Train Robbery: ಮೈಸೂರು-ಬೆಂಗಳೂರು ಮೆಮು ರೈಲಿನಲ್ಲಿ ದರೋಡೆ; ನಾಲ್ವರು ಶಂಕಿತರನ್ನು ಬಂಧಿಸಿದ ರೈಲ್ವೆ ಪೊಲೀಸರು
ಕನ್ನಡ ಸುದ್ದಿ  /  ಕರ್ನಾಟಕ  /  Train Robbery: ಮೈಸೂರು-ಬೆಂಗಳೂರು ಮೆಮು ರೈಲಿನಲ್ಲಿ ದರೋಡೆ; ನಾಲ್ವರು ಶಂಕಿತರನ್ನು ಬಂಧಿಸಿದ ರೈಲ್ವೆ ಪೊಲೀಸರು

Train Robbery: ಮೈಸೂರು-ಬೆಂಗಳೂರು ಮೆಮು ರೈಲಿನಲ್ಲಿ ದರೋಡೆ; ನಾಲ್ವರು ಶಂಕಿತರನ್ನು ಬಂಧಿಸಿದ ರೈಲ್ವೆ ಪೊಲೀಸರು

Train Robbery: ಮೈಸೂರು - ಬೆಂಗಳೂರು ಮೆಮು ರೈಲಿನಲ್ಲಿ ಫೆ 10 ರಂದು ರಾತ್ರಿ ನಡೆದ ದರೋಡೆ ಪ್ರಕರಣ ಸಂಬಂಧ ನಾಲ್ವರನ್ನು ರೈಲ್ವೆ ಪೊಲೀಸರು ಬಂಧಿಸಿದ್ದಾರೆ. ಬಂಧಿತರ ಪೈಕಿ ಒಬ್ಬ ಬಾಲಕ ಇದ್ದಾನೆ. ಉಳಿದ ವಿವರ ಇಲ್ಲಿದೆ.

ಮೈಸೂರು-ಬೆಂಗಳೂರು ಮೆಮು ರೈಲಿನಲ್ಲಿ ದರೋಡೆ; ನಾಲ್ವರು ಶಂಕಿತರನ್ನು ರೈಲ್ವೆ ಪೊಲೀಸರು ಬಂಧಿಸಿದ್ದಾರೆ. ಚಿತ್ರಗಳ ಪೈಕಿ ಬಂಧಿತ ಮೂವರ ಚಿತ್ರ ಮಾತ್ರ ಇದೆ. ಇನ್ನೊಬ್ಬ ಬಾಲಕ.
ಮೈಸೂರು-ಬೆಂಗಳೂರು ಮೆಮು ರೈಲಿನಲ್ಲಿ ದರೋಡೆ; ನಾಲ್ವರು ಶಂಕಿತರನ್ನು ರೈಲ್ವೆ ಪೊಲೀಸರು ಬಂಧಿಸಿದ್ದಾರೆ. ಚಿತ್ರಗಳ ಪೈಕಿ ಬಂಧಿತ ಮೂವರ ಚಿತ್ರ ಮಾತ್ರ ಇದೆ. ಇನ್ನೊಬ್ಬ ಬಾಲಕ.

Train Robbery: ರೈಲ್ವೆ ಪ್ರಯಾಣಿಕರ ಸೋಗಿನಲ್ಲಿ ಮೈಸೂರು- ಬೆಂಗಳೂರು ಮೆಮು ರೈಲು ಏರಿ, ಪ್ರಯಾಣಿಕರನ್ನು ಬೆದರಿಸಿ ದರೋಡೆ ಮಾಡಿದ ಪ್ರಕರಣ ಸಂಬಂಧಿಸಿ ರೈಲ್ವೆ ಪೊಲೀಸರು ಮೂವರು ಶಂಕಿತರನ್ನು ಬಂಧಿಸಿದ್ದಾರೆ. ಮೈಸೂರು- ಬೆಂಗಳೂರು ಮೆಮು ರೈಲು ಏರಿದ ಶಂಕಿತರು ಚಾಕು, ಚೂರಿ, ಕಬ್ಬಿಣದ ರಾಡ್‌ ಹಿಡಿದು ಪ್ರಯಾಣಿಕರನ್ನು ಬೆದರಿಸಿ ಅವರಿಂದ ಹಣ, ಚಿನ್ನಾಭರಣ ದೋಚಿದ್ದರು. ಎರಡು ದಿನ ಹಿಂದೆ (ಫೆ 10) ಈ ದರೋಡೆ ನಡೆದಿತ್ತು. ಈ ದರೋಡೆ ಪ್ರಕರಣವು ರೈಲ್ವೆ ಪ್ರಯಾಣಿಕರಲ್ಲಿ ಕಳವಳಕ್ಕೆ ಕಾರಣವಾಗಿತ್ತು.

ಮೈಸೂರು-ಬೆಂಗಳೂರು ಮೆಮು ರೈಲಿನಲ್ಲಿ ದರೋಡೆ

ಮೈಸೂರಿನಿಂದ ಬೆಂಗಳೂರಿಗೆ ಹೊರಟ ಮೆಮು ರೈಲಿಗೆ ಮೈಸೂರು ನಿಲ್ದಾಣದ ಒಂದು ತುದಿಯಲ್ಲಿ ನಿಂತಿದ್ದ ಶಂಕಿತ ಆರೋಪಿಗಳು ಪ್ರಯಾಣಿಕರಂತೆ ರೈಲು ಏರಿದ್ದರು. ಫೆ 10 ರಂದು ರಾತ್ರಿ 11 ಗಂಟೆಗೆ ಈ ರೈಲು ಬೆಂಗಳೂರಿಗೆ ಹೊರಟಿತ್ತು. ಈ ರೈಲು ಮಂಡ್ಯ ಸಮೀಪ ಬರುತ್ತಿದ್ದಂತೆ, ಬೋಗಿಯಲ್ಲಿದ್ದ ಪ್ರಯಾಣಿಕರಿಗೆ ಚಾಕು, ತಲ್ವಾರ್ ತೋರಿಸಿ, ಕಬ್ಬಿಣದ ರಾಡ್ ತೋರಿಸಿ ಬೆದರಿಕೆ ಹಾಕಿದ ಮೂವರ ತಂಡ, ಅವರಿಂದ ಚಿನ್ನಾಭರಣ ಹಾಗೂ ನಗದು ಹಣವನ್ನು ದೋಚಿಕೊಂಡಿತ್ತು.

ಕೂಡಲೇ ಜಾಗೃತರಾದ ಪ್ರಯಾಣಿಕರು ದರೋಡೆ ಬಗ್ಗೆ ರೈಲ್ವೆ ಪೊಲೀಸರನ್ನು ಎಚ್ಚರಿಸಿದ್ದರು. ಚನ್ನಪಟ್ಟಣ ಸಮೀಪ ಪೊಲೀಸರು ರೈಲು ಏರಿದ್ದು, ಶಂಕಿತ ಆರೋಪಿಗಳನ್ನು ಎದುರಿಸಿದ್ದರು. ಮಾರಕಾಸ್ತ್ರಗಳನ್ನು ತೋರಿಸಿ ಬೆದರಿಸಿದ ಆರೋಪಿಗಳು ಅಲ್ಲಿಂದ ಪರಾರಿಯಾಗಿದ್ದರು. ಬಳಿಕ ಪ್ರಯಾಣಿಕರು ನೀಡಿದ ದೂರು ಆಧರಿಸಿ ಪೊಲೀಸರು ಆರೋಪಿಗಳ ಪತ್ತೆಗೆ ಶೋಧ ನಡೆಸಿದ್ದರು.

ನಾಲ್ವರು ಶಂಕಿತರನ್ನು ಬಂಧಿಸಿದ ರೈಲ್ವೆ ಪೊಲೀಸರು

ರೈಲ್ವೆ ಪ್ರಯಾಣಿಕರನ್ನು ದೋಚಿ ಪರಾರಿಯಾಗಿದ್ದ ಶಂಕಿತರ ಗುರುತುಪತ್ತೆ ಹಚ್ಚಿದ ಪೊಲೀಸರು, ಅವರ ಮೊಬೈಲ್ ಟವರ್ ಲೊಕೇಶನ್ ಪತ್ತೆ ಹಚ್ಚಿ ಬಂಧನಕ್ಕೆ ಬಲೆ ಬೀಸಿದ್ದರು. ಪ್ರಕರಣ ಸಂಬಂಧ ನಾಲ್ವರನ್ನು ರೈಲ್ವೆ ಪೊಲೀಸರು ಬಂಧಿಸಿದ್ದು, ಕಳವು ಮಾಡಿದ್ದ ಹಣ, ಚಿನ್ನಾಭರಣ ವಶಪಡಿಸಿಕೊಂಡಿದ್ದಾರೆ.

ಬಂಧಿತರನ್ನು ಶೇಖ್ ಸೊಹೇಬ್‌, ಸಾಹಿಲ್ ಖಾನ್, ಮಹಮ್ಮದ್ ಯಾಸಿನ್ ಹಾಗೂ ಒಬ್ಬ ಅಪ್ರಾಪ್ತ ವಯಸ್ಸಿನ ಬಾಲಕ ಎಂದು ಗುರುತಿಸಲಾಗಿದೆ. ಬಂಧಿತರಿಂದ 1 ಲಕ್ಷ ರೂಪಾಯಿ ಮೌಲ್ಯದ ಮೊಬೈಲ್ ಫೋನ್‌, ಸಾವಿರಾರು ರೂಪಾಯಿ ನಗದು ಹಣ, ಮಾರಕಾಸ್ತ್ರಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಮೈಸೂರು ರೈಲ್ವೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Whats_app_banner