ಕನ್ನಡ ಸುದ್ದಿ  /  Karnataka  /  Mysuru News Power Supply Variation In Mysore Urban Including Kadakola Uttanahalli Siddramana Hundi Rsg

Mysuru News: ಮಾರ್ಚ್ 17, ಭಾನುವಾರ ಮೈಸೂರು ಗ್ರಾಮಾಂತರ ಪ್ರದೇಶದ ಹಲವೆಡೆ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯ

Mysuru News: ಬೇಸಿಗೆಯಲ್ಲಿ ನೀರಿನ ಜೊತೆಗೆ ವಿದ್ಯುತ್‌ ಸಮಸ್ಯೆ ಕೂಡಾ ತಲೆದೋರಲಿದೆ. ಮಾರ್ಚ್‌ 17, ಭಾನುವಾರ ಸಿದ್ದರಾಮಯನ ಹುಂಡಿ, ಉತ್ತನಹಳ್ಳಿ, ಕಡಕೋಳ ಸೇರಿದಂತೆ ಮೈಸೂರಿನ ಕೆಲವು ಗ್ರಾಮಾಂತರ ಪ್ರದೇಶಗಳಲ್ಲಿ ವಿದ್ಯುತ್‌ ವ್ಯತ್ಯಯವಾಗಲಿದೆ. ಸಾರ್ವಜನಿಕರು ಸಹಕರಿಸಬೇಕೆಂದು ಕಾರ್ಯನಿರ್ವಾಹಕ ಇಂಜಿನಿಯರ್ ಮನವಿ ಮಾಡಿದ್ದಾರೆ.

ಮೈಸೂರಿನ ಕೆಲವು ಗ್ರಾಮಾಂತರ ಪ್ರದೇಶಗಳಲ್ಲಿ ವಿದ್ಯುತ್‌ ವ್ಯತ್ಯಯ
ಮೈಸೂರಿನ ಕೆಲವು ಗ್ರಾಮಾಂತರ ಪ್ರದೇಶಗಳಲ್ಲಿ ವಿದ್ಯುತ್‌ ವ್ಯತ್ಯಯ

Mysuru News: ಬೇಸಿಗೆ ಶುರುವಾಗಿದೆ, ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ನೀರಿನ ಸಮಸ್ಯೆ ತಲೆದೋರಿದೆ, ಸರ್ಕಾರವು ನೀರಿನ ಸಮಸ್ಯೆ ಬಗೆಹರಿಸಲು ಸತತ ಪ್ರಯತ್ನ ಮಾಡುತ್ತಿದೆ. ಮೈಸೂರಿನಲ್ಲಿ ಕೂಡಾ ನೀರಿನ ಸಮಸ್ಯೆ ಶುರುವಾಗಿದ್ದು ನೀರನ್ನು ಮಿತವಾಗಿ ಬಳಸುವಂತೆ ಮನವಿ ಮಾಡಲಾಗಿದೆ. ಬೇಸಿಗೆಯಲ್ಲಿ ನೀರಿನ ಕೊರತೆಯಿಂದ ವಿದ್ಯುತ್‌ ಸಮಸ್ಯೆ ಕೂಡಾ ಶುರುವಾಗುತ್ತಿದೆ.

ಭಾನುವಾರ ಮೈಸೂರಿನ ಹಲವೆಡೆ ವಿದ್ಯುತ್‌ ವ್ಯತ್ಯಯ

ಮೈಸೂರಿನ‌ ವಿವಿ ಮೊಹಲ್ಲಾ ವಿಭಾಗದ ವ್ಯಾಪ್ತಿಯ ಕೆಎಚ್‌ಬಿ ವಿದ್ಯುತ್ ವಿತರಣಾ ಕೇಂದ್ರದಲ್ಲಿ 4ನೇ ತ್ರೈಮಾಸಿಕ ನಿರ್ವಹಣಾ ಕಾರ್ಯದ ನಿಮಿತ್ತ ಮಾರ್ಚ್ 17ರಂದು (ನಾಳೆ ಭಾನುವಾರ) ಬೆಳಗ್ಗೆ 10:00 ಗಂಟೆಯಿoದ ಸಂಜೆ 5:30 ಗಂಟೆಯವರೆಗೆ ಈ ಕೆಳಕಂಡ ಪ್ರದೇಶಗಳಲ್ಲಿ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯವಾಗಲಿದೆ.

ಕಡಕೊಳ ವಿದ್ಯುತ್ ವಿತರಣಾ ಕೇಂದ್ರದ ವ್ಯಾಪ್ತಿಯ ಪ್ರದೇಶಗಳು: ಕಡಕೋಳ, ಬ್ಯಾತಹಳ್ಳಿ, ದಡದಹಳ್ಳಿ, ಸಿಂಧುವಳ್ಳಿ, ದೊಡ್ಡಕಾನ್ಯ, ಚಿಕ್ಕಕಾನ್ಯ, ಕೂಡನಹಳ್ಳಿ, ಕೋಚನಹಳ್ಳಿ, ಮರಸೆ, ಮಾಕನಹುಂಡಿ, ಕೆ.ಐ.ಎ.ಡಿ.ಬಿ ಇಂಡಸ್ಟ್ರಿಯಲ್ ಏರಿಯಾ, ಮೈಸೂರು ವಿಮಾನ ನಿಲ್ದಾಣ, ಬಿರೇಗೌಡನಹುಂಡಿ, ಕೆ.ಎಂ. ಹುಂಡಿ, ಬಿ.ಜಿ. ಹುಂಡಿ, ಕೆ.ಎನ್. ಹುಂಡಿ, ಆಯರಹಳ್ಳಿ, ಕಿರಾಳು, ದೂರ, ಮುರುಡಹಳ್ಳಿ, ತಳೂರು, ಟಿ. ಕಾಟೂರು, ಟಿವಿಎಸ್, ಫ್ಯಾಕ್ಟರಿ ಹಾಗೂ ಸುತ್ತ ಮುತ್ತಲಿನ ಪ್ರದೇಶಗಳು.

ಸಾರ್ವಜನಿಕರಿಗೆ ಮನವಿ ಮಾಡಿದ ಕಾರ್ಯನಿರ್ವಾಹಕ ಇಂಜಿನಿಯರ್

ಮೇಗಳಾಪುರ ವಿದ್ಯುತ್ ವಿತರಣಾ ಕೇಂದ್ರದ ವ್ಯಾಪ್ತಿಯ ಪ್ರದೇಶಗಳು: ಉತ್ತನಹಳ್ಳಿ, ಎಂ.ಸಿ.ಹುoಡಿ, ಕೀಳನಪುರ, ಸಿದ್ದರಾಮನಹುಂಡಿ, ಮೇಗಳಾಪುರ, ಮಾಧವಗೆರೆ, ಗುರುಕಾರಪುರ, ದುದ್ದಗೆರೆ, ಮಹದೇವಿ ಕಾಲೋನಿ, ಲಕ್ಷ್ಮೀಪುರ, ಪಿ.ಜಿ ಹುಂಡಿ, ಚಟ್ಟನಹಳ್ಳಿ, ಚಟ್ಟನಹಳ್ಳಿ ಪಾಳ್ಯ, ಹೊಸಹಳ್ಳಿ, ರಂಗನಾಥಪುರ, ಶ್ರೀನಿವಾಸಪುರ, ಯಡಕೊಳ, ಕಡವೆಕಟ್ಟೆಹುಂಡಿ, ಅಂಚೆಹುoಡಿ, ದೇವೇಗೌಡನಹುಂಡಿ, ಮುದ್ದೇಗೌಡನಹುಂಡಿ, ಕುಪ್ಪೆಗಾಲ, ವರಕೋಡು ಪೇಪರ್ ಮಿಲ್, ಎಸ್.ಆರ್ ಇಂಡಸ್ಟ್ರೀಸ್, ಜಾಗ್ವರಿ ಸಿಮೆಂಟ್ ಇಂಡಸ್ಟ್ರೀಸ್, ರಾಜಶ್ರೀ ಇಂಡಸ್ಟ್ರೀಸ್ ಹಾಗೂ ಸುತ್ತ-ಮುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯವಾಗಲಿದ್ದು, ಸಾರ್ವಜನಿಕರು ಹಾಗೂ ಕೈಗಾರಿಕೋದ್ಯಮಿಗಳು ಸಹಕರಿಸಬೇಕೆಂದು ಚಾಮುಂಡೇಶ್ವರಿ ವಿದ್ಯುತ್ ಸರಬರಾಜು ನಿಗಮ ನಿಯಮಿತದ ಎನ್ ಆರ್ ಮೊಹಲ್ಲಾ ವಿಭಾಗದ ಕಾರ್ಯ ಮತ್ತು ಪಾಲನೆಯ ಕಾರ್ಯನಿರ್ವಾಹಕ ಇಂಜಿನಿಯರ್ (ವಿ) ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ವರದಿ: ರಂಗಸ್ವಾಮಿ, ಮೈಸೂರು

IPL_Entry_Point

ವಿಭಾಗ