Siddaramaiah: ಸಿದ್ದರಾಮಯ್ಯ ವಿರುದ್ಧ ದಾಖಲಾದ ಒಂದೊಂದು ಸೆಕ್ಷನ್ ಏನು ಹೇಳುತ್ತದೆ, ಇಲ್ಲಿದೆ ನೋಡಿ ವಿವರ-mysuru news which section registered in fir against siddaramaiah what is the punishment here is details prs ,ಕರ್ನಾಟಕ ಸುದ್ದಿ
ಕನ್ನಡ ಸುದ್ದಿ  /  ಕರ್ನಾಟಕ  /  Siddaramaiah: ಸಿದ್ದರಾಮಯ್ಯ ವಿರುದ್ಧ ದಾಖಲಾದ ಒಂದೊಂದು ಸೆಕ್ಷನ್ ಏನು ಹೇಳುತ್ತದೆ, ಇಲ್ಲಿದೆ ನೋಡಿ ವಿವರ

Siddaramaiah: ಸಿದ್ದರಾಮಯ್ಯ ವಿರುದ್ಧ ದಾಖಲಾದ ಒಂದೊಂದು ಸೆಕ್ಷನ್ ಏನು ಹೇಳುತ್ತದೆ, ಇಲ್ಲಿದೆ ನೋಡಿ ವಿವರ

Which sections on Siddaramaiah: ಮುಡಾ ಹಗರಣಕ್ಕೆ ಸಂಬಂಧಿಸಿ ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ದಾಖಲಾದ ಪ್ರಕರಣದಲ್ಲಿ ಒಳಗೊಂಡಿರುವ ಸೆಕ್ಷನ್​​ಗಳು ಯಾವುವು, ಅವುಗಳು ಏನು ಹೇಳುತ್ತವೆ ಎನ್ನುವುದನ್ನು ಈ ಮುಂದೆ ನೋಡೋಣ.

ಮುಖ್ಯಮಂತ್ರಿ ಸಿದ್ದರಾಮಯ್ಯ.
ಮುಖ್ಯಮಂತ್ರಿ ಸಿದ್ದರಾಮಯ್ಯ.

ಮೈಸೂರು: ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದಲ್ಲಿ ಅಕ್ರಮವಾಗಿ ಸೈಟು ಪಡೆದಿದ್ದಾರೆ ಎನ್ನಲಾದ ಪ್ರಕರಣಕ್ಕೆ ಸಂಬಂಧಿಸಿ ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ಮೈಸೂರು ಲೋಕಾಯುಕ್ತ ಪೊಲೀಸರು ಕೊನೆಗೂ ಪ್ರಕರಣ ದಾಖಲಿಸಿದ್ದಾರೆ. ದಾಖಲಾದ ಎಫ್​ಐಆರ್​​​ನಲ್ಲಿ ಸಿಎಂ ಸಿದ್ದರಾಮಯ್ಯ ಎ1 ಆರೋಪಿಯಾಗಿದ್ದಾರೆ. ಅವರ ಪತ್ನಿ ಪಾರ್ವತಿ ಎ2, ಬಾಮೈದ ಮಲ್ಲಿಕಾರ್ಜುನ್ ಸ್ವಾಮಿ ಎ3 ಹಾಗೂ ಭೂಮಿ ಮಾರಾಟ ಮಾಡಿದ ಮಾಲೀಕ ದೇವರಾಜು ಎ4 ಆರೋಪಿಯಾಗಿದ್ದಾರೆ. ಹಾಗಾದರೆ ಇವರ ವಿರುದ್ಧ ದಾಖಲಾದ ಎಫ್​ಐಆರ್​ನಲ್ಲಿ ಮೇಲೆ ಯಾವೆಲ್ಲಾ ಸೆಕ್ಷನ್ ಹಾಕಲಾಗಿದೆ, ಯಾವ ಸೆಕ್ಷನ್ ಏನು ಹೇಳುತ್ತದೆ ಎಂಬುದರ ವಿವರ ಇಲ್ಲಿದೆ.

ಯಾವೆಲ್ಲಾ ಸೆಕ್ಷನ್​ಗಳ ಅಡಿ ಪ್ರಕರಣ ದಾಖಲು?

ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ ಸೂಚಿಸಿದ್ದ ಸೆಕ್ಷನ್​ಗಳ ಅಡಿಯಲ್ಲೇ ಪ್ರಕರಣ ದಾಖಲು ಮಾಡಲಾಗಿದೆ. ಸಿಆರ್​ಪಿಸಿ ಸೆಕ್ಷನ್ 156(3)ರ ಅಡಿ ಪ್ರಕರಣ ದಾಖಲಾಗಿದ್ದು, ಐಪಿಸಿ ಸೆಕ್ಷನ್ 120ಬಿ, 166, 403, 406, 420, 426, 465, 468, 340, 351ರ ಅಡಿ ಪ್ರಕರಣ ದಾಖಲಾಗಿದೆ. ಅಲ್ಲದೇ ಭ್ರಷ್ಟಾಚಾರ ನಿಗ್ರಹ ಕಾಯ್ದೆ ಸೆಕ್ಷನ್ 9, 13ರ ಅಡಿ ಪ್ರಕರಣ ದಾಖಲಾಗಿದೆ. ಜೊತೆಗೆ ಬೇನಾಮಿ ಆಸ್ತಿ ನಿಷೇಧ ಕಾಯ್ಡೆ ಸೆಕ್ಷನ್ 53 ಮತ್ತು 54, ಕರ್ನಾಟಕ ಭೂಕಬಳಿಕೆ ನಿಷೇಧ ಕಾಯ್ದೆ ಸೆಕ್ಷನ್ 3, 4ರ ಅಡಿಯಲ್ಲೂ ಕೇಸ್ ದಾಖಲಾಗಿದೆ.

ಪ್ರಕರಣದಲ್ಲಿ ದಾಖಲಾದ ಸೆಕ್ಷನ್​ಗಳ ವಿವರ

ಐಪಿಸಿ 120ಬಿ - ಕ್ರಿಮಿನಲ್ ಪಿತೂರಿ, ಒಳ ಸಂಚು (ಜೀವಾವಧಿ ಶಿಕ್ಷೆ)

ಐಪಿಸಿ 166 - ಸರ್ಕಾರಿ ಸೇವಕನಿಂದಲೇ ಕಾನೂನು ಉಲ್ಲಂಘನೆ

ಐಪಿಸಿ 09 - ಲಂಚ ಸ್ವೀಕಾರ, ಅಥವಾ ಲಂಚ ನೀಡಲು ಶಿಕ್ಷೆ, ವೈಯಕ್ತಿಕ ಪ್ರಭಾವ

ಐಪಿಸಿ 13 - ಸರ್ಕಾರಿ ನೌಕರನಿಂದ ಅಪರಾಧಿಕ ದುರ್ನಡತೆ

ಐಪಿಸಿ 340 - ವ್ಯಕ್ತಿಯೊಬ್ಬನನ್ನು ನಿರ್ಬಂಧಿಸುವುದು

ಐಪಿಸಿ 351 - ದಾಳಿ ಮಾಡುವ ಭಯ ಹುಟ್ಟಿಸುವುದು

ಐಪಿಸಿ 403 - ಅಪ್ರಾಮಾಣಿಕವಾಗಿ ಆಸ್ತಿಯ ದುರುಪಯೋಗ

ಐಪಿಸಿ 406 - ಅಪರಾಧಿಕ ನಂಬಿಕೆ ದ್ರೋಹಕ್ಕೆ ಶಿಕ್ಷೆ (3 ವರ್ಷ ಜೈಲು ಅಥವಾ ದಂಡ)

ಐಪಿಸಿ 420 - ವಂಚನೆ (ಮೋಸದಿಂದ ಲಾಭ ಪಡೆಯುವುದು)

ಐಪಿಸಿ 426 - ಕಿಡಿಗೇಡಿತನಕ್ಕೆ ಶಿಕ್ಷೆ (3 ತಿಂಗಳ ಶಿಕ್ಷೆ ಅಥವಾ ದಂಡ)

ಐಪಿಸಿ 465 - ಫೋರ್ಜರಿ

ಐಪಿಸಿ 468 - ಫೋರ್ಜರಿ ಮಾಡಿದ್ದಕ್ಕೆ ಶಿಕ್ಷೆ (5 ವರ್ಷ ಜೈಲು ಮತ್ತು ದಂಡ)

mysore-dasara_Entry_Point