ಕನ್ನಡ ಸುದ್ದಿ  /  Karnataka  /  Namma Metro Updates: Bengaluru Metro Services Halted Between Mysore Road To Kengeri From Jan 27 30

Namma Metro updates: ನೇರಳೆ ಮಾರ್ಗದ ಮೆಟ್ರೋ ಸೇವೆಯಲ್ಲಿ ವ್ಯತ್ಯಯ; ಎಷ್ಟು ದಿನ? ಎಲ್ಲಿಂದ ಎಲ್ಲಿವರೆಗೆ? ಇಲ್ಲಿದೆ ವಿವರ

Namma Metro updates: ಬೆಂಗಳೂರು ಮೆಟ್ರೋದ ಮೈಸೂರು ರಸ್ತೆ ಮತ್ತು ಕೆಂಗೇರಿ ನಿಲ್ದಾಣಗಳ ನಡುವೆ ಶುಕ್ರವಾರದಿಂದ ಸೋಮವಾರದವರೆಗೆ ಮೆಟ್ರೋ ಸೇವೆಯಲ್ಲಿ ವ್ಯತ್ಯಯ ಉಂಟಾಗಲಿದೆ. ನಮ್ಮ ಮೆಟ್ರೋದ ಹಸಿರು ಮಾರ್ಗದ ಕಾರ್ಯಾಚರಣೆಗಳು ಮತ್ತು ಸೇವೆಗಳು ಪರಿಣಾಮ ಬೀರುವುದಿಲ್ಲ.

ನಮ್ಮ ಮೆಟ್ರೋ (ಸಾಂಕೇತಿಕ ಚಿತ್ರ)
ನಮ್ಮ ಮೆಟ್ರೋ (ಸಾಂಕೇತಿಕ ಚಿತ್ರ) (Ajay Aggarwal/HT Photo)

ಬೆಂಗಳೂರಿನ ನಮ್ಮ ಮೆಟ್ರೋ (Namma Metro) ಸೇವೆಯ ನೇರಳೆ ಮಾರ್ಗದಲ್ಲಿ ಶುಕ್ರವಾರದಿಂದ ಸೋಮವಾರದವರೆಗೆ ರೈಲುಗಳ ಸಂಚಾರ ವ್ಯತ್ಯಯವಾಗಲಿದೆ. ಈ ಮಾರ್ಗದ ವಿಸ್ತರಣೆ ಕಾರ್ಯ ಪ್ರಾರಂಭಿಸುತ್ತಿರುವ ಕಾರಣ ಈ ಅಡಚಣೆ ಉಂಟಾಗಲಿದೆ. ಇದು ಬಹುತೇಕ ಮೈಸೂರು ರಸ್ತೆ ಮತ್ತು ಕೆಂಗೇರಿ ಮೆಟ್ರೋ ನಿಲ್ದಾಣಗಳ ನಡುವೆ ಸೇವೆಗಳ ಮೇಲೆ ಪರಿಣಾಮ ಬೀರಲಿದೆ ಎಂದು ಟೈಮ್ಸ್ ನೌ ವರದಿ ಮಾಡಿದೆ.

ಮೆಟ್ರೋ ಸಂಚಾರ ಸೌಲಭ್ಯ ಸೇವೆಯು ಸಾಮಾನ್ಯವಾಗಿ ಪ್ರತಿದಿನ ಮುಂಜಾನೆ 5 ರಿಂದ ರಾತ್ರಿ 11 ರವರೆಗೆ ಲಭ್ಯವಿರುತ್ತದೆ. ಈ ಅವಧಿಯಲ್ಲಿ ಮೆಟ್ರೋ ರೈಲು ಸಂಚಾರವಿರುತ್ತದೆ. ಆದರೆ, ಮೇಲೆ ಹೇಳಿದ ನಾಲ್ಕು ದಿನಗಳ ಕಾಲ ಸಂಚಾರ ವ್ಯತ್ಯಯ ಉಂಟಾಗಲಿದೆ.

ಮೈಸೂರು ರಸ್ತೆ ಮತ್ತು ಕೆಂಗೇರಿ ನಿಲ್ದಾಣದ ನಡುವೆ ಶುಕ್ರವಾರದಿಂದ ಸೋಮವಾರದವರೆಗೆ ಮೆಟ್ರೋ ರೈಲುಗಳು ಓಡುವುದಿಲ್ಲ ಎಂದು ಬೆಂಗಳೂರು ಮೆಟ್ರೋ ರೈಲು ನಿಗಮ ಲಿಮಿಟೆಡ್ (BMRCL) ಮಾಧ್ಯಮಗಳಿಗೆ ತಿಳಿಸಿದ್ದು, ಅಧಿಕಾರಿಗಳು ಕೆಂಗೇರಿಯಿಂದ ಆಚೆ ಚಲ್ಲಘಟ್ಟದವರೆಗೆ ಮಾರ್ಗವನ್ನು ವಿಸ್ತರಿಸುವ ಯೋಜನೆಯನ್ನು ರೂಪಿಸುತ್ತಿರುವುದಾಗಿ ಹೇಳಿದ್ದಾರೆ.

ಈ ಅವಧಿಯಲ್ಲಿ, ನೇರಳೆ ಮಾರ್ಗದ ರೈಲುಗಳು ಬೈಯಪ್ಪನಹಳ್ಳಿ ಮತ್ತು ಮೈಸೂರು ರಸ್ತೆ ಮೆಟ್ರೋ ನಿಲ್ದಾಣಗಳ ನಡುವೆ ಮಾತ್ರ ಸಂಚರಿಸುತ್ತವೆ. ಸಾಮಾನ್ಯ ವೇಳಾಪಟ್ಟಿಯಂತೆ ನೇರಳೆ ಮಾರ್ಗದಲ್ಲಿ ಕೆಂಗೇರಿ ನಿಲ್ದಾಣದವರೆಗೆ ಮಂಗಳವಾರ ಮುಂಜಾನೆ 5.00 ಗಂಟೆಗೆ ಸೇವೆಗಳನ್ನು ಪುನರಾರಂಭಿಸಲು ನಿರ್ಧರಿಸಲಾಗಿದೆ. ನಮ್ಮ ಮೆಟ್ರೋದ ಹಸಿರು ಮಾರ್ಗದ ಕಾರ್ಯಾಚರಣೆಗಳು ಮತ್ತು ಸೇವೆಗಳು ಪರಿಣಾಮ ಬೀರುವುದಿಲ್ಲ. ಕೆಂಗೇರಿ ಆಚೆಗಿನ ವಿಸ್ತರಣೆ ಮಾರ್ಗದ ಕಾರ್ಯಾರಂಭವನ್ನು ತ್ವರಿತಗೊಳಿಸಲು ಪ್ರಯಾಣಿಕರು ಸಹಕರಿಸಬೇಕು ಎಂದು ಬಿಎಂಆರ್‌ಸಿಎಲ್ ಮನವಿ ಮಾಡಿದೆ.

ಈ ವರ್ಷ ಬೆಂಗಳೂರಿನ ನಿವಾಸಿಗಳಿಗೆ ಮೂರು ಹೊಸ ವಿಸ್ತರಣೆಗಳನ್ನು ನೀಡಲು ಹಲವಾರು ಮೆಟ್ರೋ ಕಾಮಗಾರಿಗಳ ನಡೆಯುತ್ತಿದೆ. ಅವುಗಳ ನಡುವೆ, ಇದು ಕೂಡ ಇದೆ. ಈ ಮೆಟ್ರೋ ವ್ಯವಸ್ಥೆಯು ನಗರದ ಹಲವಾರು ಪ್ರದೇಶಗಳನ್ನು ಸಂಪರ್ಕಿಸುತ್ತದೆ ಮತ್ತು ಪ್ರಯಾಣವನ್ನು ಸುಲಭಗೊಳಿಸುತ್ತದೆ.

ಬೆಂಗಳೂರಿನ ಮೆಟ್ರೋ ತನ್ನ ನಿರ್ಮಾಣ ಸ್ಥಳಗಳ ಬಳಿ 15 ದಿನಗಳ ಅವಧಿಯಲ್ಲಿ ಸಂಭವಿಸಿದ ಮೂರು ಪ್ರತ್ಯೇಕ ಅಪಘಾತಗಳ ಮೂಲಕ ಸುದ್ದಿಯಲ್ಲಿದೆ.

ಗಮನಿಸಬಹುದಾದ ಸುದ್ದಿ

Metro pillar collapse case: ತಾಯಿ-ಮಗು ಸಾವಿನ ಪ್ರಕರಣ; ಇಂಜಿನಿಯರ್‌, ಗುತ್ತಿಗೆದಾರ ಹೊಣೆಗಾರರು- ವಿಚಾರಣೆ ಎದುರಿಸಿದ BMRCL MD

ರಾಜ್ಯ ರಾಜಧಾನಿ ಬೆಂಗಳೂರಿನ ನಾಗವಾರ ಸಮೀಪ ನಿರ್ಮಾಣ ಹಂತದಲ್ಲಿದ್ದ ಮೆಟ್ರೋ ಪಿಲ್ಲರ್‌ ಕುಸಿದು ತಾಯಿ-ಮಗು ಮೃತಪಟ್ಟ ಪ್ರಕರಣದಲ್ಲಿ ಇಂಜಿನಿಯರ್‌ ಮತ್ತು ಗುತ್ತಿಗೆದಾರ ಹೊಣೆಗಾರರು ಎಂದು ಐಐಎಸ್‌ಸಿ ತಜ್ಞರ ತಂಡ ವರದಿ ನೀಡಲಿದೆ. ಇದೇ ಪ್ರಕರಣ ಸಂಬಂಧ ಬಿಎಂಆರ್‌ಸಿಎಲ್‌ ವ್ಯವಸ್ಥಾಪಕ ನಿರ್ದೇಶಕ ಅಂಜುಂ ಪರ್ವೇಜ್‌ ಶನಿವಾರ ವಿಚಾರಣೆಗೆ ಹಾಜರಾದರು. ವಿವರ ಓದಿಗೆ ಇಲ್ಲಿ ಕ್ಲಿಕ್‌ ಮಾಡಿ