ಹುಬ್ಬಳ್ಳಿ-ಕುಷ್ಟಗಿ ನಡುವೆ ಹೊಸ ದೈನಂದಿನ ಎಕ್ಸ್ಪ್ರೆಸ್ ರೈಲು ಸೇವೆ ಆರಂಭ; ವೇಳಾಪಟ್ಟಿ ಮತ್ತು ರೈಲು ನಿಲ್ಲುವ ನಿಲ್ದಾಣಗಳ ಪೂರ್ಣ ವಿವರ
ನೈಋತ್ಯ ರೈಲ್ವೆಯು ಶ್ರೀ ಸಿದ್ಧಾರೂಢ ಸ್ವಾಮೀಜಿ ಹುಬ್ಬಳ್ಳಿ ಜಂಕ್ಷನ್ ಮತ್ತು ಕುಷ್ಟಗಿ ನಿಲ್ದಾಣಗಳ ನಡುವೆ ಹೊಸ ದೈನಂದಿನ ಎಕ್ಸ್ಪ್ರೆಸ್ ರೈಲು ಸೇವೆಗಳನ್ನು ಶುರುಮಾಡುತ್ತಿದೆ. ಈ ರೈಲು ಸಂಚಾರದ ವೇಳಾಪಟ್ಟಿ ಮತ್ತು ರೈಲು ನಿಲ್ಲುವ ನಿಲ್ದಾಣಗಳ ಪೂರ್ಣ ವಿವರ ಇಲ್ಲಿದೆ.

ಬೆಂಗಳೂರು: ಉತ್ತರ ಕರ್ನಾಟಕದ ರೈಲು ಸಂಪರ್ಕವನ್ನು ಹೆಚ್ಚಿಸುವ ನಿಟ್ಟಿನಲ್ಲಿ ಹುಬ್ಬಳಿ-ಕುಷ್ಟಗಿ ನಡುವೆ ಹೊಸ ದೈನಂದಿನ ಎಕ್ಸ್ಪ್ರೆಸ್ ರೈಲು ಸೇವೆ ಆರಂಭಿಸುವುದಾಗಿ ನೈಋತ್ಯ ರೈಲ್ವೆ ಪ್ರಕಟಿಸಿದೆ. ನೈಋತ್ಯ ರೈಲ್ವೆಯು ಶ್ರೀ ಸಿದ್ಧಾರೂಢ ಸ್ವಾಮೀಜಿ ಹುಬ್ಬಳ್ಳಿ ಜಂಕ್ಷನ್ ಮತ್ತು ಕುಷ್ಟಗಿ ನಿಲ್ದಾಣಗಳ ನಡುವೆ ಹೊಸ ದೈನಂದಿನ ಎಕ್ಸ್ಪ್ರೆಸ್ ರೈಲು ಸೇವೆಗಳನ್ನು ಪ್ರಾರಂಭಿಸಲು ಸಂತಸ ವ್ಯಕ್ತಪಡಿಸಿದೆ. ಈ ರೈಲು ಸಂಚಾರ ಮೇ 16 ಮತ್ತು ಮೇ 17 ರಂದು ಶುರುವಾಗಲಿದೆ. ಉದ್ಘಾಟನಾ ವಿಶೇಷ ರೈಲು ಮೇ15 ರಂದು ಶುರುವಾಗಲಿದೆ. ಗದಗ-ಕುಷ್ಟಗಿ ಹೊಸ ರೈಲು ಮಾರ್ಗದ ಉದ್ಘಾಟನೆಯೂ ಇದೇ ವೇಳೆ ನಡೆಯಲಿದೆ.
ಉದ್ಘಾಟನಾ ವಿಶೇಷ ರೈಲು ಸಂಚಾರ ನಾಳೆ
ಗದಗ- ಕುಷ್ಟಗಿ ರೈಲು ಮಾರ್ಗ ಉದ್ಘಾಟನೆಯೂ ನಾಳೆ (ಮೇ 15) ನಡೆಯಲಿದ್ದು, ರೈಲು ಸಂಖ್ಯೆ 07353 ಕುಷ್ಟಗಿ - ಎಸ್ಎಸ್ಎಸ್ ಹುಬ್ಬಳ್ಳಿ ಉದ್ಘಾಟನಾ ವಿಶೇಷ ಎಕ್ಸ್ಪ್ರೆಸ್ (ಒನ್ ವೇ) ರೈಲಿಗೆ ಕೇಂದ್ರ ರೈಲ್ವೆ ರಾಜ್ಯ ಸಚಿವ ವಿ. ಸೋಮಣ್ಣ ನಾಳೆ (ಮೇ 15) ಕುಷ್ಟಗಿ ರೈಲು ನಿಲ್ದಾಣದಿಂದ ಹಸಿರು ನಿಶಾನೆ ತೋರಲಿದ್ದಾರೆ.
ಈ ಉದ್ಘಾಟನಾ ವಿಶೇಷ ರೈಲು 2 ಎಸ್ಎಲ್ಆರ್/ಡಿ ಮತ್ತು 6 ಸಾಮಾನ ದ್ವಿತೀಯ ದರ್ಜೆ/ಸೀಪರ್ ದರ್ಜೆಯ ಬೋಗಿಗಳೊಂದಿಗೆ ಕುಷ್ಟಗಿಯಿಂದ ಶ್ರೀ ಸಿದ್ಧಾರೂಢ ಸ್ವಾಮೀಜಿ ಹುಬ್ಬಳ್ಳಿಗೆ ಚಲಿಸಲಿದ್ದು, ಈ ರೈಲು ಲಿಂಗನಬಂಡಿ, ಹನಮಾಪೂರ, ಯಲಬುರ್ಗಾ, ಸಂಗನಾಳ, ಕುಕನೂರು, ತಳಕಲ್, ಬನ್ನಿಕೊಪ್ಪ, ಸೋಂಪುರ ರೋಡ್, ಹಳ್ಳಿಗುಡಿ ಹಾಲ್, ಹರ್ಲಾಪುರ, ಕಣಗಿನಹಾಳ, ಗದಗ, ಹುಲಕೋಟಿ, ಅಣ್ಣಿಗೇರಿ, ಶಿಶ್ವಿನಹಳ್ಳಿ, ಹೆಬಸೂರ ಮತ್ತು ಕುಸುಗಲ್ ನಿಲ್ದಾಣಗಳಲ್ಲಿ ನಿಲುಗಡೆ ಹೊಂದಿರುತ್ತದೆ.
ಹುಬ್ಬಳ್ಳಿ - ಕುಷ್ಟಗಿ ದೈನಂದಿನ ಎಕ್ಸ್ಪ್ರೆಸ್ ರೈಲು ಸಂಚಾರದ ವೇಳಾಪಟ್ಟಿ
ಎಸ್ಎಸ್ಎಸ್ ಹುಬ್ಬಳ್ಳಿ - ಕುಷ್ಟಗಿ ದೈನಂದಿನ ಎಕ್ಸ್ಪ್ರೆಸ್ ರೈಲು (ರೈಲು ಸಂಖ್ಯೆ 17327) ಮೇ 16, 2025 ರಿಂದ ನಿಯಮಿತ ಸೇವೆಯನು ಪ್ರಾರಂಭಿಸಲಿದೆ.
ಎಸ್ಎಸ್ಎಸ್ ಹುಬ್ಬಳಿ-ಕುಷ್ಟಗಿ ದೈನಂದಿನ ಎಕ್ಸ್ಪ್ರೆಸ್ ರೈಲು (ರೈಲು ಸಂಖ್ಯೆ 17327) ಶ್ರೀ ಸಿದ್ಧಾರೂಢ ಸ್ವಾಮೀಜಿ ಹುಬ್ಬಳ್ಳಿ ನಿಲ್ದಾಣದಿಂದ ಸಂಜೆ 5:00 ಗಂಟೆಗೆ ಹೊರಟು ಅದೇ ದಿನ ರಾತ್ರಿ 8:40 ಕ್ಕೆ ಕುಷ್ಟಗಿಯನ್ನು ತಲುಪಲಿದೆ. ಮಾರ್ಗ ಮಧ್ಯೆ, ಈ ರೈಲು ಕುಸುಗಲ್ (05:14/05:15 pm), ಹೆಬಸೂರ (05:24/05:25 pm), ಶಿಶಿನಹಳ್ಳಿ (05:28/05:29 pm), ಅಣ್ಣಿಗೇರಿ (05:45/05:46 pm), ಹುಲಕೋಟಿ (05:54/05:55 pm), ಗದಗ (06:10/06:12 pm), ಕಣಗಿನಹಾಳ (06:19/06:20 pm), ಹರ್ಲಾಪುರ (06:27/06:28 pm), ಹಳ್ಳಿಗುಡಿ ಹಾಲ್ಸ್ (06:31/06:32 pm), ಸೊಂಪುರ ರೋಡ್ (06:35/06:36 pm), ಬನ್ನಿಕೊಪ್ಪ (06:43/06:44 pm), ತಲಕಲ್ (06:50/07:00 pm), ಕುಕನೂರು (07:12/07:13 pm), ಸಂಗನಾಳ (07:23/07:24 pm), ಯಲಬುರ್ಗಾ (07:33/07:34 pm), ಹನಮಪೂರ (07:42/07:43 pm) ಮತ್ತು ಲಿಂಗನಬಂಡಿ (07:56/07:57 pm) ನಿಲ್ದಾಣಗಳಲ್ಲಿ ಆಗಮಿಸಿ/ನಿರ್ಗಮಿಸಲಿದೆ.
ಕುಷ್ಟಗಿ- ಹುಬ್ಬಳ್ಳಿ ದೈನಂದಿನ ಎಕ್ಸ್ಪ್ರೆಸ್ ರೈಲು ಸಂಚಾರದ ವೇಳಾಪಟ್ಟಿ
ಕುಷ್ಟಗಿ - ಎಸ್ಎಸ್ಎಸ್ ಹುಬ್ಬಳ್ಳಿ ದೈನಂದಿನ ಎಕ್ಸ್ಪ್ರೆಸ್ ರೈಲು (ರೈಲು ಸಂಖ್ಯೆ 17328) ಮೇ 17, 2025 ರಿಂದ ನಿಯಮಿತ ಸೇವೆಯನ್ನು ಪ್ರಾರಂಭಿಸಲಿದೆ.
ಕುಷ್ಟಗಿ- ಎಸ್ಎಸ್ಎಸ್ ಹುಬ್ಬಳ್ಳಿ ದೈನಂದಿನ ಎಕ್ಸ್ಪ್ರೆಸ್ ರೈಲು (ರೈಲು ಸಂಖ್ಯೆ 17328) ಕುಷ್ಟಗಿಯಿಂದ ಬೆಳಿಗ್ಗೆ 07:00 ಗಂಟೆಗೆ ಹೊರಟು ಅದೇ ದಿನ ಬೆಳಿಗ್ಗೆ 10:40 ಕ್ಕೆ ಶ್ರೀ ಸಿದ್ದರೂಢ ಸ್ವಾಮೀಜಿ ಹುಬ್ಬಳ್ಳಿಯನ್ನು ತಲುಪಲಿದೆ. ಮಾರ್ಗ ಮಧ್ಯೆ, ಈ ರೈಲು Jonowo (07:10/07:11 am), (07:21/07:22 am), averner (07:29/07:30 am), ಸಂಗನಾಳ (07:38/07:39 am), ಕುಕನೂರು (07:49/07:50 am), ತಲಕಲ್ (08:10/08:20 am), ಬನ್ನಿಕೊಪ್ಪ (08:25/08:26 am), (08:33/08:34 am), (08:36/08:37 am), ಹರ್ಲಾಪುರ (08:40/08:41 am), ಕಣಗಿನಹಾಳ (08:48/08:49 am), ಗದಗ (09:08/09:10 am), ಹುಲಕೋಟಿ (09:24/09:25 am), ಅಣ್ಣಿಗೇರಿ (09:33/09:34 am), ಶಿಶಿನಹಳ್ಳಿ (09:37/09:38 am), ಹೆಬಸೂರ (09:41/09:42 am) ಮತ್ತು ಕುಸುಗಲ್ (09:49/09:50 am) ನಿಲ್ದಾಣಗಳಲ್ಲಿ ಆಗಮಿಸಿ/ನಿರ್ಗಮಿಸಲಿದೆ.
ಈ ರೈಲುಗಳು ಒಟ್ಟು 11 ಬೋಗಿಗಳನ್ನು ಹೊಂದಿವೆ, ಅವುಗಳಲ್ಲಿ 9 ಸಾಮಾನ್ಯ ದ್ವಿತೀಯ ದರ್ಜೆಯ ಮತ್ತು 2 ದ್ವಿತೀಯ ದರ್ಜೆಯ ಲಗೇಜ್ ಕಮ್ ಗಾರ್ಡ್ ಬ್ರೇಕ್ ವ್ಯಾನ್ಗಳು/ದಿವ್ಯಾಂಗ ಜನ ಬೋಗಿಗಳು ಸೇರಿವೆ.
ಈ ಹೊಸ ದೈನಂದಿನ ಎಕ್ಸ್ಪ್ರೆಸ್ ಸೇವೆಯು ಈ ಭಾಗದ ಪ್ರಯಾಣಿಕರು, ವಿದ್ಯಾರ್ಥಿಗಳು, ವ್ಯಾಪಾರಿಗಳು ಮತ್ತು ಸಾರ್ವಜನಿಕರಿಗೆ ವೇಗವಾದ ಮತ್ತು ಅನುಕೂಲಕರ ಪ್ರಯಾಣವನ್ನು ಒದಗಿಸುವ ಮೂಲಕ ಉತ್ತರ ಕರ್ನಾಟಕದ ಪ್ರಮುಖ ಪಟ್ಟಣಗಳ ನಡುವಿನ ಸಂಪರ್ಕವನ್ನು ಹೆಚ್ಚಿಸುವ ನಿರೀಕ್ಷೆಯಿದೆ ಎಂದು ಭಾರತೀಯ ರೈಲ್ವೆಯ ನೈಋತ್ಯ ರೈಲ್ವೆ ಅಧಿಕಾರಿಗಳು ತಿಳಿಸಿದ್ದಾರೆ.