ನಮ್ಮ ಮೆಟ್ರೋ ರೈಲು ಸಂಚಾರ ಸಮಯ ಬದಲಾವಣೆ; ಸೋಮವಾರ ಬೆಳಿಗ್ಗೆ ಬೇಗ ಹೊರಡಲಿದೆ ಬೆಂಗಳೂರು ಮೆಟ್ರೋ, ಜ 13 ರಿಂದಲೇ ಜಾರಿಗೆ
ಕನ್ನಡ ಸುದ್ದಿ  /  ಕರ್ನಾಟಕ  /  ನಮ್ಮ ಮೆಟ್ರೋ ರೈಲು ಸಂಚಾರ ಸಮಯ ಬದಲಾವಣೆ; ಸೋಮವಾರ ಬೆಳಿಗ್ಗೆ ಬೇಗ ಹೊರಡಲಿದೆ ಬೆಂಗಳೂರು ಮೆಟ್ರೋ, ಜ 13 ರಿಂದಲೇ ಜಾರಿಗೆ

ನಮ್ಮ ಮೆಟ್ರೋ ರೈಲು ಸಂಚಾರ ಸಮಯ ಬದಲಾವಣೆ; ಸೋಮವಾರ ಬೆಳಿಗ್ಗೆ ಬೇಗ ಹೊರಡಲಿದೆ ಬೆಂಗಳೂರು ಮೆಟ್ರೋ, ಜ 13 ರಿಂದಲೇ ಜಾರಿಗೆ

Namma Metro New Timings: ವಾರಾಂತ್ಯದಲ್ಲಿ ಊರು, ಪ್ರವಾಸ ತೆರಳವು ಬೆಂಗಳೂರಿಗರ ಅನುಕೂಲಕ್ಕಾಗಿ ಬೆಂಗಳೂರು ಮೆಟ್ರೋ, ಸೋಮವಾರ ನಮ್ಮ ಮೆಟ್ರೋ ರೈಲು ಸಂಚಾರ ಸಮಯದಲ್ಲಿ ಬದಲಾವಣೆ ಮಾಡಿಕೊಂಡಿದೆ. ನಮ್ಮ ಮೆಟ್ರೋ ರೈಲು ಸೋಮವಾರ ಬೆಳಿಗ್ಗೆ ಬೇಗ ಹೊರಡಲಿದೆ. ಇದು ಜನವರಿ 13ರಿಂದಲೇ ಜಾರಿಗೆ ಬರಲಿದೆ.

ನಮ್ಮ ಮೆಟ್ರೋ ರೈಲು ಸಂಚಾರ ಸಮಯ ಬದಲಾವಣೆಯಾಗುತ್ತಿದ್ದು, ಇನ್ನು, ಬೆಂಗಳೂರು ಮೆಟ್ರೋ ಸೋಮವಾರ ಬೆಳಗ್ಗೆ ಬೇಗ ಹೊರಡಲಿದೆ. ಜ 13 ರಿಂದಲೇ ಜಾರಿಗೆ ಬರಲಿದೆ. (ಸಾಂಕೇತಿಕ ಚಿತ್ರ)
ನಮ್ಮ ಮೆಟ್ರೋ ರೈಲು ಸಂಚಾರ ಸಮಯ ಬದಲಾವಣೆಯಾಗುತ್ತಿದ್ದು, ಇನ್ನು, ಬೆಂಗಳೂರು ಮೆಟ್ರೋ ಸೋಮವಾರ ಬೆಳಗ್ಗೆ ಬೇಗ ಹೊರಡಲಿದೆ. ಜ 13 ರಿಂದಲೇ ಜಾರಿಗೆ ಬರಲಿದೆ. (ಸಾಂಕೇತಿಕ ಚಿತ್ರ)

Namma Metro New Timings: ಬೆಂಗಳೂರಿಗರಿಗೆ ಒಂದು ಖುಷಿ ಸುದ್ದಿ. ಸೋಮವಾರದಿಂದ (ಜನವರಿ 13) ಬೆಂಗಳೂರು ಮೆಟ್ರೋ ಬೆಳಿಗ್ಗೆ ಬೇಗ ಸಂಚಾರ ಶುರುಮಾಡಲಿದೆ. ಬೆಂಗಳೂರಿಗರ ಅನುಕೂಲಕ್ಕಾಗಿ ಪ್ರತಿ ಸೋಮವಾರ ನಮ್ಮ ಮೆಟ್ರೋ ರೈಲುಗಳು ಬೇಗ ಸಂಚಾರ ಪ್ರಾರಂಭಿಸಲಿವೆ ಎಂದು ಬೆಂಗಳೂರು ಮೆಟ್ರೋ ರೈಲು ನಿಗಮ ನಿಯಮಿತ (ಬಿಎಂಆರ್‌ಸಿಎಲ್‌) ತಿಳಿಸಿದೆ. ಈ ಸಮಯ ಬದಲಾವಣೆಯು ವಾರದ ಇತರ ದಿನಗಳಲ್ಲಿ ಮೆಟ್ರೋ ರೈಲು ವೇಳಾಪಟ್ಟಿಗಳ ಮೇಲೆ ಪರಿಣಾಮ ಬೀರುವುದಿಲ್ಲ. ಹೆಚ್ಚು ಅನುಕೂಲಕರ ಮತ್ತು ಪರಿಣಾಮಕಾರಿ ಪ್ರಯಾಣದ ಅನುಭವವನ್ನು ಒದಗಿಸುವುದು ಉದ್ದೇಶ ಎಂದು ಅದು ಹೇಳಿದೆ.

ಪ್ರತಿ ಸೋಮವಾರ ನಮ್ಮ ಮೆಟ್ರೋ ರೈಲು ಸಂಚಾರ ಬೇಗ ಶುರು

ಬೆಂಗಳೂರು ನಗರದಲ್ಲಿ ಜನರಿಗೆ ಸಂಚಾರ ಸೇವೆ ಒದಗಿಸುವ ನಮ್ಮ ಮೆಟ್ರೋ ರೈಲುಗಳು ಇನ್ನು ಮುಂದೆ ಪ್ರತಿ ಸೋಮವಾರ ಮುಂಜಾನೆ 5 ಗಂಟೆಗೆ ಬದಲಾಗಿ ಮುಂಜಾನೆ 4.15ಕ್ಕೆ ಸಂಚಾರ ಶುರುಮಾಡಲಿವೆ. ಈ ಸಂಚಾರ ಸಮಯ ಬದಲಾವಣೆ ಇದೇ ಸೋಮವಾರದಿಂದ (ಜನವರಿ 13) ಶುರುವಾಗಲಿದೆ ಎಂದು ಬಿಎಂಆರ್‌ಸಿಎಲ್ ತಿಳಿಸಿದೆ.

ಊರಿಗೆ ತೆರಳಿದ ಬೆಂಗಳೂರಿಗರ ಅನುಕೂಲಕ್ಕಾಗಿ ಈ ಬದಲಾವಣೆ

ವಾರಾಂತ್ಯದ ಪ್ರವಾಸ ಮುಗಿಸಿ ಬೆಂಗಳೂರಿಗೆ ಹಿಂದಿರುಗುವ ಪ್ರಯಾಣಿಕರಿಗೆ ಪ್ರಯಾಣದ ಅನುಕೂಲವನ್ನು ಸುಧಾರಿಸಲು ಈ ನಿರ್ಧಾರವನ್ನು ತೆಗೆದುಕೊಳ್ಳಲಾಗಿದೆ ಎಂದು ಹೇಳಿರುವ ಬಿಎಂಆರ್‌ಸಿಎಲ್, "ಪರಿಷ್ಕೃತ ಸಮಯವು ಪ್ರಯಾಣಿಕರು ಬಂದ ತಕ್ಷಣ ಮೆಟ್ರೋ ಸೇವೆ ಬಳಸುವುದನ್ನು ಖಚಿತಪಡಿಸುತ್ತದೆ, ಅವರ ಪ್ರಯಾಣವನ್ನು ಸುಗಮಗೊಳಿಸುತ್ತದೆ ಮತ್ತು ಸಮಯವನ್ನು ಉಳಿಸುತ್ತದೆ" ಎಂದು ಹೇಳಿದೆ.

ಈ ಬದಲಾವಣೆಯನ್ನು ನಿರ್ದಿಷ್ಟವಾಗಿ ಸಿಟಿ ರೈಲು ನಿಲ್ದಾಣ ಮತ್ತು ಕೆಂಪೇಗೌಡ ಬಸ್ ನಿಲ್ದಾಣದಂತಹ ಪ್ರಮುಖ ಸಾರಿಗೆ ಕೇಂದ್ರಗಳಿಗೆ ಆಗಮಿಸುವ ಪ್ರಯಾಣಿಕರ ಅನುಕೂಲವನ್ನು ಗಮನದಲ್ಲಿಟ್ಟುಕೊಂಡು ಮಾಡಲಾಗಿದೆ. ಈ ಉಪಕ್ರಮದಿಂದಾಗಿ ಮುಂಜಾನೆ ಸಿಟಿ ರೈಲು ನಿಲ್ದಾಣ, ಕೆಂಪೇಗೌಡ ಬಸ್‌ ನಿಲ್ದಾಣ ತಲುಪುವ ಪ್ರಯಾಣಿಕರಿಗೆ ಕೊನೆಯ ಮೈಲಿ ಸಂಪರ್ಕವನ್ನು ಹೆಚ್ಚಿಸುತ್ತದೆ.

ಈ ಸಮಯದ ಹೊಂದಾಣಿಕೆಯು ಕೇವಲ ಸೋಮವಾರಕ್ಕೆ ಮಾತ್ರ ಸೀಮಿತ. ವಾರದ ಉಳಿದ ದಿನಗಳಲ್ಲಿ ನಮ್ಮ ಮೆಟ್ರೋ ಎಂದಿನಂತೆ ಮುಂಜಾನೆ 5 ಗಂಟೆಗೆ ಸಂಚಾರ ಶುರುಮಾಡಲಿದೆ. ಅದರಲ್ಲಿ ಯಾವುದೇ ಬದಲಾವಣೆ ಇಲ್ಲ ಎಂದು ಬಿಎಂಆರ್‌ಸಿಎಲ್ ಸ್ಪಷ್ಟಪಡಿಸಿದೆ.

ನಮ್ಮ ಮೆಟ್ರೋ ಟಿಕೆಟ್ ದರ ಶೇಕಡ 40-45 ರಷ್ಟು ಹೆಚ್ಚಳ ಸಾಧ್ಯತೆ

ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಗಳು ತಮ್ಮ ಬಸ್‌ಗಳಲ್ಲಿ ಪ್ರಯಾಣ ದರವನ್ನು ಶೇಕಡ 15 ಏರಿಸಿವೆ. ಇದರ ಬೆನ್ನಿಗೆ ಬಿಎಂಟಿಸಿ ಕೂಡ ಟಿಕೆಟ್ ದರ ಹೆಚ್ಚಿಸಿದೆ. ನಮ್ಮ ಮೆಟ್ರೋ ಕೂಡ ಖರ್ಚು ವೆಚ್ಚಗಳನ್ನು ಮುಂದಿಟ್ಟುಕೊಂಡು ಟಿಕೆಟ್ ದರ ಪರಿಷ್ಕರಣೆಗೆ ಒಲವು ತೋರಿಸಿದೆ. ಆದ್ದರಿಂದ ಬೆಂಗಳೂರಿನ ನಮ್ಮ ಮೆಟ್ರೋ ಪ್ರಯಾಣಿಕರು ಶೀಘ್ರದಲ್ಲೇ ಭಾರಿ ದರ ಹೆಚ್ಚಳವನ್ನು ನಿರೀಕ್ಷಿಸಬಹುದು. ನಮ್ಮ ಮೆಟ್ರೋ ಟಿಕೆಟ್ ದರಗಳು 40-45 ಪ್ರತಿಶತದಷ್ಟು ಹೆಚ್ಚಾಗುವ ನಿರೀಕ್ಷೆಯಿದೆ. ಎಂಟು ವರ್ಷಗಳಲ್ಲಿ ಇದೇ ಮೊದಲ ಸಲ ಟಿಕೆಟ್ ದರ ಹೆಚ್ಚಿಸುವ ಪ್ರಸ್ತಾವನೆಯನ್ನು ಬಿಎಂಆರ್‌ಸಿಎಲ್ ಮುಂದಿಟ್ಟಿದೆ. ಈ ಪ್ರಸ್ತಾವನೆಯು ಸರ್ಕಾರವು ನೇಮಿಸಿದ ದರ ನಿಗದಿ ಸಮಿತಿಯ ಪರಿಶೀಲನೆಯಲ್ಲಿದೆ. ಈ ಸಮಿತಿಯು ನಮ್ಮ ಮೆಟ್ರೋ ಟಿಕೆಟ್ ದರ ಹೊಂದಾಣಿಕೆಯ ಪ್ರಸ್ತಾಪವನ್ನು ಎಲ್ಲ ರೀತಿಯಿಂದಲೂ ಪರಿಶೀಲಿಸಿದೆ. ನಿರ್ಧಾರ ತೆಗೆದುಕೊಳ್ಳುವ ಪ್ರಕ್ರಿಯೆಯಲ್ಲಿ ಪ್ರಯಾಣಿಕರಿಂದಲೂ ಅಬಿಪ್ರಾಯ ಸಂಗ್ರಹಿಸಿದೆ. ಕಳೆದ ವರ್ಷ ಅಂದರೆ 2024ರ ಅಕ್ಟೋಬರ್‌ನಲ್ಲಿ ಈ ಪ್ರಕ್ರಿಯೆ ಪೂರ್ಣಗೊಳಿಸಿದೆ. ಅಂತಿಮ ವರದಿಯನ್ನು ಸಮಿತಿಯು ಕಳೆದ ವಾರ ಬಿಎಂಆರ್‌ಸಿಎಲ್ ಆಡಳಿತ ಮಂಡಳಿಗೆ ಸಲ್ಲಿಸಿದೆ. ಇದಕ್ಕೆ ಸಂಬಂಧಿಸಿದ ಅಂತಿಮ ನಿರ್ಧಾರ ಜನವರಿ 17ರ ಸುಮಾರಿಗೆ ಪ್ರಕಟವಾಗಬಹುದು ಎಂಬ ನಿರೀಕ್ಷೆ ಇದೆ.

Whats_app_banner