Nanjangud Accident: ನಂಜನಗೂಡು ಸಮೀಪ ಭೀಕರ ರಸ್ತೆ ಅಪಘಾತ; ಕೆಎಸ್‌ಆರ್‌ಟಿಸಿ ಬಸ್‌ನಿಂದ ತಲೆಹೊರ ಹಾಕಿದ ಮಹಿಳೆಯ ದಾರುಣ ಸಾವು
ಕನ್ನಡ ಸುದ್ದಿ  /  ಕರ್ನಾಟಕ  /  Nanjangud Accident: ನಂಜನಗೂಡು ಸಮೀಪ ಭೀಕರ ರಸ್ತೆ ಅಪಘಾತ; ಕೆಎಸ್‌ಆರ್‌ಟಿಸಿ ಬಸ್‌ನಿಂದ ತಲೆಹೊರ ಹಾಕಿದ ಮಹಿಳೆಯ ದಾರುಣ ಸಾವು

Nanjangud Accident: ನಂಜನಗೂಡು ಸಮೀಪ ಭೀಕರ ರಸ್ತೆ ಅಪಘಾತ; ಕೆಎಸ್‌ಆರ್‌ಟಿಸಿ ಬಸ್‌ನಿಂದ ತಲೆಹೊರ ಹಾಕಿದ ಮಹಿಳೆಯ ದಾರುಣ ಸಾವು

Nanjangud Accident: ಮೈಸೂರು ಊಟಿ ಹೆದ್ದಾರಿಯಲ್ಲಿ ಇಂದು (ಜನವರಿ 25) ನಂಜನಗೂಡು ತಾಲೂಕು ಮುದ್ದಹಳ್ಳಿ ಸಮೀಪ ಈ ಹೃದಯ ವಿದ್ರಾವಕ ರಸ್ತೆ ಅಪಘಾತ ಸಂಭವಿಸಿದೆ. ಕೆಎಸ್‌ಆರ್‌ಟಿಸಿ ಬಸ್‌ನಿಂದ ತಲೆಹೊರ ಹಾಕಿದ ಮಹಿಳೆ ದಾರುಣವಾಗಿ ಮೃತಪಟ್ಟಿದ್ದಾರೆ. ಮೈಸೂರಿನಿಂದ ಗುಂಡ್ಲುಪೇಟೆಗೆ ನಂಜನಗೂಡು ದಾರಿಯ ಕೆಎಸ್‌ಆರ್‌ಟಿಸಿ ಬಸ್‌ನಲ್ಲಿ ಮಹಿಳೆ ಪ್ರಯಾಣಿಸಿದ್ದರು.

ನಂಜನಗೂಡು ಸಮೀಪ ಭೀಕರ ರಸ್ತೆ ಅಪಘಾತ ಸಂಭವಿಸಿದ್ದು,; ಕೆಎಸ್‌ಆರ್‌ಟಿಸಿ ಬಸ್‌ನಿಂದ ತಲೆಹೊರ ಹಾಕಿದ ಮಹಿಳೆಯ ದಾರುಣ ಸಾವು ಸಂಭವಿಸಿದೆ.
ನಂಜನಗೂಡು ಸಮೀಪ ಭೀಕರ ರಸ್ತೆ ಅಪಘಾತ ಸಂಭವಿಸಿದ್ದು,; ಕೆಎಸ್‌ಆರ್‌ಟಿಸಿ ಬಸ್‌ನಿಂದ ತಲೆಹೊರ ಹಾಕಿದ ಮಹಿಳೆಯ ದಾರುಣ ಸಾವು ಸಂಭವಿಸಿದೆ.

Nanjangud Accident: ಬಸ್‌ನಲ್ಲಿ ಪ್ರಯಾಣಿಸುತ್ತಿದ್ದಾಗ ತಲೆ ಹೊರಹಾಕಿದ ಮಹಿಳೆಯೊಬ್ಬರು ರಸ್ತೆ ಅಪಘಾತದಲ್ಲಿ ದಾರುಣವಾಗಿ ಮೃತಪಟ್ಟಿದ್ದಾರೆ. ಮೈಸೂರು ಊಟಿ ಹೆದ್ದಾರಿಯಲ್ಲಿ ಇಂದು (ಜನವರಿ 25) ನಂಜನಗೂಡು ತಾಲೂಕು ಮುದ್ದಹಳ್ಳಿ ಸಮೀಪ ಈ ಹೃದಯ ವಿದ್ರಾವಕ ರಸ್ತೆ ಅಪಘಾತ ಸಂಭವಿಸಿದೆ. ಮೈಸೂರಿನಿಂದ ಗುಂಡ್ಲುಪೇಟೆಗೆ ನಂಜನಗೂಡು ಮಾರ್ಗವಾಗಿ ತೆರಳುತ್ತಿದ್ದ ಕೆಎಸ್‌ಆರ್‌ಟಿಸಿ ಬಸ್‌ನಲ್ಲಿ ಮಹಿಳೆ ಪ್ರಯಾಣಿಸಿದ್ದರು. ಮೃತ ಮಹಿಳೆಯನ್ನು ಚಾಮರಾಜನಗರ ಜಿಲ್ಲೆ ಗುಂಡ್ಲುಪೇಟೆ ತಾಲ್ಲೂಕಿನ ಹಾಲಹಳ್ಳಿ ನಿವಾಸಿ ಶಿವಲಿಂಗಮ್ಮ (58) ಎಂದು ಗುರುತಿಸಲಾಗಿದೆ.

ಕೆಎಸ್‌ಆರ್‌ಟಿಸಿ ಬಸ್‌ನಿಂದ ತಲೆಹೊರ ಹಾಕಿದ ಮಹಿಳೆಯ ದಾರುಣ ಸಾವು

ಮೈಸೂರಿನಿಂದ ಗುಂಡ್ಲುಪೇಟೆಗೆ ನಂಜನಗೂಡು ಮಾರ್ಗವಾಗಿ ತೆರಳುತ್ತಿದ್ದ ಕೆಎಸ್‌ಆರ್‌ಟಿಸಿ ಬಸ್‌ನಲ್ಲಿದ್ದ ಶಿವಲಿಂಗಮ್ಮ ದಾರಿ ಮಧ್ಯೆ ತಲೆ ಹೊರಹಾಕಿದ್ದರು. ಇದೇ ವೇಳೆ ಪಕ್ಕದಲ್ಲೇ ಹಾದು ಹೋದ ಐಷರ್ ಗೂಡ್ಸ್‌ ವಾಹನ ಮಹಿಳೆಯ ತಲೆಗೆ ಡಿಕ್ಕಿ ಹೊಡೆದು ಹೋಗಿದೆ. ವೇಗ ಇದ್ದ ಕಾರಣ ಮಹಿಳೆಯ ತಲೆ ಛಿದ್ರವಾಗಿದ್ದು, ಬಸ್‌ ಕಿಟಕಿಯಿಂದ ಧಾರಾಕಾರವಾಗಿ ರಕ್ತದ ಕೋಡಿ ಹರದಿದೆ. ಕೈ ಕೂಡ ಜಜ್ಜಿ ಹೋಗಿದೆ. ಭೀಕರ ಅಪಘಾತ ಮತ್ತು ಮಹಿಳೆಯ ದಾರುಣ ಸಾವು ಕಂಡು ಅಲ್ಲಿದ್ದವರೆಲ್ಲ ಆಘಾತಕ್ಕೆ ಒಳಗಾಗಿದ್ದರು.

ಕೆಎಸ್‌ಆರ್‌ಟಿಸಿ ಚಾಲಕ ಕೂಡಲೇ ಬಸ್ ನಿಲ್ಲಿಸಿದ್ದ. ಆದರೆ ಅಪಘಾತ ಎಸಗಿದ ಐಷರ್ ಟ್ರಕ್ ನಿಂತಿಲ್ಲ. ಲಾರಿ ಸಮೇತ ಚಾಲಕ ಪರಾರಿಯಾಗಿದ್ದಾನೆ. ನಂಜನಗೂಡು ಸಂಚಾರ ಪೊಲೀಸ್ ಠಾಣೆಯಲ್ಲಿ ಈ ಸಂಬಂಧ ಕೇಸ್ ದಾಖಲಾಗಿದ್ದು, ಪಿಎಸ್ಐ ಸಿದ್ದರಾಜು ಮತ್ತು ಸಿಬ್ಬಂದಿ ಮಹೇಂದ್ರ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದರು. ಸ್ಥಳ ಮಹಜರು ನಡೆಸಿದ ಪೊಲೀಸರು, ಮಹಿಳೆಯ ಶವವನ್ನು ಸರ್ಕಾರಿ ಆಸ್ಪತ್ರೆಗೆ ಪೋಸ್ಟ್‌ಮಾರ್ಟಂಗಾಗಿ ಕಳುಹಿಸಿದ್ದಾರೆ. ಅಪಘಾತ ಎಸಗಿ ಪರಾರಿಯಾಗಿರುವ ಐಷರ್ ಟ್ರಕ್‌ಗಾಗಿ ಪೊಲೀಸರು ಶೋಧ ನಡೆಸಿದ್ದಾರೆ.

ಬಸ್‌ ಪ್ರಯಾಣದ ವೇಳೆ ಗಮನಿಸಬೇಕಾದ ಅಂಶಗಳಿವು

1) ಬಸ್‌ ಕಿಟಕಿಯಿಂದ ತಲೆ ಹೊರಗೆ ಹಾಕಬೇಡಿ: ಚಲಿಸುತ್ತಿರುವ ಬಸ್‌ನ ಕಿಟಕಿ ಮೂಲಕ ತಲೆ ಹೊರಗೆ ಹಾಕುವುದು ಅತ್ಯಂತ ಅಪಾಯಕಾರಿ ಎಂಬುದನ್ನು ಈ ಅಪಘಾತ ನೇರ ನಿದರ್ಶನ.

2) ತೂಕಡಿಸುವವರಾದರೆ ಎಚ್ಚರ: ಕಿಟಕಿ ಬದಿ ಕುಳಿತವರು ತೂಕಡಿಕೆಗೆ ಒಳಗಾಗಿಯೂ ತಲೆ ಹೊರಕ್ಕೆ ಹಾಕುವ ಸಾಧ್ಯತೆ ಇರುತ್ತದೆ. ಹಾಗೇನಾದರೂ ತೂಕಡಿಸುವ ಅಭ್ಯಾಸವಿದ್ದರೆ ಕಿಟಕಿ ಗಾಜು ಬಂದ್‌ ಮಾಡಿಕೊಳ್ಳಿ

3) ಬಸ್ ನಿಂತಿರುವಾಗ ಕೂಡ ತಲೆ ಹೊರ ಹಾಕುವಾಗ ಎಚ್ಚರ: ಬಸ್ ನಿಂತುಕೊಂಡಿದೆಯಲ್ಲ ಎಂದು ಹಿಂದೆ ಮುಂದೆ ನೋಡದೇ ಕಿಟಕಿಯಿಂದ ತಲೆ ಹೊರಗೆ ಹಾಕಬೇಡಿ. ಬಸ್ ಎಲ್ಲಿ ನಿಂತುಕೊಂಡಿದೆ ಎಂದು ಗಮನಿಸಿ. ರಸ್ತೆಯಲ್ಲೇ ಇದ್ದರೆ ವೇಗವಾಗಿ ಹೋಗುವ ವಾಹನಗಳು ಸಮೀಪವೇ ಹೋಗಬಹುದು. ಇನ್ನು ಪಾರ್ಕ್‌ ಮಾಡಿದ್ದಲ್ಲಿ ತಲೆ ಹೊರ ಹಾಕುವುದಾದರೆ ಬೇರೆ ವಾಹನಗಳು ಅಲ್ಲಿ ಪಾರ್ಕ್‌ ಮಾಡುವುದಕ್ಕೆ ಬರುತ್ತಿಲ್ಲ ಎಂಬುದನ್ನು ಖಾತರಿ ಮಾಡಿಕೊಳ್ಳಿ

4) ಕಿಟಕಿಯಿಂದ ಕೈ ಹೊರಗೆ ಹಾಕಬೇಡಿ: ತಲೆಯಂತೆಯೇ ಕೈ ಕೂಡ ಕಿಟಕಿಯಿಂದ ಹೊರಗೆ ಹಾಕಬೇಡಿ. ದೂರದಲ್ಲಿರುವವರ ಗಮನಸೆಳೆಯಬೇಕು ಎಂದು ಕೈ ಬೀಸುವುದು ಮಾಡಬೇಡಿ. ವೇಗವಾಗಿ ಹೋಗುವ ವಾಹನಗಳು ಡಿಕ್ಕಿ ಹೊಡೆದರೆ ಕೈ ಕಳೆದುಕೊಳ್ಳಬೇಕಾದೀತು. ಮಕ್ಕಳು ಸೀಟುಗಳ ಮೇಲೆ ನಿಂತು ಕೈ, ಕಾಲು ಹೊರಗೆ ಹಾಕದಂತೆ ನೋಡಿಕೊಳ್ಳಿ.

5) ಸೈನ್‌ಬೋರ್ಡ್‌, ಕರೆಂಟ್ ಕಂಬವೂ ಇರಬಹುದು: ಕಿಟಕಿಯಿಂದ ತಲೆ, ಕೈ, ಕಾಲು ಹೊರಹಾಕಬೇಡಿ ಎಂದು ಹೇಳುವುದಕ್ಕೆ ಇನ್ನೂ ಕೆಲವು ಅಂಶಗಳಿವೆ. ರಸ್ತೆ ಬದಿಗೆ ಇರುವ ಸೈನ್‌ ಬೋರ್ಡ್, ಕರೆಂಟ್ ಕಂಬಗಳೂ ಬಡಿಯಬಹುದು. ಹಾಗೇನಾದರೂ ಆದರೆ ಪ್ರಾಣಕ್ಕೂ ಸಂಚಕಾರವಾಗಬಹುದು. ಕೈಕಾಲು ಕಳೆದುಕೊಳ್ಳಬೇಕಾಗಬಹುದು.

Whats_app_banner