Kumbh Mela 2025: ಟಿ ನರಸೀಪುರ ಕುಂಭ ಮೇಳಕ್ಕೆ ಕರ್ನಾಟಕ ಸರ್ಕಾರದಿಂದ 6 ಕೋಟಿ ರೂಪಾಯಿ ಬಿಡುಗಡೆ
ಕನ್ನಡ ಸುದ್ದಿ  /  ಕರ್ನಾಟಕ  /  Kumbh Mela 2025: ಟಿ ನರಸೀಪುರ ಕುಂಭ ಮೇಳಕ್ಕೆ ಕರ್ನಾಟಕ ಸರ್ಕಾರದಿಂದ 6 ಕೋಟಿ ರೂಪಾಯಿ ಬಿಡುಗಡೆ

Kumbh Mela 2025: ಟಿ ನರಸೀಪುರ ಕುಂಭ ಮೇಳಕ್ಕೆ ಕರ್ನಾಟಕ ಸರ್ಕಾರದಿಂದ 6 ಕೋಟಿ ರೂಪಾಯಿ ಬಿಡುಗಡೆ

Kumbh Mela 2025: ತಿರುಮಕೂಡಲು ನರಸೀಪುರ (ಟಿ.ನರಸೀಪುರ)ದಲ್ಲಿ ಫೆ 10ರಿಂದ 12ರ ತನಕ ನಡೆಯಲಿರುವ ಕುಂಭ ಮೇಳಕ್ಕೆ ದಿನಗಣನೆ ಶುರುವಾಗಿದೆ. ಈ ಹಂತದಲ್ಲಿ ಕುಂಭ ಮೇಳಕ್ಕೆ 6 ಕೋಟಿ ರೂಪಾಯಿ ಅನುದಾನವನ್ನು ಸರ್ಕಾರ ಬಿಡುಗಡೆ ಮಾಡಿದೆ ಎಂದು ಸಚಿವ ರಾಮಲಿಂಗಾ ರೆಡ್ಡಿ ಹೇಳಿದ್ದಾರೆ.

ಟಿ ನರಸೀಪುರ ಕುಂಭ ಮೇಳಕ್ಕೆ ಕರ್ನಾಟಕ ಸರ್ಕಾರದಿಂದ 6 ಕೋಟಿ ರೂಪಾಯಿ ಬಿಡುಗಡೆಯಾಗಿದೆ.
ಟಿ ನರಸೀಪುರ ಕುಂಭ ಮೇಳಕ್ಕೆ ಕರ್ನಾಟಕ ಸರ್ಕಾರದಿಂದ 6 ಕೋಟಿ ರೂಪಾಯಿ ಬಿಡುಗಡೆಯಾಗಿದೆ.

Kumbh Mela 2025: ಮೈಸೂರು ಜಿಲ್ಲೆಯಲ್ಲಿ ಕಾವೇರಿ, ಕಬಿನಿ ನದಿಗಳ ಪವಿತ್ರ ಸಂಗಮ ಸ್ಥಳ ತಿರುಮಕೂಡಲು ನರಸೀಪುರ (ತಿ. ನರಸೀಪುರ) ದಲ್ಲಿ ಫೆಬ್ರವರಿ 10 ರಿಂದ 12 ರವರೆಗೆ ಕುಂಭಮೇಳ 2025ಕ್ಕೆ ಸಿದ್ದತೆಗಳು ನಡೆದಿವೆ. ಈ ಕುಂಭಮೇಳಕ್ಕೆ ಸರ್ಕಾರ 6 ಕೋಟಿ ರೂಪಾಯಿ ಅನುದಾನ ಬಿಡುಗಡೆ ಮಾಡಿದೆ. ಇದನ್ನು ಸಚಿವ ರಾಮಲಿಂಗಾ ರೆಡ್ಡಿ ದೃಢಪಡಿಸಿದ್ದು, ಮೈಕ್ರೋ ಬ್ಲಾಗಿಂಗ್ ತಾಣ ಎಕ್ಸ್‌ನಲ್ಲಿ ಶೇರ್ ಮಾಡಿಕೊಂಡಿದ್ದಾರೆ.

ಟಿ. ನರಸೀಪುರ ಕುಂಭ ಮೇಳ 2025: ಕರ್ನಾಟಕ ಸರ್ಕಾರದಿಂದ 6 ಕೋಟಿ ರೂ ಬಿಡುಗಡೆ

ತಿರುಮಕೂಡಲು ನರಸೀಪುರ (ಟಿ.ನರಸೀಪುರ)ದಲ್ಲಿ ಫೆ 10ರಿಂದ 12ರ ತನಕ ನಡೆಯಲಿರುವ ಕುಂಭ ಮೇಳಕ್ಕೆ ದಿನಗಣನೆ ಶುರುವಾಗಿದೆ. ಈ ಹಂತದಲ್ಲಿ ಕುಂಭ ಮೇಳಕ್ಕೆ 6 ಕೋಟಿ ರೂಪಾಯಿ ಅನುದಾನವನ್ನು ಸರ್ಕಾರ ಬಿಡುಗಡೆ ಮಾಡಿದೆ ಎಂದು ಸಚಿವ ರಾಮಲಿಂಗಾ ರೆಡ್ಡಿ ಹೇಳಿದ್ದಾರೆ.

“ಕರುನಾಡಿನ ಐತಿಹಾಸಿಕ ಕುಂಭಮೇಳವನ್ನು ಈ ಬಾರಿ ಅದ್ಧೂರಿಯಾಗಿ ಆಚರಿಸುವ ಸಲುವಾಗಿ ಮಹತ್ವದ ನಿರ್ಧಾರವೊಂದರಲ್ಲಿ ರಾಜ್ಯ ಸರ್ಕಾರವು ಟಿ.ನರಸೀಪುರದ ಕುಂಭಮೇಳಕ್ಕೆ 6 ಕೋಟಿ‌ ಅನುದಾನ‌ ಬಿಡುಗಡೆ ಮಾಡಿದೆ. ಟಿ.ನರಸೀಪುರದ ತ್ರಿವೇಣಿ ಸಂಗಮ ದಕ್ಷಿಣಕಾಶಿಯಲ್ಲಿ ನಡೆಯುವ ಕುಂಭಮೇಳ ಭಾರತೀಯರಿಗೆ ಸನಾತನ ಸಂಸ್ಕೃತಿ ಮತ್ತು ದಿವ್ಯ ಜೀವನ ಧರ್ಮವನ್ನು ಸಾರುವ ಧಾರ್ಮಿಕ ಕಾರ್ಯಕ್ರಮವಾಗಿದೆ. ಮೂರು ದಿನಗಳ ಕಾಲ ನಡೆಯುವ ಕುಂಭಮೇಳಕ್ಕೆ ಕರ್ನಾಟಕ ಮಾತ್ರವಲ್ಲ ಹೊರ ರಾಜ್ಯಗಳಿಂದಲೂ ಭಕ್ತರು, ಪ್ರವಾಸಿಗರು ಆಗಮಿಸುವುದಿಂದ ನರಸೀಪುರ ಪಟ್ಟಣದಲ್ಲಿಯೇ ಸಕಲ ಸೌಲಭ್ಯಗಳನ್ನು ಕಲ್ಪಿಸಲು ತಯಾರಿ ಮಾಡಿಕೊಳ್ಳಲು ಈ‌ ಅನುದಾನ ಬಳಸಿಕೊಳ್ಳಲಾಗುವುದು.” ಎಂದು ರಾಮಲಿಂಗಾ ರೆಡ್ಡಿ ಟ್ವೀಟ್ ಮಾಡಿದ್ದಾರೆ.

ಟಿ. ನರಸೀಪುರ ಕುಂಭ ಮೇಳ 2025 ಫೆ 10 ರಿಂದ 12ರ ತನಕ ಏನೇನು ಕಾರ್ಯಕ್ರಮ

ಟಿ. ನರಸೀಪುರ ಕುಂಭ ಮೇಳ 2025 ಫೆ 10 ರಿಂದ 12 ತನಕ ನಡೆಯಲಿದೆ. ಮೂರು ದಿನಗಳ ಕುಂಭಮೇಳಕ್ಕೆ ಕರ್ನಾಟಕ ಮಾತ್ರವಲ್ಲದೇ ಹೊರ ರಾಜ್ಯಗಳಿಂದಲೂ ಭಕ್ತರು, ಪ್ರವಾಸಿಗರು ಆಗಮಿಸುವ ಸಾಧ್ಯತೆ ಇದೆ. ಹೀಗಾಗಿ, ನರಸೀಪುರ ಪಟ್ಟಣದಲ್ಲಿಯೇ ಸಕಲ ಸೌಲಭ್ಯಗಳನ್ನು ಒದಗಿಸಲು ಸರ್ಕಾರ ಪ್ರಯತ್ನಿಸಿದೆ. ಕಾವೇರಿ ಹಾಗೂ ಕಬಿನಿ ನದಿಗಳು ಗುಂಜಾನರಸಿಂಹಸ್ವಾಮಿ ದೇವಸ್ಥಾನ ಸಮೀಪದಲ್ಲಿಯೇ ಸಂಗಮವಾಗುವ ಸ್ಥಳದಲ್ಲಿ ಫೆಬ್ರವರಿ 11 ರಂದು ಕಾವೇರಿ ಆರತಿಯನ್ನು ಆಯೋಜಿಸಿ ಭಕ್ತರನ್ನು ಸೆಳೆಯುವ ಪ್ರಯತ್ನವೂ ಈ ಬಾರಿ ನಡೆದಿದೆ.

ಕುಂಭಮೇಳದ ಧಾರ್ಮಿಕ ಕಾರ್ಯಕ್ರಮಗಳ ವಿವರ ಹೀಗಿದೆ -

ಫೆ. 10 ಪ್ರಾತಃ ಕಾಲದಲ್ಲಿ ಸಂಕಲ್ಪ, ಗಣಪತಿ ಹೋಮ, ಅಗಸ್ತ್ಯ ದೇವಾಲಯದಲ್ಲಿ ರುದ್ರಾಭಿಷೇಕ, ಸಂಜೆ ಧಾರ್ಮಿಕ ಸಭೆ ಹಾಗೂ ಸಾಂಸ್ಕೃತಿಕಾ ಕಾರ್ಯಕ್ರಮ

ಫೆ. 11 ಆಶ್ಲೇಷ ಪ್ರಾತಃ ಪುಣ್ಯ ನವಗ್ರಹ ಹೋಮ, ಸುದರ್ಶನ ಹೋಮ, ಧಾರ್ಮಿಕ ಸಭೆ ನಡೆಯಲಿದೆ. ಅದಾಗಿ, ಮಹಾ ಮಂಡಲೇಶ್ವರರ ಸಂಗಮ ಕ್ಷೇತ್ರ ಪ್ರವೇಶ, ನಂತರ ವಾರಾಣಸಿ ಮಾದರಿಯ ದೀಪಾರತಿ

ಫೆ.12 ಚಂಡಿಕಾ ಹೋಮ, ಪೂರ್ಣಾಹುತಿ, ತ್ರಿವೇಣಿ ಸಂಗಮದಲ್ಲಿ ಸಪ್ತ ಪವಿತ್ರ ನದಿಗಳಿಂದ ತಂದ ತೀರ್ಥ ಸಂಯೋಜನೆ, ಪುಣ್ಯಸ್ನಾನ, ಧರ್ಮಸಭೆ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮ

ಜಗತ್ತಿನ ನಾಗರಿಕತೆ, ಸಂಸ್ಕೃತಿಗಳೆಲ್ಲವೂ ನದಿ ಪಾತ್ರದಲ್ಲೆ ಹುಟ್ಟಿ ಬೆಳೆದವು. ಮೈಸೂರು ಜಿಲ್ಲೆ ತಿರುಮಕೂಡಲು ನರಸೀಪುರದಲ್ಲಿ ಈ ಬಾರಿ 12ನೇ ಕುಂಭಮೇಳ (ಕುಂಭ ಮೇಳ 2025) ನಡೆಯುತ್ತಿದೆ. ಹಿರಿಯರು, ದಾರ್ಶನಿಕರು ನಮಗೆ ದಾರಿ ಹಾಕಿಕೊಟ್ಟಿದ್ದಾರೆ. ಸ್ವಾಮೀಜಿಗಳು ಕುಂಭ ಮೇಳದ ಹೊಣೆಗಾರಿಕೆ ಹೊತ್ತುಕೊಂಡಿದ್ದೇವೆ. ಈ ಕುಂಭ ಮೇಳಕ್ಕೆ ಸರ್ಕಾರ ಸಹಕಾರ ನೀಡುತ್ತಾ ಬಂದಿದೆ. ಕುಂಭ ಮೇಳಕ್ಕೆ ಆಗಮಿಸುವ ಜನರು, ದಾರ್ಶನಿಕರು, ಸ್ವಾಮೀಜಿಗಳ ನುಡಿಗಳನ್ನಾಲಿಸಬೇಕು. ಎಲ್ಲರೂ ಭಕ್ತಿ ಮಾರ್ಗದಲ್ಲಿ ಸಾಗಬೇಕುಎಂದು ನಿರ್ಮಲಾನಂದನಾಥ ಸ್ವಾಮೀಜಿ ಹೇಳಿದ್ದಾರೆ.

Whats_app_banner