FIR on Ashwathnarayan: ಟಿಪ್ಪು-ಸಿದ್ದರಾಮಯ್ಯ ವಿರುದ್ಧ ಮಾತಾಡಿದ್ದ ಬಿಜೆಪಿ ನಾಯಕ ಅಶ್ವತ್ಥನಾರಾಯಣ ಮೇಲೆ ಮೈಸೂರಿನಲ್ಲಿ ಪ್ರಕರಣ ದಾಖಲು
ಕನ್ನಡ ಸುದ್ದಿ  /  ಕರ್ನಾಟಕ  /  Fir On Ashwathnarayan: ಟಿಪ್ಪು-ಸಿದ್ದರಾಮಯ್ಯ ವಿರುದ್ಧ ಮಾತಾಡಿದ್ದ ಬಿಜೆಪಿ ನಾಯಕ ಅಶ್ವತ್ಥನಾರಾಯಣ ಮೇಲೆ ಮೈಸೂರಿನಲ್ಲಿ ಪ್ರಕರಣ ದಾಖಲು

FIR on Ashwathnarayan: ಟಿಪ್ಪು-ಸಿದ್ದರಾಮಯ್ಯ ವಿರುದ್ಧ ಮಾತಾಡಿದ್ದ ಬಿಜೆಪಿ ನಾಯಕ ಅಶ್ವತ್ಥನಾರಾಯಣ ಮೇಲೆ ಮೈಸೂರಿನಲ್ಲಿ ಪ್ರಕರಣ ದಾಖಲು

ಉರಿಗೌಡರು ನಂಜೇಗೌಡರು ಟಿಪ್ಪುವನ್ನು ಕೊಂದಂತೆ ಸಿದ್ದರಾಮಯ್ಯ ಅವರನ್ನು ಹೊಡೆದು ಹಾಕಬೇಕು ಎಂದು ಸಿದ್ದರಾಮಯ್ಯ ವಿರುದ್ದ ಫೆಬ್ರವರಿ ತಿಂಗಳಲ್ಲಿ ಹೇಳಿಕೆ ನೀಡಿದ್ದ ಮಾಜಿ ಸಚಿವ ಡಾ.ಸಿ.ಎನ್‌.ಅಶ್ವಥ್‌ ನಾರಾಯಣ್‌ ವಿರುದ್ದ ಮೊಕದ್ದಮೆ ದಾಖಲಿಸಿರುವುದು ಸೇಡಿನ ರಾಜಕಾರಣ ಎನ್ನುವ ಆರೋಪಗಳು ಕೇಳಿ ಬಂದಿವೆ.

.ಡಾ.ಅಶ್ವಥ್‌ ನಾರಾಯಣ
.ಡಾ.ಅಶ್ವಥ್‌ ನಾರಾಯಣ

ಮೈಸೂರು: ಹೇಳಿಕೆ ನೀಡಿದ್ದು ಮೂರು ತಿಂಗಳ ಹಿಂದೆ, ಮೊಕದ್ದಮೆ ದಾಖಲಾಗಿದ್ದು ಈಗ !.

ಕರ್ನಾಟಕದಲ್ಲಿ ಬಿಜೆಪಿ ಶಾಸಕ, ಮಾಜಿ ಸಚಿವ ಡಾ.ಸಿ.ಎನ್‌.ಅಶ್ವಥ್‌ನಾರಾಯಣ ಅವರ ವಿರುದ್ದ ಕೊಲೆ ಪ್ರಚೋದನೆ ಮೊಕದ್ದಮೆ ದಾಖಲಾಗಿದೆ. ಅದೂ ಹಾಲಿ ಸಿಎಂ ಸಿದ್ದರಾಮಯ್ಯ ಅವರ ವಿರುದ್ದ ಹೇಳಿಕೆ ನೀಡಿದ್ದಕ್ಕೆ. ಬಿಜೆಪಿ ಸರ್ಕಾರ ಇದ್ದಾಗ ದೂರನ್ನು ಪಡೆದು ಸುಮ್ಮನಾಗಿದ್ದ ಮೈಸೂರಿನ ಪೊಲೀಸರು ಕಾಂಗ್ರೆಸ್‌ ಸರ್ಕಾರ ರಚನೆಯಾದ ಬಳಿಕ ಮೊಕದ್ದಮೆ ದಾಖಲಿಸಿರುವುದು ಚರ್ಚೆಗೆ ಗ್ರಾಸವಾಗಿದೆ.

ಉರಿಗೌಡರು ನಂಜೇಗೌಡರು ಟಿಪ್ಪುವನ್ನು ಕೊಂದಂತೆ ಸಿದ್ದರಾಮಯ್ಯ ಅವರನ್ನು ಹೊಡೆದು ಹಾಕಬೇಕು ಎಂದು ಸಿದ್ದರಾಮಯ್ಯ ವಿರುದ್ದ ಫೆಬ್ರವರಿ ತಿಂಗಳಲ್ಲಿ ಹೇಳಿಕೆ ನೀಡಿದ್ದ ಮಾಜಿ ಸಚಿವ ಡಾ.ಸಿ.ಎನ್‌.ಅಶ್ವಥ್‌ ನಾರಾಯಣ್‌ ವಿರುದ್ದ ಮೊಕದ್ದಮೆ ದಾಖಲಿಸಿರುವುದು ಸೇಡಿನ ರಾಜಕಾರಣ ಎನ್ನುವ ಆರೋಪಗಳು ಕೇಳಿ ಬಂದಿವೆ.

ವಿಧಾನಸಭೆ ಚುನಾವಣೆಗೂ ಮುನ್ನ ಫೆಬ್ರವರಿ ೧೫ರಂದು ಅಶ್ವಥ್‌ನಾರಾಯಣ್‌ ಮಂಡ್ಯ ಸಮೀಪದ ಸಾತನೂರು ಗ್ರಾಮದಲ್ಲಿ ಆಯೋಜಿಸಿದ್ದ ಸಭೆಯಲ್ಲಿ ಈ ಹೇಳಿಕೆ ನೀಡಿದ್ದರು. ವಿರೋಧ ವ್ಯಕ್ತವಾಗುತ್ತಿದ್ದಂತೆ ಅಶ್ವಥ್‌ನಾರಾಯಣ್‌ ಕ್ಷಮೆಯನ್ನೂ ಕೇಳಿದ್ದರು. ಈ ಹೇಳಿಕೆ ವಿರುದ್ದ ಕ್ರಮ ಕೈಃಗೊಳ್ಳುವಂತೆ ಕಾಂಗ್ರೆಸ್‌ ವಕ್ತಾರ ಎಂ.ಲಕ್ಷ್ಮಣ ಮೈಸೂರಿನ ದೇವರಾಜ ಠಾಣೆಗೆ ದೂರು ನೀಡಿದ್ದರು. ಆದರೂ ಮೊಕದ್ದಮೆ ದಾಖಲಾಗಿರಲಿಲ್ಲ. ಹಿಂದೆ ನೀಡಿದ ದೂರಿನ ಕುರಿತು ಮಾಹಿತಿಯನ್ನು ಕಾಂಗ್ರೆಸ್‌ ತಂಡ ಬುಧವಾರ ಕೇಳಿದಾಗ ಮೈಸೂರಿನ ದೇವರಾಜ ಠಾಣೆಯಲ್ಲಿ ಈಗ ಮೊಕದ್ದಮೆ ದಾಖಲಾಗಿದೆ. ಐಪಿಸಿ ಕಲಂ ೫೦೬ ಹಾಗೂ ೧೫೩ರ ಅಡಿ ಕೊಲೆ ಪ್ರಚೋದನೆ ಪ್ರಕರಣ ದಾಖಲಿಸಲಾಗಿದೆ. ಈ ಕುರಿತು ತನಿಖೆಯೂ ಆರಂಭವಾಗಿದೆ. ದೂರು ನೀಡಿದ್ದ ಲಕ್ಷ್ಮಣ್‌ ಅವರೊಂದಿಗೆ ಸ್ಥಳ ಮಹಜರು ಕಾರ್ಯವನ್ನು ಪೊಲೀಸರು ಕೈಗೊಂಡಿದ್ದು ಅಶ್ವಥ್‌ ನಾರಾಯಣ ಅವರಿಂದಲೂ ಹೇಳಿಕೆ ಪಡೆಯುವ ಸಾಧ್ಯತೆಯಿದೆ.

ನಾವು ಆಗಲೇ ದೂರು ಕೊಟ್ಟಿದ್ದೆವು.. ಕ್ರಮ ಆಗಿರಲಿಲ್ಲ. ಈಗ ವಿಚಾರಿಸಿದಾಗ ಮೊಕದ್ದಮೆ ದಾಖಲಿಸಿ ತನಿಖೇ ಆರಂಭಿಸಿದ್ದಾರೆ. ಹಿರಿಯ ನಾಯಕರೊಬ್ಬರ ಮೇಲೆ ಪ್ರಚೋದನಕಾರಿ ಹೇಳಿಕೆ ನೀಡಿದ್ದರಿಂದ ಕೊಡಗಿನಲ್ಲಿ ಸಿದ್ದರಾಮಯ್ಯ ಅವರ ಮೇಲೆ ದಾಳಿ ಪ್ರಯತ್ನ ಆಗಿತ್ತು. ಮೊಕದ್ದಮೆ ದಾಖಲಾಗಿರುವುದರಿಂದ ಅಶ್ವಥ್‌ನಾರಾಯಣ್‌ ಅವರನ್ನು ಕೂಡಲೇ ಬಂಧಿಸಬೇಕು ಎನ್ನುವುದು ಲಕ್ಷ್ಮಣ್‌ ಅವರ ಆಗ್ರಹ.

ಇದನ್ನು ಬಲವಾಗಿ ಟೀಕಿಸಿರುವ ಡಾ.ಅಶ್ವಥ್‌ ನಾರಾಯಣ್‌, ಚುನಾವಣೆ ವೇಳೆ ಹೇಳಿಕೆ ನೀಡಿದ್ದೆ, ಆನಂತರ ವಿಷಾದವನ್ನೂ ವ್ಯಕ್ತಪಡಿಸಿದ್ದೆ. ಈಗ ಟಿಪ್ಪು ಮೇಲಿನ ಪ್ರೀತಿಯಿಂದ ನನ್ನ ಮೇಲೆ ಮೊಕದ್ದಮೆ ದಾಖಲಿಸಿದ್ದು. ಸೇಡಿನ ರಾಜಕಾರಣವನ್ನು ಕಾಂಗ್ರೆಸ್‌ ನವರು ಮಾಡುತ್ತಿದ್ದಾರೆ. ಸಿದ್ದರಾಮಯ್ಯ ಅವರ ಬಗ್ಗೆ ನನಗೂ ಗೌರವವಿದೆ. ನಾನು ರಾಜಕೀಯ ಹಾಗೂ ಕಾನೂರು ರೀತಿಯಲ್ಲಿ ಇದೆಲ್ಲವನ್ನೂ ಎದುರಿಸುವೆ ಎಂದು ಹೇಳಿದ್ದಾರೆ.

Whats_app_banner