ಕನ್ನಡ ಸುದ್ದಿ  /  ಕರ್ನಾಟಕ  /  Mysuru News: ಮೈಸೂರು ಜಿಲ್ಲೆಯಲ್ಲಿ ಹುಲಿ ದಾಳಿಗೆ ಗಿರಿಜನ ಮಹಿಳೆ ಸಾವು, ಅರಣ್ಯದಂಚಿನ ಜನರ ಆಕ್ರೋಶ

Mysuru News: ಮೈಸೂರು ಜಿಲ್ಲೆಯಲ್ಲಿ ಹುಲಿ ದಾಳಿಗೆ ಗಿರಿಜನ ಮಹಿಳೆ ಸಾವು, ಅರಣ್ಯದಂಚಿನ ಜನರ ಆಕ್ರೋಶ

Forest News ಬಂಡೀಪುರ ವ್ಯಾಪ್ತಿಯಲ್ಲಿ( Bandipur Tiger Reserve) ಹುಲಿ ದಾಳಿಯಿಂದ ಗಿರಿಜನ ಮಹಿಳೆಯೊಬ್ಬರು ಪ್ರಾಣ ಕಳೆದುಕೊಂಡಿದ್ದಾರೆ.

ಹುಲಿ ದಾಳಿಗೆ ಮಹಿಳೆಯೊಬ್ಬರು ಜೀವ ಕಳೆದುಕೊಂಡಿದ್ದಾರೆ.
ಹುಲಿ ದಾಳಿಗೆ ಮಹಿಳೆಯೊಬ್ಬರು ಜೀವ ಕಳೆದುಕೊಂಡಿದ್ದಾರೆ.

ಮೈಸೂರು: ಅರಣ್ಯದಂಚಿನಲ್ಲಿ ಮೇಕೆ ಮೇಯಸುತ್ತಲೇ ಅರಣ್ಯದ ಉತ್ಪನ್ನಗಳನ್ನು ಆರಿಸಿಕೊಂಡು ಬರಲು ಹೋಗಿದ್ದ ಗಿರಿಜನ ಮಹಿಳೆ ಮೇಲೆ ಹುಲಿ ದಾಳಿ ಮಾಡಿ ಮಹಿಳೆ ಮೃತಪಟ್ಟಿರುವ ಘಟನೆ ಬಂಡೀಪುರ ರಾಷ್ಟ್ರೀಯ ಉದ್ಯಾನದ ವ್ಯಾಪ್ತಿಯಲ್ಲಿ ನಡೆದಿದೆ. ಎಚ್‌ಡಿಕೋಟೆ ತಾಲ್ಲೂಕಿನ ಮೂರಾಬಂದ್‌ ಗ್ರಾಮ ಸಮೀಪದ ಮಾಳದಹಾಡಿಯ ಚಿಕ್ಕಮ್ಮ (48) ಮೃತ ಮಹಿಳೆ. ಈ ಭಾಗದಲ್ಲಿ ಹುಲಿ ಉಪಟಳ ಹೆಚ್ಚಿದ್ದು, ಆಗಾಗ ದಾಳಿ, ಜನ ಜೀವ ಕಳೆದುಕೊಳ್ಳುವ ಪ್ರಕರಣಗಳು ವರದಿಯಾಗುತ್ತವೆ. ಹುಲಿ ಉಪಟಳ ತಪ್ಪಿಸಲು ಅರಣ್ಯ ಇಲಾಖೆ ಗಂಭೀರವಾಗಿ ಪ್ರಯತ್ನಿಸುತ್ತಿಲ್ಲ ಎಂದು ಸ್ಥಳೀಯರು ಆಕ್ರೋಶ ಹೊರ ಹಾಕಿದ್ದಾರೆ.

ಟ್ರೆಂಡಿಂಗ್​ ಸುದ್ದಿ

ಎನ್‌ ಬೇಗೂರು ಗ್ರಾಮಪಂಚಾಯಿತಿ ವ್ಯಾಪ್ತಿಯ ಮೂರಾಬಂದ್‌ ಬಳಿ ಮೇಕೆ ಮೇಯಿಸುತ್ತಲೇ ಅರಣ್ಯ ಉತ್ಪನ್ನಗಳನ್ನು ಚಿಕ್ಕಮ್ಮ ಸಂಗ್ರಹಿಸುತ್ತದ್ದರು. ಈ ವೇಳೆ ಹುಲಿ ದಾಳಿ ಮಾಡಿ ಚಿಕ್ಕಮ್ಮಳನ್ನು ಎಳೆದುಕೊಂಡು ಹೋಗಿದೆ. ಅಲ್ಲಿಂದ ದೂರದಲ್ಲಿಯೇ ದೇಹವನ್ನು ತಿಂದು ಉಳಿಕೆ ಭಾಗವನ್ನು ಬಿಟ್ಟು ಹೋಗಿದೆ.

ಮಹಿಳೆ ಮನೆಗೆ ಬಾರದೇ ಇದ್ದಾಗ ಮೇಕೆ ಮೇಯಿಸುತ್ತಿದ್ದ ಜಾಗ ನೋಡಿದಾಗ ಅಲ್ಲಿ ಮೇಕೆ ಇತ್ತು.ಮಹಿಳೆ ಕಾಣಲಿಲ್ಲ.ಕೊನೆಗೆ ಮನೆಯವರು ಅರಣ್ಯ ಇಲಾಖೆ ಗಮನಕ್ಕೆ ತಂದರು. ಬಳಿಕ ಸಿಬ್ಬಂದಿಗಳು ಹುಡುಕಾಟ ನಡೆಸಿದಾಗ ಪತ್ತೆಯಾಗಿರಲಿಲ್ಲ.ಶನಿವಾರ ಸಂಜೆಯಾಗಿದ್ದರಿಂದ ಕಾರ್ಯಾಚರಣೆ ನಿಲ್ಲಿಸಲಾಗಿತ್ತು. ಭಾನುವಾರ ಬೆಳಿಗ್ಗೆ ಹುಡುಹಾಟ ನಡೆಸಿದಾಗ ಚಿಕ್ಕಮ್ಮನ ದೇಹದ ಭಾಗ ಅರಣ್ಯ ವೀಕ್ಷಣೆ ಟವರ್‌ ಬಳಿ ಪತ್ತೆಯಾಯಿತು.

ಕೊನೆಗೆ ದೇಹದ ಭಾಗಗಳನ್ನು ವಶಕ್ಕೆ ಪಡೆದು ಭಾಗವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಿಕೊಡಲಾಯಿತು. ಮೃತ ಮಹಿಳೆಗೆ ಇಬ್ಬರು ಪುತ್ರಿಯರು ಹಾಗೂ ಪುತ್ರ ಬಂಡೀಪುರ ಡಿಸಿಎಫ್‌ ಪ್ರಭಾಕರನ್‌, ಹೆಡಿಯಾಲ ಎಸಿಎಫ್‌ ರವೀಂದ್ರ, ಆರ್‌ಎಫ್‌ ಒ ಮಂಜುನಾಥ ಬಾಗೇವಾಡಿ ಆಗಮಿಸಿದ್ದರು. ಈ ವೇಳೆ ಮಹಿಳೆ ಕುಟುಂಬಕ್ಕೆ 5 ಲಕ್ಷ ರೂ. ಪರಿಹಾರದ ಚೆಕ್ ವಿತರಿಸಿದರು.

ಈ ವೇಳೆ ಸ್ಥಳೀಯರು ಅರಣ್ಯ ಇಲಾಖೆ ವಿರುದ್ದ ಆಕ್ರೋಶ ಹೊರ ಹಾಕಿದರು.ವನ್ಯಜೀವಿ ಉಪಟಳ ಹೆಚ್ಚಾಗುತ್ತಲೇ ಇದೆ. ಜನ ಜೀವ ಕಳೆದುಕೊಂಡಾಗ ಅರಣ್ಯ ಇಲಾಖೆ ಕ್ರಮದ ಭರವಸೆ ನೀಡಿದರೂ ಉಪಯೋಗವಾಗುತ್ತಿಲ್ಲ. ಇನ್ನೆಷ್ಟು ಜೀವ ಹೋಗಬೇಕು ಎಂದು ಆಕ್ರೋಶ ವ್ಯಕ್ತಪಡಿಸಿದರು.

ದಾಳಿ ಮಾಡಿರುವ ಹುಲಿ ಚಲನವಲನ ಗಮನಿಸಲಾಗುತ್ತಿದೆ. ಸಿಬ್ಬಂದಿ ಗಮನಿಸುತ್ತಿದ್ದಾರೆ ಎಂದು ಅರಣ್ಯ ಇಲಾಖೆ ಅಧಿಕಾರಿಗಳು ತಿಳಿಸಿದ್ದು, ಜನ ಅರಣ್ಯದಂಚಿನಲ್ಲಿದ್ದಾಗ ಮುನ್ನೆಚ್ಚರಿಕೆ ವಹಿಸಬೇಕು ಎಂದು ಸಲಹೆ ನೀಡಿದ್ದಾರೆ.

ಬಂಡೀಪುರ ವ್ಯಾಪ್ತಿಯ ನಂಜನಗೂಡು,ಎಚ್‌.ಡಿ.ಕೋಟೆ ಹಾಗೂ ಸರಗೂರು ತಾಲ್ಲೂಕುಗಳಲ್ಲಿ ಹುಲಿ ಉಪಟಳ ಹೆಚ್ಚಾಗಿದೆ. ಕೆಲ ದಿನಗಳ ಹಿಂದೆಯಷ್ಟೇ ವ್ಯಕ್ತಿಯೊಬ್ಬನ ಮೇಲೆ ಹುಲಿ ದಾಳಿ ಮಾಡಿತ್ತು.

ಅದಕ್ಕೂ ಮುಂಚೆ ನಂಜನಗೂಡು ತಾಲ್ಲೂಕು ವ್ಯಾಪ್ತಿಯಲ್ಲಿ ನಂಜನಗೂಡು ತಾಲ್ಲೂಕು ಬಳ್ಳೂರು ಹುಂಡಿ ಗ್ರಾಮದ ವೆಂಕಟಯ್ಯ ಎಂಬುವವರ ಪತ್ನಿ ರತ್ನಮ್ಮ(50) ಹಾಗೂ ದನಗಾಹಿ ವೀರಭದ್ರಬೋವಿ ಎಂಬಾತನನ್ನು ಹುಲಿ ಕೊಂದು ಹಾಕಿತ್ತು. ಆಗಲೂ ಜನ ಆಕ್ರೋಶ ಹೊರ ಹಾಕಿದರೆ ಅರಣ್ಯ ಇಲಾಖೆ ಪರಿಹಾರ ನೀಡಿ ಹುಲಿ ಸೆರೆ ಕಾರ್ಯಾಚರಣೆ ಕೈಗೊಂಡಿತ್ತು. ಆಗ ಎರಡು ಹುಲಿಗಳನ್ನು ಸೆರೆ ಹಿಡಿಯಲಾಗಿತ್ತು.

(ಕನ್ನಡದಲ್ಲಿ ಕ್ರಿಕೆಟ್, ಎಚ್‌ಟಿ ಕನ್ನಡ ಬೆಸ್ಟ್‌. ಐಪಿಎಲ್, ಟಿ20 ವರ್ಲ್ಡ್‌ಕಪ್ ಸೇರಿದಂತೆ ಕ್ರಿಕೆಟ್ ಲೋಕದ ಸಮಗ್ರ ಮಾಹಿತಿ, ತಾಜಾ ವಿದ್ಯಮಾನ, ರನ್-ವಿಕೆಟ್, ಪ್ಲೇಆಫ್, ಟೀಮ್ ಸ್ಟಾಟ್ ವಿಶ್ಲೇಷಣೆಗಳಿಗಾಗಿ kannada.hindustantimes.com/cricket ಕ್ಕೆ ಭೇಟಿ ನೀಡಿ.)

ಟಿ20 ವರ್ಲ್ಡ್‌ಕಪ್ 2024