ಕನ್ನಡ ಸುದ್ದಿ  /  ಕರ್ನಾಟಕ  /  ಮೈಸೂರು: ಖ್ಯಾತ ಸರೋದ್ ವಾದಕ ಪಂಡಿತ್ ರಾಜೀವ್ ತಾರಾನಾಥ್ ನಿಧನ, ಕುವೆಂಪು ನಗರದಲ್ಲಿ ನಾಳೆ ಸಾರ್ವಜನಿಕ ದರ್ಶನ, ಬಳಿಕ ಅಂತ್ಯಕ್ರಿಯೆ

ಮೈಸೂರು: ಖ್ಯಾತ ಸರೋದ್ ವಾದಕ ಪಂಡಿತ್ ರಾಜೀವ್ ತಾರಾನಾಥ್ ನಿಧನ, ಕುವೆಂಪು ನಗರದಲ್ಲಿ ನಾಳೆ ಸಾರ್ವಜನಿಕ ದರ್ಶನ, ಬಳಿಕ ಅಂತ್ಯಕ್ರಿಯೆ

ಖ್ಯಾತ ಸರೋದ್ ವಾದಕ ಪಂಡಿತ್ ರಾಜೀವ್ ತಾರಾನಾಥ್ ನಿಧನ (Pandit Rajeev Taranath passed away) ರಾಗಿದ್ದಾರೆ. ಮೈಸೂರಿನ ಖಾಸಗಿ ಆಸ್ಪತ್ರೆಯಲ್ಲಿ ಇಂದು ಸಂಜೆ 6.30ಕ್ಕೆ ಅವರು ನಿಧನರಾಗಿದ್ದು, ನಾಳೆ ಬೆಳಗ್ಗೆ ಸಾರ್ವಜನಿಕ ದರ್ಶನಕ್ಕೆ ವ್ಯವಸ್ಥೆ ಮಾಡಲಾಗುತ್ತಿದೆ. ನಂತರ ಅಂತ್ಯಸಂಸ್ಕಾರ ನಡೆಯಲಿದೆ.

ಮೈಸೂರು: ಖ್ಯಾತ ಸರೋದ್ ವಾದಕ ಪಂಡಿತ್ ರಾಜೀವ್ ತಾರಾನಾಥ್ ನಿಧನ, ಕುವೆಂಪು ನಗರದಲ್ಲಿ ನಾಳೆ ಸಾರ್ವಜನಿಕ ದರ್ಶನ, ಬಳಿಕ ಅಂತ್ಯಕ್ರಿಯೆ
ಮೈಸೂರು: ಖ್ಯಾತ ಸರೋದ್ ವಾದಕ ಪಂಡಿತ್ ರಾಜೀವ್ ತಾರಾನಾಥ್ ನಿಧನ, ಕುವೆಂಪು ನಗರದಲ್ಲಿ ನಾಳೆ ಸಾರ್ವಜನಿಕ ದರ್ಶನ, ಬಳಿಕ ಅಂತ್ಯಕ್ರಿಯೆ

ಮೈಸೂರು: ವಿಶ್ವ ಮನ್ನಣೆ ಗಳಿಸಿದ್ದ ಸಂಗೀತಲೋಕದ ಧ್ರುವತಾರೆ ಸರೋದ್ ವಾದಕ ಮೈಸೂರಿನ ಪಂಡಿತ್ ರಾಜೀವ್ ತಾರಾನಾಥ್ ಅವರು ಇಂದು (ಜೂನ್11) ಸಂಜೆ 6.30ರ ವೇಳೆಗೆ ನಿಧನ (Pandit Rajeev Taranath passed away) ರಾದರು. ಅವರಿಗೆ 92 ವರ್ಷ ವಯಸ್ಸಾಗಿತ್ತು. ವಯೋಸಹಜ ಅನಾರೋಗ್ಯಕ್ಕೆ ಒಳಗಾಗಿದ್ದ ಅವರನ್ನು ಮೈಸೂರಿನ ಮಣಿಪಾಲ್‌ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಕಳೆದ 15 ದಿನಗಳಿಂದ ಆಸ್ಪತ್ರೆಯಲ್ಲಿದ್ದ ಅವರು ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟರು.

ಟ್ರೆಂಡಿಂಗ್​ ಸುದ್ದಿ

ಪಂಡಿತ್ ರಾಜೀವ್ ತಾರಾನಾಥ್ ಅವರ ಕುಟಂಬದ ಆಪ್ತ ಮೂಲವೊಂದ ಪ್ರಕಾರ, ಸಂಜೆ 6.30 ರ ಸುಮಾರಿಗೆ ಆಸ್ಪತ್ರೆಯಲ್ಲಿ ಪಂಡಿತ್‌ ರಾಜೀವ್ ತಾರಾನಾಥ್ ಅವರು ಕೊನೆಯುಸಿರೆಳೆದರು. ಅವರ ಪಾರ್ಥಿವ ಶರೀರವನ್ನು ಜೂನ್ 12 ರಂದು ಅಂದರೆ ನಾಳೆ ಬೆಳಿಗ್ಗೆ 9 ರಿಂದ ಮಧ್ಯಾಹ್ನ 12 ರವರೆಗೆ ಮೈಸೂರಿನ ಕುವೆಂಪುನಗರದ ಜ್ಞಾನ ಗಂಗಾ ಶಾಲೆಯ ಬಳಿಯ ಅವರ ನಿವಾಸದಲ್ಲಿ ಸಾರ್ವಜನಿಕ ದರ್ಶನಕ್ಕೆ ಇಡಲಾಗುವುದು.

ಪಂಡಿತ್ ರಾಜೀವ್ ತಾರಾನಾಥ್ ಅವರ ಪುತ್ರ ಅಮೆರಿಕದಲ್ಲಿದ್ದು, ಅಲ್ಲಿಂದ ಈಗ ಹೊರಟಿದ್ದಾರೆ. ನಾಳೆ (ಜೂನ್ 12) ಅಪರಾಹ್ನ 2 ಗಂಟೆಗೆ ಚಾಮುಂಡಿ ಬೆಟ್ಟದ ತಪ್ಪಲಿನ ಚಿತಾಗಾರದಲ್ಲಿ ಅಂತಿಮ ಸಂಸ್ಕಾರ ನೆರವೇರಲಿದೆ ಮೂಲಗಳು ತಿಳಿಸಿವೆ.

ಪಂಡಿತ್ ರಾಜೀವ್ ತಾರಾನಾಥ್ ಅವರು ಮೇ ಕೊನೆಯವಾರದಲ್ಲಿ ಬಿದ್ದು ಮೂಳೆ ಮುರಿತ ಅನುಭವಿಸಿದ್ದರು. ಆ ಸಂದರ್ಭದಲ್ಲಿ ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಾಗಿದ್ದರು. ಮೈಸೂರು ಜಿಲ್ಲಾ ಉಸ್ತುವಾರಿ ಸಚಿವರೂ ಆಗಿರುವ ಸಮಾಜ ಕಲ್ಯಾಣ ಸಚಿವ ಹೆಚ್ ಸಿ ಮಹದೇವಪ್ಪ ಅವರು ಖಾಸಗಿ ಆಸ್ಪತ್ರೆಗೆ ಭೇಟಿ ನೀಡಿದ್ದು, ಸರೋದ್ ವಾದಕರನ್ನು ಕಂಡು ಆರೋಗ್ಯ ವಿಚಾರಿಸಿದ್ದರು. ಅಷ್ಟೇ ಅಲ್ಲ ಅವರ ಚಿಕಿತ್ಸಾ ವೆಚ್ಚವನ್ನು ರಾಜ್ಯ ಸರ್ಕಾರ ಭರಿಸಲಿದೆ ಎಂದು ಭರವಸೆ ನೀಡಿದ್ದರು.

ಮುಖ್ಯಮಂತ್ರಿ ಸಿದ್ದರಾಮಯ್ಯ ಸಂತಾಪ

“ಜಗತ್ಪ್ರಸಿದ್ದ ಸರೋದ್ ವಾದಕ, ಕರ್ನಾಟಕದ ಹೆಮ್ಮೆಯ ಸುಪುತ್ರ ಪಂಡಿತ ರಾಜೀವ್ ತಾರಾನಾಥ್ ಅವರ ನಿಧನದಿಂದ ದು:ಖಿತನಾಗಿದ್ದೇನೆ. ಕರ್ನಾಟಕದ ಕೀರ್ತಿ ಪತಾಕೆಯನ್ನು ವಿಶ್ವದಾದ್ಯಂತ ಹಾರಿಸಿದ ರಾಜೀವ್ ತಾರಾನಾಥರ ಅಗಲಿಕೆ ಕರ್ನಾಟಕಕ್ಕೆ ಮಾತ್ರವಲ್ಲ ಇಡೀ ಸಂಗೀತಲೋಕಕ್ಕೆ ತುಂಬಲಾರದ ನಷ್ಟ. ರಾಜೀವ್ ತಾರಾನಾಥ್ ಖ್ಯಾತ ಸಂಗೀತ ಕಲಾವಿದರು ಮಾತ್ರ ಆಗಿರಲಿಲ್ಲ, ಅದನ್ನು ಮೀರಿ ಶ್ರೇಷ್ಠ ಮಾನವತಾವಾದಿಯಾಗಿದ್ದರು. ಅವರ ಕುಟುಂಬದ ಸದಸ್ಯರು‌ ಮತ್ತು ಅಭಿಮಾನಿಗಳ ಶೋಕದಲ್ಲಿ ನಾನೂ ಭಾಗಿಯಾಗಿದ್ದೇನೆ. ಅವರ ಆತ್ಮಕ್ಕೆ ಶಾಂತಿ ಕೋರುವೆ.” ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಎಕ್ಸ್ ಖಾತೆಯಲ್ಲಿ ಟ್ವೀಟ್ ಮಾಡಿ ಸಂತಾಪ ಸೂಚಿಸಿದ್ದಾರೆ.

ಪಂಡಿತ್ ರಾಜೀವ್ ತಾರಾನಾಥ್ ಅವರ ಕಿರುಪರಿಚಯ

ರಾಜೀವ್ ತಾರಾನಾಥ್ ಅವರು 1932ರ ಅಕ್ಟೋಬರ್ 17 ರಂದು ಬೆಂಗಳೂರಿನಲ್ಲಿ ಜನಿಸಿದರು. ತಾಯಿ ಸುಮತೀ ಬಾಯಿ, ತಂದೆ ಪಂಡಿತ್ ತಾರಾನಾಥ್. ಅವರಿಂದಲೇ ಗಾಯನ ಸಂಗೀತದಲ್ಲಿ ಆರಂಭಿಕ ತರಬೇತಿಯನ್ನು ಪಡೆದರು. ಅಷ್ಟೇ ಅಲ್ಲ, ಅತ್ಯಂತ ಕಿರಿಯ ವಯಸ್ಸಿನಲ್ಲೇ (9 ವರ್ಷ) ಸಾರ್ವಜನಿಕ ಕಾರ್ಯಕ್ರಮ ನೀಡಿ ಗಮನಸೆಳೆದಿದ್ದರು.

ರಾಜೀವ್ ತಾರಾನಾಥ್ ಅವರು ಬೆಂಗಳೂರು ಸೆಂಟ್ರಲ್ ಕಾಲೇಜಿನಲ್ಲಿ ಪ್ರಥಮ ರ‍್ಯಾಂಕ್ ಪಡೆಯುವ ಮೂಲಕ ಬಿಎ ಆನರ್ಸ್ ಪೂರ್ಣಗೊಳಿಸಿದ್ದರು. ಅವರು 1962 ರಲ್ಲಿ ಮೈಸೂರು ವಿಶ್ವವಿದ್ಯಾನಿಲಯದಿಂದ ಇಂಗ್ಲಿಷ್‌ನಲ್ಲಿ ಎಂಎನಲ್ಲಿ ಚಿನ್ನದ ಪದಕದೊಂದಿಗೆ ಮೊದಲ ರ‍್ಯಾಂಕ್ ಗಳಿಸುವ ಮೂಲಕ ತಮ್ಮ ಶೈಕ್ಷಣಿಕ ಸಾಧನೆಯ ಕಿರೀಟಕ್ಕೆ ಮತ್ತೊಂದು ಗರಿಯನ್ನು ಸೇರಿಸಿದರು. ಮೈಸೂರು ವಿಶ್ವವಿದ್ಯಾನಿಲಯದಲ್ಲಿ ಪ್ರೊ ಸಿ ಡಿ ನರಸಿಂಹಯ್ಯನವರ ಮಾರ್ಗದರ್ಶನದಲ್ಲಿ "ಇಮೇಜ್ ಇನ್ ಪೊಯಟ್ರಿ ಆಫ್ ಟಿ ಎಸ್ ಎಲಿಯಟ್" ನಲ್ಲಿ ಪಿಎಚ್‌ಡಿ ಪಡೆದರು.

ಧಾರವಾಡದ ಕರ್ನಾಟಕ ಕಾಲೇಜು, ಮೈಸೂರಿನ ರೀಜನಲ್ ಕಾಲೇಜ್ ಆಫ್ ಎಜುಕೇಶನ್, ರೀಜನಲ್ ಕಾಲೇಜ್ ಆಫ್ ಇಂಜಿನಿಯರಿಂಗ್ ಮತ್ತು ತಿರುಚ್ಚಿಯ ಜಮಾಲ್ ಮೊಹಮ್ಮದ್ ಕಾಲೇಜು ಮುಂತಾದ ವಿವಿಧ ಸಂಸ್ಥೆಗಳಲ್ಲಿ ಬೋಧಕರಾಗುವ ಮೊದಲು ಅವರು ತಮ್ಮ ತಂದೆ ನಿರ್ಮಿಸಿದ ರಾಯಚೂರಿನ ಹಮ್ದರ್ದ್ ಕಾಲೇಜಿನಲ್ಲಿ ಉಪನ್ಯಾಸಕರಾಗಿ ತಮ್ಮ ಶಿಕ್ಷಕ ವೃತ್ತಿಯನ್ನು ಪ್ರಾರಂಭಿಸಿದರು. ಹೈದರಾಬಾದ್‌ನಲ್ಲಿರುವ ಸೆಂಟ್ರಲ್ ಇನ್‌ಸ್ಟಿಟ್ಯೂಟ್ ಆಫ್ ಇಂಗ್ಲಿಷ್ ಮತ್ತು ಫಾರಿನ್ ಲ್ಯಾಂಗ್ವೇಜಸ್‌ನಲ್ಲಿ ಇಂಗ್ಲಿಷ್ ವಿಭಾಗ ಮತ್ತು ಯೆಮೆನ್‌ನಲ್ಲಿ ಇಂಗ್ಲಿಷ್ ಬೋಧನೆ ಮಾಡಿದ್ದರು.

ಪಂಡಿತ್ ರಾಜೀವ್ ತಾರಾನಾಥ್ ಅವರು ಸಂಸ್ಕಾರ, ಪಲ್ಲವಿ, ಅನುರೂಪ, ಪೇಪರ್ ಬೋಟ್ಸ್ ಮತ್ತು ಅಗುಂತಕ ಸೇರಿ ಹಲವಾರು ಕನ್ನಡ ಚಲನಚಿತ್ರಗಳಿಗೆ ಸಂಗೀತ ನಿರ್ದೇಶಕರಾಗಿದ್ದರು, ಜೊತೆಗೆ ಮಲಯಾಳಂ ಚಲನಚಿತ್ರಗಳಾದ ಕಡವು ಮತ್ತು ಕಾಂಚನಸೀತಾಗೂ ಸಂಗೀತ ನಿರ್ದೇಶನ ಮಾಡಿದ್ದರು.

ಟಿ20 ವರ್ಲ್ಡ್‌ಕಪ್ 2024