದೆ.

ಮೈಸೂರು: ಮೈಸೂರಿನಲ್ಲಿ ಗೃಹಲಕ್ಷ್ಮಿ ಯೋಜನೆಗೆ ಚಾಲನೆ ನೀಡಿ ಮಾತನಾಡಿದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಈ ಘೋಷಣೆ ಮಾಡಿದ್ದಾರೆ. ಈಗಾಗಲೇ ನಾಲ್ಕು ಯೋಜನೆಗಳನ್ನು ಜಾರಿಗೆ ತಂದಿದ್ದೇವೆ. ಯುವನಿಧಿ ಯೋಜನೆಯನ್ನು ಡಿಸೆಂಬರ್ ಅಂತ್ಯ ಅಥವಾ ಜನವರಿಯಲ್ಲಿ ಜಾರಿ ಮಾಡುವುದಾಗಿ ಸಿಎಂ ಹೇಳಿದ್ದಾರೆ.

ಹಿಂದುಸ್ಥಾನ್ ಟೈಮ್ಸ್ ಈ ತಿಂಗಳ 5ರಂದೇ ಈ ಸುದ್ದಿಯನ್ನು ಪ್ರಕಟಿಸಿತ್ತು. ಯಾವುದೇ ಮುಂಚೂಣಿ ಮಾಧ್ಯಮ ಮಾಡದ ಕೆಲಸವನ್ನು ಹೆಚ್ ಟಿ ಮಾಡಿತ್ತು.

ಯುವನಿಧಿ ಜಾರಿಗೆ ಸರ್ಕಾರ ಕೆಲವು ಕಂಡೀಷನ್ ಗಳನ್ನು ವಿಧಿಸಿದೆ. ಪದವಿ ಮತ್ತು ಡಿಪ್ಲಮೋದ ಫಲಿತಾಂಶ ಹೊರಬಿದ್ದ ಆರು ತಿಂಗಳ ನಂತರ ಈ ಯೋಜನೆ ಜಾರಿಗೆ ಬರಲಿದೆ. ಅಂದರೆ ರಿಸಲ್ಟ್ ಹೊರಬಿದ್ದು 6 ತಿಂಗಳ ನಂತರವೂ ಉದ್ಯೋಗ ಸಿಗದಿದ್ದರೆ ಮಾತ್ರ ಇದರ ಫಲಾನುಭವಿಯಾಗಲು ಸಾಧ್ಯ.

ಟ್ರೆಂಡಿಂಗ್​ ಸುದ್ದಿ

ಈ ವಿಷಯದಲ್ಲಿ ಮರೆಮಾಚುವ ಸಾಧ್ಯತೆಗಳೇ ಹೆಚ್ಚು. ಸರ್ಕಾರಿ ಕೆಲಸ ಸಿಕ್ಕರೆ ಸುಲಭವಾಗಿ ಘೋಷಣೆ ಮಾಡುತ್ತಾರೆ. ಏಕೆಂದರೆ ಸಿಕ್ಕಿಹಾಕಿಕೊಳ್ಳುವ ಭಯ ಇರುತ್ತದೆ. ಆದರೆ ಖಾಸಗಿ ಮತ್ತು ಸ್ವಂತ ಉದ್ಯೋಗ ಕೈಗೊಳ್ಳುವವರು ಮುಚ್ಚಿಡುವ ಸಾಧ್ಯತೆಗಳನ್ನು ತಳ್ಳಿಹಾಕುವಂತಿಲ್ಲ. ಲಿಮಿಟೆಡ್ ಮತ್ತು ದೊಡ್ಡ ದೊಡ್ಡ ಕಂಪನಿಗಳು ಸರ್ಕಾರಕ್ಕೆ ಮಾಹಿತಿ ಹಂಚಿಕೊಳ್ಳಬಹುದು. ಸ್ವಂತ ಉದ್ಯೋಗ ವ್ಯಾಪಾರ ವಹಿವಾಟು ನಡೆಸುವವರು ಬೆಳಕಿಗೆ ಬರುವುದಿಲ್ಲ. ರಿಯಲ್ ಎಸ್ಟೇಟ್ ವ್ಯವಹಾರ, ಅಂಗಡಿ, ಹೋಟೆಲ್, ಬೇಕರಿ, ಕೃಷಿ, ವ್ಯಾಪಾರ ಮಾಡಿ ಲಕ್ಷ ಸಂಪಾದನೆ ಮಾಡುವವರೂ ಇದ್ದಾರೆ. ಇವರನ್ನು ಗುರುತಿಸಲು ಅಸಾಧ್ಯ. ಈ ನಿಟ್ಟಿನಲ್ಲಿ ಸರ್ಕಾರ ಕಟ್ಟುನಿಟ್ಟಿನ ಕ್ರಮಗಳನ್ನು ಅನುಸರಿಸಲು ಚಿಂತನೆ ನಡೆಸಿದೆ. ಆಧುನಿಕ ತಂತ್ರಜ್ಞಾನದ ಸಹಾಯ ಪಡೆದು ಹೊಸ ಮಾದರಿಯ ಸಾಫ್ಟ್ ವೇರ್ ಅಭಿವೃದ್ದಿಪಡಿಸಲು ಮುಂದಾಗಿದೆ ಎನ್ನಲಾಗುತ್ತಿದೆ.

ಲೋಕಸಭಾ ಚುನಾವಣೆಗೂ ಮುನ್ನ ಎರಡು ಮೂರು ತಿಂಗಳು ಯುವನಿಧಿ ಪದವೀಧರರಿಗೆ ತಲುಪಲಿದೆ. ಆ ಮೂಲಕ ಯುವ ಮತದಾರರನ್ನು ಸೆಳೆಯುವ ಪ್ರಯತ್ನ ಮಾಡಲಿದೆ.

(ವರದಿ: ಮಾರುತಿ, ಬೆಂಗಳೂರು)